ಸಾವನದುರ್ಗ
ಸಾವನದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೫೫ ಕಿಮೀ ಪಶ್ಚಿಮದಲ್ಲಿರುವ ಮಾಗಡಿ ರಸ್ತೆಯ 12°55′11″N 77°17′34″E / 12.919654°N 77.292881°E ಎದುರಿಗಿರುವ ಒಂದು ಬೆಟ್ಟವಾಗಿದೆ. ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಏಷ್ಯಾದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ೧೨೨೬ ಮೀಟರ್‌ಗಳಷ್ಟು ಎತ್ತರದಲ್ಲಿದೆ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿ ರೂಪುಕೊಡುತ್ತದೆ. ಇದು ಪರ್ಯಾಯ ದ್ವೀಪದ ನೈಸ್‌ಗಳು, ಮೂಲ ಸ್ತರಪ್ರವಿಷ್ಟಾಗ್ನಿಶಿಲೆಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನತ್ತ ಹರಿಯುತ್ತದೆ.
ಹೆಸರಿನ ಉಗಮ
ಬದಲಾಯಿಸಿಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. ೧೩೪೦ ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. ೧೬೩೮ ರಿಂದ ೧೭೨೮ ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. ೧೭೯೧ ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.[೧][೨] ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ನಲ್ಲಿ (೧೭೯೪) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.[೩] ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.
ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ.[೪]. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ.
ಪ್ರವಾಸೋದ್ಯಮ
ಬದಲಾಯಿಸಿಸಾವನದುರ್ಗ ಬೆಟ್ಟಗಳಿಗೆ ಯಾತ್ರಾರ್ಥಿಗಳು ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಇವರು ಬೆಟ್ಟದ ಬುಡದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಾರೆ. ವಿಹಾರ ಪ್ರವಾಸಿಗಳು ಬೆಟ್ಟದ ನಿರ್ಮಲವೂ ಪ್ರಶಾಂತವೂ ಆದ ಪರಿಸರದಲ್ಲಿ ಸಮಯ ಕಳೆಯಲು ಬರುತ್ತಾರೆ. ಶಿಲಾ ಆರೋಹಿ, ಗುಹೆ ಅನ್ವೇಷಕರು ಮತ್ತು ಸಾಹಿಸಗಳು ಈ ಸ್ಥಳಕ್ಕೆ ಆಗಾಗ್ಗೆ ಬರುವ ಇತರರಾಗಿದ್ದಾರೆ.
ಬಸ್ ಮಾರ್ಗ: ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ರಸ್ತೆಗೆ ಹೋಗುವ ಬಸ್ ಹಿಡಿಯಬೇಕು. ಈ ಬಸ್ ಸಾಮಾನ್ಯವಾಗಿ ನಿಮ್ಮನ್ನು ನಗರದ ಮಿತಿಯೊಳಗೆ ಮಾಗಡಿ ರಸ್ತೆಯ ಒಂದು ಖಚಿತವಾದ ಸ್ಥಳದಲ್ಲಿ ಬಿಡುತ್ತದೆ. ಅಲ್ಲಿಂದ ನೀವು ಮಾಗಡಿ ರಸ್ತೆ ಜಂಕ್ಷನ್‌ಗೆ ಮತ್ತೊಂದು ಬಸ್ ಹಿಡಿಯಬೇಕು. ಅಲ್ಲಿಂದ ನೀವು ಸಾವನದುರ್ಗಕ್ಕೆ ಹೋಗಲು ಎಡಕ್ಕೆ ತಿರುಗಬೇಕು (ಆ ಸ್ಥಳದಿಂದ ೧೨ ಕಿಮೀ ದೂರವಿದೆ), ಇಲ್ಲಿಂದ ಹೊಸಪೇಟೆ ಗೇಟ್‌ಗೆ (ಸಾವನದುರ್ಗವು ಇಲ್ಲಿದೆಯೆಂದು ಹೇಳಬಹುದು) ಹೋಗಲು ಖಾಸಗಿ ಮತ್ತು KSRTC ಬಸ್‌ಗಳು ಲಭ್ಯಯಿವೆ.ಬೆಂಗಳೂರಿನಿಂದ ಇಲ್ಲಿಗೆ ಹೋಗಲು ಒಟ್ಟು ಪ್ರಯಾಣ ಅವಧಿ ೨ ಗಂಟೆ ೧೫ ನಿಮಿಷಗಳು. (ನಿಮಗೆ ಬಸ್ ಸಿಗದಿದ್ದರೆ, ಈ ೧೨ ಕಿಮೀ ದೂರವನ್ನು ತಲುಪಲು ಆಟೊವನ್ನು ಬಳಸಬಹುದು).
ರಾಮನಗರ ಒಂದಿಗೆ ಇದೂ ಸಹ ಡೇವಿಡ್ ಲೀನ್‌ನ ಚಲನಚಿತ್ರ ಎ ಪಾಸೇಜ್ ಟು ಇಂಡಿಯಾ ವನ್ನು ಚಿತ್ರೀಕರಿಸಲು ಬಳಸಿದ ಒಂದು ಸ್ಥಳವಾಗಿದೆ.
ಪ್ರಾಣಿ ಸಂಕುಲ
ಬದಲಾಯಿಸಿಈ ಬೆಟ್ಟಗಳು ಅಳಿವಿನಂಚಿನಲ್ಲಿರುವ ಹಳದಿ-ಕತ್ತಿನ ಬುಲ್ಬುಲ್ಗಳಿಗೆ ನೆಲೆಯಾಗಿದೆ ಹಾಗೂ ಇವು ಹಿಂದೆ ಉದ್ದ-ಕೊಕ್ಕಿನ ರಣಹದ್ದುಗಳು ಮತ್ತು ಹಿಂಭಾಗ ಬಿಳಿಯಾಗಿರುವ ರಣಹದ್ದುಗಳಿಗೆ ಮನೆಯಾಗಿದ್ದವು. ಇಲ್ಲಿರುವ ಇತರ ವನ್ಯಜೀವಿಗಳೆಂದರೆ ಸ್ಲಾತ್ ಕರಡಿ ಮತ್ತು ಚಿರತೆ.
ಸಸ್ಯಸಂಪತ್ತು
ಬದಲಾಯಿಸಿಈ ಪ್ರದೇಶದ ಸುತ್ತಲೂ ಕುರುಚಲು ಪೊದೆಗಳಿಂದ ಕೂಡಿದ ಕಾಡಿದೆ ಮತ್ತು ಒಣಗಿದ, ವರ್ಣಕ್ಕೊಮ್ಮೆ ಎಲೆ ಉದುರಿಸುವ ಅರಣ್ಯವು ಸುಮಾರು ೨೭ km² ಪ್ರದೇಶವನ್ನು ಆವರಿಸಿದೆ. ಆನೋಜೈಸಸ್-ಕ್ಲೋರೋಕ್ಸಿಲಾನ್ ಅಕೇಶಿಯ ಸರಣಿಯ ಪೊದೆ ಮತ್ತು ಮರಗಳ ಹುಲ್ಲುಗಾವಲೆಂದು ಪರಿಗಣಿಸಲಾಗುವ ಇದು ಹೆಚ್ಚಿನ ವೈವಿಧ್ಯತೆಯನ್ನು ಹೊಂದಿದೆ. ಅವನತಿ ಹೊಂದಿರುವ ಈ ಅರಣ್ಯವು ಸುಮಾರು ೫೯ ಮರಗಳು ಮತ್ತು ೧೧೯ ಪೊದೆ ಜಾತಿಗಳನ್ನು ಹೊಂದಿದೆ. ಇಲ್ಲಿ ಕಂಡುಬಂದ ಕೆಲವು ಸಸ್ಯ ಜಾತಿಗಳೆಂದರೆ:[೫]
- ಅಬ್ರಸ್ ಪ್ರಿಕಾಟರಿಯಸ್ L. ಲಿಯಾನ
- ಅಬುಟಿಲನ್ ಇಂಡಿಕಮ್ (L) ಸ್ವೀಟ್. ಕುರುಚಲು ಗಿಡ
- ಅಕೇಶಿಯ ಆರ್ಕುಲಿಫಾರ್ಮಿಸ್ A. ಕನ್ನ್. (ಎಕ್ಸ್ ಬೆಂತ್) ಮರ
- ಅಕೇಶಿಯ ಕ್ಯಾಟೆಚು ವಿಲ್ಡ್. ಮರ
- ಅಕೇಶಿಯ ಚುಂದ್ರ (ರಾಕ್ಸ್ಬ್.) ವಿಲ್ಡ್. ಮರ
- ಅಕೇಶಿಯ ಕೊಂಕಿನ (ವಿಲ್ಡ್) DC. ಲಿಯಾನ
- ಅಕೇಶಿಯ ಫಾರ್ನೇಶಿಯಾನ (L.) ವಿಲ್ಡ್. ಮರ
- ಅಕೇಶಿಯ ಫೆರುಜಿನಿಯಾ DC. ಮರ
- ಅಕೇಶಿಯ ಲ್ಯೂಕೊಫ್ಲೋಯ (ರಾಕ್ಸ್ಬ್.) ವಿಲ್ಡ್ ಮರ
- ಅಕೇಶಿಯ ನಿಲೋಟಿಕ (L.) ಡೆಲ್. ಮರ
- ಅಕೇಶಿಯ ಸಿನ್ವಾಟ (ಲೋರ್.) ಮೆರ್ರ್. ಲಿಯಾನ
- ಅಕೇಶಿಯ ಟೋರ್ಟ (ರಾಕ್ಸ್ಬ್.) ಬ್ರ್ಯಾನ್. ಕುರುಚಲು ಗಿಡ
- ಅಡಿನಾ ಕಾರ್ಡಿಫೋಲಿಯಾ (ರಾಕ್ಸ್ಬ್.) ಬ್ರ್ಯಾನ್. ಮರ
- ಅಲಂಗ್ವಿಯಮ್ ಲಮಾರ್ಕೈ ದಿ. ಮರ
- ಅಲಂಗ್ವಿಯಮ್ ಸಾಲ್ವಿಫೋಲಿಯಮ್ (L. f.) ವಾಂಗ್. ಮರ
- ಅಲ್ಬಿಜಿಯ ಅಮರ (ರಾಕ್ಸ್ಬ್.) ಬೋಯವ್. ಮರ
- ಅಲ್ಬಿಜಿಯ ಲೆಬ್ಬೆಕ್ (L.) ವಿಲ್ಡ್. ಮರ
- ಅಲ್ಬಿಜಿಯ ಒಡೋರಾಟಿಸ್ಸಿಮ (L.F.) ಬೆಂತ್. ಮರ
- ಅಲ್ಬಿಜಿಯ ಪಾಲಿಕ್ಯಾಂತ ಮರ
- ಅನ್ನೋನ ರೆಟಿಕ್ಯುಲಾಟ L. ಕುರುಚಲು ಗಿಡ
- ಅನ್ನೋನ ಸ್ಕ್ವಮೋಸ L. ಕುರುಚಲು ಗಿಡ
- ಆನೋಜೈಸಸ್ ಲ್ಯಾಟಿಫೋಲಿಯ (ರಾಕ್ಸ್ಬ್.) ವಾಲ್. ಮರ
- ಅರಿಸ್ಟೊಲೋಚಿಯ ಇಂಡಿಕಾ ಜಸ್ಸ್. ಕುರುಚಲು ಗಿಡ
- ಆಜಡಿರಾಚ್ಟ್ ಜಸ್ಸ್. ಮರ
- ಬಂಬುಸ ಅರುಂಡಿನೇಶಿಯ ರೆಟ್ಜ್.
- ಬಾರ್ಲೇರಿಯ ಇನ್ವೋಲುರಾಟ ನೀಸ್. ಕುರುಚಲು ಗಿಡ
- ಬಾಹಿನಿಯ ಪರ್ಪುರಿಯ L. ಮರ
- ಬಾಂಬಾಕ್ಸ್ ಸೈಬ ಆಕ್ಟ್. ಮರ
- ಬಾಸ್ವೆಲ್ಲಿಯ ಸೆರಾಟ ಕೋಲೆಬ್. ಮರ
- ಬ್ರಿಡೆಲಿಯ ರೆಟುಸ ಸ್ಪ್ರೆಂಗ್ ಮರ
- ಬುಚನಾನಿಯ ಲಾಂಜನ್ ಸ್ಪ್ರೆಂಗೆಲ್ ಮರ
- ಬುಟಿಯಾ ಫ್ರಾಂಡೋಸ ರಾಕ್ಸ್ಬ್. ಮರ
- ಕಡಬ ಇಂಡಿಕಾ ಲ್ಯಾಮ್. ಮರ
- ಕೇಸಾಲ್ಪಿನಿಯಾ ಬಾಂಡುಸೆಲ್ಲಾ ಫ್ಲೆಮ್. ಕುರುಚಲು ಗಿಡ
- ಕ್ಯಾಲೊಟ್ರೋಪಿಸ್ ಗಿಗಾಂಟಿಯ (L.) ಡ್ರೈಯಂಡ್. ಕುರುಚಲು ಗಿಡ
- ಕ್ಯಾಂತಿಯಮ್ ಆಂಗಸ್ಟಿಫೋಲಿಯಮ್ ರಾಕ್ಸ್ಬ್. ಮರ
- ಕ್ಯಾಂತಿಯಮ್ ಡಿಕೋಕಮ್ (ಗೆಯರ್ಟ್.) T&B. ಮರ
- ಕ್ಯಾಂತಿಯಮ್ ಡಿಡಿಮಮ್ ಆಕ್ಟ್. ಮರ
- ಕ್ಯಾಂತಿಯಮ್ ಪಾರ್ವಿಪ್ಲೋರಮ್ ಲ್ಯಾಮ್. ಮರ
- ಕಪ್ಪಾರಿಸ್ ಸೆಪಿಯಾರಿಯ L. ಲಿಯಾನ
- ಕ್ಯಾರೆಯ ಅರ್ಬೋರಿಯ ರಾಕ್ಸ್ಬ್. ಮರ
- ಕ್ಯಾಶಿಯಾ ಅಂಗುಸ್ಟಿಫೋಲಿಯ ಮರ
- ಕ್ಯಾಶಿಯಾ ಆರಿಕ್ಯುಲಾಟ L. ಕುರುಚಲು ಗಿಡ
- ಕ್ಯಾಶಿಯಾ ಫಿಸ್ಟುಲಾ L. ಮರ
- ಕ್ಯಾಶಿಯಾ ಮೊಂಟಾನ ರಾತ್. ಮರ
- ಕ್ಯಾಶಿಯಾ ಆಕ್ಸಿಡೆಂಟಾಲಿಸ್ L. ಕುರುಚಲು ಗಿಡ
- ಕ್ಯಾಶಿಯಾ ಸಿಯಾಮಿಯ ಲ್ಯಾಮ್. ಮರ
- ಕ್ಯಾಶಿಯಾ ಸುರಾಟ್ಟೆನ್ಸಿಸ್ ಬರ್ಮ್. ಕುರುಚಲು ಗಿಡ
- ಕ್ಯಾಶಿಯಾ ಟೋರ್ಟ L. ಕುರುಚಲು ಗಿಡ
- ಕ್ಯಾಸಿನೆ ಪ್ಯಾನಿಕ್ಯುಲಾಟ (W&A) ರೊಮಾಮ್ ಮರ
- ಸೆಲಾಸ್ಟ್ರಸ್ ಪ್ಯಾನಿಕ್ಯುಲಾಟ (ವಿಲ್ಡ್.) ಕುರುಚಲು ಗಿಡ
- ಕ್ಲೋರೋಕ್ಸಿಲನ್ ಸ್ವೈಟೇನಿಯಾ ಡಿಸಿ, ಪ್ರಾಡ್ರ್. ಮರ
- ಕ್ರೋಮೋಲೇನಿಯ ಒಡೋರಟಿಸ್ಸಿಮ ಕುರುಚಲು ಗಿಡ
- ಕೊಕ್ಯೂಲಸ್ ವಿಲ್ಲೋಸಸ್ ಡಿಸಿ. ಕುರುಚಲು ಗಿಡ
- ಸೈಕಾಸ್ ರಿಲಿಜಿಯೋಸ ಮರ
- ಡೇಮಿಯಾ ಎಕ್ಸ್‌ಟೆನ್ಸಾ (ಜಾಕ್ಯು) ಆರ್, Br. ಕುರುಚಲು ಗಿಡ
- ಡಾಲ್ಬರ್ಜಿಯಾ ಲ್ಯಾಟಿಫೋಲಿಯ ರಾಕ್ಸ್ಬ್. ಮರ
- ಡಾಲ್ಬರ್ಜಿಯಾ ಸಿಸ್ಸೂ ರಾಕ್ಸ್ಬ್ ಮರ
- ಡೆಂಡ್ರೊಕ್ಯಾಲಮಸ್ ಸ್ಟ್ರಿಕ್ಟಸ್ (ರಾಕ್ಸ್ಬ್.) ನೀಸ್.
- ಡಿಯೊಸ್ಪಿರಸ್ ಮೊಂಟಾನ ರಾಕ್ಸ್ಬ್. ಮರ
- ಡೊಡೊನಿಯಾ ವಿಸ್ಕೋಸೆ ಜಾಕ್ಯು ಕುರುಚಲು ಗಿಡ
- ಎರಿತ್ರೋಕ್ಸಿಲನ್ ಮೋನೊಜಿನಮ್ ರಾಕ್ಸ್ಬ್. ಕುರುಚಲು ಗಿಡ
- ಯುಕ್ಯಾಲಿಪ್ಟಸ್ ಗ್ಲಾಬ್ಯುಲಸ್ L. ಮರ
- ಯುಜೀನ್ ಜ್ಯಾಂಬೊಲಾನ ಲ್ಯಾಮ್ ಮರ
- ಯುಫೋರ್ಬಿಯಾ ಆಂಟಿಕ್ಯುರಮ್ L. ಕುರುಚಲು ಗಿಡ
- ಯುಫೋರ್ಬಿಯಾ ತಿರುಕಲ್ಲಿ L. ಕುರುಚಲು ಗಿಡ
- ಫೆರೋನಿಯಾ ಎಲಿಫಾಂಟಮ್ ಕೊರ್ರ್. ಮರ
- ಫಿಕಸ್ ಬೆಂಘಾಲೆನ್ಸಿಸ್ L. ಮರ
- ಫಿಕಸ್ ರಿಲಿಜಿಯೋಸ L. ಮರ
- ಫಿಕಸ್ ಕಿಂಕ್ಟೋರಿಯ ಪಾರ್ಸ್ಟ್. ಮರ
- ಗ್ಲೊಕೋಸ್ಮಿಸ್ ಪೆಂಟಾಫಿಲ್ಲಾ (ರಾಕ್ಸ್ಬ್.) DC. ಕುರುಚಲು ಗಿಡ
- ಗ್ಮೆಲಿನ ಅರ್ಬೋರಿಯ ರಾಕ್ಸ್ಬ್. ಮರ
- ಗ್ರೆವಿಯಾ ಹಿರ್ಸುಟ ವಾಹ್ಲ್. ಕುರುಚಲು ಗಿಡ
- ಗ್ರೆವಿಯಾ ಓರಿಯೆಂಟಾಲಿಸ್ L. ಕುರುಚಲು ಗಿಡ
- ಜಿಮ್ನೇಮ ಸಿಲ್ವೆಸ್ಟ್ರೆ (ರೆಟ್ಜ್.) ಸ್ಕಲ್ಟೆಸ್. ಕುರುಚಲು ಗಿಡ
- ಹೆಲಿಕ್ಟೆರೆಸ್ ಇಸೋರ L. ಕುರುಚಲು ಗಿಡ
- ಹಿಪ್ಟಿಸ್ ಸ್ವಾವಿಯೋಲೆನ್ಸ್ (L.) ಪೋಯ್ಟ್. ಕುರುಚಲು ಗಿಡ
- ಹೊಲಾರ್ಹಿನಾ ಆಂಟಿಡಿಸೆಂಟೆರಿಕ (ರಾತ್.) DC. ಮರ
- ಹೋಲೋಪ್ಟೆಲಿಯಾ ಇಂಟೆಗ್ರಿಫೋಲಿಯ (ರಾಕ್ಸ್ಬ್.) ಪ್ಲ್ಯಾಂಚ್. ಮರ
- ಇಪೋಮೋಯ ಕಾರ್ನಿಯ ಜೇಸ್. ಕುರುಚಲು ಗಿಡ
- ಇಪೋಮೋಯ ರೆಪೆನ್ಸ್ ಆಕ್ಟ್. ಕುರುಚಲು ಗಿಡ
- ಇಕ್ಸೋರ ಪಾಲಿಯಾಂತ Wt. ಕುರುಚಲು ಗಿಡ
- ಜಾಸ್ಮಿನಮ್ ಪ್ಯುಬೆನ್ಸೆನ್ಸ್ ವಿಲ್ಡ್. ಕುರುಚಲು ಗಿಡ
- ಜಸ್ಟಿಶಿಯ ಮೊಂಟಾನ (ನೀಸ್.) & ess. ಮರ
- ಕಿರ್ಗೇನೆಲಿಯ ರೆಟಿಕ್ಯುಲಾಟ (ಪಿಯೋರ್.) ಬೈಲ್. ಮರ
- ಲಂಟಾನ ಕ್ಯಾಮರಾ L. ಕುರುಚಲು ಗಿಡ
- ಲೆಪ್ಟಡೇನಿಯಾ ರೆಟಿಕ್ಯುಲಾಟ (ರೆಟ್ಜ್.) W&A ಕುರುಚಲು ಗಿಡ
- ಲಿಮೋನಿಯಾ ಆಸಿಡಿಸ್ಸಿಮ ಆಕ್ಟ್. ಮರ
- ಮುರ್ರಾಯ ಕೊಯನಿಗಿ ಮರ
- ಮುರ್ರಾಯ ಪ್ಯಾನಿಕ್ಯುಲಾಟ (L.) ಜ್ಯಾಕ್. ಮರ
- ಆಸಿಮಮ್ ಸ್ಯಾಂಕ್ಟಮ್ L. ಕುರುಚಲು ಗಿಡ
- ಓಲಿಯಾ ಡಿಯೋಕ ರಾಕ್ಸ್ಬ್. ಮರ
- ಒಪಂಟಿಯಾ ಡಿಲ್ಲೆನಿ (K.G.) ಹ್ಯಾವ್. ಕುರುಚಲು ಗಿಡ
- ಪ್ಯಾರಾಮಿಂಗ್ನಿಯ ಮೋನೋಫಿಲ್ಲಾ Wt. ಮರ
- ಪ್ಯಾಸಿಫ್ಲೋರ ಫೋಯ್ಟಿಡ L. ಕುರುಚಲು ಗಿಡ
- ಫಿಲ್ಲಾಂತಸ್ ಎಂಬ್ಲಿಕ ಮರ
- ಪ್ಲಂಬಾಗೊ ಜೆಲ್ಯಾನಿಕ ವಿಲ್ಡ್. ಕುರುಚಲು ಗಿಡ
- ಪ್ಲುಮೇರಿಯ ಆಲ್ಬ ವೆಂಟ್. ಮರ
- ಪಾಲಿಗ್ನೋನಮ್ ಗ್ಲ್ಯಾಬ್ರಮ್ ವಿಲ್ಡ್. ಮರ
- ಪಾಂಗೋಮಿಯ ಗ್ಲ್ಯಾಬ್ರ ವೆಂಟ್. ಮರ
- ಪ್ರಮ್ನಾ ಟೊಮೆಂಟೋಸ ವಿಲ್ಡ್. ಮರ
- ಪ್ಟೆರೋಕಾರ್ಪಸ್ ಮಾರ್ಸುಯಪಿಯಮ್ ರಾಕ್ಸ್ಬ್. ಮರ
- ಪ್ರೊಸೋಪಿಸ್ ಸ್ಪೈಸಿಗೆರಾ L. ಕುರುಚಲು ಗಿಡ
- ಪ್ಟೆರೋಲೋಬಿಯಮ್ ಹೆಕ್ಸಾಪೆಟಲಮ್ (ರಾತ್.) S&W. ಕುರುಚಲು ಗಿಡ
- ರಾಂಡಿಯಾ ಡ್ಯುಮೆಂಟೋರಿಯಮ್ (ರೆಟ್ಜ್.) ಪೋಯರ್. ಮರ
- ಸ್ಯಾಂಟಲಮ್ ಆಲ್ಬಮ್ L. ಮರ
- ಸಿದಾ ಕಾರ್ಡಿಫೋಲಿಯ L. ಕುರುಚಲು ಗಿಡ
- ಸ್ಟ್ರೆಬ್ಲಸ್ ಆಸ್ಪರ್ ಲೌರ್. ಮರ
- ಸ್ಟ್ರಿಕ್ನೋಸ್ ಪೊಟಾಟೋರಮ್ L.F. ಮರ
- ಟ್ಯಾಮರಿಂಡಸ್ ಇಂಡಿಕ L. ಮರ
- ಟ್ಯಾರೆನ್ನಾ ಏಷ್ಯಾಟಿಕ (L.) ಸ್ಕುಮ್ಯಾನ್. ಕುರುಚಲು ಗಿಡ
- ಟೆಕೋಮ ಸ್ಟ್ಯಾನ್ಸ್ (L.) ಕುಮ್ತ್. ಕುರುಚಲು ಗಿಡ
- ಟೆಕ್ಟೋನ ಗ್ರ್ಯಾಂಡಿಸ್ L.F. ಮರ
- ಟರ್ಮಿನಾಲಿಯ ಅರಜುನ (ರಾಕ್ಸ್ಬ್. ex DC.) W&A. ಮರ
- ಟರ್ಮಿನಾಲಿಯ ಬೆಲ್ಲೇರಿಕ (ಗೇರ್ಟ್ನ್.) ರಾಕ್ಸ್ಬ್. ಮರ
- ಟರ್ಮಿನಾಲಿಯ ಚೆಬ್ಯೂಲ (ಗೇರ್ಟ್ನ್.) ರೆಟ್ಜ್. ಮರ
- ಟರ್ಮಿನಾಲಿಯ ಪ್ಯಾನಿಕ್ಯುಲಾಟ ರಾತ್. ಮರ
- ಟರ್ಮಿನಾಲಿಯ ಟೊಮೆಂಟೋಸ (DC.) W&A ಮರ
- ಟಿನೋಸ್ಪೋರ ಕಾರ್ಡಿಫೋಲಿಯ ಮರ
- ಟೊಡ್ಡಾಲಿಯ ಏಶಿಯಾಟಿಕ (L.) ಲ್ಯಾಮ್. ಕುರುಚಲು ಗಿಡ
- ಟಿಲೊಫೋರ ಪಾಸಿಫ್ಲೋರ ಕುರುಚಲು ಗಿಡ
- ವಿಟೆಕ್ಸ್ ಆಲ್ಟಿಸ್ಸಿಮ L.F. ಮರ
- ರಿಂಗ್ಟಿಯ ಟಿಂಕ್ಟೋರಿಯ R.Br. ಮರ
- ರಿಂಗ್ಟಿಯ ಟೊಮೆಂಟೋಸ R.&S. ಮರ
- ಜಿಜಿಫಸ್ ಮಾರಿಟಿಯಾನ ಲ್ಯಾಮ್ಕ್. ಮರ
- ಜಿಜಿಫಸ್ ಒಯೆನೊಪ್ಲಿಯ ಮಿಲ್ಲರ್. ಕುರುಚಲು ಗಿಡ
- ಜಿಜಿಫಸ್ ಕ್ಸೈಲೋಪೈರಸ್ ವಿಲ್ಡ್. ಮರ
- ಜಿಜಿಫಸ್ ಜಿಜೈಫಸ್ (L.) H.ಕಾರ್ಸ್ಟ್. ಮರ
ಉಲ್ಲೇಖಗಳು
ಬದಲಾಯಿಸಿ- ↑ ವಿಲ್ಕ್ಸ್, ಮಾರ್ಕ್. ಹಿಸ್ಟೋರಿಕಲ್ ಸ್ಕೆಚಸ್ ಆಫ್ ದಿ ಸೌತ್ ಆಫ್ ಇಂಡಿಯಾ ಇನ್ ಆನ್ ಅಟೆಂಪ್ಟ್ ಟು ಟ್ರೇಸ್ ದಿ ಹಿಸ್ಟರಿ ಆಫ್ ಮೈಸೂರ್: ಫ್ರಮ್ ದಿ ಒರಿಜಿನ್ ಆಫ್ ದಿ ಹಿಂದೂ ಗವರ್ನ್ಮೆಂಟ್ ಆಫ್ ದಾಟ್ ಸ್ಟೇಟ್, ಟು ದಿ ಎಕ್ಸ್‌ಟಿಂಕ್ಷನ್ ಆಫ್ ದಿ ಮೊಹಮ್ಮೆದನ್ ಡೈನಸ್ಟಿ ಇನ್ ೧೭೯೯. ಮುರ್ರೆ ಹ್ಯಾಮಿಕ್‌ರ ಟಿಪ್ಪಣಿಗಳಿಂದ ಸಂಪಾದಿಸಲಾಗಿದೆ. ಮೈಸೂರು: ಗವರ್ನ್ಮೆಂಟ್ ಬ್ರ್ಯಾಂಚ್ ಪ್ರೆಸ್, ೧೯೩೦-೧೯೩೨.
- ↑ Anon. (1908). The Imperial Gazetteer of India. Volume 22. Oxford. p. 150.
- ↑ ಹೋಮ್, ರಾಬರ್ಟ್. ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್: ದಿ ಕಂಟ್ರಿ ಆಫ್ ಟಿಪ್ಪು ಸುಲ್ತಾನ್ ಫ್ರಮ್ ಡ್ರಾಯಿಂಗ್ಸ್ ಟೇಕನ್ ಆನ್ ದಿ ಸ್ಪಾಟ್ ಬೈ ಮಿಸ್ಟರ್ ಹೋಮ್ ವಿದ್ ಹಿಸ್ಟೋರಿಕಲ್ ಡಿಸ್ಕ್ರಿಪ್ಷನ್ಸ್. ಮೊದಲ ಪ್ರಕಟಣೆ. ಲಂಡನ್: ಬೋವರ್, ೧೭೯೪.
- ↑ ಬ್ರ್ಯಾನ್‌ಫಿಲ್, BR (೧೮೮೧) ಆನ್ ದಿ ಸಾವನದುರ್ಗ ರ್ಯೂಡ್ ಸ್ಟೋನ್ ಸೆಮೆಟೆರಿ, ಸೆಂಟ್ರಲ್ ಮೈಸೂರ್. ಇಂಡಿಯನ್ ಆಂಟಿಕ್ವರಿ ೧೦:೧-೧೨
- ↑ ಕೆ. ಎಸ್. ಮುರಳಿ, ಎ. ಕವಿತಾ, ಮತ್ತು ಆರ್. ಪಿ. ಹರಿಶ್ (೨೦೦೩) ಸ್ಪೇಶಿಯಲ್ ಪ್ಯಾಟರ್ನ್ಸ್ ಆಫ್ ಟ್ರೀ ಆಂಡ್ ಶ್ರಬ್ ಸ್ಪೀಸೀಸ್ ಡೈವರ್ಸಿಟಿ ಇನ್ ಸಾವನದುರ್ಗ ಸ್ಟೇಟ್ ಫಾರೆಸ್ಟ್, ಕರ್ನಾಟಕ. ಕರೆಂಟ್ ಸೈನ್ಸ್, ೮೪(೬):೮೦೮-೮೧೩