ಸಿಜು ಗುಹೆ
ಸಿಜು ಗುಹೆ, (ಇಂಗ್ಲಿಷ್‍ನಲ್ಲಿ ಬ್ಯಾಟ್ ಕೇವ್-ಬಾವಲಿ ಗುಹೆ ಎಂದೂ ಪರಿಚಿತವಾಗಿದೆ) ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದಲ್ಲಿ ನಪಾಕ್ ಸರೋವರ ಹಾಗೂ ಸಿಂಸಾಂಗ್ ನದಿ ಅಭಯಾರಣ್ಯದ ಹತ್ತಿರ ಸ್ಥಿತವಾಗಿದೆ. ಇದು ಸುಣ್ಣದಕಲ್ಲಿನ ಗುಹೆಯಾಗಿದ್ದು ತನ್ನ ನೆಲತೊಂಗಲುಗಳು ಮತ್ತು ತೂಗುತೊಂಗಲುಗಳಿಗೆ ಪ್ರಸಿದ್ಧವಾಗಿದೆ.[೧]
ಸಿಜು ಗುಹೆ-ವ್ಯವಸ್ಥೆಯು 4 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾಗಿದೆ, ಆದರೆ ಬಹುತೇಕ ಎಲ್ಲವೂ ನೀರಿನಿಂದ ತುಂಬಿದ್ದು ಇದನ್ನು ಪ್ರವೇಶಿಸಲಾಗುವುದಿಲ್ಲ. ಮೇಘಾಲಯದ ಸುಣ್ಣದಕಲ್ಲಿನ ಬೆಟ್ಟಗಳು ಸಾಕಷ್ಟು ಮಳೆ ಮತ್ತು ತೇವಾಂಶವನ್ನು ಪಡೆಯುತ್ತವೆ ಮತ್ತು ಇತರ ಅನೇಕ ಗುಹೆ-ವ್ಯವಸ್ಥೆಗಳನ್ನು ಹೊಂದಿವೆ, ಅವುಗಳಲ್ಲಿ ಕೆಲವು ಸಿಜುಗಿಂತ ಹೆಚ್ಚು ಉದ್ದ ಮತ್ತು ದೊಡ್ಡದಾಗಿವೆ, ಆದರೆ ಸಿಜು ಗುಹೆಯು ಅತ್ಯಂತ ಸಮಗ್ರವಾಗಿ ಸಂಶೋಧಿಸಲ್ಪಟ್ಟ ಮತ್ತು ಅನ್ವೇಷಿಸಲಾದ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಸಿಜು ಗುಹೆಗಳು 21–26.4 °C ನಡುವಿನ ಸ್ಥಿರ ತಾಪಮಾನವನ್ನು ಹೊಂದಿವೆ ಎಂದು 1927 ರಲ್ಲಿ ಕಂಡುಬಂದಿತು. [೨]
ಸಾಹಿತ್ಯ
ಬದಲಾಯಿಸಿ- Stanley Kemp (1924). Rhynchota of the Siju Cave, Garo Hills, Assam (PDF).
ಉಲ್ಲೇಖಗಳು
ಬದಲಾಯಿಸಿ- ↑ The Indian Encyclopaedia, Volume 1. Genesis Publishing Pvt Ltd. p. 6573. ISBN 9788177552577.
- ↑ Biospeleology: The Biology of Cavernicolous animals. Elsevier. p. 309. ISBN 9781483185132.
- ↑ "Meghalaya: Visit Asia's cleanest village & meet the flurry red panda". The Economic Times. Archived from the original on 2016-03-05. Retrieved 2020-11-03.
ಹೊರಗಿನ ಕೊಂಡಿಗಳು
ಬದಲಾಯಿಸಿ- ಮೇಘಾಲಯ ಪ್ರವಾಸೋದ್ಯಮ: ಸಿಜು ಗುಹೆ Archived 2020-07-09 ವೇಬ್ಯಾಕ್ ಮೆಷಿನ್ ನಲ್ಲಿ.