ಯಶ್ವ್ಂತ್.ಬಿ.ಎಸ್

ನನ್ನ ಕುಟುಂಬ ಬದಲಾಯಿಸಿ

ನನ್ನ ಹೆಸರು ಯಶ್ವಂತ್.ಬಿ. ಎಸ್. ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು,ನಾನು ಹುಟಿದ್ದು ಬೆಂಗಳೂರಿನಲ್ಲಿ.ನನ್ನ ತಂದೆ ಸುರೇಶ್,ಮತ್ತು ನನ್ನ ತಾಯಿ ರಾಧಾ .ಇವರೂ ಸಹ ಬೆಂಗಳೂರಿನಲ್ಲೇ ವಾಸಿಸುತ್ತಿದ್ದು,ನನ್ನ ತಂದೆ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರ ತಿಂಗಳಿಗೆ ಒಂದು ನಲವತ್ತರಿಂದ ಐವತ್ತು ಸಾವಿರ ಸಂಪಾದಿಸುತ್ತಿದ್ದಾರೆ ಹಾಗು ನನ್ನ ತಾಯಿ ಗೃಹಿಣಿ. ನಾನು ಒಬ್ಬ ಅಣ್ಣ ಮತ್ತು ತಂಗಿಯ ಜೊತೆ ಹುಟ್ಟಿದವನಾಗಿದ್ದು ಅಂತಿಮವಾಗಿ ನಮ್ಮದು ಐದು ಜನರ ಪುಟ್ಟ ಕುಟುಂಬ. ನಾನು ಹುಟ್ಟಿದ್ದು ಮೇ ತಿಂಗಳ 27 ನೇ ತಾರೀಖಿನ 2002ನೇ ಇಸವಿಯಲ್ಲಿ.

ನನ್ನ ಶಾಲೆಯ ಜೀವನ ಬದಲಾಯಿಸಿ

ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ.ಅಂದಿನಿಂದಲೂ ಸಹ ನಾನು ಬೇರೆ ಯಾವ ವಿಷಯದಲ್ಲಿ ಒಳ್ಳೆಯ ಅಂಕ ಗಳಿಸುತಿದ್ದೇನೋ ಇಲ್ಲವೋ ಆದರೆ ಕನ್ನಡದಲ್ಲಿ ಮಾತ್ರ ಅಂದಿನಿಂದಲೂ ಒಳ್ಳೆಯ ಅಂಕಗಳು ಪಡೆಯುತ್ತಿದ್ದೇನೆ.ಅಂಕ ಗಳಿಸುವುದಷ್ಟೆ ಅಲ್ಲದೆ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದೆ. ಶಾಲೆಯಲ್ಲಿ ನಾನು ಒಂದನೇ ತರಗತಿಯಲ್ಲಿದ್ದಾಗ ಕನ್ನಡದ ಗೀತೆಯನ್ನು ಹಾಡಿ ಒಂದು ಬಹುಮಾನವನ್ನು ಪಡೆದಿದ್ದೆ. ನಂತರದ ದಿನಗಳಲ್ಲಿ ಹಲವು ಕ್ರೀಡೆಗಳಲ್ಲಿ ಪಾತ್ರನಾಗಿದ್ದೆ. ನಾನು ಏಳನೇ ತರಗತಿಯಲ್ಲಿದ್ದಾಗ ಖೊಖೊ ವಿಭಾಗದಲ್ಲಿ ನಮ್ಮ ಶಾಲೆಯ ಪರ ಸ್ಪರ್ದಿಸಿ ನಾನು ಮತ್ತು ನಮ್ಮ ತಂಡ ದ್ವಿತೀಯ ಬಹುಮಾನ ಗಳಿಸಿದೆವು. ನಂತರ 10ನೇ ತರಗತಿಯಲ್ಲಿ ನಮ್ಮ ಶಾಲೆಯ ಎಲ್ಲಾ ಕಾರ್ಯಕ್ರಮದಲ್ಲೂ ಪಾತ್ರನಾಗಿದೆ. ನಮ್ಮ ಶಾಲೆಯಲ್ಲಿ ಪ್ರವಾಸವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ,ಮುರುಡೇಶ್ವರದಲ್ಲಿರುವ ಶಿವನ ದೇವಸ್ಥಾನ ಮತ್ತು ಇನ್ನಿತರೆ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದೆವು. ನನ್ನ ಪದವಿ ಪೂರ್ವ ಶಿಕ್ಷಣದಲ್ಲೂ ಸಹ ಕನ್ನಡದಲ್ಲಿ ಒಳ್ಳೆಯ ಅಂಕಗಳು ಪಡೆದಿದ್ದೇನೆ, ಅಲ್ಲೂ ಕೂಡ ನನ್ನ ಪಾಲ್ಗೊಳ್ಳುವ ಆಸಕ್ತಿ ಕಡಿಮೆಯಾಗಲಿಲ್ಲ. ಅಂತೆಯೇ ನಾನು ನನ್ನ ಸ್ನೇಹಿತರೊಡನೆ ಸೇರಿ ಇತರೆ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ನಾನು ಪ್ರಥಮ ಪಿಯುಸಿ ಇದ್ದಾಗ ಮೊದಲ ಬಾರಿಗೆ ಮೌಂಟ್ ಕಾರ್ಮೆಲ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಆದರೆ ಬಹುಮಾನ ಗೆಲ್ಲಲು ಸಾಧ್ಯವಾಗಲಿಲ್ಲ, ಅದೇನೇ ಆದರೂ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಲ್ಲವೇ?. ಆದ್ದರಿಂದ ನಾನು ಬಹುಮಾನಗಳ ಕಡೆ ಬಹಳ ಯೋಚಿಸಲಿಲ್ಲ ನಾನು ಹಿಂದೆ ಹೇಗೆ ಭಾಗವಹಿಸುತ್ತಿದ್ದೆನೋ ಅದನ್ನೇ ನನ್ನ ಮುಂದಿನ ಶಿಕ್ಷಣದಲ್ಲೂ ಪಾಲಿಸುತ್ತೇನೆ ಎಂದು ಕಚಿತಪಡಿಸುತ್ತೇನೆ.

ನನ್ನ ಜೀವನ ಬದಲಾಯಿಸಿ

ನನ್ನಗೆ ಚಿಕ್ಕಂದಿನಿಂದಲೂ ಕನ್ನಡದ ಬಗ್ಗೆ ಒಂದು ರೀತಿಯ ಅಭಿಮಾನವಿತ್ತು.ನಾನು ನನ್ನ ಶಾಲೆಯಲ್ಲಿ ಬೇರೆ ಎಲ್ಲಾ ವಿಷಯದಲ್ಲೂ ಕಡಿಮೆ ಅಂಕಗಳನ್ನು ಪಡೆದರೂ ಕನ್ನಡದಲ್ಲಿ ಮಾತ್ರ ಬಹಳ ಅಂಕಗಳನ್ನು ಪಡೆಯುತ್ತಿದ್ದೆ.ನಾನು ಪದವಿ ಪೂರ್ವ ಶಿಕ್ಷಣವನ್ನು ಎಸ್.ಜೆ.ಆರ್.ಆರ್.ಪಿ.ಯು.ಸಿ.ಕಾಲೇಜ್ ನಲ್ಲಿ ಮುಂದುವರಿಸಿದೆ. ನನಗೆ ವಿಜ್ಞಾನದ ಕಡೆ ಆಸಕ್ತಿ ಇಲ್ಲದಿದ್ದರಿಂದ ನಾನು ವಾಣಿಜ್ಯ ವಿಭಾಗದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ತೀರ್ಮಾನಿಸಿದ್ದು ನನ್ನ ಮುಂದಿನ ವಿದ್ಯಾಭ್ಯಾಸವೂ ಕೂಡ ಅದೇ ವಾಣಿಜ್ಯ ವಿಭಾಗದಲ್ಲಿಯೇ ಮುಂದುವರಿಸುವ ಉದ್ದೇಶದಿಂದ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಿರದ್ದೆನೆ, ನಾನು ಇಲ್ಲಿಗೆ ಸೇರಲು ಇದನ್ನು ಹೊರತು ಪಡಿಸಿ ಬೇರೆ ಹಲವು ಕಾರಣಗಳಿದೆ ಅದು ಎಲ್ಲರಿಗೂ ತಿಳಿದಂತೆ ಕ್ರೈಸ್ಟ್ ನಲ್ಲಿ ಬಹಳ ಅವಕಾಶಗಳು ಸಿಗುವುದು ಒಂದಾದರೆ,ಮತ್ತೊಂದು ವಾಣಿಜ್ಯ ವಿಭಾಗಕ್ಕೆ ಒಳ್ಳೆಯ ತರಬೇತಿ ಸಿಗುವುದರಿಂದ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗವಾಗುತ್ತದೆ ಎಂಬುವುದು ಮತ್ತೊಂದು. ಎಲ್ಲರಿಗೂ ಸಹ ಇಂತಹ ದೊಡ್ಡ ವಿಶ್ವವಿದ್ಯಾಲಯದಲ್ಲಿ ಸೇರುವ ಆಸೆ ಇದ್ದೇ ಇರುತ್ತದೆ ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಅದೇ ರೀತಿ ನನಗೂ ಸಹ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಲು ಬಹಳ ಆಸೆ ಇತ್ತು ನಾನು ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಕ್ರೈಸ್ಟ್ ನಲ್ಲೆ ಮಾಡಲು ಬಯಸಿದೆ ಆದರೆ ಅದು ಸಾಧ್ಯವಾಗಿರಲಿಲ್ಲ ಆದರೆ ಈಗ ಅದು ಸಾಧ್ಯವಾಗಿದೆ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರುವುದು ನನಗೆ ಮತ್ತು ನನ್ನ ಪೋಷಕರಿಗೆ ಬಹಳ ಆನಂದ ತರುವ ವಿಷಯವಾಗಿತ್ತು ಏಕೆಂದರೆ ಮೊದಲೇ ತಿಳಿಸಿದ ಹಾಗೆ ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಮತ್ತು ಈಗ ಅವಕಾಶ ನನಗೆ ದೊರಕಿರುವುದು ಮತ್ತು ಅದನ್ನು ಒಳ್ಳೆ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನನ್ನ ಜವಾಬ್ದಾರಿ ಮತ್ತು ಆ ಜವಾಬ್ದಾರಿಯನ್ನು ನಾನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದು ಈ ಮೂಲಕ ತಿಳಿಸುತ್ತೇನೆ.