ಸಿರಿಯಾಕ್ ಎಬ್ಬಿ ಫಿಲಿಪ್ಸ್
ಸಿರಿಯಾಕ್ ಎಬ್ಬಿ ಫಿಲಿಪ್ಸ್ ಒಬ್ಬ ಭಾರತೀಯ ಹೆಪಟಾಲಜಿಸ್ಟ್(ಯಕೃತ್ತಿನ ತಜ್ಞ) ಮತ್ತು ಚಿಕಿತ್ಸಕ-ವಿಜ್ಞಾನಿ. ಅವರು ಸಾಮಾಜಿಕ ಜಾಲತಾಣಗಳಲ್ಲಿ "ದಿ ಲಿವರ್ ಡಾಕ್" ಎಂದು ಕರೆದುಕೊಳ್ಳುತ್ತಾರೆ, ಅಲ್ಲಿ ಅವರು ತಮ್ಮ ಸಂಶೋಧನೆಗಳು ಮತ್ತು ಸಂಶೋಧನೆಯ ಆಧಾರದ ಮೇಲೆ ಪರ್ಯಾಯ ಔಷಧದ ವಿಮರ್ಶಾತ್ಮಕ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತಾರೆ.
ಸಿರಿಯಾಕ್ ಎಬ್ಬಿ ಫಿಲಿಪ್ಸ್ | |
---|---|
ಜನನ | |
ವಿದ್ಯಾಭ್ಯಾಸ | ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು(ಎಂ ಬಿ ಬಿ ಎಸ್),[೨] ನೀಲ್ ರತನ್ ಸಿರ್ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ(ಎಂ ಡಿ)[೨] |
ವೃತ್ತಿs |
|
ಆರಂಭಿಕ ಜೀವನ
ಬದಲಾಯಿಸಿಫಿಲಿಪ್ಸ್ ಅವರು ಕೇರಳ ರಾಜ್ಯದ ಕೊಟ್ಟಾಯಂನಲ್ಲಿ ಜನಿಸಿದರು, ನಾಲ್ವರು ಒಡಹುಟ್ಟಿದವರಲ್ಲಿ ಮೂರನೆಯವರು.
ವೃತ್ತಿ
ಬದಲಾಯಿಸಿಫಿಲಿಪ್ಸ್ 2019 ರಲ್ಲಿ, ಹರ್ಬಲೈಫ್‌ನ ಆಹಾರ ಪೂರಕಗಳನ್ನು ತೆಗೆದುಕೊಂಡ ನಂತರ ಸಾವನ್ನಪ್ಪಿದ ಮಹಿಳೆಯ ಸಾವನ್ನು ವಿಶ್ಲೇಷಿಸುವ ಸಂಶೋಧನೆಯ ಸಹ-ಲೇಖಕರಾಗಿದ್ದರು, ಇದನ್ನು ನಂತರ ಜರ್ನಲ್ ಆಫ್ ಕ್ಲಿನಿಕಲ್ ಆಂಡ್ ಎಕ್ಸ್‌ಪೆರಿಮೆಂಟಲ್ ಹೆಪಟಾಲಜಿ ಪತ್ರಿಕೆಯಿಂದ ಹಿಂತೆಗೆದುಕೊಳ್ಳಲಾಯಿತು. [೩] [೪] ಮೈಕ್ರೋಬಯಾಲಜಿಸ್ಟ್ ಎಲಿಸಬೆತ್ ಬಿಕ್ ಮತ್ತು ರಿಟ್ರಾಕ್ಷನ್ ವಾಚ್ ತಮ್ಮ ಬ್ಲಾಗ್‌ಗಳಲ್ಲಿ ಪೇಪರ್ ಅನ್ನು ಪ್ರಕಟಿಸಿದ ನಂತರ ಹಿಂತೆಗೆದುಕೊಳ್ಳುವಿಕೆಯನ್ನು ರದ್ದುಗೊಳಿಸಲಾಯಿತು. [೫]
ಫಿಲಿಪ್ಸ್ ಕೊಚ್ಚಿಯ ರಾಜಗಿರಿ ಆಸ್ಪತ್ರೆಯಲ್ಲಿ ಹಿರಿಯ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಮತ್ತು ವೈದ್ಯ-ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [೬] [೭]
ಸಾಮಾಜಿಕ ಮಾಧ್ಯಮ
ಬದಲಾಯಿಸಿಫಿಲಿಪ್ಸ್ ಅವರು ಆಯುರ್ವೇದ, ಹೋಮಿಯೋಪತಿ ಮತ್ತು ಇತರ ಪರ್ಯಾಯ ಔಷಧ ವ್ಯವಸ್ಥೆಗಳ ವಿಮರ್ಶಾತ್ಮಕ ದೃಷ್ಟಿಕೋನಗಳನ್ನು ಟ್ವಿಟ್ಟರ್ ಮತ್ತು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲು ಹೆಸರುವಾಸಿಯಾಗಿದ್ದಾರೆ. [೫] [೮] [೯] ಅವರ ಪ್ರಕಾರ, "ಆಯುರ್ವೇದದ ತತ್ವಗಳು ಮತ್ತು ಅಭ್ಯಾಸಗಳು ಮೂಲಭೂತವಾಗಿ ಪ್ರಾಚೀನ, ಪರೀಕ್ಷಿಸದ ಅವಲೋಕನಗಳನ್ನು ಆಧರಿಸಿವೆ, ಇವು ವೈಜ್ಞಾನಿಕ ನೈಪುಣ್ಯತೆಯನ್ನು ಹೊಂದಿರುವುದಿಲ್ಲ". ಇವರು ಕೇರಳ ಸ್ಟೇಟ್ ಮೆಡಿಕಲ್ ಕೌನ್ಸಿಲ್ ಫಾರ್ ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್,ಆಯುರ್ವೇದ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ [೧೦] ಮತ್ತು ವಿವಿಧ ಆಯುರ್ವೇದ ಔಷಧ ತಯಾರಕರಿಂದ ಮಾನನಷ್ಟ ಮೊಕದ್ದಮೆಗಳಿಗೆ ಗುರಿಯಾಗಿದ್ದಾರೆ. [೧೧] [೧೨] ಹೆಪಟಾಲಜಿ ಕಮ್ಯುನಿಕೇಷನ್ಸ್ ಪತ್ರಿಕೆಯಲ್ಲಿ ಪ್ರಕಟವಾದ [೫] ಸಂಶೋಧನೆಯಲ್ಲಿ, ಫಿಲಿಪ್ಸ್ ಮತ್ತು ಇತರ ಸಂಶೋಧಕರು ಹೋಮಿಯೋಪತಿಯ ಮದ್ದುಗಳು ತೀವ್ರವಾದ ಯಕೃತ್ತಿನ ಹಾನಿಗೆ ಕಾರಣವಾಗಬಹುದೆಂದು [೧೩] ತೀರ್ಮಾನಿಸಿದ್ದಾರೆ. "ಹೋಮಿಯೋಪತಿ ಔಷಧವಲ್ಲ, ತೀವ್ರ ರೂಪದ ಹುಸಿವಿಜ್ಞಾನ" ಎಂದು ಅಭಿಪ್ರಾಯ ಪಟ್ಟಿದ್ದಾರೆ. [೧೪]
28 ಸೆಪ್ಟೆಂಬರ್ 2023 ರಂದು, ಹಿಮಾಲಯ ವೆಲ್ನೆಸ್ ಕಂಪನಿಯನ್ನು ಮಾನಹಾನಿ ಮಾಡಿದ ಆರೋಪಕ್ಕಾಗಿ ಬೆಂಗಳೂರು ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಜಾರಿಗೊಳಿಸಿದ ನಂತರ ಡಾ. ಎಬ್ಬಿ ಫಿಲಿಪ್ಸ್ ಅವರ X ಖಾತೆಯನ್ನು ಅಮಾನತುಗೊಳಿಸಲಾಗಿತ್ತು. [೧೫] ಅದಾಗ್ಯೂ, ಫಿಲಿಪ್ಸ್ ಹಿಮಾಲಯ ವೆಲ್ನೆಸ್ ಕಂಪನಿಯ ವಿರುದ್ಧದ ತಮ್ಮ ಆರೋಪಗಳನ್ನು "ಸಂಪೂರ್ಣವಾಗಿ ವಿಜ್ಞಾನ-ಬೆಂಬಲಿತ ಮತ್ತು ಪುರಾವೆ-ಬೆಂಬಲಿತ" ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಅವರು ಮಾಡಿದ ಎಲ್ಲಾ ವಿಶ್ಲೇಷಣೆಗಳು ಸಾರ್ವಜನಿಕ ವಿಮರ್ಶೆಗೆ ಲಭ್ಯವಿದೆ ಎಂದು ಹೇಳಿದ್ದಾರೆ. [೧೬]
ವೈಯಕ್ತಿಕ ಜೀವನ
ಬದಲಾಯಿಸಿಇವರು ಪದ್ಮಶ್ರೀ ಪುರಸ್ಕೃತರಾದ ಡಾ. ಫಿಲಿಪ್ ಆಗಸ್ಟೀನ್ ಅವರ ಮಗ, [೮] ಮತ್ತು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ತಂದೆ. [೬]
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Parth Sharma (3 September 2022). "Debunking Magical Cures and More- A Physician's Battle Against Pseudoscience". nivarana.org. Archived from the original on 21 October 2022. Retrieved 17 March 2023.
- ↑ ೨.೦ ೨.೧ "Doctor-Profile". www.rajagirihospital.com. Archived from the original on 22 November 2022. Retrieved 17 March 2023.
- ↑ Bik, Elisabeth (2020-12-20). "Paper about Herbalife®-related patient death removed after company threatens to sue the journal". Science Integrity Digest (in ಇಂಗ್ಲಿಷ್). Retrieved 2020-12-21.
- ↑ Philips, Cyriac A.; Augustine, Philip; Rajesh, Sasidharan; John, Solomon K.; Valiathan, Gopakumar C.; Mathew, Jos; Phalke, Sameer; Antony, Kuruveetil L. (2019-03-01). "REMOVED: Slimming to the Death: Herbalife®-Associated Fatal Acute Liver Failure—Heavy Metals, Toxic Compounds, Bacterial Contaminants and Psychotropic Agents in Products Sold in India". Journal of Clinical and Experimental Hepatology (in ಇಂಗ್ಲಿಷ್). 9 (2): 268–272. doi:10.1016/j.jceh.2018.08.002. ISSN 0973-6883. PMID 31024209.
- ↑ ೫.೦ ೫.೧ ೫.೨ Sohini C (5 February 2023). "Doctor lifts lid on dark side of India's 'wellness', traditional medicine sector". South China Morning Post. Retrieved 17 March 2023. ಉಲ್ಲೇಖ ದೋಷ: Invalid
<ref>
tag; name "scmp" defined multiple times with different content - ↑ ೬.೦ ೬.೧ Pooja Biraia Jaiswal (1 January 2023). "Docfluencers provide genuine information to millions". theweek.in. Retrieved 17 March 2023. ಉಲ್ಲೇಖ ದೋಷ: Invalid
<ref>
tag; name "theweek" defined multiple times with different content - ↑ Preetu Nair (11 June 2021). "Kerala: Doctor sees bid to defame him using 'toolkit'". Times of India. Retrieved 20 March 2023.
- ↑ ೮.೦ ೮.೧ Theres Sudeep (27 December 2022). "Who is challenging Ayurveda in today's India? Meet Kerala doctor, Cyriac Abby Philips". ThePrint. Retrieved 17 March 2023. ಉಲ್ಲೇಖ ದೋಷ: Invalid
<ref>
tag; name "theprint" defined multiple times with different content - ↑ "Doctor slams Filocof cough syrup, says 'contains parts of dead cockroach'". Mint. 11 March 2023. Retrieved 20 March 2023.
- ↑ Theruvath, Arif Hussain; Raveendran, Resmi; Philips, Cyriac Abby; Ahamed, Rizwan; Abduljaleel, Jinsha K; Tharakan, Ajit; Rajesh, Sasidharan; Augustine, Philip (March 2023). "A series of homeopathic remedies-related severe drug-induced liver injury from South India". Hepatology Communications. 7 (3): e0064. doi:10.1097/HC9.0000000000000064. PMC 9916127. PMID 36757412.
- ↑ "Liver specialist accused of professional misconduct for calling Ayurveda 'pseudoscience'". The Hindu. 6 February 2022. Retrieved 17 March 2023.
- ↑ "Charges dropped against Kerala doc who flagged herb meds for causing liver injury". The News Minute (in ಇಂಗ್ಲಿಷ್). 5 October 2022. Retrieved 17 March 2023.
- ↑ "'This is crazy!': Doctor flags alcohol amount in homeopathic drugs, warns 'happy people'". Hindustan Times. 14 March 2023. Retrieved 17 March 2023.
- ↑ Manpriya Khurana (16 March 2023). "From alcohol to dead cockroaches; how homeopathy pushes quackery to new limits". International Business Times. Retrieved 20 March 2023.
- ↑ "X suspends 'TheLiverDoc' Abby Philips account after Himalaya's defamation plea". 28 September 2023. Retrieved 28 September 2023.
- ↑ "X Account of 'The Liver Doc' Suspended After Court Issues Ex-Parte Injunction in Suit Filed by Himalaya". 28 September 2023. Retrieved 28 September 2023.