ಸುನಿತಾ ರಾಣಿ

ಭಾರತೀಯ ಕ್ರೀಡಾಪಟು

ಸುನಿತಾ ರಾಣಿ (ಜನನ ಡಿಸೆಂಬರ್ ೪, ೧೯೭೯) ಬಹು ಪ್ರಸಿದ್ಧತೆಯನ್ನು ಪಡೆದಿರುವ ಒಬ್ಬ ಭಾರತೀಯ ಕ್ರೀಡಾಪಟು. ಇವರು ಬುಸಾನ್‌ನಲ್ಲಿ ನಡೆದ ೧೪ನೆಯ ಏಷ್ಯನ್ ಕ್ರೀಡಾಕೂಟದಲ್ಲಿ ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಮತ್ತು ೫೦೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಸುನಿತಾ ರಾಣಿ
ಜನನಡಿಸೆಂಬರ್ ೪, ೧೯೭೯
ಸುನಾಮ್ ಗ್ರಾಮ,ಸಂಗ್ರೂರ್ ಜಿಲ್ಲೆ ,ಪಂಜಾಬ್ ರಾಜ್ಯ ,ಭಾರತ ದೇಶ
ರಾಷ್ಟ್ರೀಯತೆಭಾರತೀಯ
ವೃತ್ತಿಕ್ರೀಡಾಪಟು
ಸಂಗಾತಿಹೇಮ್ ಪುಷ್ಪ್
ಮಕ್ಕಳುಮೇಘಾ , ಶೆಲ್ಜಾ

ಸುನಿತಾ ರಾಣಿರವರು ಡಿಸೆಂಬರ್ ೪, ೧೯೭೯ರಂದು ಭಾರತ ದೇಶದ ಪಂಜಾಬ್ ರಾಜ್ಯದ ಸಂಗ್ರೂರ್ ಜಿಲ್ಲೆಯ ಸುನಾಮ್ ಗ್ರಾಮದಲ್ಲಿ ಜನಿಸಿದರು. ಇವರು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಗೆ ಸೇರಿದವರು. ಅವರ ತಂದೆ ರಾಮ್ ಸ್ವರೂಪ್. ಅವರ ತಾಯಿ ಸಂತೋಷ್ ರಾಣಿ. ಇವರು ಪ್ರಸ್ತುತ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಎಸ್.ಪಿ. ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುನೀತಾ ರಾಣಿರವರ ಪತಿ ಹೇಮ್ ಪುಷ್ಪ್ ಸಹಾ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಎಸ್.ಪಿ. ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಹಿರಿಯ ಮಗಳ ಹೆಸರು ಮೇಘಾ. ಕಿರಿಯ ಮಗಳ ಹೆಸರು ಶೆಲ್ಜಾ.[]

ವೃತ್ತಿಜೀವನ

ಬದಲಾಯಿಸಿ

೧೯೯೪ರಲ್ಲಿ ಸುನಿತಾ ಅವರ ಕ್ರೀಡಾ ವೃತ್ತಿಯು ಶಾಲೆಯಲ್ಲಿ ಪ್ರಾರಂಭವಾಯಿತು. ಪಂಜಾಬಿನ ಸಂಗ್ರೂರ್ ಜಿಲ್ಲೆಯಲ್ಲಿ ಸುನಾಮ್ ಗ್ರಾಮದಲ್ಲಿ ಜನಿಸಿದ ಈ ೧೫ ವರ್ಷದ ಸುನಿತಾ ರಾಣಿರವರು ಹುಟ್ಟಿನಿಂದಲೇ ಪ್ರತಿಭಾವಂತವಾಗಿರುವ ವ್ಯಕ್ತಿ ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಬಹುದೆಂದು ಭಾವಿಸಿದ್ದರು. ಆಗ ಅವರ ಶಾಲೆಯ ಓರ್ವ ಹಿರಿಯ ವಿದ್ಯಾರ್ಥಿ ಗೋಲ್ಡಿ ರಾಣಿ ಅವರು ಓಟದ ಪಂದ್ಯವನ್ನು ಗೆಲ್ಲಲು ಕಷ್ಟಪಟ್ಟು ಕೆಲಸ ಮಾಡು ಎಂದು ಹೇಳಿದರು. ಗೋಲ್ಡಿ ರಾಣಿ ಅವರ ಮಾತು ಸುನಿತಾ ರಾಣಿಗೆ ಹೆಚ್ಚು ಸ್ಪೂರ್ತಿ ನೀಡಿತು. ಅವರು ಜಿಲ್ಲಾ ಮಟ್ಟದ ೧೮ ವರ್ಷದೊಳಗಿನ ಕ್ರೀಡಾಕೂಟದಲ್ಲಿ ೩೦೦೦ ಮೀಟರ್ ಓಟದಲ್ಲಿ ಗೋಲ್ಡಿ ರಾಣಿಯ ನಂತರ ಎರಡನೆಯ ಸ್ಥಾನ ಪಡೆದರು ಹಾಗೂ ೧೬ ವರ್ಷದೊಳಗಿನ ಕ್ರೀಡಾಕೂಟದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದರು. ಇದರ ನಂತರ ಆಕೆ ತನ್ನ ತಂದೆ ಮತ್ತು ಸಹೋದರರ ಪ್ರೇರಣೆ ಮತ್ತು ಸಹಾಯದಿಂದ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಫ಼ೆಡರೇಶನ್ ಕಪ್ ಗೆದ್ದ ನಂತರ ಅವರು ೧೯೯೫ರಲ್ಲಿ ಕ್ರೀಡಾ ಅಧಿಕಾರಿಗಳ ಗಮನಕ್ಕೆ ಬಂದರು. ಸುನಿತಾ ಅವರು ಸಿಡ್ನಿ ಒಲಿಂಪಿಕ್ಸ್ಗಾಗಿ ಶ್ರದ್ಧೆಯಿಂದ ತಯಾರಿ ನಡೆಸಿದರು. ೧೦೦೦೦ ಮೀಟರ್‌ಗಿಂತಲೂ ಹೆಚ್ಚಾಗಿ ೫೦೦೦ ಮೀಟರ್ ಸ್ಪರ್ಧೆಗಾಗಿ ತನ್ನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವರು ಆಶಿಸಿದರು. ಅದೇ ಸಮಯದಲ್ಲಿ ಅವರು ತಮ್ಮ ವೇಗವನ್ನು ನಿರ್ವಹಿಸಲು ೮೦೦ ಮೀಟರ್ ಓಟದ ಅಭ್ಯಾಸವನ್ನು ಮಾಡುತ್ತಿದ್ದರು. ತಾನು ಸ್ವಲ್ಪ ಸಮಯವನ್ನು ಸರಿಪಡಿಸಿಕೊಂಡರೆ ಮಾತ್ರ ಖಂಡಿತವಾಗಿಯೂ ಪದಕ ಗೆಲ್ಲುವ ಸಾಧ್ಯತೆ ಇದೆ ಎಂದು ಅವರು ಭರವಸೆ ಹೊಂದಿದ್ದರು. ಆದರೆ ಕೆಲವು ತಪ್ಪಿಸಿಕೊಳ್ಳಲಾಗದ ಕಾರಣಗಳಿಂದಾಗಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ೨೦೦೨ರ ಬುಸಾನ್ ಒಲಿಂಪಿಕ್ಸ್‌ನಲ್ಲಿ ಅವರು ತಮ್ಮ ರಾಷ್ಟ್ರೀಯ ದಾಖಲೆಯನ್ನು ಮುರಿದು ೧೫೦೦ ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಅವರು ೪:೦೬:೦೩ ನಿಮಿಷಗಳಲ್ಲಿ ಸ್ಪರ್ಧೆಯ ಅಂತರವನ್ನು ಆವರಿಸಿ ಏಷ್ಯನ್ ದಾಖಲೆಯನ್ನು ೬ ಸೆಕೆಂಡ್‍ಗಳಿಂದ ಮುರಿದರು. ಅವರು ೬ ಸೆಕೆಂಡ್‍ಗಳಿಂದ ಇತರ ಸ್ಪರ್ಧಿಗಳಿಗಿಂತ ಮುಂಚೆ ಇದ್ದರು. ೨೦೦೨ರಲ್ಲಿ ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ ೧೫೦೦ ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಂತರ ಅವರ ಡೋಪ್ ಪರೀಕ್ಷೆ ನಡೆಯಿತು. ಅವರ ಡೋಪ್ ಪರೀಕ್ಷೆಯ ಫಲಿತಾಂಶ ಸಕಾರಾತ್ಮಕವಾಗಿತ್ತು, ಅದು ಎಲ್ಲೆಡೆ ಟೀಕೆಗೊಳಗಾಯಿತು. ಅವರ ಪದಕಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಅವರು ಮಾಡಿದ ಎಲ್ಲಾ ದಾಖಲೆಗಳು ಶೂನ್ಯವೆಂದು ಘೋಷಿಸಲಾಯಿತು.[][]೨೪ ಡಿಸೆಂಬರ್ ೨೦೦೨ರಂದು ಭಾರತೀಯ ಒಲಿಂಪಿಕ್ ಯೂನಿಯನ್ ಒಲಿಂಪಿಕ್ ವೈದ್ಯಕೀಯ ಆಯೋಗವು ಸುನಿತಾ ವಿರುದ್ಧ ಡೋಪಿಂಗ್ ಆರೋಪಗಳನ್ನು ವಾಪಾಸು ತೆಗೆದುಕೊಂಡಿದೆ ಎಂದು ಘೋಷಿಸಿತು. ಕೊನೆಯಲ್ಲಿ ಸುನೀತಾಗೆ ಕ್ಲೀನ್ ಚಿಟ್ ನೀಡಲಾಯಿತು ಮತ್ತು ಹಿಂದಿನ ಒಲಿಂಪಿಕ್ ಕೌನ್ಸಿಲ್ ವಶಪಡಿಸಿಕೊಂಡ ಪದಕಗಳನ್ನು ಅವಳಿಗೆ ಮರಳಿಸಲಾಯಿತು. ಅಂತಿಮವಾಗಿ ಒಲಿಂಪಿಕ್ ಕೌನ್ಸಿಲ್ ಆಫ್ ಏಶಿಯಾದ ಡೋಪಿಂಗ್ ಮತ್ತು ಜೀವರಸಾಯನಶಾಸ್ತ್ರ ಸಮಿತಿಯು ಸಿಯೋಲ್ ಪರೀಕ್ಷಾ ಪ್ರಯೋಗಾಲಯದಲ್ಲಿ ಕೆಲವು ಅಸಮ್ಮತಿಗಳನ್ನು ಪತ್ತೆಹಚ್ಚಿದ ಕಾರಣ ಕೇಸನ್ನು ಮುಚ್ಚಿ ಹಾಕಲು ನಿರ್ಧರಿಸಿತು. ಆದ್ದರಿಂದ ಸುನಿತಾರ ದಾಖಲೆಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿತು. ಅದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಡೋಪ್ ಪರೀಕ್ಷೆಯ ಫಲಿತಾಂಶಗಳನ್ನು ಮಾರ್ಪಡಿಸಲಾಯಿತು.[]ಸುನೀತಾ ರಾಣಿ ಸುದೀರ್ಘ ಮಧ್ಯಂತರದ ನಂತರ ಹಿಂತಿರುಗಿದರು. ಮೇ ೨೦೦೫ರಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಮೀಟ್‌ನಲ್ಲಿ ೧೦,೦೦೦ ಮೀಟರ್ ಓಟದಲ್ಲಿ ೩೪: ೫೭: ೪೨ ಸೆಕೆಂಡುಗಳಲ್ಲಿ ಓಟದ ಸ್ಪರ್ಧೆಯನ್ನು ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕ ಗೆದ್ದರು. ಸಂವೇದನೆಯ ಪುನರಾಗಮನದಲ್ಲಿ ಅವರು ೧೫೦೦ ಮೀಟರ್ ಸ್ಪರ್ಧೆಯನ್ನು ೪: ೨೦: ೬೩ ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡರು. ದೆಹಲಿಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾದ ಫೆಡರೇಶನ್ ಕಪ್ ಅಥ್ಲೆಟಿಕ್ಸ್‌ನಲ್ಲಿ ಅವರು ತಮ್ಮ ರಾಷ್ಟ್ರೀಯ ದಾಖಲೆಗಿಂತ ೧೨ ಸೆಕೆಂಡ್ಸ್ ಹೆಚ್ಚಾಗಿ ದಾಖಲಿಸಿದರು.

ಸಾಧನೆಗಳು

ಬದಲಾಯಿಸಿ
  • ೨೦೦೦ರಲ್ಲಿ ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಮತ್ತು ೫೦೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು.
  • ಮೇ ೨೦೦೫ರಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ ೧೦,೦೦೦ ಮೀಟರ್ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕ ಪಡೆದರು.
  • ಜೂನ್ ೨೦೦೫ರಲ್ಲಿ ೧೫೦೦ ಮೀಟರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.

ಪ್ರಶಸ್ತಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2017-10-29. Retrieved 2018-09-04.
  2. https://timesofindia.indiatimes.com/Athlete-Sunita-Rani-fails-dope-test/articleshow/25042094.cms
  3. https://www.thehindu.com/thehindu/2002/10/14/stories/2002101402902100.htm
  4. https://www.indiatoday.in/magazine/sport/story/20021202-hope-for-sunita-rani-as-indian-officials-press-world-athletics-bodies-to-clear-her-name-794372-2002-12-02