ಸಿಸೇರಿಯನ್ ಶಸ್ತ್ರಚಿಕಿತ್ಸೆ
ಕಿಬ್ಬೊಟ್ಟೆಯ ಮೂಲಕ ಅಥವಾ ಗರ್ಭಕೋಶವನ್ನು ಕೊಯ್ದು ಗರ್ಭಸ್ಥ ಶಿಶುವನ್ನು ಹೊರತೆಗೆಯುವುದು.
(ಸಿ ಸೆಕ್ಷನ್ ಇಂದ ಪುನರ್ನಿರ್ದೇಶಿತ)
ಕಿಬ್ಬೊಟ್ಟೆಯ ಮೂಲಕ ಅಥವಾ ಗರ್ಭಕೋಶವನ್ನು ಕೊಯ್ದು ಗರ್ಭಸ್ಥ ಶಿಶುವನ್ನು ಹೊರತೆಗೆಯುವುದು. ಗರ್ಭಿಣಿಗೆ ಇಪ್ಪತ್ತೆಂಟು ವಾರಗಳ ಮೇಲೆ ಯಾವುದೇ ಕಾರಣಕ್ಕಾಗಿ ಸ್ವಾಭಾವಿಕ ಹೆರಿಗೆ ಆಗುವುದಿಲ್ಲವಾದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗುವುದು.[೨]
ಸಿಸೇರಿಯನ್ ಶಸ್ತ್ರಚಿಕಿತ್ಸೆ | |
---|---|
Synonyms | ಸಿ- ಸೆಕ್ಷನ್, ಸಿಸೇರಿಯನ್ ಸೆಕ್ಷನ್, ಸಿಸೇರಿಯನ್ ಡೆಲಿವರಿ |
ICD-10-PCS | 10D00Z0 |
ICD-9-CM | ಟೆಂಪ್ಲೇಟು:ICD9proc |
MeSH | D002585 |
MedlinePlus | 002911 |
ಇತಿಹಾಸ
ಬದಲಾಯಿಸಿಹಲವು ವರ್ಷಗಳ ಹಿಂದೆ ಸೀಸರ್ ಎಂವ ದೊರೆ ರೋಮ್ ರಾಜ್ಯವನ್ನು ಆಳುತ್ತಿದ್ದನು. ಗರ್ಭಿಣಿಯರು ಸತ್ತರೆ ಹಾಗೆಯೇ ಸಮಾಧಿ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿತ್ತು. ಆಕೆಯ ಶವವನ್ನು ಹೂಳುವ ಮೊದಲು ಆಕೆಯ ಶವದ ಹೊಟ್ಟೆಯನ್ನು ಸೀಳಿ ಗರ್ಭಸ್ಥ ಶಿಶುವನ್ನು ಹೊರತೆಗೆಯಬೇಕಿತ್ತು. ಇದು ಆ ರಾಜನ ಆಜ್ಞೆಯಾಗಿತ್ತು. ಆದ್ದರಿಂದ ಈ ಪ್ರಕ್ರಿಯೆಗೆ ಸಿಸೇರಿಯನ್ ಎಂಬ ಹೆಸರು ಬಂತು.[೩]
ಸಂದರ್ಭಗಳು
ಬದಲಾಯಿಸಿಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುವ ಸಂದರ್ಭಗಳು:-
- ಯಾವುದೇ ಕಾರಣದಿಂದಾಗಿ ತಾಯಿಗೂ ಮಗುವಿಗೂ ಅಪಾಯವಾಗದಿರಲು ತಜ್ಞರು ಈ ವಿಧಾನವನ್ನು ಆರಿಸಿಕೊಳ್ಳುತಾರೆ.
- ತಾಯಿಯ ಕಿಳ್ಗುಳಿಯ ಅಳತೆ ಬಹಳ ಕಡಿಮೆ ಇದ್ದು ಅಥವಾ ಮಗುವಿನ ತಲೆ ದೊಡ್ಡದ್ದಾಗಿದ್ದಾಗ.
- ಗರ್ಭಾಶಯದ ಅಥವಾ ಆಸುಪಾಸಿನ ಅಂಗಗಳಲ್ಲಿ ಗೆಡ್ಡೆಗಳು ಮಗುವಿಗೆ ಅಡ್ಡವಾಗಿದ್ದಾಗ.
- ಯೋನಿ ಅಥವಾ ಗರ್ಭಾಶಯದ ಕೊರಳು ವಿಪರೀತ ಸಂಕೋಚನಗೊಂಡು ಹೆಚ್ಚು ಕಮ್ಮಿ ಮುಚ್ಚಿಕೊಂಡಿರುವಾಗ.
- ಈಗಾಗಲೇ ಗರ್ಭಿಣಿ ಎರಡು ಸಲ ಸಿಸೇರಿಯನ್ ಆಗಿದ್ದರೆ.
- ಗರ್ಭದಲ್ಲಿ ಮಗುವು ಇರುವ ರೀತಿ, ಭಂಗಿಗಳು ಸರಿ ಇಲ್ಲದ್ದಿದಾಗ.
- ಗರ್ಭಾಶಯ ಅಪೇಕ್ಷಿತ ರೀತಿಯಲ್ಲಿ ಸಂಕುಚಿತವಾಗದ್ದಿದ್ದಾಗ ಮತ್ತು ಅದರ ಕೊರಳು ಸರಿಯಾದ ಸಮಯದಲ್ಲಿ ಅಗಲವಾಗದ್ದಿದ್ದಾಗ.
- ತಾಯಿಗೆ ತೀವ್ರವಾದ ಗರ್ಭಿಣಿಯ ನಂಜು ಇದ್ದಾಗ. ಪ್ರಸವಪೂರ್ವ ರಕ್ತಸ್ರಾವ, ಸಿಹಿಮೂತ್ರ ರೋಗ ಇತ್ಯಾದಿ ರೋಗಗಳಿದ್ದಾಗ.
- ಹೊಕ್ಕುಳಬಳ್ಳಿ ಮಗುವಿನ ಕತ್ತಿಗೆ ಸುತ್ತಿಕೊಂಡು ಹೆರಿಗೆ ಮುಂದುವರಿಯದೆ ಮಗುವಿನ ಹೃದಯದ ಬಡಿತ ಕ್ಷೀಣಿಸುತ್ತಿರುವಾಗ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ಕಾರ್ಯವಿಧಾನಗಳು
- ಸಿಸೇರಿಯನ್ ಬಗ್ಗೆ
- ಸಿಸೇರಿಯನ್ ವ್ಯುತ್ಪತ್ತಿ Archived 3 April 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
ಬದಲಾಯಿಸಿ- ↑ Fadhley, Salim (2014). "Caesarean section photography". WikiJournal of Medicine. 1 (2). doi:10.15347/wjm/2014.006. Archived from the original on 6 ಅಕ್ಟೋಬರ್ 2016.
{{cite journal}}
: Unknown parameter|deadurl=
ignored (help)CS1 maint: unflagged free DOI (link) - ↑ https://www.healthline.com/health/c-section#followup
- ↑ ವೈದ್ಯಕೀಯ ವಿಶ್ವಕೋಶ, ಡಾ. ಪಿ. ಎಸ್. ಶಂಕರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (೨೦೧೭), ಪುಟ- ೫೮