ಸದಸ್ಯ:Y CHANDRABABU/ನನ್ನ ಪ್ರಯೋಗಪುಟ

[ಆರಾದನೆ|ಕಾವಡಿ]

ಸಣ್ಣಕಾವಡಿ

ಬದಲಾಯಿಸಿ
 
ಕಾವಡಿ ಆಚರಣೆ

ಕಾವಡಿ ಕುಣಿತವು ಒಂದು ಹವ್ಯಾಸಿ ಮನರಂಜನೆಯ ಕಲೆಯಾಗಿರುವುದು. ಇದನ್ನು ಕಾವಡಿ ಕುಣಿತವೆಂತಲೂ ಕರೆಯುವರು. ಕೋಲಾರ ಮತ್ತು ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕಾಣಸಿಗುವಂತಹ ಕಲೆಯಾಗಿರುವುದು.ಮೂಲತಃ ಈ ಕಲೆಯು ತಮಿಳುನಾಡಿನ ಸುಬ್ರಮಣ್ಯನ್ ಭಕ್ತರು ಪೂಜಿಸುವ ಹರೋಹರ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಈ ಕುಣಿತವು ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಪ್ರದರ್ಶನಗೊಳ್ಳುವುದು. ತೆಳುವಾದ ಮರದ ಹಲಗೆಯನ್ನು ಅರ್ದಚಂದ್ರಾಕಾರದಲ್ಲಿ ಕಮಾನಿನಂತೆ ಬಾಗಿಸಿದ್ದು, ಕಾವಡಿಯ ಕೆಳಭಾಗದಲ್ಲಿ ನಯಗೊಳಿಸಿದಂತಹ ದುಂಡಾದ ಅಡ್ಡಪಟ್ಟಿಯನ್ನು ಜೋಡಿಸಿ ಕಾವಡಿಯನ್ನು ಸಿದ್ದಪಡಿಸಿರುತ್ತಾರೆ. ಕಮಾನಿನ ಮೇಲು ಭಾಗವನ್ನು ನವಿಲುಗರಿಗಳಿಂದ ಅಲಂಕರಿಸಲಾಗಿರುತ್ತದೆ. ಕಲಾವಿದರು ಕಚ್ಚೆಪಂಚೆ ಉಟ್ಟು, ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಕಾವಟಿಯನ್ನು ತಲೆಯ ಮೇಲಿಟ್ಟುಕೊಂಡು ಎರಡೂ ಕೈಗಳ ಸಹಾಯವಿಲ್ಲದೆ ಭುಜ, ಎದೆ ಮತ್ತು ತಲೆಯ ಮೇಲೆ ಆಡಿಸುತ್ತಾ ಕುಣಿಯುವ ರೀತಿಯು ಕುತೂಹಲಕಾರಿಯಾಗಿರುವುದು. ಈ ಕಲೆಯು ಶಿವರಾತ್ರಿ, ದೇವರ ಉತ್ಸವ, ಮುಂತಾದ ಸಮಾರಂಭಗಳಲ್ಲಿ ಪ್ರದರ್ಶಿಸುವರು. ಕುಣಿತದ ಹಿನ್ನೆಲೆಯಾಗಿ ತಮಟೆ, ಡೋಲು, ನಗಾರಿ ವಾದ್ಯಗಳನ್ನು ಬಳಸಲಾಗುತ್ತದೆ. ಕೆಲವು ವೇಳೆ ದೇವರಿಗೆ ಹರಕೆ ಮಾಡಿಕೊಂಡು ಕುಣಿಯುವುದು ಉಂಟು. ಕುಣಿಯುವಾಗ 'ಹರೋಹರ' 'ಮೇಲ್ ಮುರುಗನ್ ಹರೋಹರ' ಎಂದು ಕೂಗುತ್ತಾ ಸಾಗುವರು. ಕಾವಡಿ ನೃತ್ಯ ಮಾಡುವ ಕಲಾವಿದರು ಕೆಲವು ನಿಯಮಗಳಿಗೆ ಬದ್ದನಾಗಿರಬೇಕಾಗುತ್ತದೆ. ಮಾಂಸವನ್ನು ತಿನ್ನುವಂತಿಲ್ಲ. ಕಾವಡಿಯನ್ನು ಹೊರುವ ದಿನ ಉಪವಾಸವಿದ್ದು ಸ್ನಾನ, ಮಡಿ ಮಾಡಿ ಶುದ್ದನಾಗಿರಬೇಕಾಗುತ್ತದೆ. ಬಳ್ಳಾರಿಯ ಕಡ್ಡೈರಾಂಪುರದಲ್ಲಿಯೂ ನಡೆಯುತ್ತದೆ.

ಉಲ್ಲೇಖಗಳು

ಬದಲಾಯಿಸಿ

[]

  1. https://kn.wikipedia.org/s/pwd