ನೀತಿ ಆಯೋಗ
- ನೀತಿ ಆಯೋಗ ರಚನೆ :
- ನಿರ್ವಹಣೆ/ಆಡಳೀತ:
- ಜನವರಿ 01, 2015
- ನೀತಿ ಆಯೋಗ ರಚನೆ:
- ಅಧ್ಯಕ್ಷರು: ಪ್ರಧಾನಿ
- ಮೊದಲ ಅಧ್ಯಕ್ಷರು : ಪ್ರಧಾನಿ: ನರೇಂದ್ರ ಮೋದಿ
- ಆಡಳಿತ ಮಂಡಳಿ: ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು (ಕೇಂದ್ರಾಡಳಿತ ಪ್ರದೇಶಗಳು).
- ಪ್ರಾದೇಶಿಕ ಕೌನ್ಸಿಲ್ಗಳು: ಅಗತ್ಯ-ಆಧಾರದ ಮೇಲೆ ರಚನೆ, ಸಿಎಂ ಮತ್ತು ಪ್ರದೇಶದ ಲೆಫ್ಟಿನೆಂಟ್ ಗವರ್ನರ್ಗಳು .
- ಸದಸ್ಯರು: ಪೂರ್ಣ ಸಮಯದವರು: ಆರು ಜನ
- ಅರೆಕಾಲಿಕ ಸದಸ್ಯರು: ಹೆಚ್ಚೆಂದರೆ 2, ಆವರ್ತನದ, ಸಂಬಂಧಿತ ಸಂಸ್ಥೆಗಳಿಂದ.
- ಪದನಿಮಿತ್ತ ಸದಸ್ಯರು: ಪ್ರಧಾನಿ ನಾಮಕರಣ ಮಂತ್ರಿಮಂಡಲದಿಂದ, ಹೆಚ್ಚೆಂದರೆ 4.
- ವಿಶೇಷ ಆಹ್ವಾನಿತರು: ಡೊಮೇನ್ ಜ್ಞಾನ ತಜ್ಞರು, ಪರಿಣಿತರು, ವೈದ್ಯರು.
- ಸಿಇಒ: ಸ್ಥಿರ ಅವಧಿಗೆ ಪ್ರಧಾನಿಯಿಂದ ನೇಮಕ.
- ಸಚಿವಾಲಯ: ಅಗತ್ಯವಿದ್ದರೆ.
- (:ಜನವರಿ 2015, 01 ರಂದು, ಪ್ರಧಾನಿ: ನರೇಂದ್ರ ಮೋದಿಯವರನ್ನು ನೀತಿ ಆಯೋಗದ ಅದ್ಯಕ್ಷರೆಂದು ಘೋಷಿಸಲಾಯಿತು. ನೀತಿ ಆಯೋಗ ಭಾರತದ ಯೋಜನಾ ಆಯೋಗದ ಬದಲಿ ಇದೆ. ಐದು ವರ್ಷದ ಭಾರತದ ಯೋಜನಾ ಅಭಿವೃದ್ಧಿಯ ಮಾರ್ಗದರೂವಾರಿ, ನೆಹರೂ ನೀತಿಯ ಕೊನೆ ಎಂದು ಹೇಳಬಹುದು, ಅದರ ಬದಲಿಗೆ ಭಾರತದ ನ್ಯಾಶನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಡೆವಲಪ್ಮೆಂಟ್ ರಚನೆಯಾಗಿದೆ.)
ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ:NITI=National Institution for Transforming India)ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ ೨,೨೦೧೫ರಲ್ಲಿ ಸ್ಥಾಪಿಸಲಾಗಿದೆ..[೧] ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.[೨]
ಸಂರಚನೆ
ಬದಲಾಯಿಸಿ- ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು ಇರುತ್ತಾರೆ.ಒಬ್ಬ ಉಪಾಧ್ಯಕ್ಷ,ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ,ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು, ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರು ಇರುತ್ತಾರೆ.
- ನೀತಿ ಆಯೋಗಕ್ಕೆ ನೇಮಕಗಳು
- ಹೊಸತಾಗಿ ರಚನೆಯಾಗಿರುವ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಅರ್ಥ ಶಾಸ್ತ್ರಜ್ಞ ಅರವಿಂದ್ ಪನಗಾರಿಯಾ ಅವರನ್ನು ದಿ.1-6-2015 ಸೋಮವಾರ ನೇಮಕಗೊಳಿಸಲಾಗಿದೆ. ಜತೆಗೆ ಆರು ಸದಸ್ಯರು ಮತ್ತು ಮೂವರು ವಿಶೇಷ ಆಹ್ವಾನಿತರನ್ನು ನಿಯುಕ್ತಿಗೊಳಿಸಲಾಗಿದೆ.
- ಅರ್ಥ ಶಾಸ್ತ್ರಜ್ಞ ಬಿಬೇಕ್ ದೇಬ್ರಾಯ್ ಮತ್ತು ಡಿಆರ್ಡಿಒದ ಮಾಜಿ ಮುಖ್ಯಸ್ಥ ವಿ.ಕೆ ಸಾರಸ್ವತ್ ಅವರನ್ನು ಆಯೋಗಕ್ಕೆ ಪೂರ್ಣ ಕಾಲಿಕ ಸದಸ್ಯರಾಗಿ ನಿಯುಕ್ತಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಯೋಗದ ಅಧ್ಯಕ್ಷರಾಗಿರುತ್ತಾರೆ.
- ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುರೇಶ್ ಪ್ರಭು, ರಾಧಾ ಮೋಹನ್ ಸಿಂಗ್, ಅರುಣ್ ಜೇಟ್ಲಿಯವರನ್ನು ನೀತಿ ಆಯೋಗದ ಸದಸ್ಯರಾಗಿದ್ದಾರೆ. ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ತವಾರ್ ಚಂದ್ ಗೆಹ್ಲೋಟ್ ವಿಶೇಷ ಆಹ್ವಾನಿತರಾಗಿದ್ದಾರೆ.
ಅರವಿಂದ್ ಪನಗಾರಿಯಾ
ಬದಲಾಯಿಸಿ- ಮುಕ್ತ ಮಾರುಕಟ್ಟೆಯ ಪ್ರತಿಪಾದಕ ಅರವಿಂದ್ ಪನಗಾರಿಯಾ(೬೨) ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ.
- ಪನಗಾರಿಯಾ ಈ ಹಿಂದೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ಮುಖ್ಯ ಆರ್ಥಿಕ ತಜ್ಞರಾಗಿದ್ದರು. ವರ್ಲ್ಡ್ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳನ್ನೂ ಒಳಗೊಂಡಿದೆ.
- ಅರವಿಂದ್ ಪನಗಾರಿಯಾ ಅವರು ಮುಕ್ತ ಮಾರುಕಟ್ಟೆಯ ಪ್ರತಿಪಾದಕರೆಂದು ಹೆಸರಾಗಿದ್ದರೂ, ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಭಾರತದಲ್ಲಿ ಮುಕ್ತ ಮಾರುಕಟ್ಟೆಯ ಪ್ರಗತಿಯ ಜತೆಗೆ ಬಡ ಜನತೆಯ ಅನುಕೂಲಕ್ಕಾಗಿ ಸಾಮಾಜಿಕ ವೆಚ್ಚಗಳಲ್ಲಿಯೂ ಹೆಚ್ಚಳದ ಅಗತ್ಯ ಇದೆ ಎಂದು ಹೇಳಿದ್ದರು.
ಹೊಸ ಸರ್ಕಾರ ಮತ್ತು ನೀತಿ ಆಯೋಗ
ಬದಲಾಯಿಸಿ- ಹೊಸತಾಗಿ ರಚನೆಯಾಗಿರುವ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಅರ್ಥ ಶಾಸ್ತ್ರಜ್ಞ ಅರವಿಂದ್ ಪನಗಾರಿಯಾ ಅವರನ್ನು ದಿ.1-6-2015 ಸೋಮವಾರ ನೇಮಕಗೊಳಿಸಲಾಗಿದೆ. ಜತೆಗೆ ಆರು ಸದಸ್ಯರು ಮತ್ತು ಮೂವರು ವಿಶೇಷ ಆಹ್ವಾನಿತರನ್ನು ನಿಯುಕ್ತಿಗೊಳಿಸಲಾಗಿದೆ. ಪಂಚವಾರ್ಷಿಕ ಯೋಜನೆಯ ವ್ಯವಸ್ಥೆ ಅಥವಾ ಕ್ರಮವನ್ನು ಕೈಬಿಡಲಾಗಿದೆ.
- ನೀತಿ ಆಯೋಗದ ಸದಸ್ಯರು
- ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ,
- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ: ಅಮಿತಾಭ್ ಕಾಂತ್
- ಉಪಾಧ್ಯಕ್ಷ: ಅರವಿಂದ್ ಪನಗಾರಿಯ
- ಅಧಿಕಾರನಿಮಿತ್ತ ಸದಸ್ಯರು: ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುರೇಶ್ ಪ್ರಭು ಮತ್ತು ರಾಧಾ ಮೋಹನ್ ಸಿಂಗ್
- ವಿಶೇಷ ಆಹ್ವಾನಿತರು: ನಿತಿನ್ ಗಡ್ಕರಿ, ಸ್ಮೃತಿ ಜುಬಿನ್ ಇರಾನಿ ಮತ್ತು ತನ್ವರ್ ಚಂದ್ ಗೆಹ್ಲೋಟ್
- ಪೂರ್ಣ ಅವಧಿ ಸದಸ್ಯರು: ಬೈಬೆಕ್ ದೇಬ್ರಾಯ್(ಅರ್ಥಶಾಸ್ತ್ರಜ್ಞ), ವಿ ಕೆ ಸಾರಸ್ವತ (ಮಾಜಿ DRDO ಮುಖ್ಯಸ್ಥ) ಮತ್ತು ರಮೇಶ್ ಚಂದ್ (ಕೃಷಿ ತಜ್ಞ)
- ಆಡಳಿತದ ಸಮಿತಿ (ಕೌನ್ಸಿಲ್): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು.[೩]
ನೀತಿ ಆಯೋಗಕ್ಕೆ ರಾಜಿನಾಮೆ - ಹೊಸ ನೇಮಕ
ಬದಲಾಯಿಸಿ- ನೀತಿ ಆಯೋಗಕ್ಕೆ ಅರವಿಂದ್ ಪನಗಾರಿಯಾ ರಾಜಿನಾಮೆ ನೀಡಿದ್ದು ದಿ.೩೧-೮-೨೦೧೭ರ ವರೆಗೆ ಮುಂದುವರಿಯುವರು.
- ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರ ರಾಜೀನಾಮೆಯಿಂದ ತೆರವಾದ, ಈ ಹುದ್ದೆಗೆ ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ಹಿರಿಯ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್ ಅವರನ್ನು ದಿ.೫-೮-೨೦೧೭ ರಂದು ನೇಮಿಸಲಾಗಿದೆ.
- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ಮಕ್ಕಳ ವಿಭಾಗದ ಮುಖ್ಯಸ್ಥ ವಿನೋದ್ ಪಾಲ್ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿದೆ.[೪]
- ಡಾ. ರಾಜೀವ್ ಕುಮಾರ್ ಅವರು ಎನ್ಐಟಿಐ(ನೀತಿ) ಆಯೋಗ್ ಉಪಾಧ್ಯಕ್ಷರಾಗಿದ್ದಾರೆ, ಕ್ಯಾಬಿನೆಟ್ ಸಚಿವರ ಸ್ಥಾನಮಾನದಲ್ಲಿದ್ದಾರೆ. ಅವರು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ನ ಕುಲಪತಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.[೫]
ಕಾರ್ಯಕ್ಷೇತ್ರ
ಬದಲಾಯಿಸಿ- ದೇಶದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು,ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ -ರಾಜ್ಯಗಳ ನೀತಿ ರೂಪಣೆ ವಿಷಯದಲ್ಲಿ "ಚಿಂತಕರ ಚಾವಡಿ"ಯ ಪಾತ್ರವಹಿಸಿ ಸಲಹೆ ಸೂಚನೆಗಳನ್ನು ನೀಡುವುದು,ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಮೌಲ್ಯಮಾಪನ ಮಾಡುವುದು.
ಭಾರತದ ಆರ್ಥಿಕ ಬೆಳವಣಿಗೆ
ಬದಲಾಯಿಸಿ- 26 Jun, 2017:
- ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ‘ದಿ ಎಕನಾಮಿಸ್ಟ್’ ಪತ್ರಿಕೆಯು ಮೋದಿ ನೇತೃತ್ವದ ಸರ್ಕಾರ ಕುರಿತು ನಕಾರಾತ್ಮಕ ಮುಖಪುಟ ವರದಿ ಪ್ರಕಟಿಸಿದೆ. ಈ ವರದಿ ಪ್ರಧಾನಿಯವರಲ್ಲಿ ಖುಷಿ ಮೂಡಿಸುವುದಿಲ್ಲ.
- ‘ದಿ ಎಕನಾಮಿಸ್ಟ್’ ಪತ್ರಿಕೆಯು ಸಂಪ್ರದಾಯವಾದಿ, ಉದ್ಯಮಸ್ನೇಹಿ ಪತ್ರಿಕೆ. ಆರ್ಥಿಕತೆಗೆ ಸಂಬಂಧಿಸಿದ ವಿಚಾರದಲ್ಲಿ ಈ ಪತ್ರಿಕೆ ಹೇಳುವ ವಿಚಾರಗಳು ಅಧಿಕಾರಯುತವಾಗಿರುತ್ತವೆ ಎಂದು ವಿಶ್ವದ ನಾಯಕರು ಭಾವಿಸುತ್ತಾರೆ. ಹಾಗಾಗಿ ಈ ವಾರಪತ್ರಿಕೆಯ ಅಭಿಪ್ರಾಯ ಮಹತ್ವ ಪಡೆಯುತ್ತದೆ. ಈ ಪತ್ರಿಕೆ ಯಾವುದೇ ವಿಚಾರದ ಬಗ್ಗೆ ತಕ್ಷಣಕ್ಕೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಹಾಗಾಗಿಯೇ ಪತ್ರಿಕೆ, ಮೋದಿ ಅವರ ಕುರಿತು ಈಗ ವ್ಯಕ್ತಪಡಿಸಿರುವ ಅನಿಸಿಕೆಯು ತೊಂದರೆ ಉಂಟುಮಾಡಬಹುದು ಎನ್ನಲಾಗಿದೆ.
- ನೋಟು ರದ್ದತಿ ತೀರ್ಮಾನದ ಹಿಂದೆ ಧೈರ್ಯ ಇತ್ತು. ಆದರೆ ಅದು ಸ್ವಸ್ಥ ಅಥವಾ ನೆಚ್ಚಿಕೊಳ್ಳಬಹುದಾದ ನೀತಿ ಆಗಿರಲಿಲ್ಲ. ‘ಸ್ಪಷ್ಟ ಯೋಜನೆಯ ಕೊರತೆ ಹಾಗೂ ಉದ್ದೇಶಗಳು ಸ್ಪಷ್ಟವಾಗಿಲ್ಲದಿರುವುದರ ಪರಿಣಾಮವಾಗಿ ಈ ಕಸರತ್ತಿನಿಂದಾಗಿ ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ’ ಎಂದು ಬರೆಯಲಾಗಿದೆ. ‘ತಾನೇನೋ ಮಾಡುತ್ತಿದ್ದೇನೆ ಎಂದು ಸಾಬೀತುಮಾಡಲು ಸರ್ಕಾರವು ಗೊತ್ತು-ಗುರಿ ಇಲ್ಲದ ತೀರ್ಮಾನಗಳನ್ನು ಕೈಗೊಳ್ಳುವ’ ಭೀತಿಯನ್ನು ಪತ್ರಿಕೆ ವ್ಯಕ್ತಪಡಿಸಿದೆ.[೬]
ಚೀನಾದೊಡನೆ ಆರ್ಥಿಕಸಂಬಂಧ
ಬದಲಾಯಿಸಿ- ಚೀನೀ ಪಡೆಗಳು ಆಕ್ರಮಣಶೀಲವಾಗಿ ಭಾರತೀಯ ಪ್ರಾಂತ್ಯದಲ್ಲಿ ತೊಂದರೆಯಿಡಲು ಪ್ರಯತ್ನಿಸುತ್ತಿರುವುದರಿಂದ, ಭಾರತದ ಹಿಮಾಲಯ ಸವಾಲನ್ನು ಎದುರಿಸುತ್ತದೆ. ಮಿಲಿಟರಿ, ಆರ್ಥಿಕ ಮತ್ತು ರಾಜತಾಂತ್ರಿಕ ಅಂಶಗಳನ್ನು ಒಂದು ಸುಸಂಬದ್ಧ ತಂತ್ರವಾಗಿ ಸಂಯೋಜಿಸುವ ಸಮಗ್ರ ವಿಧಾನದ ಕೊರತೆಯಿಂದ ಸಂಯೋಜಿಸಲ್ಪಟ್ಟಿದೆ. ಉದಾಹರಣೆಗೆ ಮೋದಿ, ಭಾರತದೊಂದಿಗೆ ಚೀನಾದ ವ್ಯಾಪಾರದ ಮಿತಿ ಸುಮಾರು 60 ಶತಕೋಟಿ ಡಾಲರ್ಗಳಷ್ಟು ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೋಲಿಸಿದರೆ, ಭಾರತದೊಂದಿಗೆ ಭಾರತದಲ್ಲಿ ವ್ಯಾಪಾರದ ಮಿತಿ ಅರ್ಧದಷ್ಟು, ಆದರೆ ಎರಡು ರೀತಿಯಲ್ಲಿ ವ್ಯಾಪಾರವನ್ನು ಸಮತೋಲನಗೊಳಿಸುವ ಭಾರತೀಯ ತುರ್ತು ಕ್ರಮವನ್ನು ಟ್ರಂಪ್ ಬಯಸುತ್ತಾನೆ.
- ಪ್ರತಿ $ 1 ಮೌಲ್ಯದ ರಫ್ತುಗಳಿಗಾಗಿ ಚೀನಾದಿಂದ $ 5 ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುವ ಮೂಲಕ, ಭಾರತವು ಚೀನೀ ಆಕ್ರಮಣಕ್ಕೆ ಪ್ರತಿಫಲವನ್ನು ಮಾತ್ರವಲ್ಲದೇ ಬೀಜಿಂಗ್ನ ಭಾರತವನ್ನು ಸುತ್ತುವರಿಯುವ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಹಾಕಿದೆ. ಚೀನಾದ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಪ್ರತಿ ಕ್ಯಾಲೆಂಡರ್ ವರ್ಷಕ್ಕೆ ಹಣಕಾಸು ಒದಗಿಸಲು ಮತ್ತು ಬೀಜಿಂಗ್ಗೆ ಇನ್ನೂ ಕೆಲವು ಬಿಲಿಯನ್ ಡಾಲರ್ಗಳನ್ನು ಹೊಂದಲು ಬೀಜಿಂಗ್ನ ಭಾರತದ ವಾರ್ಷಿಕ ವ್ಯಾಪಾರದ ಹೆಚ್ಚುವರಿ ಮಿತಿ ದೊಡ್ಡದು.Beijing’s annual trade surplus with India is large enough for it to finance one China-Pakistan Economic Corridor (CPEC) every calendar year and still have a few billion dollars to spare). [೭]
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ 'NITI Aayog': New Name for Restructured Planning Commission
- ↑ Planning Commission renamed NITI Aayog
- ↑ Niti-aayog-plans-new-planning-framework
- ↑ http://www.prajavani.net/news/article/2017/08/06/511435.html ಪಿಟಿಐ;6 Aug, 2017
- ↑ "ಆರ್ಕೈವ್ ನಕಲು". Archived from the original on 2021-01-01. Retrieved 2020-12-24.
- ↑ "ಆಕಾರ್ ಪಟೇಲ್ಭ;ರವಸೆಯ ಬೆಳ್ಳಿ ಗೆರೆಗಳು ಕಡಿಮೆಯಾದವೇ?;26 Jun, 2017". Archived from the original on 2017-07-04. Retrieved 2017-06-27.
- ↑ (http://www.hindustantimes.com/opinion/it-s-time-india-use-its-most-powerful-weapon-against-china-trade/story-Bz40cMCubN384qVwQjgMRP.html It’s time India used its most powerful weapon against China: Trade;Updated: Jun 28, 2017]