ಸವಣೂರು ರಾಜ್ಯ
ಸವಣೂರು ರಾಜ್ಯ, [೧] ಸವಣೂರಿನ ನವಾಬನು ಬ್ರಿಟಿಷ್ ಭಾರತದಲ್ಲಿನ ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿತ್ತು. ರಾಜ್ಯದ ಕೊನೆಯ ಆಡಳಿತಗಾರನು 8 ಮಾರ್ಚ್ 1948 ರಂದು ಭಾರತದ ಡೊಮಿನಿಯನ್‌ಗೆ ಸೇರಿಕೊಂಡನು, ಬಾಂಬೆ ರಾಜ್ಯದ ಭಾಗವಾಯಿತು. ನಂತರ 1956 ರಲ್ಲಿ ಈಗಿನ ಕರ್ನಾಟಕದಲ್ಲಿರುವ ಮೈಸೂರು ರಾಜ್ಯಕ್ಕೆ ವರ್ಗಾಯಿಸಲಾಯಿತು.
ಇತಿಹಾಸ
ಬದಲಾಯಿಸಿಧಾರವಾಡ ಜಿಲ್ಲೆಯ ಸವಣೂರನ್ನು ಕೇಂದ್ರವನ್ನ ಮಾಡಿಕೊಂಡು ಆಳಿದ ಒಂದು ಸಾಮಂತ ಮನೆತನ, ಬಂಕಾಪುರದ ನವಾಬರು ಸ್ವಾಮ ಮಾಸದಲ್ಲಿ ತಮ್ಮ ರಾಜಧಾನಿಯನ್ನು ಬಂಕಾಪುರದಿಂದ ಸವಣೂರಿಗೆ ಬದಲಾಯಿಸಿದ್ದರಿಂದ ಸವಣೂರು ಎಂಬುದಾಗಿರಬಹುದು. ಹಾವೇರಿ ತಾಲೂಕಿನ ಅಗಡಿ ಗ್ರಾಮದ 1082ರ ಶಾಸನದಲ್ಲಿ ಸವಣೂರ ಅಗ್ರಹಾರ ಎಂಬ ಉಲ್ಲೇಖವಿದೆ. ಬಿಜಾಪುರದ ಭಾರತ ಸರದಾರ ಮುಸ್ತಾಖಾನ್ ದಂಡೆತ್ತಿ ಬಂದು ಬಂಕಾಪುರವನ್ನು ವಶಮಾಡಿಕೊಂಡ ಅನಂತರ ಅಬ್ದುಲ್ ಕರೀಮ್‌ಖಾನ್ ಎಂಬ ಸರದಾರನನ್ನು ಬಂಕಾಪುರ ಪ್ರಾಂತಕ್ಕೆ ಆಡಳಿತಾಧಿಕಾರಿ ಯಾಗಿ ಮಾಡಿದ. ಇವನ ಮಗ ಅಬ್ದುಲ್ ರವೂಫಾನ್ ಬಿಜಾಪುರ ರಾಜ್ಯದ ಅವನತಿಯ ಅನಂತರ ಔರಂಗಜೇಬನ ಸರದಾರನಾದ, ರವೂಫಖಾನ್‌ನ ಪೌರಕ್ಕೆ ಮೆಚ್ಚಿದ ಔರಂಗಜೇಬ ತನ್ನ ಪುತ್ರಿಯನ್ನು ಕೊಟ್ಟು ದಿಲೇರಜಂಗ್ ಬಹದೂರ್ ಎಂಬ ಬಿರುದು ನೀಡಿ 20 ಮಹಲುಗಳ ಜಹಗೀರು ಕೊಟ, ಈ ನವಾಬರು ಮೂಲತಃ ಆಫ್ಘಾನಿಸ್ತಾನದಿಂದ ಬಂದವರು ಇವನ ತಾತ ಬಹಲೋಲಖಾನ್ 2ನೆಯ ಮಹಮದ ಆದಿಲ್‌ಷಾನ ಕಾಲದಲ್ಲಿ ಬಿಜಾರು ಬಂದ. ಸವಣೂರನ್ನು ರಾಜಧಾನಿಯನ್ನಾಗಿ ಮಾಡಿದ ಕೀರ್ತಿ ರವೂಫಖಾನನಿಗೆ ಸಲ್ಲುತ್ತದೆ ಇವನ ಅವಧಿಯಲ್ಲಿ ದಲೇಲಪುರ, ಗುರುವಾರ ಪೇಟೆ, ಮಂಗಳವಾರ ಪೇಟೆ, ರಹವಂತ (ಶುಕ್ರವಾರ ಪೇಟೆ), ಕಸಭೆಯ ಭಾಜಿಕಬ್ಬಾ, ಶಹಬಜಾರ, ಕೋರಿಪೇಟೆ, ಬುಧವಾರ ಪೇಟೆ ಎಂದು ಎಂಟು ಪೇಟೆಗಳ ನಿರ್ಮಾಣವಾಯಿತು. ಸವಣೂರು ಸಂಸ್ಥಾನದಲ್ಲಿ ಊರಿನ ಸುತ್ತಲೂ ಕೋಟೆಯಿದ್ದು ಅದರ ಸುತ್ತಲೂ ಕಂದಕ ಇದೆ. ಎಂಟು ಕೋಟೆಯ ಬಾಗಿಲುಗಳು ಇಂದಿಗೂ ಉಳಿದುಕೊಂಡಿದ್ದು ಕ್ರಮವಾಗಿ ಹೆಬ್ಬಾಗಿಲು (ಅಗಸೆ), ಅಗಡಿ ದರವಾಜ, ದಿಲ್ಲಿ ದರವಾಜ, ಲಕ್ಷೇಶ್ವರ ದರವಾಜ, ಫತೆ ದರವಾಜ, ತಲಾಬ ದರವಾಜ, ಹಿರಾಮನ ದಂಡಿ, ಬಂಕಾಪುರ ಬಾಗಿಲು ಎಂದು ಕರೆಯಲ್ಪಡುತ್ತವೆ. [೨]
ಹಿಂದೆ ಅಗ್ರಹಾರವಾಗಿದ್ದ ಸವಣೂರಿನಲ್ಲಿ ಜೈನ, ಶೈವ, ವೈಷ್ಣವ, ಇಸ್ಲಾಂಧರ್ಮಗಳು ಅಸ್ತಿತ್ವದಲ್ಲಿದ್ದುದರಿಂದ ವೆಂಕಟೇಶ್ವರ, ಹನುಮಂತ, ವೀರಭದ್ರ, ಉಡಚವ್ವ, ದುರ್ಗಾದೇವಿ ದೇವಾಲಯಗಳು ಕಂಡುಬರುತ್ತವೆ. ಆಸಾರ ಮಸೀದಿ, ಜಾಮೀ ಮಸೀದಿ, ಗಡೀ ಮಸೀದಿ, ಕಮಾನ ಬಂಗ್ಲಿ ಮಸೀದಿ, ಲಾಲಷಾ ಕಟ್ಟಾ ಮಸೀದಿ ಹಾಗೂ ದರ್ಗಾಗಳೂ ಕಂಡುಬರುತ್ತವೆ. 1730-1754ರ ವರೆಗಿನ ಅವಧಿಯಲ್ಲಿ ಸತ್ಯಬೋಧರು ಸವಣೂರಿಗೆ ಆಗಮಿಸಿದ್ದರು. ಆಗ ಅಬ್ದುಲ್ ಮಜೀದ ಖಾನ್ ಆಡಳಿತ ನಡೆಸುತ್ತಿದ್ದು ದಿವಾನನಾಗಿ ಕಾರ್ಯ ಮಾಡುತ್ತಿದ್ದ ಖಂಡೇರಾಯನು ಸತ್ಯಬೋಧರ ನಿವಾಸಕ್ಕಾಗಿ ಕಟ್ಟಿಸಿದ ಆ ಮಠವೇ ಇಂದು ಸತ್ಯಬೋಧ
ಸ್ವಾಮಿಗಳ ಮಠ ಎಂಬ ಅಭಿಪ್ರಾಯವಿದೆ. 1885-92ರ ವರೆಗೆ ಆಡಳಿತ ನಿರ್ವಹಿಸಿದ ಅಬ್ದುಲ್ ತಬೆಜ್ ಖಾನನ ಅವಧಿಯಲ್ಲಿ ಈ ಸತ್ಯ ಬೋಧ ಮಠದ ನೆಲ ಮಾಳಿಗೆಯಲ್ಲಿ ಬಂಗಾರ-ಬೆಳ್ಳಿಯ ನಾಣ್ಯ ತಯಾರಿಸುವ ಟಂಕಸಾಲೆಯಿತ್ತು. ಸವಣೂರಿನ ಚಕ್ರೀ ಮುಖದ ಈದ್ ಮಿಲಾದಿ ಅಸ್ಸಾರ ದರ್ಗಾದಲ್ಲಿ ಉರುಸು ಆಚರಿಸಲಾಗುತ್ತದೆ. ನಾಣ್ಯಗಳಿದ್ದುವೆಂದು ಹೇಳಲಾಗಿದೆ.
15 ಜನ ನವಾಬರು, 25 ಜನ ದಿವಾನರು ಸವಣೂರು ಸಂಸ್ಥಾನದ ಆಡಳಿತ ನಿರ್ವಹಿಸಿದರು. ಕರ್ನಾಟಕದಲ್ಲಿ ಮರಾಠ ಪೇಶ್ವಗಳ ಆದಿಪತ್ಯ ಪ್ರಾರಂಭವಾದಾಗ ಈ ಭಾಗವು ಮೊಗಲರಿಂದ ಪೇಷ್ವೆ ಆಡಳಿತಕ್ಕೆ ಒಳಗಾಯಿತು. ಆ ಅವಧಿಯಲ್ಲಿ ಸಂಸ್ಥಾನದ ಬದಲಿಗೆ ಸವಣೂರು ತಾಲ್ಲೂಕು ಎಂದಾಯಿತು. ಅನಂತರ ಇದು ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಸೇರಿತು. 1818ರಲ್ಲಿ ಇಂಗ್ಲಿಷರು ಪೇಶ್ವಗಳನ್ನು ಗೆದ್ದು ಕಂಪನಿ ಸರ್ಕಾರಕ್ಕೆ ಸೇರಿಸಿ ಕೊಂಡರು. ಕೊನೆಯ ನವಾಬ ಅಬ್ದುಲ್ ಮಜೀದಖಾನ್. 1948 ಮಾರ್ಚ್ 18ರಂದು ಸವಣೂರು ಸಂಸ್ಥಾನ ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾಯಿತು.
ಸಹ ನೋಡಿ
ಬದಲಾಯಿಸಿ- ಸುನ್ನಿ ಮುಸ್ಲಿಂ ರಾಜವಂಶಗಳ ಪಟ್ಟಿ
- ಪಶ್ತೂನ್ ಡಯಾಸ್ಪೊರಾ
- ಭಾರತದ ರಾಜಕೀಯ ಏಕೀಕರಣ
ಉಲ್ಲೇಖಗಳು
ಬದಲಾಯಿಸಿ- ↑ Imperial Gazetteer of India, v. 22, p. 155.
- ↑ Bombay Gazetteer, Karnataka Dharwad district Chapter III. ed. and publ. by James M. Campbell, 1863, pp. 58–59
ಕನ್ನಡ ವಿಷಯ ವಿಶ್ವಕೋಶ - ಇತಿಹಾಸ ಮತ್ತು ಪುರಾತತ್ವ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ (೨೦೦೯)