ನನ್ನ   ಸಂಸಾರ



ನನ್ನ ನೆನಪಿನ ದೋಣಿ

ಬದಲಾಯಿಸಿ

ಮನುಷ್ಯ ಜನುಮ ಇಡೀ ಭೂಮಂಡಲದಲ್ಲೀಯೇ ಅತಿ ಶ್ರೇಷ್ಠ ವಾದದ್ದು. ಮನುಷ್ಯ ಎಷ್ಟೇ ವಿನಮ್ರ, ದಯೆ,ಕಾಳಜಿಯುಳ್ಳವ, ಧೈರ್ಯಶಾಲಿ,ಗೌರವಾನ್ವಿತ,ಪ್ರೀತಿಪಾತ್ರನಾಗಿದ್ದರೂ,ಅವರ ಅವರ ಬಗ್ಗೆಹೇಳಿಕೊಳ್ಳುವುದು ಅಷ್ಟೊಂದ್ದು ಸರಾಗವಲ್ಲ. ನಾನೂ ಇದಕ್ಕೆ ಹೊರತಲ್ಲ. ಆದರೂ ನನ್ನ ಬಗ್ಗೆ ಕೆಲವೊಂದು ವಿಚಾರಗಳನ್ನು ವ್ಯಕ್ತ ಪಡಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ಪ್ರಾಮಾಣಿಕತೆ, ಸಮರ್ಪಣೆ,  ವಿನಮ್ರತೆ ಇವೆಲ್ಲಾ ಬಾಲ್ಯದ ಜೀವನದಲ್ಲಿ ಕುಟುಂಬ, ಸ್ನೇಹಿತರು ಮತ್ತು ಶಾಲೆಯಲ್ಲಿ ಕಲಿಯುವ ಸದ್ಗುಣಗಳು. ನನ್ನ ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನ, ಶಿಕ್ಷಣ ನನ್ನ ಬಾಳಿಗೆ ಯಾವತ್ತೂ ಸ್ಪೂರ್ತಿ. ನನ್ನ ಹೆಸರು ಸುವಿನ್ ತಾರಿಕ. ನಾನು ಕ್ರೈಸ್ಟ್ ಕಾಲೇಜಿನ ಮೊದಲನೇ ಬಿಕಾಂ ವಿಧ್ಯಾರ್ಥಿನಿ. ಕರ್ನಾಟಕದ ಪುಟ್ಟ ಸುಂದರ ಜಿಲ್ಲೆ ಕೊಡಗಿನ ವಿರಾಜಪೇಟೆ ನನ್ನ ಹುಟ್ಟು ಸ್ಥಳ.

ನನ್ನ   ಸಂಸಾರ

ಬದಲಾಯಿಸಿ

ನನ್ನ ತಂದೆಯ ಹೆಸರು ಸುರೇಶ್. ವೃತಿಯಲ್ಲಿ ಕೃಷಿಕರು. ನಮ್ಮದೇ ಆದ ಕಾಫಿ ತೋಟ ಭತ್ತದ ಗದ್ಧೆಗಳ ಕೆಲಸ ಕಾರ್ಯಗಳಲ್ಲಿ ಹಾಗೂ ಇದರ ಉಸ್ತುವಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತಾರೆ.ನನ್ನ ತಾಯಿಯ ಹೆಸರು ಸುಜಾತ ತಂಗಮ್ಮ. ಇವರು ಕೊಡಗಿನ ಗೋಣಿಕೊಪ್ಪಲುವಿನ ಕಾಲ್ಸ್ ಪ್ರೌಡಶಾಲೆಯಲ್ಲಿ ಇತಿಹಾಸ ಮತ್ತು ಆಂಗ್ಲ ಭಾಷಾ ಶಿಕ್ಷಕಿಯಾಗಿದ್ದಾರೆ. ಇವರು ಇತಿಹಾಸ ಮತ್ತು ಅಂಗ್ಲಭಾಷೆ ಎರಡರಲ್ಲೂ ಸ್ನಾತಕೋತರ ಪದವೀಧರೆ. ನನ್ನ ಮನೆಯಲ್ಲಿ ನಾನೆ ಕಿರಿಯವಳು. ನನಗೆ ಇಬ್ಬರು ಅಕ್ಕಂದಿರು. ಇವರಿಬ್ಬರೂ ತಮ್ಮ ತಮ್ಮ ವಿಧ್ಯಾಭ್ಯಾಸ ಪೂರ್ಣ ಗೊಳಿಸಿ ತಮ್ಮ ಅಭಿರುಚಿಗೆ ಅನುಸಾರವಾದ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನನ್ನ ವಿಧ್ಯಾಬ್ಯಾಸ

ಬದಲಾಯಿಸಿ

ನಾನು ಕೊಡಗಿನ ಗೋಣಿಕೊಪ್ಪಲುವಿನ ಬ್ಯಾಂಬಿನೋ ಮೊಂಟೆಸ್ಸೋರಿ ಶಾಲೆಯಲ್ಲಿ ನನ್ನ ಶಾಲಾಪೂರ್ವದ ಶಿಕ್ಷಣವನ್ನು ಪೂರೈಸಿದೆ. ನನ್ನ ಪ್ರಾಥಮಿಕ ಪ್ರೌಢ ಮತ್ತು ಪದವೀ ಪೂರ್ವ ಶಿಕ್ಷಣವೆಲ್ಲಾ ಕೊಡಗಿನ ಗೋಣಿಕೊಪ್ಪಲಿನ ಪ್ರತಿಷ್ಟಿತ ಕರಂಬಯ್ಯ'ಸ್ ಅಕಾಡಮಿ ಓಫ್ ಲರ್ನಿಂಗ್ ಏಂಡ್ ಸ್ಪೋರ್ಟ್ಸ್ (ಕಾಲ್ಸ್) ಶಾಲೆಯಲ್ಲಿ ನಡೆಯಿತು. ನಾನು ಓಧಿನಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ನನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತಿದ್ದೆ.  ನಾನು ನನ್ನ ಶಿಶುವಿಹಾರದ ವಿಧ್ಯಾಭ್ಯಾಸದಿಂದ  ಪಧವೀ ಪೂರ್ವ ಶಿಕ್ಷಣದವರೆಗೂ ಇದೇ ಶಾಲೆಯಲ್ಲಿ ಓದಿದ್ದರಿಂದ ನನಗೆ ಈ ಶಾಲೆಯ ಮೇಲೆ ಮತ್ತು ಇಲ್ಲಿಯ ಅಧ್ಯಾಪಕ ವೃಂಧದವರ ಮೇಲೆ ಅಪಾರ ಅಭಿಮಾನ ಗೌರವ ಮತ್ತು ಹೆಮ್ಮೆ. ಈ ಶಾಲೆ ನನಗೆ ಎರಡನೇ ಮನೆಯ ತರಹ ಇತ್ತು. ಕಳೆದ ವರ್ಷ ನಾನು ಈ ಶಾಲೆಯ ಪ್ರಧಾನ ನಾಯಕಿಯೂ ಆಗಿದ್ಧೆ. ನನ್ನ ಅಧ್ಯಾಪಕ ವೃಂದದವರಿಗೆ ಅಚ್ಚು ಮೆಚ್ಚಿನ ಹಾಗೂ ಆದರ್ಶ  ವಿಧ್ಯಾರ್ಥಿನಿ ಆಗಿದ್ಧೆ. ಸಹಪಾಠಿಗಳಿಗೆ ಉತ್ತಮ  ಒಡನಾಡಿಯೂ ಆಗಿದ್ದೆ. ಅರ್ಥಶಾಸ್ತ್ರ ಮತ್ತು ವ್ಯಾಪಾರ ಅಧ್ಯಯನ ನನ್ನ ಇಷ್ಟವಾಧ ವಿಷಯಗಳು. ಇವುಗಳಲ್ಲಿ ನಾನು ಯಾವಾಗಲು ಉತ್ತಮ ಅಂಕಗಳನ್ನು ಗಳಿಸುತಿದ್ದೆ. ಮನೆಯಲ್ಲೂ, ನಾನು ಕಿರಿಯವಳಾದ್ಧರಿಂದ ಎಲ್ಲರಿಗು ಪ್ರೀತಿ ಪಾತ್ರಳು. ನಮ್ಮ ಮನೆಯಲ್ಲಿ ಎಲ್ಲರೂ ತಮ್ಮ ತಮ್ಮ ಆಚಾರ - ವಿಚಾರ ನಡೆ -ನುಡಿ ಕೆಲಸ - ಕಾರ್ಯಗಳಿಗೆ ಅತೀವ ಪ್ರಾಮುಖ್ಯತೆ ಕೊಡುವವರು. ಹಿರಿಯರಾಗಲೀ ಕಿರಿಯರಾಗಲೀ ಪ್ರತಿಯೊಬ್ಬರನ್ನೂ ಗೌರವ ಆಧಾರದಿಂದ ಕಂಡು ಅವರದೇ ಆಧ ಪ್ರಾಮುಖ್ಯತೆಯಿಂಧ ಆಧರಿಸುವರು. ಹೀಗೆ ನಾನು ಬೆಳೆದ ವಾತಾವರಣ ನಲ್ಮೆ ಪ್ರೀತಿ ಗೌರವಾಧರ ತುಂಬಿದ ಶಿಸ್ತಿನ ವಾತಾವರಣ. ಕುಟುಂಬದ ಪ್ರತಿಯೊಬ್ಬರನ್ನೂ ಸಮಾನತೆ ಪ್ರೀತಿ ಗೌರವದಿಂದ ಕಾಣುತ್ತಾ ಸಹಬಾಳ್ವೆ ನಡೆಸುವುದೇ ನಮ್ಮೆಲ್ಲರ ಗುರಿ.

 
ಕಾಲ್ಸ್ ಶಾಲೆ

ನನ್ನ ಜನ್ಮಸ್ಥಳ

ಬದಲಾಯಿಸಿ

ಇನ್ನು ನಾನು ಹುಟ್ಟಿ ಬೆಳೆದ ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ ತೊರೆ ಝರಿ ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಕಾವೇರಿ ಇಲ್ಲಿಯ ಜೀವನದಿ.  ಇದೊಂದು ಪ್ರಕೃತಿಯ ಸುಂದರ ತಾಣ. ಕೊಡವರು ಇಲ್ಲಿಯ ಮುಖ್ಯ ಜನರು. ನಾನೂ ಕೊಡವ ಸಮುಧಾಯಕ್ಕೆ ಸೇರಿದವಳು. 'ಕೊಡವ ತಕ್ಕ್ ' ನಮ್ಮ ಪ್ರಮುಖ ಭಾಷೆ. ಈ ಭಾಷೆಗೆ ಲಿಪಿಯಿಲ್ಲ. ಜನ್ಮತ ಕ್ಷತ್ರಿಯರಾದ ನಾವು ಇತರ ಹಿಂದೂಗಳಂತೆ ವೈಧಿಕ ಧರ್ಮವನ್ನಾಚರಿಸದೆ ಪ್ರಕೃತಿಯನ್ನೂ ನಮ್ಮ ಪೂರ್ವಜರನ್ನೂ ಪೂಜಿಸುವವರು. ಹುತ್ತರಿ ಕಾವೇರಿ ಸಂಕ್ರಮಣ ಮತ್ತು ಕೈಲ್ ಮುಹೂರ್ತ ನಮ್ಮ ಪ್ರಮುಖ ಹಬ್ಬಗಳು. ಎಲ್ಲಾ ಕುಟುಂಬಸ್ಥರು ಒಟ್ಟಾಗಿ ಈ ಹಬ್ಬಗಳನ್ನು ಆಚರಿಸುವೆವು.

ನನ್ನ ರಾಜ್ಯ

ಬದಲಾಯಿಸಿ

ನನ್ನ ರಾಜ್ಯ ಕರ್ನಾಟಕ, ದೇಶದ ಆರನೇ ದೊಡ್ಡ ರಾಜ್ಯ. ಕರ್ನಾಟಕದ ರಾಜಧಾನಿ ಬೆಂಗಳೂರು.ಇಲ್ಲಿಯ ಭಾಷೆ ಕನ್ನಡ, ನಾಡ ಹಬ್ಬ ದಸರಾ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ.ನಾನು ನನ್ನ ಬಿಡುವಿನ ವೇಳೆಯಲ್ಲಿ ಹಾಡುಗಳನ್ನು ಕೇಳುತ್ತೇನೆ. ಮನೆಯಲ್ಲಿಯೇ ಹೊಸ ಹೊಸ ಸಿನಿಮಾಗಳನ್ನು ನೋಡುತ್ತೇನೆ. ಹೊಸ ಹಾಡಿಗೆ ನೃತ್ಯ ಅಭ್ಯಾಸ ಮಾಡುತ್ತೇನೆ. ಅಕ್ಕಂದಿರ ಜೊತೆ ಮಾತನಾಡುತ್ತಾ ಅವರ ಕೆಲಸದಲ್ಲಿ ಕೈ ಜೋಡಿಸುತ್ತೇನೆ. ಇವೆಲ್ಲಾ ನನಗೆ ಇಷ್ಟವಾದ ಹವ್ಯಾಸ. ನಾನು ನನ್ನ ಭವಿಷ್ಯದ ಬಗ್ಗೆ ನನ್ನದೇ ಆದ ಕೆಲವು ಕನಸು ಮತ್ತು ಗುರಿಗಳನ್ನು ಇಟ್ಟುಕೊಂಡಿದ್ದೇನೆ. ಈ ಗುರಿ ತಲುಪಲು ಸತತ ಪ್ರಯತ್ನ ಮಾಡುತಲೇ ಇದ್ದೇನೆ. ಗುರು ಹಿರಿಯರ ಆಶೀರ್ವಾದ ಮತ್ತು ಮಾರ್ಗಧರ್ಶನದೊಂದಿಗೆ ಸಾಗುತ್ತಾ ದೈವಾನುಗ್ರಹದ ಮೇಲೆ ಅಪಾರ ನಂಬಿಗೆ ಇರಿಸಿ ಮುಂದೆ ಸಾಗುತಿದ್ದೇನೆ. ಓರ್ವ ಆದರ್ಶ ಪ್ರಜೆಯಾಗಿ ಬಾಳಬೇಕೆಂಬುದೇ ನನ್ನ ಆಸೆ.