ಸೀಮಾ ಭಟ್ನಾಗರ್
ಸೀಮಾ ಭಟ್ನಾಗರ್ ಒಬ್ಬ ಭಾರತೀಯ ವಿಜ್ಞಾನಿ, ಆಂಟಿಕ್ಯಾನ್ಸರ್ ಔಷಧ ಅನ್ವೇಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.[೧] ಇ ಔಷಧಿಗಳ ಉದ್ದೇಶಿತ ವಿತರಣೆಗೆ ಸಿಂಥೆಟಿಕ್ ಕೆಮಿಸ್ಟ್ರಿ ವಿಧಾನಗಳಲ್ಲಿ ಅವರು ಮುಖ್ಯವಾಗಿ ಕೆಲಸ ಮಾಡುತ್ತದ್ದರು
ಸೀಮಾ ಭಟ್ನಾಗರ್ | |
---|---|
ಕಾರ್ಯಕ್ಷೇತ್ರಗಳು | ಸಣ್ಣ ಆಣ್ವಿಕ ಔಷಧ ಅನ್ವೇಷಣೆ |
ಅಭ್ಯಸಿಸಿದ ಸಂಸ್ಥೆ | ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ ಕೇಂದ್ರ ಔಷಧ ಸಂಶೋಧನಾ ಸಂಸ್ಥೆ (ಪಿಎಚ್‍ಡಿ) |
ಡಾಕ್ಟರೆಟ್ ಸಲಹೆಗಾರರು | ಅಮಿಯಾ ಪ್ರಸಾದ್ ಭದುರಿ |
ಶಿಕ್ಷಣ
ಬದಲಾಯಿಸಿಸೀಮಾ ಭಟ್ನಾಗರ್ ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಕುರಿತಾದ ವಿಷಯದ ಬಗ್ಗೆ ತಮ್ಮ ಬಿ.ಎಸ್ಸಿಯನ್ನು (೧೯೯೨) ಮುಗಿಸಿದರು, ನಂತರ ಸಾವಯವ ರಸಾಯನಶಾಸ್ತ್ರದ ಮೇಲೆ ಎಂ.ಎಸ್ಸಿಯನ್ನು ಲಕ್ನೋ ಇಸಾಬೆಲ್ಲಾ ಥೋಬರ್ನ್ ಕಾಲೇಜಿನಲ್ಲಿ (೧೯೯೪) ಮುಗಿಸಿದರು. ಅವರು ಪಿಎಚ್‌ಡಿಯನ್ನು ರಸಾಯನಶಾಸ್ತ್ರ ವಿಷಯದ ಕುರಿತು ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ Archived 2019-10-12 ವೇಬ್ಯಾಕ್ ಮೆಷಿನ್ ನಲ್ಲಿ.(೧೯೯೯) ಮತ್ತು ಲಕ್ನೋದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯಲ್ಲಿ ಅಮಿಯಾ ಪ್ರಸಾದ್ ಭದುರಿ ಅವರ ಡಾಕ್ಟರೇಟ್ ಸಲಹೆಗಾರರ ಅಡಿಯಲ್ಲಿ ಮುಗಿಸಿದರು.
ವೈಯಕ್ತಿಕ ಜೀವನ
ಬದಲಾಯಿಸಿಭಟ್ನಾಗರ್ ಭಾರತದ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಜನಿಸಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಮೀರಾ ಶ್ರೀವಾಸ್ತವ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿದ್ದ ರಾಮ್ ಚಂದ್ರ ಶ್ರೀವಾಸ್ತವ (೧೯೪೦-೧೯೯೯) ಅವರ ಹಿರಿಯ ಮಗಳು. ಆಕೆಯ ಕಿರಿಯ ಸಹೋದರ ಎಂಎನ್‌ಸಿಯಲ್ಲಿ ಐಟಿ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದಾನೆ, ಮತ್ತು ಕಿರಿಯ ಸಹೋದರಿ ಪ್ರಸ್ತುತ ಸಿಂಗಾಪುರದಲ್ಲಿ ವಾಸಿಸುತ್ತಿದ್ದಾರೆ. ಸೀಮಾ ಅವರು ಐಟಿ ಸಲಹೆಗಾರರನ್ನು ಮದುವೆಯಾಗಿದ್ದಾರೆ,ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ.
ವೃತ್ತಿ
ಬದಲಾಯಿಸಿಭಟ್ನಾಗರ್ ಔಷಧ ಅನ್ವೇಷಣೆ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ನೋಯ್ಡಾದ ಅಮಿಟಿ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿಯಲ್ಲಿ ಸಹಾಯಕ ನಿರ್ದೇಶಕರಾಗಿ , ಅಮಿಟಿ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ನಿಯೋಜನೆಗೆ ಮುಂಚಿತವಾಗಿ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದರು. ಅವರು ೨೦೦೫ ರಲ್ಲಿ ಅಮಿಟಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿಕೊಂಡರು. ಇದಕ್ಕೂ ಮೊದಲು ಅವರು ಭಾರತದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ ವಿಭಾಗದ ಸೆಲ್ ಬಯಾಲಜಿ ವಿಭಾಗದಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. (೦೭/೦೧) ರಿಂದ ೦೪/೦೪) ಮತ್ತು ಭಾರತದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿಯಲ್ಲಿ ಇಮ್ಯುನೊಫಾರ್ಮಾಕಾಲಜಿ ವಿಭಾಗದಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಿದರು .ಸೀಮಾ ಭಟ್ನಾಗರ್ ಅವರು ರಸಾಯನಶಾಸ್ತ್ರ ವಿಭಾಗದಲ್ಲಿ ಹಿರಿಯ ಸಂಶೋಧನಾ ಸಹೋದ್ಯೋಗಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು, ಇದು ನಿತ್ಯ ಆನಂದ್ ಅವರ ಮೇಲ್ವಿಚಾರಣೆಯಲ್ಲಿ "ಲ್ಯಾಕ್ಟಮ್ ಅಸಿಟಲ್ಸ್ ಇನ್ ಆರ್ಗ್ಯಾನಿಕ್ ಸಿಂಥೆಸಿಸ್" ಗೆ ಸಂಬಂಧಿಸಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಪೂರ್ಣವಾಗಿ ಪ್ರಾಯೋಜಿಸಿದ ಯೋಜನೆಯನ್ನು ನ್ಯೂ ಡ್ರಗ್ ಡಿಸ್ಕವರಿ ರಿಸರ್ಚ್ (ಎನ್‌ಡಿಡಿಆರ್), ರಾನ್‌ಬಾಕ್ಸಿ ಲ್ಯಾಬೊರೇಟರೀಸ್‌ನಲ್ಲಿ ಕಾರ್ಯಗತಗೊಳಿಸಲಾಗಿದ್ದಿತು.[೨]
ಭಟ್ನಾಗರ್ ಪ್ರಸ್ತುತ ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಅಮಿಟಿಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿನಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಟ್ನಾಗರ್ ಪ್ರಾರಂಭದಿಂದಲೂ ವಿಶ್ವವಿದ್ಯಾನಿಲಯದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಭಾರತ) (ಡಿಎಸ್ಟಿ) ಪ್ರಾಯೋಜಿಸಿದ ಯೋಜನೆಯೊಂದಿಗೆ ಅವರು ತಮ್ಮ ಸಂಶೋಧನಾ ವೃತ್ತಿಜೀವನವನ್ನು ಪ್ರಾರಂಭಿಸಿದರು.[೩] ಅವರು ಪ್ರಸ್ತುತ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಾಯೋಜಿಸಿದ ಯೋಜನೆಯನ್ನು ಅನುಸರಿಸುತ್ತಿದ್ದಾರೆ.[೪] ಇದಲ್ಲದೆ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭಿರವಭೋಟ್ಲ ಜಯರಾಮ್ , ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ (ಆರ್‌ಜಿಸಿಬಿ),ತಿರುವನಂತಪುರಂ ಮತ್ತು ಡ್ರಗ್ ಡಿಸ್ಕವರಿ ಯುನಿಟ್‌ನಲ್ಲಿ Archived 2019-10-13 ವೇಬ್ಯಾಕ್ ಮೆಷಿನ್ ನಲ್ಲಿ. ಬಲವರ್ಧನೆಗಾಗಿ ಅವರು ಸಕ್ರಿಯ ಸಹಯೋಗವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ಸಂಶೋಧನಾ ಕೆಲಸಗಳಾದ ಸಣ್ಣ ಅಣು ಡ್ರಗ್ ಡಿಸ್ಕವರಿಯಲ್ಲಿ ವೆಲ್ಕಂ ಟ್ರಸ್ಟ್ ಅಡ್ವಾನ್ಸ್ಡ್ ಕೋರ್ಸ್ಗೆ ಹಾಜರಾಗಲು ಆಯ್ಕೆಯಾಗಿದ್ದಕ್ಕಾಗಿ ಅವರು ತಮ್ಮ ಇನ್ಸ್ಟಿಟ್ಯೂಟ್ನಲ್ಲಿ ಫ್ರಂಟ್ ರನ್ನರ್ ಆಗಿದ್ದಾರೆ. ಪ್ರೊಫೆಸರ್ ಭಟ್ನಾಗರ್ ಅವರ ಸಂಶೋಧನಾ ರುಜುವಾತುಗಳಲ್ಲಿ ಭಾರತದಲ್ಲಿ ಬೌದ್ಧಿಕ ಆಸ್ತಿ ನೀಡಿರುವ ಮತ್ತು ಪ್ರಕಟಿಸಿದ ಹಲವಾರು ಪೇಟೆಂಟ್‌ಗಳು ಮತ್ತು ಪ್ರಕಟಣೆಗಳು ಏಷ್ಯನ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಅಂಡ್ ಕ್ಲಿನಿಕಲ್ ರಿಸರ್ಚ್, ರಾಸಾಯನಿಕ ಜೀವಶಾಸ್ತ್ರ ಮತ್ತು ಔಷಧ ವಿನ್ಯಾಸ, ಆಂಕೊಲಾಜಿಯ ಅನ್ನಲ್ಸ್ , ಇಂಟರ್ನ್ಯಾಷನಲ್ ಜರ್ನಲ್ ಆಫ್ ಚೆಮ್ಟೆಕ್ ರಿಸರ್ಚ್, ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಸಿ ಅಂಡ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್ & ಅಲೈಡ್ ಸೈನ್ಸಸ್, ಮೈಕೋಸ್ ಓವಿಡ್, ಅಮೇರಿಕನ್ ಜರ್ನಲ್ ಆಫ್ ಡ್ರಗ್ ಡಿಸ್ಕವರಿ ಅಂಡ್ ಡೆವಲಪ್ಮೆಂಟ್, . ವಿಲೇ ಆನ್‌ಲೈನ್ ಲೈಬ್ರರಿ, ಅಮಿಟಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯೊಂದಿಗೆ, ಪ್ರೊ.ಭಟ್ನಾಗರ್ ಅವರು ಅಮಿಟಿ ವಿಶ್ವವಿದ್ಯಾಲಯದೊಂದಿಗೆ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಸಹಯೋಗ ಸೇರಿದಂತೆ ವಿವಿಧ ಉಪಕ್ರಮಗಳನ್ನು ಮುನ್ನಡೆಸುತ್ತಿದ್ದರು.[೫] ಸ್ಟಡಿ ಅಬ್ರಾಡ್ ಪ್ರೋಗ್ರಾಂ ಮತ್ತು ಮೂರು ಖಂಡದ ಕಾರ್ಯಕ್ರಮಗಳನ್ನು ಹೊರತುಪಡಿಸಿ. ಪ್ರೊ.ಭಟ್ನಾಗರ್ ಅವರು ತಮ್ಮ ಪೋಸ್ಟ್ ಡಾಕ್ ಸಮಯದಲ್ಲಿ ಭಾರತದ ಉನ್ನತ ಸಂಶೋಧನಾ ಸಂಸ್ಥೆಗಳು ಮತ್ತು ವಿಜ್ಞಾನಿಗಳೊಂದಿಗೆ ಕೆಲಸ ಮಾಡಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ https://www.med.upenn.edu/apps/faculty/index.php/g275/p7314658
- ↑ https://www.nature.com/subjects/drug-discovery
- ↑ https://dst.gov.in/scientific-programmes/scientific-engineering-research
- ↑ https://www.india.gov.in/website-indian-council-medical-research-icmr
- ↑ "ಆರ್ಕೈವ್ ನಕಲು". Archived from the original on 2019-07-12. Retrieved 2019-10-13.
<Reference/>