ಯೋಜನಾ ಆಯೋಗ
ಯೋಜನಾ ಆಯೋಗ ಸ್ವತಂತ್ರ ಭಾರತದಲ್ಲಿ ಯೋಜನಾಬದ್ಧ ಆರ್ಥಿಕ ಬೆಳವಣಿಗೆಗೆ ಸರಕಾರಕ್ಕೆ ಸಲಹೆ ನೀಡಲು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸ್ಥಾಪಿಸಲಾಗಿದ್ದ ಸಂಸ್ಥೆ.ಇದನ್ನು ಮಾರ್ಚ್ ೧೫,೧೯೫೦ರಲ್ಲಿ ಸ್ಥಾಪಿಸಲಾಯಿತು.ಜವಾಹರ್‍ಲಾಲ್ ನೆಹರೂಇದರ ಪ್ರಥಮ ಆಧ್ಯಕ್ಷರು.ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ಅನುಗುಣವಾಗಿ ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಎಂದು ಬದಲಾಯಿಸಲಾಗಿದೆ.
Agency overview | |
---|---|
Headquarters | ಯೋಜನೆ ಭವನ, ಸಂಸದ್ ಮಾರ್ಗ, ದೆಹಲಿ - 110001 |
Agency executive |
|
Website | planningcommission |
Footnotes | |
ಯೋಜನಾ ಆಯೋಗದ ಬದಲಿಗೆ, ಹೊಸ ಸಂಸ್ಥೆ ನೀತಿ ಆಯೋಗ ಸ್ಥಾಪಿಸಲಾಗಿದೆ |
- ಯೋಜನಾ ಆಯೋಗದ ರಚನೆ
ಅಧ್ಯಕ್ಷರು
ಬದಲಾಯಿಸಿಯೋಜನಾ ಆಯೋಗದ ಪದನಿಮಿತ್ತ ಅದ್ಯಕ್ಷರಾಗಿ ಪ್ರಧಾನಮಂತ್ರಿಗಳು ಕಾರ್ಯನಿರ್ವಹಿಸುತಿದ್ದಾರೆ. ಯೋಜನಾ ಆಯೋಗದ ಸ್ಥಾಪನೆಯಾದಾಗ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರುರವರು ಮೊಟ್ಟ ಮೊದಲ ಅದ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದಾರೆ.
ಉಪಾಧ್ಯಕ್ಷರು
ಬದಲಾಯಿಸಿಆಯೋಗದ ಉಪಾಧ್ಯಕ್ಷರು ಆಯೋಗದ ಕಾರ್ಯನಿರ್ವಹಣೆ ಮಾಡುವ ಪೂರ್ಣಾವಧಿಯ ಮುಖ್ಯಸ್ಥರಾಗಿದ್ದಾರೆ ಇದು ಕ್ಯಾಬಿನೆಟ್ ದರ್ಜೆ ಹುದ್ದೆಯಾಗಿದ್ದು, ಕ್ಯಾಬಿನೆಟ್ ದರ್ಜೆ ಸಚಿವರು ಪಡೆಯುವ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಾರೆ.ಇವರು ಕ್ಯಾಬಿನೆಟ್ ಸಭೆಗಳಿಗೆ ಭಾಗವಹಿಸಬಹುದು ಆದರೆ ಮತ ಹಾಕುವ ಹಕ್ಕು ಹೊಂದಿರುವುದಿಲ್ಲ. ಯೋಜನ ಆಯೋಗದ ಉಪಾಧ್ಯಕ್ಷರು ಪಂಚವಾರ್ಷಿಕ ಯೋಜನೆಯ ಕರಡು ಪ್ರತಿಯನ್ನು ತಯಾರಿಸಿ ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸುತ್ತಾರೆ, ಭಾರತದ ಯೋಜನಾ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಗುಲ್ಜಾರಿಲಾಲ್ ನಂದಾರವರು ಕಾರ್ಯ ನಿರ್ವಹಿಸಿದರೆ ಯೋಜನಾ ಆಯೋಗದ ಕೊನೆಯ ಉಪಾಧ್ಯಕ್ಷರಾಗಿ ಮಾಂಟೆಂಗ್ ಸಿಂಗ್ ಅಹ್ಲುವಾಲಿಯಾ ಕಾರ್ಯ ನಿರ್ವಹಿಸಿದ್ದರು.