ಸರ್ ವಿಲಿಯಂ ಆಸ್ಲರ್

ಸರ್ ವಿಲಿಯಂ ಆಸ್ಲರ್ (ಜುಲೈ 12, 1849 –ಡಿಸೆಂಬರ್ 29, 1919) ಕೆನಡದ ವೈದ್ಯ, ಮಾನವಿಕ ಪ್ರವೀಣ.

ಸರ್ ವಿಲಿಯಂ ಆಸ್ಲರ್, Bt
William Osler c. 1912
ಜನನ(೧೮೪೯-೦೭-೧೨)೧೨ ಜುಲೈ ೧೮೪೯
Bond Head, Canada West
ಮರಣDecember 29, 1919(1919-12-29) (aged 70)
Oxford, England, UK
ವಾಸಸ್ಥಳCanada
United Kingdom
ರಾಷ್ಟ್ರೀಯತೆCanadian
ಕಾರ್ಯಕ್ಷೇತ್ರphysician, pathologist, internist, educator, bibliophile, author and historian
ಸಂಸ್ಥೆಗಳುMcGill University, Johns Hopkins School of Medicine, Johns Hopkins Hospital, University of Pennsylvania, University of Oxford
ಅಭ್ಯಸಿಸಿದ ವಿದ್ಯಾಪೀಠMcGill University

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಅಂಟೀರಿಯೊದ ಬಾಂಡ್ ಹೆಡ್ಡಿನಲ್ಲಿ ಹುಟ್ಟಿದವ. ಮೆಗ್ಗಿಲ್ ವಿಶ್ವವಿದ್ಯಾಲಯದ ಮಾಂಟ್ರೀಲ್‍ನಲ್ಲಿ ವೈದ್ಯ ಪದವೀಧರನಾಗಿ (1872), ಅಲ್ಲಿನ ವೈದ್ಯಶಾಲೆಗಳ ಪ್ರಾಧ್ಯಾಪಕನಾಗಿದ್ದು (1874), ಆಮೇಲೆ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ (1884) ರೋಗಿಹಾಸಿಗೆಬದಿಯ (ಕ್ಲಿನಿಕಲ್) ಪ್ರಾಧ್ಯಾಪಕನಾಗಿ 40ನೆಯ ವಯಸ್ಸಿನಲ್ಲಿ (1889) ಬಾಲ್ಟಿಮೋರಿನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಮುಖ್ಯ ವೈದ್ಯಪೀಠವನ್ನು ಅಲಂಕರಿಸಿಯೂ ಕೆಲಸ ಮಾಡಿದ.

ಮಹಾ ವೈದ್ಯ

ಬದಲಾಯಿಸಿ

ಆಗ ಅಲ್ಲಿದ್ದ ನಾಲ್ವರು ಸಂತರು ಎನಿಸಿಕೊಂಡಿದ್ದ ವೈದ್ಯ ಪ್ರವೀಣರಲ್ಲಿ ಬಲು ಚುರುಕಾಗಿದ್ದವ ಆಸ್ಲರ್. ಹೊಸ ವೈದ್ಯಶಾಲೆಯನ್ನು ಅಲ್ಲಿ ಸ್ಥಾಪಿಸುವ ಅವಕಾಶವನ್ನು ಬಳಸಿಕೊಂಡು, ರೋಗಿ ಹಾಸಿಗೆಬದಿಯ ಶಿಕ್ಷಣದೊಂದಿಗೆ, ರೋಗಿಕೋಣೆಯ ಕಲಿಕೆಗೂ ಪ್ರಯೋಗಾಲಯದ ಕಣ್ಣರಿಕೆಗೂ ಹೊಂದಾಣಿಕೆ ತಂದು, ಉತ್ತರ ಅಮೆರಿಕದಲ್ಲೇ ವೈದ್ಯಶಿಕ್ಷಣದಲ್ಲಿ ಕ್ರಾಂತಿ ಎಬ್ಬಿಸಿದ[] . ಈತ ವೈದ್ಯವಿದ್ಯೆಯನ್ನು ರೋಗಿಗಳ ಕೋಣೆಗಳಲ್ಲಿ ಕಲಿಸಿದ ಎಂಬ ಚರಮಶ್ಲೋಕವನ್ನು ಆಸ್ಲರ್ ಬಯಸಿದ. ವೈದ್ಯಗಾರಿಕೆ ರೋಗಿಯಲ್ಲಿ ಮೊದಲಾಗಿ, ರೋಗಿಯಲ್ಲಿ ಮುಂದುವರಿದು, ರೋಗಿಯಲ್ಲಿ ಕೊನೆಗೊಳ್ಳಬೇಕು ಎಂಬುದಾಗಿ ಈತ ಪ್ರತಿಪಾದಿಸಿದ. 56ನೆಯ ವಯಸ್ಸಿನಲ್ಲಿ ಇಂಗ್ಲೆಂಡಿನ ಆಕ್ಸ್‍ಫರ್ಡಿನಲ್ಲಿ ವೈದ್ಯಮಹಾಪ್ರಾಧ್ಯಾಪಕನಾದ (1905).ಈತ ಆಸಕ್ತನಾಗಿದ್ದ ವಿಷಯಗಳಲ್ಲಿ ಕ್ಷಯವೂ ಒಂದು. ವೈದ್ಯಚಿಕಿತ್ಸೆಯಲ್ಲಿ ಮದ್ಯಸಾರದ ಬಳಕೆ ಸಲ್ಲದೆಂದೂ ದಿನವೂ ಇದನ್ನು ಕುಡಿಯುತ್ತಿದ್ದರೆ ಕ್ಷಯಕ್ಕೆ ಈಡಾಗಬಹುದೆಂದೂ ತೋರಿಸಿಕೊಟ್ಟವರಲ್ಲಿ ಆಸ್ಲರ್ ಮೊದಲಿಗ.ಇವನನ್ನು ಆಧುನಿಕ ವೈದ್ಯಕೀಯದ ಪಿತಾಮಹ ಎಂದು ಕರೆಯಲಾಗುತ್ತಿದೆ.[]

ಸಾಹಿತಿ

ಬದಲಾಯಿಸಿ

ರೋಗಶಾಸ್ತ್ರ, ರೋಗಿಹಾಸಿಗೆಬದಿಯ ಅಲ್ಲದೆ ವೈಜ್ಞಾನಿಕ ವೈದ್ಯ, ಸಾಂಕ್ರಾಮಿಕ ಶಾಸ್ತ್ರಗಳಲ್ಲಿ ಈ ಮಹಾಕುಶಲಿಯ ಹೆಸರು ಈಗಲೂ ಉಳಿದಿದೆ. ಎಷ್ಟೋ ವರ್ಷಗಳು ಪಠ್ಯಪುಸ್ತಕವಾಗಿದ್ದು ಹೆಸರಾಗಿದ್ದ ಅವನ ವೈದ್ಯ ಸೂತ್ರಗಳು ಮತ್ತು ಆಚರಣೆ 1892 (1947ರಲ್ಲಿ 16ನೆಯ ಮುದ್ರಣ) ಹಲವಾರು ತಲೆಮಾರುಗಳ ವೈದ್ಯ ಕಲಿಕೆಯವರಲ್ಲೂ ವೈದ್ಯರಲ್ಲೂ ಇಂಗ್ಲಿಷ್‍ನಲ್ಲೇ ಬಹು ಜನಪ್ರಿಯ ಸಂಪುಟವಾಗಿತ್ತು. ವೈದ್ಯ ವಿಜ್ಞಾನಕ್ಕೆ ಇವನ ಬರೆಹಗಳ ಕೊಡುಗೆಯೂ ಇದೆ. ಆತ ಕೇವಲ ಮಹಾವೈದ್ಯ, ವಿಜ್ಞಾನಿ ಅಷ್ಟೇ ಆಗಿರಲಿಲ್ಲ; ಮಾನವಿಕ ವಿಚಾರಿ, ಸಾಹಿತಿಯೂ ಆಗಿದ್ದು, ಮಹಾ ಸಾಹಿತ್ಯಸಂಘದ ಅಧ್ಯಕ್ಷನಾಗಿ ಮೊತ್ತಮೊದಲು ಚುನಾಯಿತನಾಗಿ ಬಂದ ವೈದ್ಯನೂ ಪುಸ್ತಕಪಟ್ಟಿಕೆಯ (ಬಿಬ್ಲಿಯೊಗ್ರಾಫಿಕಲ್) ಸಂಘದ ಅಧ್ಯಕ್ಷನೂ ಆಗಿದ್ದ (1913). ಅದರಲ್ಲೂ ಪುರಾತನ ವೈದ್ಯಮಹಾಗ್ರಂಥಗಳ, ಸರ್ ಥಾಮಸ್ ಬ್ರೌನ್ನ ಬರೆಹಗಳ, ಉತ್ಸಾಹೀ ಸಂಗ್ರಹಕಾರನಾಗಿದ್ದ. 7,500ಕ್ಕೂ ಹೆಚ್ಚು ಗ್ರಂಥಗಳಿದ್ದ ತನ್ನ ಸೊಗಸಾದ ಗ್ರಂಥಭಂಡಾರವನ್ನು ಮೆಗ್ಗಿಲ್ ವಿಶ್ವವಿದ್ಯಾಲಯಕ್ಕೆ ಬಳುವಳಿಯಾಗಿ ಬಿಟ್ಟ. ಆಸ್ಲರನ ಗ್ರಂಥಪಟ್ಟಿಯೊಂದಿಗೆ ಇದು ವೈದ್ಯರಲ್ಲೆಲ್ಲ ಉನ್ನತಮಟ್ಟದ ಉತ್ತಮೋತ್ತಮನೊಬ್ಬನ ಸ್ಮಾರಕವಾಗಿ ಈಗಲೂ ಉಳಿದಿದೆ.

ವೈದ್ಯದಲ್ಲಿ ಎಲ್ಲ ಸಂದರ್ಭಗಳಲ್ಲೂ ಉದಾಹರಿಸಬಹುದಾದ ಸೂಕ್ತಿಗಳು, ಮುಕ್ತಕಗಳು, ಸೂತ್ರಗಳನ್ನು ಈಗಲೂ ಆಸ್ಲರ್‍ನಷ್ಟು ಹೇಳಿ ಬರೆದವರಿಲ್ಲ. ಆಸ್ಲರನ ಕೃತಿಗಳಲ್ಲಿ ಕೆಲವನ್ನು ಹೆಸರಿಸಬಹುದು. ಮಕ್ಕಳ ನಿಮ್ಮಿದುಳಿನ ಜೋಗರಿಕೆ, (1889), ಕಂಪವಾತ (ಕೊರಿಯ), ಕಂಪವಾತ ರೂಪದ ಬೇನೆಗಳು (1894); ಹೊಟ್ಟೆಯ ಗಂತಿಗಳ ಮೇಲಿನ ಭಾಷಣಗಳು (1895); ಎದೆ ಸೆರೆಬಿಗಿತ (ಆಂಜೈನ ಪೆಕ್ಟೊರಿಸ್) ಮತ್ತು ಸಂಬಂಧಿತ ರೋಗಸ್ಥಿತಿಗಳು (1897); ಜಠರದ ಏಡಿಗಂತಿ ಮೇಲಿನ ಬಿಡಿಬರೆಹ (1900); ವಿಜ್ಞಾನ, ಚಿರಾಯುತನ (1904); ಸಮಚಿತ್ತ, ಮತ್ತಿತರ ಭಾಷಣಗಳು (1904); ಬುದ್ಧಿವಾದಗಳು, ಆದರ್ಶಗಳು (1905); ಒಬ್ಬ ಅಲಬಾಮ ಕಲಿಕೆಯವ ಮತ್ತಿತರ ಜೀವನ ಚರಿತ್ರೆಯ ಪ್ರಬಂಧಗಳು (1908); ವೈದ್ಯಶಾಸ್ತ್ರದ ಸೂತ್ರಗಳು, ಪ್ರಯೋಗ (1912) (8ನೆಯ ಆವೃತ್ತಿ) ಇಂದಿನ ವೈದ್ಯದ ವಿಕಾಸ (1913). ಇವಲ್ಲದೆ, ಒಂದು ವೈದ್ಯಶಾಸ್ತ್ರಪದ್ಧತಿಯ (1905-10) ಏಳು ಸಂಪುಟಗಳನ್ನೂ ಸರ್ ವಿಲಿಯಂ ಆಸ್ಲರ್ ಸಂಪಾದಿಸಿದ್ದ.

ಗೌರವಗಳು

ಬದಲಾಯಿಸಿ

ವೈದ್ಯಕಲೆಗೆ ಗಡಿಗೆರೆಗಳು ಇಲ್ಲವೆಂಬ ನಾಣ್ಣುಡಿಯ ದಿಟ್ಟತನವನ್ನು ತಾನೇ ಪಾಲಿಸಿ ತೋರಿಸಿ, ಅಂತರರಾಷ್ಟ್ರೀಯ ವೈದ್ಯದ ಮೂಲಪುರುಷನಾಗಿದ್ದ ಆಸ್ಲರ್. ರಾಯಲ್ ಕಾಲೇಜಿನ ಫೆಲೋ ಆಗಿ ಚುನಾಯಿತನಾಗಿ (1898), ಬ್ಯಾರೊನೆಟ್ ಪದವಿಗೇರಿದ (1911), ಆಸ್ಲರನ ಚಟುವಟಿಕೆಗಳಿಗೆ ಮಿತಿ ಮೇರೆಗಳು ಇರಲಿಲ್ಲ. ಯಾವ ಅಂಚೆ ಕಾಗದ, ಊಟದ ಕರೆಯೊಲೆಗಳನ್ನೂ ಬಿಡದೆ ನೋಡಿ, ಅವನ ಜೀವನಚರಿತ್ರೆಯನ್ನು ಮೂರು ಸಂಪುಟಗಳಲ್ಲಿ ಬರೆದ ಹಾರ್ವಿ ಕಷಿಂಗ್ ಕೂಡ ಆಸ್ಲರನ ಬಹುಮುಖಗಳೆಲ್ಲವನ್ನೂ ಬರೆಯಲಾರದಾದ.

ಉಲ್ಲೇಖಗಳು

ಬದಲಾಯಿಸಿ
  1. Johns Hopkins Medicine: The Four Founding Professors Archived 2015-03-10 ವೇಬ್ಯಾಕ್ ಮೆಷಿನ್ ನಲ್ಲಿ.. Hopkinsmedicine.org. Retrieved on May 30, 2014.
  2. Tuteur, Amy (November 19, 2008). "Listen to your patient". The Skeptical OB. Archived from the original on ಮಾರ್ಚ್ 19, 2012. Retrieved April 9, 2012.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: