ಗುಂದ್ರುಕ್ ಹುಳಿ ಹಿಡಿಸಿದ ಹಸಿರು ಎಲೆ ತರಕಾರಿಯಾಗಿರುತ್ತದೆ. ಇದು ನೇಪಾಳದಲ್ಲಿ ಜನಪ್ರಿಯ ಆಹಾರವಾಗಿದೆ. ಇದು ಆ ದೇಶದ ರಾಷ್ಟ್ರಖಾದ್ಯಗಳಲ್ಲಿ ಒಂದು ಎಂದು ಸಾಧಿಸಲಾಗಿದೆ. ಇದು ನೇಪಾಳವಷ್ಟೇ ಅಲ್ಲದೆ ವಿಶ್ವಾದ್ಯಂತದ ಗೊರ್ಖಾಲಿ ಅಥವಾ ನೇಪಾಳಿ ವಲಸಿಗ ಮನೆಗಳಲ್ಲಿ ಕೂಡ ಜನಪ್ರಿಯವಾಗಿದೆ.[೧] ನೇಪಾಳದಲ್ಲಿ ಗುಂದ್ರುಕ್‍ನ ವಾರ್ಷಿಕ ಉತ್ಪಾದನೆ ೨,೦೦೦ ಟನ್‍ಗಳೆಂದು ಅಂದಾಜಿಸಲಾಗಿದೆ. ಬಹುತೇಕ ಉತ್ಪಾದನೆಯನ್ನು ಮನೆ ಮಟ್ಟದಲ್ಲಿ ಮಾಡಲಾಗುತ್ತದೆ.[೨] ಗುಂದ್ರುಕ್‍ನ್ನು ಮುಖ್ಯ ಊಟದೊಂದಿಗೆ ಪಕ್ಕಖಾದ್ಯವಾಗಿ ಬಡಿಸಲಾಗುತ್ತದೆ. ಇದನ್ನು ಕ್ಷುದಾವರ್ಧಕವಾಗಿಯೂ ಬಳಸಲಾಗುತ್ತದೆ. ಗುಂದ್ರುಕ್ ಖನಿಜಗಳ ಪ್ರಮುಖ ಮೂಲವಾಗಿದೆ, ವಿಶೇಷವಾಗಿ ಆಹಾರವು ಬಹುತೇಕವಾಗಿ ಪಿಷ್ಟಯುತ ಗೆಡ್ಡೆಗಳು ಮತ್ತು ಮೆಕ್ಕೆ ಜೋಳ ಆಗಿರುವ ಅಸಮಯದಲ್ಲಿ, ಏಕೆಂದರೆ ಇವು ಖನಿಜಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ.

ಗುಂದ್ರುಕ್ ಉಪ್ಪಿನಕಾಯಿ

ಉಲ್ಲೇಖಗಳು ಬದಲಾಯಿಸಿ

  1. "Gundruk". Bicnehu.ac.in. Archived from the original on 2012-03-09. Retrieved 2010-09-12.
  2. Battcock, Mike; Azam-Ali, Sue (1998). Fermented fruits and vegetables : A global perspective. Rome: Food and Agriculture Organization of the United Nations. p. 66. ISBN 92-5-104226-8.

ಹೊರಗಿನ ಕೊಂಡಿಗಳು ಬದಲಾಯಿಸಿ