ಗೊದಮೊಟ್ಟೆ ಎಂದರೆ ಉಭಯಚರಗಳಾದ ಕಪ್ಪೆಗಳ ಲಾರ್ವಾ ಹಂತದ ಬಾಲವುಳ್ಳ ಜಲಚರ ಮರಿಗಳಾಗಿದ್ದು ತಮ್ಮ ಕಿವಿರುಗಳ ಮೂಲಕ ಉಸಿರಾಡುತ್ತವೆ [೧].

ಗೊದಮೊಟ್ಟೆಗಳು


ವಿವರಣೆ ಬದಲಾಯಿಸಿ

ಎಲ್ಲಾ ಉಭಯಚರಗಳ ಜೀವನ ಚಕ್ರವು ಭ್ರೂಣ ಮತ್ತು ವಯಸ್ಕರ ನಡುವೆ ಮಧ್ಯಂತರವಾಗಿರುವ ಲಾರ್ವಾ ಹಂತವನ್ನು ಒಳಗೊಂಡಿರುತ್ತದೆ. ಬಹುತೇಕ ಕಪ್ಪೆಗಳ ಗೊದಮೊಟ್ಟೆಗಳು ಸಸ್ಯಹಾರಿಗಳಾಗಿರುತ್ತವೆ. ಅವು ಮೃದುವಾದ ಪಾಚಿ, ಕೊಳೆಯುತ್ತಿರುವ ಸಸ್ಯವನ್ನು ತಿನ್ನುತ್ತವೆ[೨]. ಕಪ್ಪೆಗಳ ಗೊದಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರದಲ್ಲಿರುತ್ತವೆ, ಪಾರ್ಶ್ವವಾಗಿ ಸಂಕುಚಿತ ಬಾಲ ಮತ್ತು ಆಂತರಿಕ ಕಿವಿರುಗಳು ಇರುತ್ತವೆ. ಮೊದಲು ಮೊಟ್ಟೆಯೊಡೆದಾಗ, ಕಪ್ಪೆಗಳ ಗೊದಮೊಟ್ಟೆಗಳು ಬಾಹ್ಯ ಕಿವಿರುಗಳನ್ನು ಹೊಂದಿರುತ್ತವೆ, ಅದು ಅಂತಿಮವಾಗಿ ಚರ್ಮದಿಂದ ಮುಚ್ಚಲ್ಪಡುತ್ತದೆ.

 
ಹತ್ತುದಿನಗಳ ಗೊದಮೊಟ್ಟೆ
 
ಬ್ಯೂಫ಼ೋ ಗೊದಮೊಟ್ಟೆಯ ರೂಪ ಪರಿವರ್ತನೆ

ಮಾನವ ಉಪಯೋಗ ಬದಲಾಯಿಸಿ

ಕೆಲವು ಗೊದಮೊಟ್ಟೆಗಳನ್ನು ಆಹಾರಕ್ಕಾಗಿ ಭಾರತ ಮತ್ತು ಚೀನಾ ದೇಶಗಳಲ್ಲೂ , ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಪೆರು ದೇಶದಲ್ಲೂ ಗೊದಮೊಟ್ಟೆಗಳ ಬಳಕೆ ಇದೆ.

ಉಲ್ಲೇಖಗಳು ಬದಲಾಯಿಸಿ

  1. "tadpole". Merriam-Webster Dictionary. Merriam-Webster Dictionary. Retrieved 18 September 2020.
  2. ಡೆನ್ವರ್, ರಾಬರ್ಟ್ ಜೆ (2010). ಎನ್ಸೈಕ್ಲೋಪೀಡಿಯಾ ಆಫ್ ಅನಿಮಲ್ ಬಿಹೇವಿಯರ್ (೨ನೇಯ ed.). ಅಕ್ಯಾಡೆಮಿಕ್ ಪ್ರೆಸ್. p. 514-518. ISBN 978-0-12-813252-4. Retrieved 18 September 2020.