ಸಿಂಕಿ
ಸಿಂಕಿ ಗುಂದ್ರುಕ್‍ನ್ನು ಹೋಲುವ ಸಂರಕ್ಷಿಸಿಟ್ಟ ತರಕಾರಿಯಾಗಿದೆ. ಗುಂದ್ರುಕ್‍ನ್ನು ಎಲೆ ತರಕಾರಿಗಳಿಂದ ತಯಾರಿಸಿದರೆ ಸಿಂಕಿಯನ್ನು ಮೂಲಂಗಿ ತಾಯಿಬೇರುಗಳಿಂದ ತಯಾರಿಸಲಾಗುತ್ತದೆ. ಈ ಪೀಳಿಗೆಗಳಷ್ಟು ಹಳೆಯದಾದ ಖಾದ್ಯವನ್ನು ತಯಾರಿಸಲು ಬಲಿತ ಮೂಲಂಗಿ ಸೀಳುಗಳನ್ನು ಬಿದುರು ಮತ್ತು ಒಣಹುಲ್ಲಿನ ಒಣಪದರವಿರುವ ಒಂದು ರಂಧ್ರದಲ್ಲಿ ಒತ್ತಲಾಗುತ್ತದೆ. ನಂತರ ಮೇಲೆ ಸಸ್ಯಗಳು, ಕಲ್ಲುಗಳು, ಕಟ್ಟಿಗೆ ಹಾಗೂ ಅಂತಿಮವಾಗಿ ಮಣ್ಣಿನ ಹೊದಿಕೆಯಿಂದ ಮುಚ್ಚಲಾಗುತ್ತದೆ. ಒಂದು ತಿಂಗಳು ಬ್ಯಾಕ್ಟೀರಿಯಲ್ ಸಂರಕ್ಷಣೆಯ ನಂತರ ಸಂರಕ್ಷಿತ ತರಕಾರಿಯನ್ನು ಬಿಸಿಲಿನಲ್ಲಿ ಒಣಗಿಸಿ ಕೆಲವು ಅಥವಾ ಹೆಚ್ಚು ವರ್ಷಗಳು ಬಾಳಿಕೆ ಬರುವಂತೆ ಶೇಖರಿಸಿಡಲಾಗುತ್ತದೆ.[೧]
ಸಿಂಕಿಯನ್ನು ಉಪ್ಪಿನಕಾಯಿಯಾಗಿಯೂ ತಿನ್ನಲಾಗುತ್ತದೆ. ಉಪ್ಪಿನಕಾಯಿಯನ್ನು ತಯಾರಿಸಲು ಸಿಂಕಿಯನ್ನು ಒಣಗಿಸಲಾಗುವುದಿಲ್ಲ. ಬದಲಾಗಿ ಅದನ್ನು ನೇರವಾಗಿ ಸಂಬಾರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಬಾಟಲಿಗಳಲ್ಲಿ ತುಂಬಿಡಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "What Is Sinki?". wiseGEEK.