ಸುನೇತ್ರಾ ಚೌಧರಿ ಇವರು ಪತ್ರಕರ್ತೆ ಮತ್ತು ದಿ ಹಿಂದೂಸ್ತಾನ್ ಟೈಮ್ಸ್‌ನ ನಿರೂಪಕಿ. [] ಇವರ ವೃತ್ತಿಜೀವನವು ೧೯೯೯ ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಪ್ರಾರಂಭವಾಯಿತು. ಅಲ್ಲಿ ಅವರು ಉಪ ಮುಖ್ಯ ವರದಿಗಾರರಾಗಿದ್ದರು. ೨೦೦೨ ರಲ್ಲಿ, ಅವರು ತಮ್ಮ ವೃತ್ತಿ ಜೀವನವನ್ನು ಸ್ಟಾರ್ ನ್ಯೂಸ್‌ ಸುದ್ದಿ ವಾಹಿನಿಯಲ್ಲಿ ಆರಂಭಿಸಿದರು. ನಂತರ ೨೦೦೩ ರಲ್ಲಿ ಎನ್‌ಡಿಟಿವಿ ಗೆ ತೆರಳಿದರು. [] ಪ್ರಾಥಮಿಕವಾಗಿ ನವದೆಹಲಿಯಲ್ಲಿ ನೆಲೆಸಿರುವ ಅವರು ಭಾರತೀಯ ಸಮೂಹ ಸಂವಹನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. []

ಇವರು ಮೇಘಾಲಯದ ಶಿಲ್ಲಾಂಗ್‍‌ನಲ್ಲಿ ಜನಿಸಿದರು. ಇವರು ಪ್ರಸ್ತುತ ೨೦೧೯ರ ಮೇ ತಿಂಗಳಿನಿಂದ ರಾಜಕೀಯ ವ್ಯವಹಾರಗಳ ರಾಷ್ಟ್ರೀಯ ಸಂಪಾದಕರಾಗಿ ಹಿಂದೂಸ್ತಾನ್ ಟೈಮ್ಸ್‌ಗೆ ಸೇರಿದ್ದಾರೆ.

ವೃತ್ತಿ

ಬದಲಾಯಿಸಿ

ಚೌಧರಿ ಅವರು ೧೯೯೯ ರಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಗರ ವಿಭಾಗದ ನ್ಯೂಸ್ ಲೈನ್ ಜವಾಬ್ದಾರಿಯನ್ನು ವಹಿಸಿಕೊಂಡು ಉಪ ಮುಖ್ಯ ವರದಿಗಾರರಾದರು. ೨೦೦೨ರಲ್ಲಿ, ಹಿಂದಿಯ ಸ್ಟಾರ್ ನ್ಯೂಸ್‌ಗೆ ಎಲೆಕ್ಟ್ರಾನಿಕ್ ಮಾಧ್ಯಮ ವರದಿಗಾರರಾಗಿ ಪ್ರವೇಶಿಸಿದರು. ೨೦೦೩ರಲ್ಲಿ ನವದೆಹಲಿ ಮೂಲದ ಎನ್ ಡಿ ಟಿವಿ ಸೇರಿದರು. ಬಳಿಕ ೨೦೧೯ರ ಏಪ್ರಿಲ್ ೩೦ರಂದು ಆಕೆ ಎನ್ ಡಿಟಿವಿಯಿಂದ ಹೊರಬಂದಿರುವುದಾಗಿ ಘೋಷಿಸಿದರು.[] ೧ ಮೇ ೨೦೧೯ ರಲ್ಲಿ ಹಿಂದೂಸ್ತಾನ್ ಟೈಮ್ಸ್ಗೆ ಸೇರಿದರು.[][] ಇವರು ನೈಸರ್ಗಿಕ ವಿಕೋಪಗಳಿಂದ ಹಿಡಿದು ಅಪರಾಧ, ತನಿಖೆ ಮತ್ತು ರಾಜಕೀಯದವರೆಗೆ ಎಲ್ಲವನ್ನೂ ವರದಿ ಮಾಡುವ ನಿರೂಪಕಿ ಮತ್ತು ವರದಿಗಾರರಾಗಿದ್ದರು.[]

೨೦೧೦ರಲ್ಲಿ, ಹ್ಯಾಚೆಟ್ ಇಂಡಿಯಾ Archived 2023-03-14 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಪ್ರಕಾಶನ ಚೌಧರಿ ಅವರು ಬರೆದ ಬ್ರೇಕಿಂಗ್ ನ್ಯೂಸ್ ಎಂಬ ಪುಸ್ತಕವನ್ನು ಪ್ರಕಟಿಸಿದರು.[] ೨೦೦೯ರಲ್ಲಿ ಸಾರ್ವತ್ರಿಕ ಚುನಾವಣೆಗೆ ಎರಡು ತಿಂಗಳ ಮೊದಲು ಈ ಪುಸ್ತಕವನ್ನು ಪ್ರಕಟಿಸಿದರು. ಚೌಧರಿ, ತನ್ನ ಸಹೋದ್ಯೋಗಿ ನಗ್ಮಾ ಸಹರ್ ಜೊತೆಗೆ ಭಾರತದ ಬೈಲೇನ್‌ಗಳು ಮತ್ತು ಬೂನ್‌ಡಾಕ್‌ಗಳನ್ನು ಅಸ್ಪಷ್ಟ ಭಾರತೀಯ ಮತದಾರರ ಹುಡುಕಾಟದಲ್ಲಿ ಮತ್ತು ಅವನ ಮನಸ್ಸಿನ ಒಳನೋಟವನ್ನು ಕಂಡುಕೊಂಡರು. ಯುಪಿಯಲ್ಲಿ ವಿದ್ಯುತ್ ಇಲ್ಲದ ಹಳ್ಳಿಗಳಿಗೆ, ಜಾರ್ಖಂಡ್‌ನ ಬುಡಕಟ್ಟು ವಸಾಹತುಗಳಿಗೆ, ಒಡಿಶಾದ ಬರಿಪಾಡಾ ಮತ್ತು ತಮಿಳುನಾಡಿನ ಕಾಂಚೀಪುರಂಗೆ ಭೇಟಿ ನೀಡಿದರು. ಅವರು ಎಲೆಕ್ಷನ್ ಎಕ್ಸ್‌ಪ್ರೆಸ್ ಎಂಬ ದೈನಂದಿನ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯರೊಂದಿಗೆ ಮಾತನಾಡಿ ಅವರ ಜೀವನವನ್ನು ನಿರ್ಧರಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಅವರು ತಮ್ಮ ಚುನಾವಣಾ ಪ್ರವಾಸಕಥನದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ: []

ಭಾಗಶಃ ಪ್ರವಾಸ ಕಥನ, ಭಾಗಶಃ ಚುನಾವಣಾ ವಿಶೇಷ, ಭಾಗಶಃ ಟಿವಿ ಕ್ಯಾಮೆರಾಟೈಮ್ ಮರುಳನ ತಪ್ಪೊಪ್ಪಿಗೆಗಳು, ಈ ಪುಸ್ತಕವು ದೇಶವು ಏಕೆ ಮತ ಚಲಾಯಿಸಿತು ಎಂಬುದರ ಬಗ್ಗೆ ಒಬ್ಬ ಮಹಿಳೆಯ ತಿಳುವಳಿಕೆಯ ಸಂತೋಷಕರವಾದ ಮುಕ್ತ ವಿವರಣೆಯಾಗಿದೆ; ನಗರಗಳ ಅಭಿವೃದ್ಧಿಯೇ ಮತದಾರನ ಅಂತಿಮ ಗುರಿ ಎಂಬುದು ಎಷ್ಟು ಸ್ಪಷ್ಟವಾಗಿದೆ.....

೨೦೧೧ರಲ್ಲಿ, ಆಕೆ ಹಿರಿಯ ರಾಜಕಾರಣಿಯಿಂದ ಕಿರುಕುಳ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ವರದಿಯಾಗಿತು.[೧೦]

ಭಾರತೀಯ ಕುಟುಂಬಗಳು ಮೊದಲ ಬಾರಿಗೆ ಅಂಗವಿಕಲ ಮಕ್ಕಳನ್ನು ಹೇಗೆ ದತ್ತು ಪಡೆಯುತ್ತಿವೆ ಎಂಬುದರ ಕುರಿತಾದ ವರದಿಗೆ ೨೦೧೫ ರಲ್ಲಿ ರೆಡ್ ಇಂಕ್ ಪ್ರಶಸ್ತಿ ಪಡೆದರು.  

೧೦ ನವೆಂಬರ್ ೨೦೧೯ ರಂದು, ರೋಲಿ ಬುಕ್ಸ್ ಪ್ರಕಾಶನವು ಬ್ಲ್ಯಾಕ್ ವಾರಂಟ್ ಎಂಬ ಪುಸ್ತಕವನ್ನು ಪ್ರಕಟಿಸಿತು. ಈ ಪುಸ್ತಕದಲ್ಲಿ ಚೌಧರಿ ಮತ್ತು ಸುನಿಲ್ ಗುಪ್ತಾ ಸಹ-ಲೇಖಕರಾಗಿದ್ದಾರೆ. [೧೧]

ಗ್ರಂಥಸೂಚಿ

ಬದಲಾಯಿಸಿ
  • ಬ್ರೇಕಿಂಗ್ ನ್ಯೂಸ್ (೨೦೧೦)
  • ಬಿಹೈಂಡ್ ಬಾರ್ಸ್: ಪ್ರಿಸನ್ ಟೇಲ್ಸ್ ಆಫ್ ಇಂಡಿಯಾಸ್ ಮೋಸ್ಟ್ ಫೇಮಸ್ (೨೦೧೭)
  • ಬ್ಲಾಕ್ ವಾರಂಟ್ (೨೦೧೯)

ಉಲ್ಲೇಖಗಳು

ಬದಲಾಯಿಸಿ
  1. "A bold red bus revolution". Archived from the original on 8 May 2016.
  2. "Making headlines". Hindustan Times. 30 October 2004. Archived from the original on 11 June 2010. Retrieved 22 July 2011.
  3. "Alumni". Indian Institute of Mass Communication. Archived from the original on 11 August 2011. Retrieved 22 July 2011.
  4. "Twitter Post by Sunetra Choudhury".
  5. "Twitter Post by Sunetra Choudhury".
  6. "NDTV's Sunetra Choudhury joins HT as National Political Editor by exchange4media Staff".
  7. "Books by Sunetra Choudhury". Hachette. Archived from the original on 13 ಮೇ 2011. Retrieved 22 July 2011.
  8. "Braking News". Asian Window. Retrieved 22 July 2011.
  9. "Braking News by Sunetra Choudhury". ISBN 9789350090527. Archived from the original on 2016-12-27. Retrieved 2024-06-22.
  10. "Pervy Politician needs to get his act together". DNA India. 10 July 2011. Retrieved 22 July 2011.
  11. "'Black Warrant': A compilation of unheard stories of Tihar by IANS".


ಬಾಹ್ಯ ಸಂಪರ್ಕಗಳು

ಬದಲಾಯಿಸಿ