ಆನೇಕಲ್ ವಿಧಾನಸಭಾ ಕ್ಷೇತ್ರ

ಆನೇಕಲ್ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೧೭೭) ಬೆಂಗಳೂರು ನಗರ ಜಿಲ್ಲೆಗೆ ಸೇರಿರುವ ಚುನಾವಣಾ ಕ್ಷೇತ್ರ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಈ ಕ್ಷೇತ್ರ, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ[೧]. ೧ ನಗರಸಭೆ, ೪ ಪುರಸಭೆ, ಬಿಬಿಎಂಪಿ ೧ ವಾರ್ಡ್, ಮತ್ತು ೨೧ ಗ್ರಾಮ ಪಂಚಾಯತ್‌ಗಳನ್ನು ಈ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ[೨].

ಬೆಂಗಳೂರು ನಗರ ಜಿಲ್ಲೆಯ ನಕ್ಷೆ (ಆನೇಕಲ್ ಕ್ಷೇತ್ರ ಕೆಂಪು ಬಣ್ಣದಲ್ಲಿದೆ)

ರಾಜಕೀಯ ಇತಿಹಾಸ ಬದಲಾಯಿಸಿ

ಆನೇಕಲ್ ಬೆಂಗಳೂರಿನ ಹೊರವಲಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಉದ್ಯಮಗಳು, ತಮಿಳುನಾಡಿನ ಗಡಿಗಿಂತ ೫ ಕಿಮೀ ದೂರ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಮತ್ತು ಹುಸ್ಕೂರಿನಲ್ಲಿ ಕೈಗಾರಿಕೆಗಳು ಈ ಕ್ಶೇತ್ರದ ವಿಶೇಷತೆಗಳಾಗಿವೆ.

ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದದ್ದು ೧೯೫೧ರಲ್ಲಿ. ಹಾಗೆಯೆ ಈ ಕ್ಷೇತ್ರದ ಮೊದಲ ಶಾಸಕರು ಲಕ್ಷ್ಮಿದೇವಿ ರಾಮಣ್ಣ ಮತ್ತು ಹೆಚ್ ಟಿ ಪುಟ್ಟಪ್ಪ ಅವರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ದ್ವಿಸದಸ್ಯ ಕ್ಷೇತ್ರದಿಂದ (ಹೊಸಕೋಟೆ-ಆನೇಕಲ್) ಸ್ಪರ್ಧಿಸಿದ್ದ ಇವರು, ಕೆ‌ಎಮ್‌ಪಿಪಿ ಪಕ್ಷದ ಬಿ ಚೆನ್ನಭೈರೇಗೌಡರ ವಿರುದ್ಧ ಜಯ ಗಳಿಸಿದ್ದರು[೩]. ಈ ಕ್ಷೇತ್ರ ಸಧ್ಯಕ್ಕೆ ಕಾಂಗ್ರೆಸ್ ಶಾಸಕರ ಕೈಯಲ್ಲಿದೆ[೪]. ೨೦೧೮ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎ ನಾರಾಯಣ ಸ್ವಾಮಿ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ ಶಿವಣ್ಣ ಅವರು ವಿಜಯಿಯಾದರು[೫]. ಆನೇಕಲ್ ಕ್ಷೇತ್ರ ೧೯೯೪ರಿಂದ ೨೦೦೮ರವರೆಗೆ ಬಿಜೆಪಿಯ ಹಿಡಿತದಲ್ಲಿ ಇತ್ತು. ೧೯೯೪ರಲ್ಲಿ ನಡೆದ ಚುನಾವಣೆಯಲ್ಲಿ ವೈ ರಾಮಕೃಷ್ಣ ಅವರು ಗೆದ್ದಿದ್ದರು. ಅದೇ ರೀತಿ ೧೯೯೮ರಲ್ಲಿ ನಡೆದ ಉಪಚುನಾವಣೆಯಲ್ಲಿ ಎ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದರು. ಇವರಿಬ್ಬರೂ ಸಹ ಬಿಜೆಪಿಯ ಅಭ್ಯರ್ಥಿಗಳು. ನಂತರದ ೧೯೯೯, ೨೦೦೪, ಮತ್ತು ೨೦೦೮ರಲ್ಲಿ ಸತತವಾಗಿ ಎ ನಾರಾಯಣಸ್ವಾಮಿ ಗೆಲುವು ಪಡೆದರು.

ಮತದಾರರು ಬದಲಾಯಿಸಿ

ಅಂಕಿ ಅಂಶಗಳು ಬದಲಾಯಿಸಿ

ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೪,೦೨,೫೯೫.

  • ಪುರುಷರು ೨,೧೦,೮೨೬.
  • ಮಹಿಳಾ ಮತದಾರರ ಸ್ಂಖ್ಯೆ ೧,೯೧,೬೮೩.
  • ತೃತೀಯ ಲಿಂಗಿಗಳು ೮೬ ಮಂದಿ[೬].

ಜಾತಿ ಅಂಕಿ ಅಂಶಗಳು ಬದಲಾಯಿಸಿ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಇಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗ ಮತದಾರರಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ೧,೫೫,೦೦೦ ಮತದಾರರು ಇಲ್ಲಿನ್ ಅಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಇನ್ನುಳಿದಂತೆ ಒಕ್ಕಲಿಗ ಮತದಾರರು ೮೨,೦೦೦, ಕುರುಬ ಮತದಾರರು ೧೫,೦೦೦, ಅಲ್ಪಸಂಖ್ಯಾತ ಮತದಾರರು ೩೨,೦೦೦ ಮತ್ತು ಇತರೇ ಜಾತಿ ಪಂಗಡಕ್ಕೆ ಸೇರಿದ ೬೫,೦೦೦ ಮಂದಿ ಮತದಾರರು ಇದ್ದಾರೆ. ಅಲ್ಲದೆ, ಐಟಿ ಕಂಪೆನಿಗಳ ಉದ್ಯೋಗಿಗಳು, ರೈತಾಪಿ ವರ್ಗ, ಕೂಲಿ ಕಾರ್ಮಿಕರು- ಹೀಗೆ ಮತದಾರರಲ್ಲಿ ವೈವಿಧ್ಯವನ್ನು ಕಾಣಬಹುದು[೭].

ಇವನ್ನೂ ಓದಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Anekal Assembly Constituency". thehindu.com. The Hindu. Retrieved 10 May 2023.
  2. "ಆನೇಕಲ್ ಕ್ಷೇತ್ರ: ಹ್ಯಾಟ್ರಿಕ್ ಗೆಲುವು ತಡೆಯಲು ಬಿಜೆಪಿ ಪೈಪೋಟಿ". prajavani.net. ಪ್ರಜಾವಾಣಿ. Retrieved 10 May 2023.
  3. "Mysore, 1951". eci.gov.in. Election Commission of India. Retrieved 10 May 2023.
  4. "ಆನೇಕಲ್ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 10 May 2023.
  5. "Anekal Constituency Election Results". timesofindia.indiatimes.com. Retrieved 10 May 2023.
  6. "ಆನೇಕಲ್". kgis.ksrsac.in. ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ (ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಸರ್ಕಾರ ). Retrieved 10 May 2023.
  7. "ಆನೇಕಲ್ ಚುನಾವಣಾ ಫಲಿತಾಂಶ". vijaykarnataka.com. ವಿಜಯ ಕರ್ನಾಟಕ. Archived from the original on 11 ಮೇ 2023. Retrieved 10 May 2023.