ಸಾರತೈಲವು ಬಾಷ್ಪಶೀಲ (ಸಾಮಾನ್ಯ ಉಷ್ಣಾಂಶದಲ್ಲಿ ಸುಲಭವಾಗಿ ಆವಿಯಾಗುವ) ಸಸ್ಯಜನ್ಯ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುವ ಸಾಂದ್ರೀಕೃತ ಜಲ ವಿಕರ್ಷಕ ದ್ರವ. ಕೊಬ್ಬುಯುಕ್ತ ಎಣ್ಣೆಗಳಿಗೆ ವ್ಯತಿರಿಕ್ತವಾಗಿ, ಸಾರತೈಲಗಳು ಸಾಮಾನ್ಯವಾಗಿ ಯಾವುದೇ ಕಲೆ ಅಥವಾ ಶೇಷವನ್ನು ಬಿಡದೇ ಪೂರ್ತಿಯಾಗಿ ಆವಿಯಾಗುತ್ತವೆ.

ಗಂಧದೆಣ್ಣೆ

ಸಾರತೈಲಗಳನ್ನು ಸಾಮಾನ್ಯವಾಗಿ ಆಸವನದ ಪ್ರಕ್ರಿಯೆಯಿಂದ ಹೊರತೆಗೆಯಲಾಗುತ್ತದೆ, ಹಲವುವೇಳೆ ಬಾಷ್ಪವನ್ನು ಬಳಸಿ. ಇತರ ಪ್ರಕ್ರಿಯೆಗಳಲ್ಲಿ ಹಿಂಡುವಿಕೆ, ವಿಲೇಯಕ ಆಹರಣ, ಸ್ಫುಮಟೂರಾ, ಶುದ್ಧ ತೈಲ ಆಹರಣ, ರಾಳ ಇಳಿಸುವಿಕೆ, ಮೇಣ ಆವರಿಸುವಿಕೆ ಮತ್ತು ಕೋಲ್ಡ್ ಪ್ರೆಸಿಂಗ್ ಸೇರಿವೆ. ಸಾರತೈಲಗಳನ್ನು ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು, ಸಾಬೂನುಗಳು ಮತ್ತು ಇತರ ಉತ್ಪನ್ನಗಳಲ್ಲಿ, ಆಹಾರ ಹಾಗೂ ಪಾನೀಯಕ್ಕೆ ಸುವಾಸನೆ ನೀಡಲು, ಮತ್ತು ಧೂಪದ್ರವ್ಯ ಹಾಗೂ ಗೃಹೋಪಯೋಗಿ ಸ್ವಚ್ಛಗೊಳಿಸುವ ಉತ್ಪನ್ನಗಳಿಗೆ ಪರಿಮಳಗಳನ್ನು ಸೇರಿಸಲು ಬಳಸಲಾಗುತ್ತದೆ.

ಹೆಚ್ಚಿನ ವಾಚನ

ಬದಲಾಯಿಸಿ
  • Baser, K.H.C.; G. Buchbauer (2010). Handbook of Essential Oils: Science, Technology and Applications. CRC Press, Boca Raton, London, New York. ISBN 978-1-4200-6315-8. {{cite book}}: Unknown parameter |last-author-amp= ignored (help)
  • Schnaubelt, Kurt (1999). Advanced Aromatherapy: The Science of Essential Oil Therapy. Healing Arts Press. ISBN 978-0-89281-743-6.
  • Sellar, Wanda (2001). The Directory of Essential Oils (Reprint ed.). Essex: The C.W. Daniel Company, Ltd. ISBN 978-0-85207-346-9.
  • Tisserand, Robert (1995). Essential Oil Safety: A Guide for Health Care Professionals. Churchill Livingstone. ISBN 978-0-443-05260-6.
"https://kn.wikipedia.org/w/index.php?title=ಸಾರತೈಲ&oldid=916900" ಇಂದ ಪಡೆಯಲ್ಪಟ್ಟಿದೆ