ಸಾರು, ದಕ್ಷಿಣ ಭಾರತದ ಒಂದು ಅಡುಗೆ ಪದಾರ್ಥ. ಅದನ್ನು ಹುಣಿಸೆ ರಸ ಅಥವಾ ಟೊಮೇಟೊ, ಮೆಣಸಿನಕಾಯಿ ಮತ್ತು ಇತರ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕೆಲವರು ತೊಗರಿ ಬೇಳೆಯನ್ನು ತರಕಾರಿಗಳೊಂದಿಗೆ ಸೇರಿಸುತ್ತಾರೆ.

ಸಾರು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಪದಾತ್ತ(ಪದಾರ್ಥ ಪದದಿಂದ ನಿಷ್ಪನ್ನವಾದ ಪದ ತರಕಾರಿ ಮುಂತಾದವುಗಳನ್ನು ಬೇಯಿಸಿ ಕಿವುಚಿ ಮಾಡಿದಂತಹದು),ಸಾಂಬರು,ಗೊಜ್ಜು(ಹಲವು ತರಕಾರಿಯನ್ನು ಬೇಯಿಸಿ ಮಾಡಿರುವಂತಹದ್ದು), ತಿಳಿ(ಸಾರಿನಲ್ಲಿ ಗಟ್ಟಿಯಾದುದನ್ನು ಉಳಿದು ಮೇಲೆ ತೇಲುವ ನೀರಿನಂಥ ಪದಾರ್ಥ), ಉದುಕ (ಯಾವುದಾದರೂ ಬೇಳೆಯನ್ನು ಬೇಯಿಸಿದ ನೀರಿನಲ್ಲಿ ಮುಳುಗಾಯಿ, ಮೆಣಸಿನ ಕಾಯಿ,ಬೆಳ್ಳುಳ್ಳಿ ಮುಂತಾದವುಗಳನ್ನು ಕಿವುಚಿ ಮಾಡಿದ ಪದಾರ್ಥ)ತಂಬುಳಿ . ಸಾರನ್ನು ಆಯಾ ಪರಿಕರಗಳನ್ನು ಬಳಸಿ ಮಾಡಿದುದನ್ನು ಅನುಸರಿಸಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಉದಾ: ಮಟನ್‌ ಸಾರು, ಕೋಳಿ ಸಾರು, ಮೊಟ್ಟೆ ಸಾರು, ಸೊಪ್ಪಿನ ಸಾರು, ತರಕಾರಿ ಸಾರು, ಒಣ ಮೀನಿನ ಸಾರು, ಬೇಳೆ ಸಾರು,ಮಜ್ಜಿಗೆ ಸಾರು,ಉಳಿ ಸಾರು,ತಂಗಳು ಸಾರು(ರಾತ್ರಿ ಮಾಡಿದ ಸಾರು ಬೆಳಗ್ಗೆ ಊಟ ಮಾಡಿದರೆ),ಹೋಳಿಗೆ ಸಾರು(ಕಟ್ಟಿನ ಸಾರು),ಟಮೊಟ ಸಾರು, ಈರುಳ್ಳಿ ಸಾರು,. ಬಟಾಣಿ ಸಾರು ಇಂತಹ ಪ್ರಾದೇಶಿಕವಾಗಿ ಹಲವಾರು ಹೆಸರುಗಳನ್ನು ನೋಡಬಹುದು.



"https://kn.wikipedia.org/w/index.php?title=ಸಾರು&oldid=589648" ಇಂದ ಪಡೆಯಲ್ಪಟ್ಟಿದೆ