ಸದಸ್ಯ:T.shilpa kalkur/ನನ್ನ ಪ್ರಯೋಗಪುಟ
ಲಂಬಾಡಿ
ಲಂಬಾಡಿಯು ಆಂಧ್ರಪ್ರದೇಷದ ಜನಪದ ನ್ರಥ್ಯ ಪ್ರಕಾರಗಳ ಶೈಲೀಯಲ್ಲಿ ಒಂದು. ಈ ನ್ರಥ್ಯವನ್ನು ಸಮನ್ಯವಾಗಿ ದೀಪಾವಳಿಯ ದಿನದಂದು ಪ್ರದರ್ಶಿಸುತ್ತಾರೆ. ದೀಪಾವಳಿಯು ಬರೀ ಬಾಣ ಬಿರುಸುಗಳ ಸದ್ದಲ್ಲ. ಅದರಾಚೆಯೂ ಸಾಂಪ್ರದಾಯಿಕವಾದ ವಿಶಿಷ್ಟಾ ಆಚರಣೆ. ಅದರಲ್ಲೂ ಲಂಬಾಣೀ ಸಮೂದಾಯದವರು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇನ್ನು ದೀಪಾವಳಿಯೂ ಲಂಬಾಣಿ ಯುವತಿಯರ ಹಬ್ಬವೆಂದು ಕರೆಯುತ್ತಾರೆ.
ಬೆಟ್ಟ-ಗುಡ್ಡದಲ್ಲಿ ವಿವಿಧ ಬಗೆಯ ಹೂಗಳನ್ನು ಸಂಗ್ರಹಿಸುತ್ತಿರೋ ಯುವತಿಯರು ಮನೆ ಮನೆಗೆ ತೆರಳಿ ಸೆಗಣಿ ಮೇಲೆ ಹೂಗಳಿಂದ ಅಲಂಕಾರ.ಬಳಿಕ ಸಾಂಪ್ರದಾಯಿಕ ಬಟ್ಟೆ ಧರಿಸಿ ವಾದ್ಯ ಗೋಷ್ಥಿಗೆ ಹೆಜ್ಜೆ ಹಾಕ್ತಿರೋ ಹೆಂಗೆಳೆಯರು. ಈ ಸಾಂಪ್ರದಯಿಕ ವಿಶಿಷ್ಟಾ ಆಚರಣೆ ಕಂಡು ಬಂದಿದ್ದು, ಗಡಿನಾಡು ಯಾದಗಿರಿ ತಾಲುಕಿನ ಆಶನಾಳ ತಂಡ ಸೇರಿದಂತೆ ಜೆಲ್ಲೆಯ ವಿವಿಧೆಡೆ ಬೆಳಕಿನ ಹಬ್ಬ ದೀಪಾವಳಿಯು ಲಂಬಾಣಿಗರಿಗೆ ವಿಶೇಷ ಹಾಗು ಸಂಭ್ರಮದ ಹಬ್ಬ. ಆಧುನಿಕ ಭರಾಟೆಯಲ್ಲಿ ಜನಪದ ಸೊಗಡಿನ ಅನೇಕ ನೃತ್ಯ ಪ್ರಕಾರಗಳು ಕಲೆಗಳು ಮರೆಯಾಗುತ್ತಿದೆ. ಆದರೆ ಲಂಬಾಣಿ ಸಮುದಾಯದವರು ಇಂದಿಗೂ ತಮ್ಮ ಸಾಂಪ್ರದಾಯದ ನೃತ್ಯ ಉಳಿಸಿಕೊಂಡು ಬರುತ್ತಿರುವುದು ವಿಶೇಷ.
ದೀಪಾವಳಿಯ ಮರುದಿನದಿಂದ ಹಬ್ಬ
ಬದಲಾಯಿಸಿದೀಪಾವಳಿಯ ಮರು ದಿನದಂದು ಯುವತಿಯರು ಬೆಳಿಗ್ಗೆಯೆ ಕಾಡು ಜಾತಿಯ ವಿವಿಧ ಹೂಗಳನ್ನು ತಂದು ಪರಸ್ಪರ ನೀಡಿ ಶುಭಾಶಯ ಕೋರುತ್ತಾರೆ.
ದೇವಸ್ಥಾನದ ಬಳಿ
ಬದಲಾಯಿಸಿಇದಾದ ಬಳಿಕ ತಾಂಡಾದ ದೇವಸ್ಥಾನದ ಬಳಿ ತೆರಳುವುದು. ಬಣ್ಣ-ಬಣ್ಣದ ಉಡುಗೆ ತೊಡುಗೆಯ ಯುವತಿಯರು ತಮಟೆ ತಾಳಕ್ಕೆ ಅನುಗುಣವಾಗಿ ನೃತ್ಯ ಮಾಡುವುದು ನೋಡುಗರಲ್ಲಿ ಸಂಭ್ರಮ ಉಂಟಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಯುವತಿಯರು ನೃತ್ಯ ಮಾಡುವುದು ನೋಡುಗರಲ್ಲಿ ಸಂಭ್ರಮ ಉಂಟಾಗುತ್ತದೆ. ಬೆಳ್ಳಗೆಯಿಂದ ಸಂಜೆಯವರೆಗೆ ಯುವತಿಯರು ನೃತ್ಯ ಮಾಡಿ ಸಂತಸ ಪಡುತ್ತಾರೆ.
ಮನೆಗಳಿಗೆ ತೆರಳಿ ದೀಪ ಹಚುತ್ತಾರೆ
ಬದಲಾಯಿಸಿದೀಪಾವಳಿ ಆರಂಭಕ್ಕೂ ೧೫ ದಿನಗಳ ಮುಂಚೆಯೇ ದಿನಾಲು ಸಂಜೆ ಲಂಬಾಣಿ ಯುವತಿಯರು ದೇವಸ್ಥನದ ಬಳಿ ನೃತ್ಯ ಮಾಡುತ್ತಾರೆ. ಬೆಳಕಿನ ಹಬ್ಬ ದೀಪಾವಳಿಯ ದಿನ ತಾಂಡಾದ ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ.
ಲಂಬಾಣಿಗಳ ವಿಶೇಷ ಹಬ್ಬ
ಬದಲಾಯಿಸಿಮರುದಿನದಂದು ಬೆಳಿಗ್ಗೆಯಿಂದ ಸಂಜೆಯವರಗೆ ತಮಟೆನಾದಕ್ಕೆ ತಕ್ಕಂತೆ ಲಂಬಾಣಿ ಶೈಲಿಯ ನೃತ್ಯ ಮಾಡಿ ಹಬ್ಬ ಆಚರಿಸುತ್ತಾರೆ.[೧]