ಸದಸ್ಯ:Vchetans/ನನ್ನ ಪ್ರಯೋಗಪುಟ

ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು ಕಾನೂನು ಬದ್ದವಾಗಿ ಸ್ಥಾಪನೆಗೊಂಡ ಸಂಸ್ಥೆ. ದೇಶಾದ್ಯಂತ ಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಹಾಗು ಏಕರೂಪದ ಹಾಗು ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಇದರ ಮೂಲ ಕಾರ್ಯ. ಹೊಸ ಕಾಲೇಜು ಆರಂಭಿಸಲು ಪರವಾನಗಿ ನೀಡುವುದು, ವೈದ್ಯರಿಗೆ ಅಭ್ಯಾಸ ಮಾಡಲು ನೊಂದಣಿ ನೀಡುವುದು ಹಾಗು ವೈದ್ಯಕೀಯ ಕ್ಷೇತ್ರದ ಮೇಲ್ವಿಚಾರಣೆ ಇದರ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ.

ಸುಪ್ರೀಂಕೋರ್ಟ್ ಒಪ್ಪಿಗೆ ಪಡೆದು ಹಾಗು ನೀತಿ ಆಯೋಗದ ಶಿಫ಼ಾರಸಿನಂತೆ ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾದ ಬದಲು ನ್ಯಾಷನಲ್ ಮೆಡಿಕಲ್ ಕಮಿಶನ್ ಅನ್ನು ಸ್ಥಾಪಿಸಲು ಭಾರತ ಸರ್ಕಾರ ತೀರ್ಮಾನಿಸಿದೆ. ಅದರಂತೆ ಲೋಕಸಭೆಯಲ್ಲಿ ಹೊಸ ಕಾಯ್ದೆಯನ್ನು ಮಂಡಿಸಲಾಗಿದೆ. ಸದ್ಯ ಸಂಸದೀಯ ಸಮಿತಿಯ ಪರಿಶಿಲನೆಯಲ್ಲಿದೆ.

ಇತಿಹಾಸ ಬದಲಾಯಿಸಿ

೧೯೩೩ರ ಮೆಡಿಕಲ್ ಕೌನ್ಸಿಲ್ ಕಾಯ್ದೆ ಯ ಅನ್ವಯ ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾವನ್ನು ೧೯೩೪ ರಲ್ಲಿ ಸ್ಥಾಪಿಸಲಾಯಿತು. ಸ್ವಾತಂತ್ರಾನಂತರ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ಕಾಯ್ದೆಯನ್ನು ೧೯೫೬ರಲ್ಲಿ ತರಲಾಯಿತು. ಈ ಕಾಯ್ದೆಯನ್ನು ೧೯೬೪, ೧೯೯೩ ಹಾಗು ೨೦೦೧ ರಲ್ಲಿ ಮಾರ್ಪಡಿಸಲಾಯಿತು. ಈಗ ಈ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ, ೨೦೧೧ರಲ್ಲಿ ಸರ್ಕಾರದ ಆದೇಶದಂತೆ ನೇಮಕಗೊಂಡಿರುವ ಸಮಿತಿ ಕಾರ್ಯಭಾರ ಮಾಡುತ್ತಿದೆ.

ಕಾರ್ಯ ವ್ಯಾಪ್ತಿ ಬದಲಾಯಿಸಿ