ಸುನಿತಾ ಶೆಟ್ಟಿ
ಡಾ. ಸುನಿತಾ ಶೆಟ್ಟಿ, ಮುಂಬಯಿ ಮಹಾನಗರದ ಸಂಸ್ಕೃತಿ ವಲಯದ ಅಭಿವ್ಯಕ್ತಿಗಳಾದ, ಭಾಷೆ, ಸಂಗೀತ,ನಾಟಕ,ಸಾಹಿತ್ಯ ಸಮ್ಮೇಳನಗಳು, ಮೊದಲಾದವುಗಳಲ್ಲಿ ಅತ್ಯಂತ ಸಕ್ರಿಯರಾಗಿ ಭಾಗವಹಿಸುವುದಲ್ಲದೆ ಪ್ರೋತ್ಸಾಹಕೊಡಲು ಸದಾ ನಿರತರಾಗಿರುವ ವ್ಯಕ್ತಿಗಳಲ್ಲೊಬ್ಬರು. ಅವರು ಕನ್ನಡ, ತುಳು ಕನ್ನಡಿಗರಿಗೆ ಪರಿಚಿತರು.[೧]
ಡಾ.ಸುನಿತಾ ಶೆಟ್ಟಿ | |
---|---|
Born | ಸುನಿತಾ (೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ತಂದೆ, ಕೂಕ್ರ ಡಿ.ಶೆಟ್ಟಿ,ಹಾಗೂ ತಾಯಿ ಸುಂದರಿ ಶೆಟ್ಟಿಯವರು. |
Nationality | ಭಾರತೀಯರು |
Education | ಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ; ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ. |
Occupation(s) | ನಿವೃತ್ತ ಪ್ರಾಧ್ಯಾಪಕಿ,ಮತ್ತು ಸಮಾಜಸೇವಕಿ, |
Known for | ಸೃಜನ ಮಹಿಳಾ ಬರಹಗಾರ್ತಿಯರ ಬಳಗಕ್ಕೆ ಮಾರ್ಗದರ್ಶಿ ಹಾಗೂ ಸಂಚಾಲಕಿ |
ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ
ಬದಲಾಯಿಸಿಸುನಿತಾ ಶೆಟ್ಟಿಯವರು, (೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ತಾಯಿಗಳು, ಕೂಕ್ರ ಡಿ.ಶೆಟ್ಟಿ,ಹಾಗೂ ಸುಂದರಿ ಶೆಟ್ಟಿಯವರು. ಪ್ರಾಥಮಿಕ ಶಿಕ್ಷಣ ಕಳವಾರಿನಲ್ಲಿ, ಮನೆಹತ್ತಿರದ ಶಾಲೆಯಲ್ಲಿ, (೧ರಿಂದ ೫ ನೆಯ ಇಯತ್ತೆವರೆಗೆ) ನಡೆಯಿತು. ಮಾಧ್ಯಮಿಕ ಶಾಲೆ. ಕಳವಾರಿನ ಚರ್ಚ್ ಶಾಲೆಯಲ್ಲಿ (೬ರಿಂದ ೮ನೆಯ ಇಯತ್ತೆ) ಪ್ರೌಢಶಾಲೆ ವಿದ್ಯಾದಾಯಿನಿ ಹೈಸ್ಕೂಲ್ ಸೂರಾತ್ಕಲ್, (೯ ರಿಂದ ೧೧ ನೇ ಇಯತ್ತೆವರೆಗೆ) ಇಂಟರ್ ಮೀಡಿಯೆಟ್ ಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ. ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ.
ವಿವಾಹ
ಬದಲಾಯಿಸಿಸುನಿತಾರವರು, ಮಹಾಬಲಶೆಟ್ಟಿಯವರ ಜೊತೆ ವಿವಾಹವಾದರು. ಅಧ್ಯಾಪತಕಿಯಾಗಿ, ಕೋಟೆಕಾರಿನ ಆನಂದಾಶ್ರಮ ಹೈಸ್ಕೂಲ್,ದಲ್ಲಿ ಕೆಲವು ತಿಂಗಳೂ,ಮುಂಬಯಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ, ೧೯೬೬ ರ ವರೆಗೆ, ಕನ್ನಡ ಪ್ರಾಧ್ಯಾಪಕಿ, ಖಲ್ಸಾ ಕಾಲೇಜ್, ಮುಂಬಯಿ. ೧೯೬೬ರ ರಿಂದ [೨] ಕಾಲೇಜಿನಲ್ಲಿ ಕೆಲಸಮಾಡುತ್ತಿದ್ದ ಸಮಯದಲ್ಲೇ ಸಾಹಿತ್ಯಿಕ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಕನ್ನಡ ಹಾಗು ತುಳು ಭಾಷೆಯಲ್ಲಿ ಒಳ್ಳೆಯ ಲೇಖಕಿಯಾಗಿ ಜನಪ್ರಿಯತೆಗಳಿಸಿದ್ದರು. ಆವರು ಪ್ರಕಟಿಸಿದ ಕವನ ಸಂಕಲನಗಳು :
- ಪಿಂಗಾರ,
- ಸಂಕ್ರಾಂತಿ,
- ನಾಗಸಂಪಿಗೆ,
ಕವನ ಸಂಕಲನಗಳು ತುಳು ಸಂಸ್ಕೃತಿಯ ಪರಿಚಯವನ್ನು ಮಾಡುವಲ್ಲಿ ಯಶಸ್ವಿಯಾಗಿರುವುದಲ್ಲದೆ, ತುಳುನಾಡಿನ ಮಹಿಳೆಯರ ಭಾವನೆಗಳಿಗೆ ನೇರವಾಗಿ ಸ್ಪಂದಿಸಿವೆ. ಸುನಿತಾರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಡಾಕ್ಟರೇಟ್ ಪದವಿ' ಗಳಿಸಿದರು. ಅವರು ತೆಗೆದುಕೊಂಡ ವಿಷಯ, 'ವಿಮೆನ್ ಇನ್ ದ ನಾವೆಲ್ಸ್ ಆಫ್ ಡಾ ಶಿವರಾಮ ಕಾರಂತ'[೩]
ಸೃಜನಾ ಬರಹಗಾರ್ತಿಯರ ಬಳಗದಲ್ಲಿ
ಬದಲಾಯಿಸಿಡಾ.ಸುನಿತಾ ಶೆಟ್ಟಿಯವರು, ಮುಂಬಯಿನಗರದ ಬರಹಗಾರ್ತಿಯರ ಬಳಗದ ಮಾರ್ಗದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. [೪]
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ http://www.daijiworld.com/news/news_disp.asp?n_id=114590
- ↑ "ಆರ್ಕೈವ್ ನಕಲು". Archived from the original on 2014-04-08. Retrieved 2014-04-01.
- ↑ ಡಾ.ಸುನೀತಾ ಶೆಟ್ಟಿ ಅನುವಾದಿತ 'ಪೊಣ್ಣ ಉಡಲ್ ಬೆಂಗ್ ದ ಕಡಲ್',ಕೃತಿಬಿಡುಗಡೆ,ಕಡಿವಾಣವಿಲ್ಲದ ಸ್ವಾತಂತ್ರ್ಯ ಸರ್ವರಿಗೂ ಸರಿಸಮಾನವಾಗಿರಬೇಕು ಶ್ರೇಣಿಶ್ಯಾಮ ಭಟ್ (ಚಿತ್ರವರದಿ : ರೋನ್ಸ್ ಬಂಟ್ವಾಳ್)
- ↑ ೧೫, ಮೇ, ೨೦೧೬, ಪುಟ.೧೩, ಕರ್ನಾಟಕ ಮಲ್ಲ, ದಿನಪತ್ರಿಕೆಯಲ್ಲಿ ಸೃಜನಾದ ಚೈತ್ರಯಾತ್ರೆ 'ಕವಿ ಶೈಲ'ಕ್ಕೆ, ಎಂಬ ಶೀರ್ಷಿಕೆಯ ಬರಹದಲ್ಲಿ ಸೃಜನಾ ಮಹಿಳೆಯರ ಗುಂಪು, ರಾಷ್ಟ್ರಕವಿ ಕುವೆಂಪುರವರ ಕವಿಶೈಲಕ್ಕೆ ಭೇಟಿನೀಡಿದ ವಿವರಗಳನ್ನು ತಮ್ಮ ಬರಹದಲ್ಲಿ ಸುದೀರ್ಘವಾಗಿ ದಾಖಲಿಸಿದ್ದಾರೆ
- ↑ ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನಮಾಡಲಾಯಿತು
- ↑ "ಚಂದ್ರಶೇಖರ ಪಾಲೆತ್ತಾಡಿ, ಡಾ.ಸುನೀತಾ ಎಮ್.ಶೆಟ್ಟಿ, ಡಾ.ಸುರೇಶ್ ರಾವ್, ಸಹಿತ ೬೬ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ, ಕರ್ನಾಟಕ ಮಲ್ಲ, ೦೨,೧೧,೨೦೨೧". Archived from the original on 2021-11-14. Retrieved 2021-11-14.
ಬಾಹ್ಯಸಂಪರ್ಕಗಳು
ಬದಲಾಯಿಸಿ- ಉದಯವಾಣಿ, ಪು.೧೨, ಮಹಾರಾಷ್ಟ್ರ ವಾರ್ತೆಗಳು,೧,೧೦,೨೦೧೫,ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ೮ನೇ ವಾರ್ಷಿಕ ಮಹಾಸಭೆ,"ಸಂಸ್ಥೆಯನ್ನು ಸಂಘಟಿಸಲು ಮುಂದಾಗೋಣ": ಸುನಿತಾಶೆಟ್ಟಿ
- Bellevision Media Network,By Rons Bantwal, 27 Jun 2016: Dr Sunita Shetty Literary Award conferred on litterateur Dr.Krishna Kolar Kulkarni
- ಶಿಷ್ಯನ ಸಾಧನೆಯೇ ಗುರುವಿಗೆಸಲ್ಲುವ ದೊಡ್ಡ ಗೌರವ,ಡಾ.ಸುನಿತಾಶೆಟ್ಟಿ, ಕರ್ನಾಟಕ ಮಲ್ಲ, ೦೫,ಮಾರ್ಚ್, ೨೦೧೭,ದಿವಂಗತ ವಿದ್ವಾನ್ ರಾಮಚಂದ್ರ ಉಚ್ಚಿಲ್ ಸಂಸ್ಮರಣಾರ್ಥ ಪ್ರಶಸ್ತಿಯನ್ನು ಮುಂಬಯಿನ ಶ್ರೇಷ್ಠರಂಗನಟ ,ಶಿಮುಂಜೆ ಪರಾರಿ (ಸೀತಾರಾಮಶೆಟ್ಟಿ)ಯವರಿಗೆ ಪ್ರದಾನ ಮಾಡಲಾಯಿತು.
- ಕರ್ನಾಟಕ ಮಲ್ಲ, 21 April, 2017, ಪು.8,ಮಂಗಳೂರಿನಲ್ಲಿ ಕಕ್ಷಿಣಕನ್ನಡ ಜಿಲ್ಲಾ ಮಹಿಳಾ ಸಾಹಿತ್ಯ, ಡಾ.ಎಸ್.ಸುನಿತಾಶೆಟ್ಟಿ, ಮುಂಬಯಿಯವರಿಂದ ಉದ್ಘಾಟನಾ ಭಾಷಣ
- ಉದಯವಾಣಿ, ೧೭,ಅಕ್ಟೋಬರ್, ೨೦೧೭,ಪು.೧೦,'ಮಹಾರಾಷ್ಟ್ರ ಕರ್ನಾಟಕ, ಮುಂದಿನ ಪೀಳಿಗೆಗೆ ಸಾಧಕರ ಬದುಕು ಪರಿಚಯ ಅವಶ್ಯ : ಡಾ.ಸುನೀತಾ ಶೆಟ್ಟಿ. ಬಿಲ್ಲವ ಭವನದಲ್ಲಿ 'ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ' ಕೃತಿ ಬಿಡುಗಡೆ
- "ಪ್ರಶಸ್ತಿಗಿಂತ ದೊಡ್ಡದು ನನಗೆ ಮುಂಬಯಿನೆಲದ ಮಣ್ಣು"-ಡಾ.ಸುನೀತಾ ಎಂ.ಶೆಟ್ಟಿ,ಕರ್ನಾಟಕ ಮಲ್ಲ, ೧೪,೧೧,೨೦೨೧,ಪುಟ.೮-ಶ್ರೀನಿವಾಸ ಜೋಕಟ್ಟೆ Archived 2021-11-14 ವೇಬ್ಯಾಕ್ ಮೆಷಿನ್ ನಲ್ಲಿ.