ಸದಸ್ಯ:Veena1610337/ನನ್ನ ಪ್ರಯೋಗಪುಟ
ಎಚ್.ಎಸ್.ಮುಕ್ತಾಯಕ್ಕ ಅವರ ಕವನ ಸಂಕಲನಗಳು:
- ನಾನು ಮತ್ತು ಅವನು
- ನೀವು ಕಾಣಿರೇ, ನೀವು ಕಾಣಿರೇ
- ಕಭೀ ಕಭೀ
ಪುರಸ್ಕಾರಗಳು: "ನೀವು ಕಾಣಿರೇ ನೀವು ಕಾಣಿರೇ" ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ೧೯೯೬ನೆಯ ಸಾಲಿನ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ಮೊದಲ ಬಹುಮಾನ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಲಭಿಸಿವೆ.
ಪೀಠಿಕೆ
ಬದಲಾಯಿಸಿಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಒಂದು ವಿಶಿಷ್ಟ ಪ್ರಕಾರವಾಗಿದೇ ೧೨ನೇ ಶತಮಾನದಲ್ಲಿ ಈ ಸಾಹಿತ್ಯ ಪ್ರಕಾರ ಹುಟ್ಟಿತು. ಶಿವ ಶರಣರು ಶರಣೆಯರು ಆಡು ನುಡಿಯಲ್ಲಿ ತಮ್ಮ ಅನುಭವವನ್ನು ವಚನಗಳ ಮೂಲಕ ಶ್ರೀ ಸಾಮನ್ಯರ ಬಳಿಗೆ ತಂದರು. ಸಂಸ್ಕೃತದಲ್ಲಿ ಉಪನಿಷತ್ತುಗಳ ಸಾರವನ್ನು ಕನ್ನಡದಲ್ಲಿ ಸುಲಭ ರೂಪದಲ್ಲಿ ಜನಸಾಮಾನ್ಯರಿಗು ಅರ್ಥವಾಗುವಂತೆ ವಿವರಿಸುವುದು. ವಚನ ಸಾಹಿತ್ಯದ ಪ್ರಕಾರಗಳನ್ನು ಮತು ಅದರ ಸಾರವನ್ನು ಅಚ್ಚಗನ್ನಡ ರೂಪ, ಭಾವಗೀತಾತ್ಮಕ, ಲಯಬದ್ದತೆ ವಚನಗಳ ಪ್ರಾಮುಖ್ಯತೆಯನು ಹೆಚಿಸಿವೆ.
ಮುಕ್ತಾಯಕ್ಕ
ಬದಲಾಯಿಸಿಈಕೆ ೧೨ನೇ ಶತಮಾನದಲ್ಲಿದ್ದ ಅಂದರೆ ಕ್ರಿ.ಶ. ಸುಮಾರು (೧೧೬೦) ಕಾಲದಲ್ಲಿದ್ದ ಶಿವ ಶರಣೆ. ಈಕೆಯ ಜನ್ಮಸ್ಥಳ ಲಕ್ಕುಂಡಿ. ಈಕೆಯು ಅಜಗಣ್ಣ ಅಂಕಿತ ನಾಮವಿರುವ ೩೭ ವಚನಗಳನ್ನು ರಚಿಸಿದ್ದಾಳೆ. ಆದ್ಯಾತ್ಮಸಾಧನೆಯ ಗುಪ್ತಭಕ್ತ ಅಜಗಣ್ಣನು ಈಕೆಯ ಸಹೋದರ ಮತು ಗುರುವಾಗಿದ್ದಾರೆ ಇವರಿಬ್ಬರ ಅನುಭಾವಿ ನಿಲುವಿಗೆ ಸಂಭಂದಿಸಿದಂತೆ ಸೂಕ್ಷ್ಮ ಅಂಶಗಳನ್ನು ಬಿಡಿಸಿ ತೋರುವ ವಚನಗಳಾಗಿವೆ ಎಂದು ತಮ್ಮ ವಚನಗಳು ವ್ಯಕ್ತ ಪಡಿಸುತವೆ.
ಮುಕ್ತಾಯಕ್ಕಳ ವಚನಗಳು
ಬದಲಾಯಿಸಿಮುಕ್ತಾಯಕ್ಕ ತಮ್ಮ ವಚನಗಳಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು, ಕೆಟ್ಟ ಆಚಾರಗಳನ್ನು ಆಚರಿಸಬಾರದು, ಹೇಳಲಿ ಹೇಳದೆ ಇರಲಿ, ಹಿಡಿದ ನಿಯಮಗಳನ್ನು ಬಿಡದೇ ಇದ್ದರೇ ಅದೇ ಮಹಾ ಜ್ಘಾನದ ಆಚರಣೆಯೆಂದು ಮುಕ್ತಾಯಕ್ಕ ತನ್ನ ಒಂದು ವಚನದಲ್ಲಿ ನುಡಿದಿದ್ದಾಳೆ. ಮುಕ್ತಾಯಕ್ಕನು ಅಜಗಣ್ಣ ಯೊಗ ರಹಸ್ಯವಾಗಿದ್ದು ಸಂದರ್ಭ ಒದಗಿಬಂದಾಗ ಪ್ರಕಟ ವಾಗುತ್ತಿತ್ತು ಎಂದು ಅಜಗಣ್ಣನ ಯೋಗದ ಪರಿಯನ್ನು ತಮ್ಮ ವಚನಗಳಲ್ಲಿ ವರ್ಣಿಸಿದಾರೆ.
ಮುಕ್ತಾಯಕ್ಕಳ ಅಣ್ಣ
ಬದಲಾಯಿಸಿಮುಕ್ತಾಯಕ್ಕನು ತನ್ನ ಅಣ್ಣನಾದ ಅಜಗಣ್ಣನ ಆಲೋಚನೆ, ಜಿವನ ನಡೆನುಡಿಗಳು ತಮ್ಮಲಿದ ಗುಪ್ತ ಮತ್ತು ರಹಸ್ಯವಾದ ಭಕ್ತಿಯ ಆಚರಣೆ ಅವರ ವ್ಯಕ್ತಿತ್ವದ ಆಧಾರವಾಗಿಟ್ಟು ಆಕೆ ತನ್ನ ವಚನಗಳನ್ನು ಬರೆದಿದ್ದಾಳೆ. ಮುಕ್ತಾಯಕ್ಕನು ಬರೆದಿರುವ ಹಲವು ಪ್ರಸಿದ್ದ ವಚನಗಳಲ್ಲಿ "ಶರಣೆಯರ ಭಾವಸಂಗಮ" ಎಂಬ ವಚನವು ಪ್ರಸಿದ್ದವಾಗಿದೆ. ಈ ಪ್ರಸಿದ್ದ ಪ್ರಸ್ತುತ ವಚನಗಳನ್ನು ಕನ್ನಡ ಮತ್ತು ಸಂಸ್ಕ್ರುತಿ ನಿರ್ದೆಶನಾಲಯದ ಶಿವಶರಣೆಯರ ವಚನ ಸಂಪುಟ(ಸಮಗ್ರ ವಚನ ಸಂಪುಟ)೫ (ಅನುಕ್ರಮವಾಗಿ ಪುಟ ೨೫-೨೬, ವಚನ ೬೬, ಪುಟ ೨೭೧-೭೨,ವಚನ ೮೫೪ ಮತ್ತು ಪುಟ ೨೨೮, ವಚನ ೮೭೬) ರಿಂದ ಆಯ್ಕೆ ಮಾಡಿದೆ.
"ಶರಣೆಯರ ಭಾವಸಂಗಮ" ಎಂಬ ವಚನದಲ್ಲಿ ಹೇಗೆ ಸೂರ್ಯನಲ್ಲಿ ಅಡಗಿರುವ ಬೆಂಕಿ,ಹೂವಿನಲ್ಲಿರುವ ಪರಿಮಳ ಚಂದ್ರನ ಕಳೆ ಸಿಡಿಲಿನ, ತೆಜಗಳನು ಹೇಗೆ ನಾವು ನೋಡಲಾಗುವುದಿಲ್ಲವೊ ಅದೆ ರೀತಿಯಾಗಿ ನಾವು ಅಜಗಣ್ಣನಲ್ಲಿ ಅಡಗಿರುವ ಗುಪ್ತ ಭಕ್ತಿಯನ್ನು ನೋಡಲಾಗುವುದಿಲ್ಲ ಅವನ ಯೋಗ ಸಾದನೆಗಳು ಗುಪ್ತವಾಗಿದರು ಹುವಿನ ಪರಿಮಳದಂತೇ ಪ್ರಕಟವಾಗುತ್ತದೆ ಎಂದು ತನ್ನ ವಚನಗಳಲ್ಲಿ ಅಜಗಣ್ಣ ವ್ಯಕ್ತಿತ್ವಗಳನ್ನು ವರ್ಣಿಸಿದ್ದಾಳೆ.
ಶರಣೆಯರ ಭಾವಸಂಗಮ
ಬದಲಾಯಿಸಿ"ಅಲರೊಳಡಗಿದ ಪರಿಮಳದಂತೆ. ಪತಂಗದೊಳಡಗಿದ ಅನಲನಂತೆ, ಶಶಿಯೊಳದಡಗಿದ ಷೋಡಶಕಳೆಯಂತೆ, ಉಲುಹಡಗಿದ ವಾಯುವಿನಂತೆ, ಸಿಡಿಲೊಳಡಗಿದ ಗಾತ್ರದ ತೇಜದಂತೆ, ಇರಬೇಕಯ್ಯ ಯೋಗ, ಎನ್ನ ಅಜಗಣ್ಣ ತಂದೆಯಂತೆ ನುಡಿಯಲು ಬಾರದು ಕೆಟ್ಟನುಡಿಗಳ, ನಡೆಯಲು ಬಾರದು ಕೆಟ್ಟನಡೆಗಳ, ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು, ಅದೇ ಮಹಾಜ್ನಾನದಾಚರಣೆ ಎಂಬೆನು ಅಜಗಣ್ಣ, ತಂದೆ." ಮುಕ್ತಾಯಕ್ಕನು ಬರೆದಿರುವ ಹಲವು ಪ್ರಸಿದ್ದ ವಚನಗಳಲ್ಲಿ "ಶರಣೆಯರ ಭಾವಸಂಗಮ" ಎಂಬ ವಚನವು ಪ್ರಸಿದ್ದವಾಗಿದೆ. ಈ ಪ್ರಸಿದ್ದ ಪ್ರಸ್ತುತ ವಚನಗಳನ್ನು ಕನ್ನಡ ಮತ್ತು ಸಂಸ್ಕ್ರುತಿ ನಿರ್ದೆಶನಾಲಯದ ಶಿವಶರಣೆಯರ ವಚನ ಸಂಪುಟ(ಸಮಗ್ರ ವಚನ ಸಂಪುಟ)೫ (ಅನುಕ್ರಮವಾಗಿ ಪುಟ ೨೫-೨೬, ವಚನ ೬೬, ಪುಟ ೨೭೧-೭೨,ವಚನ ೮೫೪ ಮತ್ತು ಪುಟ ೨೨೮, ವಚನ ೮೭೬) ರಿಂದ ಆಯ್ಕೆ ಮಾಡಿದೆ. ಮುಕ್ತಾಯಕ್ಕನ ಸಹೋದರ ಅಜನಗಣ್ಣ. ಆಕೆಯ ಗುರುವೂ ಹದು.ಅವನ ಅಂಕಿತವಿರಿಸಿ ಆಕೆ ವಚನಗಳನ್ನು ರಚಿಸಿದ್ದಾಳೆ. ಅಜಗಣ್ಣ ಗುಪ್ತಭಕ್ತ. ಅವನ ಯೋಗದ ಪರಿಯನ್ನು ಮುಕ್ತಾಯಕ್ಕ ತನ್ನ ಒಂದು ವಚನದಲ್ಲಿ ವಿವರಿಸಿದ್ದಾಳೆ. ಹೂವಿನಲ್ಲಿ ಪರಿಮಳ ಅಡಗಿರುತ್ತದೆ. ಅದು ಕಣ್ಣಿಗೆ ಕಾಣಿಸುವುದಿಲ್ಲ.ನಾಸಿಕಕ್ಕೆ ತಿಳಿತಯುತ್ತದೆ. ಸೂರ್ಯನಲ್ಲಿ ಬೆಂಕಿಯಿದೆ. ಅದು ಶಾಖದಿಂದ ಗೊತ್ತಾಗುತ್ತದೆ. ಚಂದ್ರನಲ್ಲಿ ಷೋಡಶಕಳೆಗಳಿವೆ.ಹುಣ್ಣಿಮೆಯ ರಾತ್ರಿಯಂದು ಪೂರ್ಣಚಂದ್ರನಲ್ಲಿ ಅವನ್ನು ಕಾಣ ಬಹುದು.ಸಿಡಿಲಿನಲ್ಲಿಯೂ ತೇಜವಿದೆ.ಸಿಡಿಲು ಬಡಿದಾಗ ಆಗುವ ಪರಿಣಾಮದಿಂದ ಅದು ತಿಳಿಯುತ್ತದೆ. ಹೀಗೆ ಹೂವು,ಸೂರ್ಯ,ಚಂದ್ರ,ಸಿಡಿಲುಗಳಲ್ಲಿ ಸುಗಂಧ,ಬೆಂಕಿ,ಷೋಡಶಕಳೆ,ತೇಜ-ಇವು ಗುಪ್ತವಾಗಿರುತ್ತದೆ.ಆದರೆ ತಮ್ಮ ಇರುವಿಕೆಯನ್ನು ತೋರಿಸುತ್ತವೆ.ಈ ರೀತಿಯಲ್ಲಿಯೇ ಅಜಗಣ್ಣನ ಯೋಗ ಗುಪ್ತವಾಗಿತ್ತು.ಅವನು ಹಿಡಿದ ವ್ರತಗಳನ್ನು ಬಿಡದೆ ಸಾಧಿಸುತ್ತಿದ್ದ. ಅವನ ಯೋಗಸಾಧನೆ ಗುಪ್ತವಾಗಿದ್ದರೂ ಹೂವಿನ ಪರಿಮಳದಂತೆ ಪ್ರಕಟವಾಗುತ್ತಿತ್ತು ಎಂದು ಮುಕ್ತಾಯಕ್ಕ ಅಭಿಪ್ರಾಯಪಡುತ್ತಾಳೆ. ಧ್ಯಾನ ಹೇಗಿರಬೇಕು,ಅಜಗಣ್ಣನ ಯೋಗ ಸಾಧನೆ ಯಾವ ಬಗೆಯದಾಗಿತ್ತು ಎನ್ನುವುದನ್ನು ವಿವರಿಸುವಾಗ ಮುಕ್ತಾಯಕ್ಕ ಈ ನಿದರ್ಶನವನ್ನು ನೀಡುತ್ತಾಳೆ.ಚಂದ್ರನಲ್ಲಿ ಷೋಡಶಕಳೆಗಳು ಅಡಗಿವೆ.ಪೂರ್ಣಚಂದ್ರನಲ್ಲಿ ಗಮನಿಸುವವರಿಗೆ ಅದು ಗೋಚರಿಸುತ್ತಿದೆ.ಗುಪ್ತವಾಗಿರಬೇಕು,ಆದರೆ ಗಮನ ಸೆಳೆಯಬೇಕು-ಧ್ಯಾನ ಅಥವಾ ಯೋಗ ಹೀಗಿರಬೇಕು-ಅಜಗಣ್ಣನ ಯೋಗ ಆ ರೀತಿಯದು ಎಂದು ಮುಕ್ತಾಯಕ್ಕ ಹೇಳಿದ್ದಾಳೆ.ಹೇಳಿದರೂ,ಹೇಳದಿದ್ದರೂ ಹಿಡಿದ ವ್ರತವನ್ನು ಬಿಡದೆ ಆಚರಿಸುವುದೇ ನಿಜವಾದ ತಿಳಿವಳಿಕೆಯ ಆಚರಣೆ-ಅಜಗಣ್ಣ ಹೀಗೆ ನಡೆಯುತ್ತಿದ್ದವನು ಎಂದು ಹೇಳಿದ್ದಾರೆ.ಯೋಗ ಹೇಗಿರಬೇಕು,ಸದಾಚಾರದ ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾ ಮುಕ್ತಾಯಕ್ಕ ಹೇಳಿದ್ದಾಳೆ.ಯೋಗ ಅಥವಾ ಧ್ಯಾನ ಗುಪ್ತವಾಗಿರಬೇಕು,ಪ್ರಕಟವಾಗಿ ಇರಬಾರದು.ಹಾಗೆಯೇ ಯೋಗಿಗಳಲ್ಲಿ,ಧ್ಯಾನಿಗಳಲ್ಲಿ ಸದಾಚಾರವಿರಬೇಕು,ಕಾಯಾ ವಾಚಾ ಮನಸಾ ಪರಿಶುದ್ಧತೆ ಇರಬೇಕು ಎನ್ನುವುದನ್ನು ಮುಕ್ತಾಯಕ್ಕ ವಿವರಿಸಿದ್ದಾಳೆ.