ಸದಸ್ಯ:Supritha Barkur/ನನ್ನ ಪ್ರಯೋಗಪುಟ4
ಕತ್ತಲೆ ಬಸದಿ
ಕತ್ತಲೆ ಬಸದಿ ಬಾರ್ಕೂರಿನಲ್ಲಿ ಕಂಡುಬರುತ್ತದೆ.ಇದು ಉಡುಪಿಯಿಂದನಿ ನೀರಾವ್ ೧೬ಕಿ.ಮೀ ದೂರದಲ್ಲಿದೆ. ಪ್ರವೇಶ ದ್ವಾರದಲ್ಲಿ ೨೦ ಅಡಿ ಎತ್ತರದ ಏಕಶಿಲೆಯ ಕಂಬವನ್ನು ನಿರ್ಮಿಸಲಾಗಿದೆ.ಇಪ್ಪತ್ನಾಲ್ಕು ಜೈನ ತೀರ್ಥಂಕರರ ವಿಗ್ರಹಗಳ ಅಸ್ತಿತ್ವಕ್ಕೆ ಕಲ್ಲಿನಲ್ಲಿರುವ ಇಪ್ಪತ್ನಾಲ್ಕು ದಂತಗಳು ಮಾತ್ರ ಸಾಕ್ಶಿಯಾಗಿದೆ.ದೊಡ್ಡ ಪ್ರಾಂಗಣದಲ್ಲಿ ಮೂರು ಮುಖ್ಯ ರಚನೆಗಳಿವೆ,ಪ್ರವೇಶದ್ವಾರದಲ್ಲಿ ವಿಜಯಸ್ತಂಭವಿದೆ.ಪುರಾತತ್ತ್ವ ಶಾಸ್ತ್ರಜ್ಞರು ಅವುಗಳನ್ನು ಕ್ರಿ.ಶ ೮ ಮತ್ತು ೧೨ ನೇ ಶತಮಾನದ ನಡುವೆ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ.ಅಲುಪ ದೊರೆಗಳು ನಿರ್ಮಿಸಿದ ಜೈನ ಬಸದಿ ದ್ರಾವಿಡ ಶೈಲಿಯಲ್ಲಿದೆ.ಗರ್ಭಗುಡಿಯು ಕಲ್ಲಿನ ಗೋಡೆಗಳಿಂದ ಸುತ್ತುವರೆದಿದೆ,ಇದನ್ನು ಪ್ರಾಂಗನ ಎಂದು ಕರೆಯುತ್ತಾರೆ.ಅದರ ಮೇಲೆ ಇಳಿಜಾರಿನ ಕಲ್ಲಿನ ಕಂಬಗಳಿವೆ.ಕತ್ತಲೆ ಬಸದಿಯು ಪ್ರತ್ಯೇಕ ದೇವಾಲಯಗಳೊಂದಿಗೆ ನಾಗಕಾಳಿ,ಶಿವ,ವಿಷ್ಣು ಮತ್ತು ಜೈನ ದೇವತೆಗಳೊಂದಿಗೆ ನವರಂಗವನ್ನು ಒಳಗೊಂಡಿದೆ.