ಹರ್ಬರ್ಟ್ ಸಿ ಬ್ರೌನ್

ಬದಲಾಯಿಸಿ

ಹರ್ಬರ್ಟ್ ಸಿ ಬ್ರೌನ್ (ಮೇ ೨೨, ೧೯೧೨ - ಡಿಸೆಂಬರ್ ೧೯, ೨೦೦೪) ಅವರು ಇಂಗ್ಲೆ೦ಡಿನಲ್ಲಿ ಹುಟ್ಟಿದ್ದ ಅಮೇರಿಕದ ರಸಾಯನಶಾಸ್ತ್ರಜ್ಞರು ಹಾಗೂ ೧೯೭೯ರಲ್ಲಿ ಆರ್ಗ್ಯಾನೊಬೋರೇನ್(orɡanoborane)ಗಳ ಬಗ್ಗೆಯ ಅವರ ಸಂಶೋಧನೆಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ್ದಿದ್ದಾರೆ.

ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನ

ಬದಲಾಯಿಸಿ

ಬ್ರೌನ್ ಅವರ ಹುಟ್ಟಿನ ಹೆಸರು ಹರ್ಬರ್ಟ್ ಬ್ರೊವಾರ್ನಿಕ್ ಎಂದು. ಅವರ ತಂದೆ ಚಾರ್ಲ್ಸ್ ಹಾಗೂ ತಾಯಿ ಪರ್ಲ್ ಯೂಕ್ರೇನ್ ದೇಶದ ಝಿಟೋಮಿರ್ ಪ್ರಾಂತ್ಯದ ಯಹೂದಿಯರು. ಅವರು ಲಂಡನ್ನಿಗೆ ವಲಸೆ ಬಂದಿದ್ದವರು. ತಂದೆ ಚಾರ್ಲ್ಸ್ ಹಾರ್ಡ್ವೇರ್ ಅ೦ಗಡಿ ಹಾಗೂ ಬಡಗಿ. ೧೯೧೪ರಲ್ಲಿ ಅವರು ಕುಟು೦ಬಸಮೇತರಾಗಿ ಶಿಕಾಗೊ ನಗರಕ್ಕೆ ಸ್ಥಳಾ೦ತರವಾದರು