ಸನಿ ಮಠ
ಸನಿ ಮಠವು ಸನಿ ಹಳ್ಳಿಯ ಪಕ್ಕ ಸ್ಥಿತವಾಗಿದೆ. ಇಲ್ಲಿ ಸ್ಟೋಡ್ ಕಣಿವೆಯು ಲಡಾಖ್‍ನ ಜ಼ನ್‍ಸ್ಕಾರ್‌ನ ಮಧ್ಯ ಬಯಲಿನೊಳಗೆ ವಿಸ್ತರಿಸುತ್ತದೆ. ಇದು ಪ್ರಾದೇಶಿಕ ಕೇಂದ್ರವಾದ ಪದುಮ್‌ನ ವಾಯವ್ಯಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿದೆ. ಇದು ಟಿಬೇಟಿಯನ್ ಬೌದ್ಧಧರ್ಮದ ಡ್ರುಕ್ಪಾ ಕಾರ್ಗ್ಯು ಶಾಲೆಗೆ ಸೇರಿದೆ, ಮತ್ತು ಸ್ತ್ರೀ ಸಂನ್ಯಾಸಿಗಳನ್ನು ಹೊಂದಿರುವ ಜ಼ನ್‍ಸ್ಕಾರ್‌ನಲ್ಲಿರುವ ಈ ಪಂಥದ ಏಕೈಕ ಮಠವಾಗಿದೆ.[೧] ಇದು ಲಡಾಖ್ ಮತ್ತು ಜ಼ನ್‍ಸ್ಕಾರ್‌ನ ಇಡೀ ಪ್ರದೇಶದ ಅತ್ಯಂತ ಹಳೆಯ ಧಾರ್ಮಿಕ ತಾಣವೆಂದು ಭಾವಿಸಲಾಗಿದೆ.[೨]
ಇತಿಹಾಸ
ಬದಲಾಯಿಸಿಒಂದು ಪ್ರಾಚೀನ ಸ್ತೂಪಕ್ಕೆ ಸ್ಥಳ ಒದಗಿಸುವಂತೆ ಗೋಂಪಾವನ್ನು ನಿರ್ಮಿಸಲಾಗಿದೆ.[೩] ಕನಿಕಾ ಸ್ತೂಪ ಎಂದು ಕರೆಯಲ್ಪಡುವ ಇದು ಅಸಾಮಾನ್ಯ ಆಕಾರವನ್ನು ಹೊಂದಿದೆ. ಇದು ಪ್ರಸಿದ್ಧ ಕುಶಾನ್ ಚಕ್ರವರ್ತಿ ಕನಿಷ್ಕನ ಕಾಲದ್ದೆಂದು ಊಹಿಸಲಾಗಿದೆ.[೪]
ವಿವರಗಳು
ಬದಲಾಯಿಸಿಅಸಾಮಾನ್ಯವಾಗಿ, ಗೋಂಪಾವನ್ನು ಬೆಟ್ಟ ಅಥವಾ ಪರ್ವತದ ಮೇಲೆ ನಿರ್ಮಿಸಲಾಗಿಲ್ಲ ಬದಲಾಗಿ ಸಮತಟ್ಟಾದ ಭೂಮಿಯ ಮೇಲೆ ನಿರ್ಮಿಸಲಾಗಿದೆ. ಇದು ಕೋಟೆಯ ರೂಪದಲ್ಲಿದೆ ಮತ್ತು ಕನಿಕಾ ಸ್ತೂಪವು ಸುತ್ತಲಿನ ಕಲ್ಲಿನ ಗೋಡೆಗಳ ಹಿತ್ತಲಿನಲ್ಲಿದೆ. ಅಲ್ಲಲ್ಲಿ ಅಂತರಗಳಲ್ಲಿ ಸ್ತೂಪಗಳಿವೆ. ಕನಿಕಾ ಸ್ತೂಪದ ಪಕ್ಕದಲ್ಲಿ ಟಿಬೆಟಿಯನ್ ಪೂರ್ವದ ಶೈಲಿಯಲ್ಲಿರುವ ದೇವತೆಗಳ ಕೆತ್ತನೆಯೊಂದಿಗೆ ಹತ್ತು ನಿಂತ ಕಲ್ಲುಗಳಿವೆ.[೫][೬]
ಸಭಾಂಗಣ ಅಥವಾ ದುಖಾಂಗ್ ೧೬ ಕಂಬಗಳನ್ನು ಹೊಂದಿದೆ ಮತ್ತು ಚಂಬಾ, ಚೆನ್ರೆನ್ ಹಾಗೂ ಪದ್ಮಸಂಭವ ಜೊತೆಗೆ ಇತರರ ಚಿತ್ರಗಳನ್ನು ಹೊಂದಿದೆ. ಬಲಿಪೀಠದ ಹಿಂದಿರುವ ಗೊಂಗ್‍ಖಾಂಗ್ ಚಿಕ್ಕ ಕೋಣೆಯಾಗಿದ್ದು ಚೊ ರಿನ್‍ಪೋಚೆಯ ಪುರಾತನ ವಿಗ್ರಹವನ್ನು ಮತ್ತು ಕಾಂಗ್ಯೂರ್‌ನ ಪವಿತ್ರ ಸಂಪುಟಗಳಿರುವ ಪುಸ್ತಕದ ಕಪಾಟನ್ನು ಹೊಂದಿದೆ.[೭]
ನರೋಪಾನಿಗೆ ಸಮರ್ಪಿತವಾಗಿರುವ ಚಿಕ್ಕ ದೇವಸ್ಥಾನವು ತಿಳಿಗಚ್ಚಿನಲ್ಲಿರುವ ಅನನ್ಯ ಉಬ್ಬಿದ ಚಿತ್ರಗಳಿಂದ ಅಲಂಕೃತವಾಗಿದೆ. ಇವುಗಳನ್ನು ಹೊಳೆಯುವ ಬಣ್ಣಗಳಿಂದ ಬಳಿಯಲಾಗಿದೆ. ವಿಗ್ರಹಗಳಿಗೆ ಗೂಡುಗಳಿವೆ. ಗೊಂಪಾಕ್ಕೆ ಹೊಂದಿಕೊಂಡಂತೆ "ದೊಡ್ಡ ಹಳೆಯ ಪೋಪ್ಲರ್‌ಗಳ ಭವ್ಯವಾದ ತೋಟ" ಕೂಡ ಇದೆ - ಇದು ಹೆಚ್ಚಾಗಿ ಮರಗಳಿಲ್ಲದ ಜ಼ನ್‍ಸ್ಕಾರ್‌ನಲ್ಲಿ ಅಪರೂಪದ ಸಂತೋಷದಾಯಕ ತಾಣವಾಗಿದೆ.[೮]
ಟಿಬೆಟಿಯನ್ ಬೌದ್ಧಮತೀಯರ ಎಂಟು ಪ್ರಮುಖ ಸ್ಮಶಾನಗಳಲ್ಲಿ ಒಂದು ಮಠದ ಸಂಕೀರ್ಣದ ಹೊರಗಿದೆ ಮತ್ತು ಸ್ಮಶಾನವು ಭಾರತೀಯ ಪ್ರಭಾವವನ್ನು ತೋರಿಸುವ ಪುರಾತನ ಶಿಲಾ-ಕೆತ್ತನೆಗಳಿಂದ ಕೂಡಿದೆ.[೯] ಸ್ಮಶಾನ ಮೈದಾನದಲ್ಲಿ ಎರಡು ಮೀಟರ್ ಎತ್ತರದ ಬಂಡೆಯಿದ್ದು ಅದರ ಮೇಲೆ ಮೈತ್ರ್ಯನ ವರ್ಣಚಿತ್ರವಿದ್ದು, ಅದರ ಮೇಲೆ ಭಕ್ತರು ಸುರಿದ ಯಜ್ಞದ ಬಳಕೆಯ ಎಣ್ಣೆಯಿಂದ ಅದು ಹೊಳೆಯುತ್ತದೆ. ಪ್ರಾರ್ಥನಾ ಧ್ವಜಗಳನ್ನು ಹೊಂದಿರುವ ಹತ್ತಿರದ ಪಟಸ್ತಂಭ ಕೂಡ ಇದೆ.[೧೦]
ಅಡಿಟಿಪ್ಪಣಿಗಳು
ಬದಲಾಯಿಸಿ
ಉಲ್ಲೇಖಗಳು
ಬದಲಾಯಿಸಿ- Bhasin, Sanjeev Kumar. (2008). Amazing land Ladakh: places, people, and culture. Indus Publishing Company. .
- Francke, A. H. (1914, 1926). Antiquities of Indian Tibet. Two Volumes. Calcutta. 1972 reprint: S. Chand, New Delhi.
- Gutschow, Kim (2004). Being a Buddhist Nun: The Struggle for Enlightenment in the Himalayas. Harvard University Press. ISBN
978-0674012875.
- Loram, Charlie (2004). Trekking in Ladakh, 3rd: India Trekking Guide. First edition 1996. Third edition. Trailblazer Publications. ISBN 978-1-873756-75-1.
- Rizvi, Janet. 1998. Ladakh, Crossroads of High Asia. Oxford University Press. 1st edition 1963. 2nd revised edition 1996. 3rd impression 2001. ISBN 0-19-564546-4.
- Osada, Yukiyasu, Gavin Allwright and Atushi Kanamaru. (2000). Mapping the Tibetan World. Reprint 2004. Kotan Publishing. Tokyo, Japan. ISBN 0-9701716-0-9.
- Schettler, Margaret & Rolf (1981). Kashmir, Ladakh & Zanskar. Lonely Planet Publications. South Yarra, Victoria, Australia. ISBN 0-908086-21-0.