ಸುಬ್ಬರಾಮನ್ ವಿಜಯಲಕ್ಷ್ಮಿ

ಸುಬ್ಬರಾಮನ್ ವಿಜಯಲಕ್ಷ್ಮಿಯವರು ಭಾರತದ ಚೆಸ್ (ಚದುರ೦ಗ) ಆಟಗಾರ್ತಿಯಗಿದ್ದು ಎಫ್.ಐ.ಡಿ.ಇ (F.I.D.E) ಅ೦ತರಾಷ್ಟ್ರೀಯ ಮಹಿಳಾ ಗ್ರಾ೦ಡ್ ಮಾಸ್ಟರ್ ಬಿರುದುನ್ನು ಪಡೆದ ಮಹಿಳೆಯಾಗಿದ್ದರು, ಈ ಬಿರುದನ್ನು ಪಡೆದ ಪ್ರಥಮ ಮಹಿಳೆ ಇವರು.[೧] ಒಲ೦ಪಿಕ್ ಚೆಸ್ ಪುರುಷ ಆಟಗಾರರಿಗಿ೦ತ ಹೆಚ್ಚು ಪದಕಗಳನ್ನು ಪಡೆದ ಹೆಗ್ಗಳಿಕೆ ಇವರದು. ಇವರು ಹೆಚ್ಚು ಕಡಿಮೆ ಭಾರತದ ಏಲ್ಲಾ ರಾಷ್ಟ್ರೀಯ ಚೆಸ್ ಬಿರುದುಗಳನ್ನು ಮತ್ತು ಸೀನಿಯರ್ ಬಿರುದುಗಳನ್ನು ಪಡೆದವರಾಗಿದ್ದಾರೆ. ಚದುರಂಗದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಸುಬ್ಬರಾಮನ್ ವಿಜಯಲಕ್ಷ್ಮಿ ಒಬ್ಬರು .

ಸುಬ್ಬರಾಮನ್ ವಿಜಯಲಕ್ಷ್ಮಿ
ಪೂರ್ಣ ಹೆಸರುಸುಬ್ಬರಾಮನ್ ವಿಜಯಲಕ್ಷ್ಮಿ
ದೇಶ ಭಾರತ
ಜನನ (1979-03-25) ೨೫ ಮಾರ್ಚ್ ೧೯೭೯ (ವಯಸ್ಸು ೪೫)
ಮದ್ರಾಸ್, ತಮಿಳುನಾಡು, ಭಾರತ
ಶೀರ್ಷಿಕೆಗ್ರಾಂಡ್‌ಮಾಸ್ಟರ್ (೨೦೦೦)
ವಿಶ್ವ ಚಾಂಪಿಯನ್೨೦೦೦-೨೦೦೨ (ಫಿಡೆ)
೨೦೦೭-ಪ್ರಸಕ್ತ (ನಿರ್ವಿವಾದಿತ)

ಆರಂಭಿಕ ಜೀವನ ಬದಲಾಯಿಸಿ

ವಿಜಯಲಕ್ಷ್ಮಿಯವರು ೨೫ ಮಾರ್ಚ್ ೧೯೭೯ರಲ್ಲಿ ಮದ್ರಾಸ್ (ಚೆನ್ನೈ )ಯಲ್ಲಿ ಜನ್ಮ ತಾಳಿದರು. ಇವರು ತಮ್ಮ ತ೦ದೆಯವರಿ೦ದ ಚೆಸ್ ಆಟವನ್ನು ಕಲಿತರು.[೨] ಇವರ ಪತಿ ಇಂಡಿಯನ್ ಗ್ರಾ೦ಡ್ ಮಾಸ್ಟರ್ ಶ್ರೀರಾಮ್ ಜಾ, ಇವರ ಸಹೋದರಿಯರಾದ ಎಸ್.ಮೀನಾಕ್ಷಿ ಹಾಗು ಎಸ್.ಭಾನುಪ್ರಿಯಾ, ಅವರು ಕೂಡ ಚೆಸ್ ಆಟಗಾರ್ತಿಯರಾಗಿದ್ದರು. ಇವರ ಮೊದಲ ಚೆಸ್ ಟೂರ್ನಮೆಂಟ್ ೧೯೮೬ರಲ್ಲಿ ನೆಡೆದ ತಾಲೆ ಚೆಸ್ ಓಪನ್ ಟೂರ್ನಮೆಂಟ್.

ಸಾಧನೆಗಳು ಬದಲಾಯಿಸಿ

೧೯೮೮ ಮತ್ತು ೧೯೮೯ರಲ್ಲಿ ಇವರು ಅಂಡರ್ ೧೦ ಹುಡುಗಿಯರ ವಿಭಾಗದ ಇಂಡಿಯನ್ ಚಾಂಪಿಯನ್‍ಷಿಪ್ ಪದಕ ಪಡೆದರು. ಹಾಗೆಯೇ ಅಂಡರ್ ೧೨ ವಿಭಾಗದಲ್ಲಿಯೂ ಎರಡು ಬಾರಿ ಜಯ ಗಳಿಸಿದ್ದಾರೆ. ೧೯೯೫ರಲ್ಲಿ ಮದ್ರಾಸ್‍ನಲ್ಲಿ ನಡೆದ ವಿಭಾಗೀಯ ಮಟ್ಟದ ಟೂರ್ನಮೆಂಟ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಏಷಿಯನ್ ಜ಼ೋನ್ ಟೂರ್ನಮೆಂಟ್‍ನಲ್ಲಿ, ತೆಹೆರಾನ್ ೧೯೯೭ರಲ್ಲಿ ಜಯಗಳಿಸಿದ್ದಾರೆ. ಮುಂಬೈನಲ್ಲಿ ೧೯೯೯ರಲ್ಲಿ ನಡೆದ ಟೂರ್ನಮೆಂಟ್‍ನಲ್ಲಿ ಇವರು ಗೆಲುವನ್ನು ತಮ್ಮದಾಗಿಸಿಕೊ೦ಡಿದ್ದಾರೆ. ೧೯೯೬ರಲ್ಲಿ ಕೊಲ್ಕತ್ತಾದ ಕಾಮನ್‍ವೆಲ್ತ್ ವಿಮೆನ್ಸ್ ಚಾಂಪಿಯನ್ (Common Wealth Champion) ಟೈಟಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ೨೦೦೩ರಲ್ಲಿ ಇದೇ ಚಾಂಪಿಯನ್‍ಷಿಪ್ ಅನ್ನು ಮುಂಬೈನಲ್ಲಿ ಪಡೆದಿದ್ದಾರೆ. ಇವರು ೧೯೯೫ರಲ್ಲಿ ಮದ್ರಾಸ್‍ನಲ್ಲಿ ನಡೆದ ಇಂಡಿಯನ್ ವಿಮೆನ್ಸ್ ಚಾಂಪಿಯನ್‍ಷಿಪ್ ಅನ್ನು ಗೆದ್ದಿದ್ದಾರೆ.

೧೯೯೮ರಲ್ಲಿ ಇಂಡಿಯನ್ ನ್ಯಾಷನಲ್ ಮತ್ತು ವಿಮೆನ್ಸ್ ಚೆಸ್ ಒಲಂಪಿಯಾಡ್‍ನಲ್ಲಿ ಭಾಗವಹಿಸಿದ್ದಾರೆ. ೨೦೦೦ನೇ ವರ್ಷದಲ್ಲಿ ಇಸ್ತಾಂಬುಲ್‍ನಲ್ಲಿ ನಡೆದ ೩೪ನೇ ಚೆಸ್ ಒಲಂಪಿಯಾಡ್‍ನಲ್ಲಿ ಇವರು ಬೆಳ್ಳಿ ಪದಕವನ್ನು ಪಡೆದಿದ್ದು, ಬೋರ್ಡ್ ೧ ಪ್ರದರ್ಶನಕ್ಕಾಗಿ ಈ ಪದಕವನ್ನು ಪಡೆದಿದ್ದಾರೆ. ೨೦೦೨ರಲ್ಲಿ ಬ್ಲೆಡ್‍, ಸ್ಲೋವೇನಿಯನಲ್ಲಿ ನೆಡೆದಾಗಲೂ ಇದೇ ಬಿರುದನ್ನು ಪಡೆದಿದ್ದಾರೆ. ೨೦೦೭ರಲ್ಲಿ ವಿಜಯಲಕ್ಷ್ಮಿಯವರು ಲಿಯೋನಾರ್ಡೊ ಡಿ ಬೋನ ಮೆಮೋರಿಯಲ್ ಚಾಂಪಿಯನ್‍ಷಿಪ್‍ಅನ್ನು(Leonardo di Bona Memorial) ಗೆದ್ದಿದ್ದು, ಇದು ಇಟಲಿಯ ಕಟ್ರೋದಲ್ಲಿ ನೆಡೆಸಲಾಗಿತ್ತು. ೨೦೧೬ರಲ್ಲಿ ವಿಜಯಲಕ್ಷ್ಮಿಯವರು ಚೆನ್ನೈ ಓಪನ್‍ನಲ್ಲಿ ರಷ್ಯನ್ ಗ್ರಾ೦ಡ್ ಮಾಸ್ಟರ್‍ ಬೋರಿಸ್ ಗ್ರಾಚೇವ್(Boris Grachev) ಅವರೊ೦ದಿಗೆ ೨-೩ನೇ ಸ್ಥಾನಕ್ಕಾಗಿ ಟೈಡ್ ಆಗಿದ್ದು ವಿಷೇಶವಾಗಿದೆ.

ಪ್ರಶಸ್ತಿಗಳು ಮತ್ತು ಬಿರುದುಗಳು ಬದಲಾಯಿಸಿ

೨೦೦೧ರಲ್ಲಿ ಭಾರತದ ರಾಜ್ಯ ಸರ್ಕಾರ ವಿಜಯಲಕ್ಷ್ಮಿಯವರ ಸಾಧನೆಗೆ ಅರ್ಜುನ ಅವಾರ್ಡ್(Arjuna Award)ಪ್ರಶಸ್ತಿಯನ್ನು ಇವರಿಗೆ ನೀಡಿದೆ. ವಿಜಯಲಕ್ಷ್ಮಿಯವರು ಭಾರತದ ಪ್ರಥಮ ಡಬ್ಲ್ಯೂ.ಜಿ.ಎಮ್.(WGM) ಆಗಿದ್ದಾರೆ.[೩] ೧೯೯೬ರ ಕೊಲ್ಕತ್ತಾ, ೧೯೯೯ರ ಕೊಜ್ಹಿಕೊಡೆ, ೨೦೦೦ರ ಮುಂಬೈ, ೨೦೦೧ರ ನವ ದೆಹಲಿ ಮತ್ತು ೨೦೦೨ರ ಲಖ್‍ನೌ ಬಿರುದುಗಳನ್ನು ಗಳಿಸಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. https://ratings.fide.com/card.phtml?event=5004098
  2. https://chessbase.in/news/viji-birthday
  3. https://www.indiatoday.in/magazine/sport/story/20000807-indias-first-woman-grandmaster-subbaraman-vijayalakshmi-has-the-temperament-to-go-further-777833-2000-08-07