ಸುಬ್ಬಯ್ಯ ಅರುಣನ್ ಒಬ್ಬ ಭಾರತೀಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು.[] ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ. [] [] ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಿರುನಲ್ವೇಲಿ ಜಿಲ್ಲೆಯ ವಿಕ್ರಮಸಿಂಗಪುರದ ಸೇಂಟ್ ಮೇರಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಗಿಸಿದರು. ಅವರು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೊಥೈಸೆರಿಯಲ್ಲಿ ಜನಿಸಿದರು ಮತ್ತು ಕೊಯಮತ್ತೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ೧೯೮೪ ರಲ್ಲಿ ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. [] ಅನೌಪಚಾರಿಕವಾಗಿ [] ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್‌ಗೆ ಅವರು ಯೋಜನಾ ನಿರ್ದೇಶಕರಾಗಿದ್ದಾರೆ. ಅವರು ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಪುತ್ರಿ ಗೀತಾ ಅರುಣನ್ ಅವರನ್ನು ವಿವಾಹವಾಗಿದ್ದಾರೆ. []

ಸುಬ್ಬಯ್ಯ ಅರುಣನ್
೨೦೧೫ರಲ್ಲಿ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವುದು
ಜನನಕೊಥೈಸೇರಿ, ತಿರುನಲ್ವೆಲಿ, ತಮಿಳುನಾಡು
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಳುಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ಸಂಶೋಧನೆ
ಸಂಸ್ಥೆಗಳುವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಕೇಂದ್ರ
ಪ್ರಸಿದ್ಧಿಗೆ ಕಾರಣಮಂಗಳಯಾನ
ಗಮನಾರ್ಹ ಪ್ರಶಸ್ತಿಗಳುಪದ್ಮಶ್ರೀ

ಉಲ್ಲೇಖಗಳು

ಬದಲಾಯಿಸಿ
  1. "Archived copy". ibnlive.in.com. Archived from the original on 27 January 2015. Retrieved 13 January 2022.{{cite web}}: CS1 maint: archived copy as title (link)
  2. "Isro gears up to launch India's first mission to Mars on November 5". The Times of India. 2013-11-06. Archived from the original on 2013-11-03. Retrieved 2013-11-07.
  3. India's Mars mission: The ISRO dreamers who made it possible
  4. "Mangalyaan planning director from Nellai". Dinamalar. 2013-11-07. Retrieved 2013-11-07.
  5. "ISRO scientists who made Mangalyaan possible: All you need to know about them".
  6. Ram, Arun. "S Arunan: Man behind ISRO's Mars Orbiter Mission". The Economic Times. Retrieved 2022-07-09.