ಸಾಮಾನ್ಯ ಏಷ್ಯನ್ ನೆಲಗಪ್ಪೆ

ಸಾಮಾನ್ಯ ಏಷ್ಯನ್ ನೆಲಗಪ್ಪೆ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. melanostictus
Binomial name
Duttaphrynus melanostictus
Synonyms

Bufo melanostictus

ಸಾಮಾನ್ಯ ಏಷ್ಯನ್ ನೆಲಗಪ್ಪೆ (Asian Common Toad) ದಕ್ಷಿಣ ಮತ್ತು ಆಗ್ನೇಯ ಏಷಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್ ಎಂದು ಕರೆಯುತ್ತಾರೆ. ಇದಕ್ಕೆ ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ, ಏಷಿಯನ್ ನೆಲಗಪ್ಪೆ, ಕಪ್ಪು ಕನ್ನಡಕದ ನೆಲಗಪ್ಪೆ, ಸಾಮಾನ್ಯ ಸುಂಡಾ ನೆಲಗಪ್ಪೆ ಮತ್ತು ಜಾವಾದ ನೆಲಗಪ್ಪೆ ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ[].

ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ ಗೊದಮೊಟ್ಟೆಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ[]

ಸಾಮಾನ್ಯ ಏಷ್ಯನ್ ನೆಲಗಪ್ಪೆ (Duttaphrynus melanostictus)

ಆವಾಸಸ್ಥಾನ ಮತ್ತು ನಡವಳಿಕೆ

ಬದಲಾಯಿಸಿ

ಗುಣಲಕ್ಷಣಗಳು

ಬದಲಾಯಿಸಿ

ಕಪ್ಪೆಯ ಮೇಲ್ಭಾಗವು ಗುಳ್ಳೆಗಳಿಂದ ಕೂಡಿರುತ್ತದೆ. ಮೂತಿಯ ತುದಿಗೆ, ಕಣ್ಣುಗಳ ಮುಂದೆ, ಕಣ್ಣುಗಳ ಮೇಲೆ, ಕಣ್ಣುಗಳ ಹಿಂದೆ, ಕಣ್ಣು-ಕಿವಿಗಳ ಮಧ್ಯೆ ಹಲವಾರು ಉಬ್ಬುಗಳಿವೆ. ಕರ್ಣಪಟಲಗಳು ಹಾಗು ವಿಷಗ್ರಂಥಿಗಳು ನಿಖರವಾಗಿ ಕಾಣುತ್ತವೆ, ಹಾಗು ಕಣ್ಣುಗಳ ಮೂರನೆ ಎರಡರಷ್ಟು ಆಕಾರ ಕರ್ಣಪಟಲ ಹೊಂದಿರುತ್ತದೆ. ಇದರ ಬೆರಳುಗಳ ಮಧ್ಯೆ ಜಾಲ ಅರ್ಧ ಮಾತ್ರವಿರುತ್ತದೆ. ಕೆಳಭಾಗದಲ್ಲಿ ಯಾವುದೇ ಕಲೆಗಳಿರುವುದಿಲ್ಲ. ಗಂಡುಗಳಿಗೆ ಧ್ವನಿ ಚೀಲಗಳಿರುತ್ತವೆ. ಗಂಡುಗಳು ಹೆಣ್ಣುಗಳಿಗಿಂತ ಸಣ್ಣದಾಗಿರುತ್ತವೆ.[].

ನಡವಳಿಕೆ

ಬದಲಾಯಿಸಿ
 
ಸಾಮಾನ್ಯ ಏಷ್ಯನ್ ನೆಲಗಪ್ಪೆ ಸಂಭೋಗದಲ್ಲಿ

ವಯಸ್ಕ ಕಪ್ಪೆಗಳು ನೆಲವಾಸಿಯಾಗಿರುತ್ತವೆ. ಹೊಲಗದ್ದೆಗಳಲ್ಲಿ, ಮನುಷ್ಯರ ಆವಾಸಸ್ಥಾನಗಳಲ್ಲಿ, ಮಳೆಗಾಲದಲ್ಲಿ ನೀರಿನ ದಂಡೆಯಲ್ಲಿ, ವಿದ್ಯುತ್ ದೀಪದ ಕಂಬಗಳ ಕೆಳಗೆ, ಇನ್ನಿತರೆ ಸಮಯದಲ್ಲಿ ಬಂಡೆಗಳ ಕೆಳಗೆ ಕಾಣಬಹುದು. ಹುಳು-ಹುಪ್ಪಟೆಗಳು ಇದರ ಸಾಮಾನ್ಯ ಆಹಾರ. ಸಂಭೋಗ ಮಾಡುವಾಗ ಗಂಡು ಹೆಣ್ಣಿನ ಬೆನ್ನೇರಿ ಕೂರುತ್ತದೆ. ಇವು ಸಾಮಾನ್ಯವಾಗಿ ನಿಂತ ಮತ್ತು ನಿಧಾನವಾಗಿ ಹರಿಯುವ ಆಳದ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳು ಪೋಣಿಸಿದ ಸಣ್ಣ ಮುತ್ತುಗಳ ಹಾರದಂತೆ ಹುಲ್ಲು ಜೊಂಡುಗಳಿಗೆ ಸಿಲುಕಿರುತ್ತವೆ. ಗೊದಮೊಟ್ಟೆಗಳು ನೀರಿನಲ್ಲಿ ಕಂಡುಬರುತ್ತವೆ ಹಾಗು ಪಾಚಿಯನ್ನು ತಿನ್ನುತ್ತವೆ[].

ಉಲ್ಲೇಖಗಳು

ಬದಲಾಯಿಸಿ
  1. van Dijk; P. P.; et al. (2004). "Duttaphrynus melanostictus". IUCN Red List of Threatened Species, Version 2012.2. IUCN.
  2. ವಾನ್-ಡಿಯ್ಕ್, ಪಿ ಪಿ; ಇಸ್ಕಂದರ್, ಡಿ; ಲೌ, ಎಮ್ ಡಬ್ಲೂ ಎನ್. "Duttaphrynus melanostictus". IUCN Red List. The IUCN Red List of Threatened Species. Retrieved 6 January 2018.
  3. "AmphibiaWeb 2016 Duttaphrynus melanostictus: Southeast Asian Toad". AmphibiaWeb. University of California, Berkeley, CA, USA. Retrieved 6 January 2018.
  4. ಬೌಲೆಂಜರ್, ಜಿ. ಎ. (1890). Reptilia and Batrachia. Fauna of British India. ಲಂಡನ್: Taylor and Francis. pp. 505–507. doi:10.5962/bhl.title.5490.
  5. "AmphibiaWeb 2016 Duttaphrynus melanostictus: Southeast Asian Toad". AmphibiaWeb. University of California, Berkeley, CA, USA. Retrieved 6 January 2018.