ಸುಧಾಕರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಜಾನಪದ ತಜ್ಞ, ಕಥೆಗಾರ ಪ್ರೊ.ಸುಧಾಕರ ಇವರು ೧೯೩೧ ಮೇ ೩೧ರಂದು ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೆಗೆರೆಯಲ್ಲಿ ಜನಿಸಿದರು. ಇವರ ತಾಯಿ ಸಾಕಮ್ಮ ; ತಂದೆ ಹುಚ್ಚಕಾಳೇಗೌಡ. ಗ್ರಾಮೀಣ ಭಾಷೆಯ ಸೊಗಡನ್ನು ತಮ್ಮ ಕಥೆಗಳಲ್ಲಿ ತಂದವರಲ್ಲಿ ಪ್ರೊ.ಸುಧಾಕರ ಕೂಡಾ ಒಬ್ಬರು. ಅವರ ಮೊಟ್ಟ ಮೊದಲ ಸಣ್ಣ ಕಥೆ ಸಾಕಿದ ನಾಯಿ ೧೯೬೦ ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಪ್ರಥಮ ಬಹುಮಾನಗಳಿಸಿತ್ತು. ನಂತರ ಕಣ್ಣಿ ಕಿತ್ತ ಹಸು(೧೯೬೧), ಹೊರಲಾರದ ಹೊರೆ(೧೯೬೨) ಪ್ರಶಸ್ತಿಗಳನ್ನು ಪಡೆದರು.[ಸೂಕ್ತ ಉಲ್ಲೇಖನ ಬೇಕು]
ಕಥಾಸಂಕಲನಗಳು
- ಗರಿಕೆ ಬೇರು.
- ಕಣ್ಣಿ ಕಿತ್ತ ಹಸು.
- ಬಾಡು ಬಕ್ಕನ ಮುಳ್ಳು.
ಜಾನಪದ
- ನಮ್ಮ ಸುತ್ತಿನ ಗಾದೆಗಳು.
- ದಡ ಕುಸಿದ ಬಾವಿ.
- ಪ್ರೇಮ ಸುಧಾ.
- ಜಾನಪದ ಬೆಡಗಿನ ವಚನಗಳು.
- ಒಡಚುವ ಕಥೆಗಳು.
- ಜಾನಪದ ನುಡಿಗಟ್ಟುಗಳ ಕೋಶ.
- ಶಿವಗಂಗೆ ಸುತ್ತಿನ ಗಾದೆಗಳು.
- ಜಾನಪದ ಕಲಬೆರಕೆತನ.
ಸಂಪಾದನೆ
- ಸಹ್ಯಾದ್ರಿ
ಪ್ರಶಸ್ತಿಗಳು
- ಇವರ ‘ಗರಿಕೆ ಬೇರು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ. [ಸೂಕ್ತ ಉಲ್ಲೇಖನ ಬೇಕು]