ಸಾಕ್ಷಿ ಎಂದರೆ ಒಂದು ವಿಷಯದ ಬಗ್ಗೆ ಅರಿವು ಇರುವವನು. ಕಾನೂನಿನಲ್ಲಿ, ಸಾಕ್ಷಿ ಎಂದರೆ ತನಗೆ ತಿಳಿದಿರುವ ಬಗ್ಗೆ ಅಥವಾ ಗೊತ್ತು ಎಂದು ಸಾಧಿಸಿದ ಬಗ್ಗೆ ಸ್ವಯಂಪ್ರೇರಿತವಾಗಿ ಅಥವಾ ಬಲವಂತಕ್ಕೊಳಪಟ್ಟು, ಮಾತಿನಲ್ಲಿ ಅಥವಾ ಲಿಖಿತ ರೂಪದಲ್ಲಿ ಪ್ರಮಾಣಿತ ಸಾಕ್ಷ್ಯವನ್ನು ಒದಗಿಸುವವನು.

ಪ್ರತ್ಯಕ್ಷಸಾಕ್ಷಿ ಎಂದರೆ ತನ್ನ ಸ್ವಂತದ ಇಂದ್ರಿಯಗಳಿಂದ (ಉದಾ. ದೃಷ್ಟಿ, ಶ್ರವಣಶಕ್ತಿ, ಆಘ್ರಾಣ, ಸ್ಪರ್ಶ) ಪಡೆದ ಜ್ಞಾನವುಳ್ಳವನು. ಆ ಗ್ರಹಿಕೆಯು ಸಹಾಯವಿಲ್ಲದ ಮಾನವ ಇಂದ್ರಿಯ ಅಥವಾ ಸೂಕ್ಷ್ಮ ದರ್ಶಕ ಅಥವಾ ಎದೆದರ್ಶಕದಂತಹ ಒಂದು ಉಪಕರಣದ ನೆರವಿನಿಂದ ಇರಬಹುದು.

ಗಾಳಿಸುದ್ದಿ ಸಾಕ್ಷಿ ಎಂದರೆ ಬೇರೆ ಯಾರಾದರೂ ಹೇಳಿದ್ದು ಅಥವಾ ಬರೆದ ಬಗ್ಗೆ ಸಾಕ್ಷ್ಯ ನೀಡುವವನು. ಬಹುತೇಕ ನ್ಯಾಯಾಲಯ ವಿಚಾರಣೆಗಳಲ್ಲಿ ಯಾವಾಗ ಗಾಳಿಸುದ್ದಿ ಸಾಕ್ಷಿಯು ಸ್ವೀಕಾರಾರ್ಹವಾಗಿರುತ್ತದೆ ಎಂಬುದರ ಮೇಲೆ ಅನೇಕ ಮಿತಿಗಳಿವೆ.

ತಜ್ಞ ಸಾಕ್ಷಿ ಎಂದರೆ ಆಸಕ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಜ್ಞಾನವನ್ನು ಹೊಂದಿದ್ದಾನೆ ಎಂದು ಹೇಳಲಾದವನು. ಈ ಜ್ಞಾನವು ಇತರ ಹೇಳಿಕೆ, ದಾಖಲೆಯ ಸಾಕ್ಷ್ಯ ಅಥವಾ ದೈಹಿಕ ಸಾಕ್ಷ್ಯ (ಉದಾ. ಬೆರಳಿನ ಗುರುತು) ಸೇರಿದಂತೆ, ಇತರ ಸಾಕ್ಷ್ಯವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಉದ್ದೇಶ ಹೊಂದಿರುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ