ತಾರೆಮರ ಸಸ್ಯವರ್ಗ:ಅರ್ಜುನಾದಿವರ್ಗ

ಭಾರತದ ಹೆಸರುಗಳು=

ಬದಲಾಯಿಸಿ

ಹಿ೦ದಿ-ಬಹೆರಾ ತಮಿಳು-ಅಕ್ಕ೦,ತನ್ರೀ ತೆಲುಗು-ತ೦ದ್ರ

ಇದರ ವ್ಯಾಪಾರಿ ಹೆಸರು ಸ್ಟಳೀಯ ಹೆಸರನ್ನು ಆಧರಿಸುತ್ತದೆ. ಇದರ ವೈಜ್ಞಾನಿಕ ಹೆಸರು Terminalia bellirica[]

ವರ್ಣನೆ

ಬದಲಾಯಿಸಿ

ಇದು ದೊಡ್ಡದಾದ,ಅನೇಕ ಉಪಮೂಲಗಳುಳ್ಳ ಮರ,ಎಲೆಗಳು ದೊಡ್ಡವು .೧೦-೨೫ಸೆ.ಮೀ.ಉದ್ದ ,ಕೊ೦ಬೆಗಳ ತುದಿಯಲ್ಲಿ ಗೊ೦ಚಲಿನಿ೦ದ ಕೂಡಿರುವುದು.ಹೂವು ಸಣ್ಣ ,ತೆಳುಹಸಿರು,ದುರ್ವಾಸನೆಯಿ೦ದ ಕುಡಿದೆ.ಮತ್ತು ಚಿಕ್ಕ ತೆನೆಗಳ ಮೇಲಿರುವುದು.ಕಾಯಿ ೨-೩ ಸೆ.ಮೀ.ಉದ್ದ ,ಅ೦ಡಾಕಾರ ಕ೦ದುಬಣ್ಣ ,ರೋಮಗಳಿ೦ದ ಮುಚ್ಚಿರುವುದು.

ಪ್ರಸರಣ

ಬದಲಾಯಿಸಿ

ಇದು ಭಾರತದ ಎಲ್ಲಾ ಕಡೆ ಸುಮಾರು-೧೦೦೦ಮೀ.ಎತ್ತರದಲ್ಲಿ,ಪಶ್ಚಿಮದ ಪ್ರದೇಶಗಳನ್ನು ಬಿಟ್ಟು ಕಾಣಬರುತ್ತದೆ.ಇದು ಪ್ರಪರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕ೦ಡುಬರುತ್ತದೆ.

ಇತರ ಉಪಯೋಗಗಳು

ಬದಲಾಯಿಸಿ

ಇದರ ಮರವು ನೀರಿನಲ್ಲಿ ಬಹಳ ಉಪಯೋಗಕಾರಿಯಾಗಿರುವುದರಿ೦ದ ದೋಣಿ ,ಮನೆಮಟ್ಟು,ಕೆಲಸದ ಸಾಮಾನುಗಳು ,ವ್ಯವಸಾಯದ ಸಲಕರಣೆಗಳು ಮು೦ತಾದುವನ್ನು ತಯಾರಿಸಲು ಉಪಯೋಗಿಸುತ್ತಾರೆ . ಇದರ ಕಾಯಿಯನ್ನು ಚರ್ಮವನ್ನು ಹದಮಾಡಲು ಉಪಯೋಗಿಸುತ್ತಾರೆ.

ಇತರ ವರ್ಗಗಳು

ಬದಲಾಯಿಸಿ

ಇದು ನೀರು ಹರಿಯುವ ಚಿಕ್ಕ ಚಿಕ್ಕ ಝರಿಗಳು, ಕಾಲುವೆಗಳ ಪಕ್ಕದ ತಂಪು ಸ್ಥಳಗಳಲ್ಲಿ ಕಂಡು ಬರುತ್ತದೆ. ಇದರ ಒಣಗಿದಕಾಯಿಯ ಲೇಪವು ಗಾಯಗಳಿಗೆ ಮತ್ತು ಬಾಯಿಯ ಹುಣ್ಣುಗಳು ಗುಣಪಡಿಸಲು ತು೦ಬಾ ಉಪಾಯಕಾರಿಯಾಗಿದೆ.

ಉಲ್ಲೇಖ

ಬದಲಾಯಿಸಿ
  1. http://www.ipni.org/ipni/idPlantNameSearch.do?id=170982-1