ಅಂತರರಾಷ್ಟ್ರೀಯ ವ್ಯಾಪಾರ

ಬದಲಾಯಿಸಿ

ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರ. ಇಧನ್ನು ವಿದೇಶಿ ವ್ಯಾಪಾರವೆಂದು ಕರೆಯುತ್ತಾರೆ. ಅಂತರರಾಷ್ಟ್ರೀಯ ಅಥವಾ ವಿದೇಶಿ ವ್ಯಾಪಾರವೆಂದರೆ ಅಗತ್ಯವಾದ ವಸ್ತುಗಳನ್ನು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದು ಅಥವಾ ನಮ್ಮಲ್ಲಿರುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ರಫ್ತುಮಾಡುವುದು. ಅಂದರೆ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದೊಂದಿಗೆ ವಸ್ತುಗಳನ್ನು ಕೊಳ್ಳುವ ಹಾಗೂ ಮಾರಾಟ ಮಾರಾಟ ಒಂದು ವ್ಯವಹಾಅರವೇ ಅಂತರರಾಷ್ಟ್ರೀಯ ವ್ಯಾಪಾರ. ಈ ಬಗೆಯ ವ್ಯಾಪಾರದಲ್ಲಿ ಹಾಗೂ ಸೇವೆಗಳ ವಿನಿಮಯವು ವಿಶ್ವದ ಎರಡು ಅಥವಾ ಹೆಚ್ಚು ರಾಷ್ಟ್ರಗಳೊಂದಿಗೆ ನಡೆಯುತ್ತದೆ. ಉದಾ : ಜಪಾನ್ ಹಾಗೂ ಅಮೆರಿಕಾ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವು ಅಂತರರಾಷ್ಟ್ರೀಯ ವ್ಯಾಪಾರವಾಗುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಜೀವನ ಸೌಲಭ್ಯಗಳಿಗೆ ಬೇಕಾದ ಹಲವಾರು ಬಗೆಯ ಪದಾರ್ಥಗಳನ್ನು ಒಂದಲ್ಲ ಒಂದು ಬಗೆಯಲ್ಲಿ ಪೂರೈಸುತ್ತಿರುವುದನ್ನು ನಾವು ಕಾಣಬಹುದು. ಇದೇ ರೀತಿ ನಮ್ಮ ದೇಶವೂ ಈ ರಾಷ್ಟ್ರಗಳಿಗೆ ಎಣ್ಣೆಕಾಳುಗಳು, ಮ್ಯಾಂಗ್ನೀಸ್, ಕಬ್ಬಿಣದ ಅದಿರು, ಸೆಣಬಿನ ವಸ್ತುಗಳು ಇತ್ಯಾದಿ ರಫ್ತುಮಾಡುತ್ತದೆ. ಈ ರೀತಿ ಬೇರೆ ಬೇರೆ ರಾಷ್ಟ್ರಗಳು ಸರಕುಗಳನ್ನು ವಿನಿಮಯ ಮಾಡಿಕೊಳ್ಳುವ ಕಾರ್ಯವನ್ನು ಅಂತರರಾಷ್ಟ್ರಿಯ ಅಥವಾ ವಿದೇಶಿ ವ್ಯಾಪಾರ ಎನ್ನುತ್ತೇವೆ. ಅಂತರರಾಷ್ಟ್ರೀಯ ವ್ಯಾಪಾರವು ಭೌಗೋಲಿಕ ಶ್ರಮವಿಭಜನೆಯಿಂದ ಉಂಟಾಗುತ್ತದೆ.

 
800px-ActiveBlocs 2008

ಅಂತರರಾಷ್ಟ್ರೀಯ ವ್ಯಾಪಾರದ ಅವಶ್ಯಕತೆ

ಬದಲಾಯಿಸಿ

ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದ ಆರ್ಥಿಕೋನ್ನತಿಯ ಒಂದು ಮುಖ್ಯ ಸಾಧನವಾಗಿದೆ. ಜೊತೆಗೆ ನವನಾಗರಿಕತೆಯ ಮುಖ್ಯತಳಹದಿಯ ಸೋಪಾನವೂ ಆಗಿದೆ. ಈ ಬಗೆಯ ವ್ಯಾಪಾರ ಹೊಸದೇನೂ ಅಲ್ಲ. ಪುರಾತನ ಕಾಲದಿಂದಲೂ ವಿವಿಧ ರಾಷ್ಟ್ರಗಳ ನಡುವಣ ವ್ಯಾಪಾರ ಸಂಬಂಧಗಳ ಬೆಳೆದುಕೊಂಡ ಬಂದಿರುವುದನ್ನು ಇತಿಹಾಸದಿಂದ ತಿಳಿಯಬಹುದು. ಆದಾಗ್ಯೂ ಕೈಗಾರಿಕಾ ಕ್ರಾಂತಿಯ ಕಾಲದಿಂದ ಅಂತರರಾಷ್ಟ್ರೀಯ ವ್ಯಾಪಾರದ ಬೆಳವಣಿಗೆಯು ತೀವ್ರಗೊಂಡಿತು ಎನ್ನಬಹುದು. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆಯುವ ಮುನ್ನ ಅದು ಇತರ ರಾಷ್ಟ್ರಗಳೊಡನೆ ನಡೆಸುತ್ತಿದ್ದ ವ್ಯಾಪಾರವೆಲ್ಲವನ್ನೂ ಅಂತರರಾಷ್ಟ್ರೀಯ ವ್ಯಾಪಾರವೆಂದೇ ಪರಿಗಣಿಸಲ್ಪಟ್ಟತ್ತು. ಇತ್ತೀಚೆಗೆ ಈ ಬಗೆಯ ವ್ಯಾಪಾರವು ಹೆಚ್ಚು ವೈವಿಧ್ಯಮಯವಾಗಿ ಬೆಳೆಯುತ್ತಿರುವುದಲ್ಲದೆ ಅದರ ಪ್ರಮಾಣವೂ ಹೆಚ್ಚುತ್ತಿದೆ. ದಿನೇ ದಿನೇ ಅದರೈ ಪ್ರಾಮುಖ್ಯತೆಯು ಏರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕಾಭಿವೃದ್ಧಿಯನ್ನು ಶೀಘ್ರವೇಗದಲ್ಲಿ ಪಡೆಯಲು ಹಾತೊರೆಯುತ್ತಿರುವುದು ಹಾಗೂ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ರಾಷ್ಟ್ರೀಯ ಉತ್ಪನ್ನ ಉನ್ನತಮಟ್ಟವನ್ನು ತಲುಸಿರುವುದು. ಅಂತರರಾಷ್ಟ್ರೀಯ ವ್ಯಾಪಾರದ ನಾಗಾ ಲೋಟದ ಬೆಳವಣಿಗೆಗೆ ತಕ್ಕಂತೆ ಇತ್ತೀಚೆಗೆ ರಾಷ್ಟ್ರಗಳ ರೀತಿನೀತಿಗಳಲ್ಲಿ ಮತ್ತು ವ್ಯವಸ್ಥಿತ ಕ್ರಮಗಳಲ್ಲಿ ಬದಲಾವಣೆಗಳಾಗುತ್ತದೆ.

 
Chile Imports and Exports-de

ಅಂತರಾಷ್ಟ್ರೀಯ ವ್ಯಪಾರದ ಬೆಳವನಣಿಗೆಗೆ ಸಾರಿಗೆ ಸಂಪರ್ಕಗಳು ಅಭಿವ್ವ್ರದ್ದಿಯು ಬಹಳಮಟ್ಟಿಗೆ ಸಹಾಯಕವಾಗಿದೆ ಎನ್ನಬಹುದು. ಎದರಿಂದಾಗಿ ಇಂದು ಜಗತ್ತು ಬಹಲ ಕಿರಿದಾಗಿ ಕಾಣಿಸುತ್ತಿದೆ ಅಂತರಾಷ್ಟ್ರೀಯ ವ್ಯಪಾರದಿಂದಾಗಿ ಭೌಗೂಳಿಕವಾಗಿ ದೂರವಾಗಿದ್ದ ರಾಷ್ಟ್ರಗಳು ಪರಸ್ವರ ಹತ್ತಿರವಾಗುತ್ತಿತ್ತಿವೆ . ಆಮದು ಹಾಗು ರಫ್ತು ವ್ಯಪಾರಿಗಳು ಇಂದು ವಿದೀಶಿ ವಿನಿಮಯ ಬ್ಯಾಂಕುಗಳ ನೆರವಿನಿಂದ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಅತೀ ಸುಲಭವಾಗಿ ನದೆಸಿಕೊಲ್ಲಬಹುದುದಾಗಿದೆ. ಈ ಬಗೆಯ ವ್ಯಪಾರದಲ್ಲಿ ನಷ್ಟ ಉಂಟಾದಲ್ಲಿ ಅದನು ನಿವಾರಿಸಲು ವಿಮಾ ಕಂಪನಿ ಕಂಪನಿಗಳಿರುವುದರಿಂದ ವ್ಯಪಾರಿಗಲುಗಳಿಗೆ ವಷ್ಟ ಭರಿಸುವ ಭಯವು ಇಲ್ಲ . ಅಲ್ಲದೆ ಈ ಬಗೆಯ ವ್ಯಾಪಾರದಲ್ಲಿ ದುರ್ವ್ಯವಹಾರಗಲು ನಡೆಸಲು ಆಸ್ಫ್ದದವಿರದೆ ಸರಿಯಾದ ತೂಕ,ಅಲತೆಗಲಿರುವುದರಿಂದ ಪರಸ್ವರ ವಿಶ್ವಾರ ,ಸೌಹಾರ್ದತೆಗಳು ಏರ್ಪಡಲು ಸಹಾಯಕವಾಗಿದೆ. ಈ ಬಗೆಯಲ್ಲಿ ಇಂದು ಅಂತರಾಷ್ರ್ಟಿಯ ವ್ಯಾಪಾರದ ಮಹತ್ವವು ದಿನೇ ದಿನೇ ಹೆಚ್ಚುತ್ತಿದೆ.

ಇಂದು ಯಾವ ರಾಷ್ಟ್ರೀವೂ ಒಂಟಿಯಾಗಿ ತನ್ನ ಕಾಲ ಮೇಲೆ ತಾನು ನಿಂತು ಬಾಳಲು ಸಾಧ್ಯವಿಲ್ಲ. ಪ್ರತಿಯೊಂದು ರಾಷ್ಟ್ರವೂ ಒಂದಲ್ಲ ಒಂದು ಬಗೆಯಲ್ಲಿ ಬೇರೆ ರಾಷ್ಟ್ರಗಳನ್ನು ಅವಂಲಬಿಸಬೇಕಾಗುತ್ತದೆ. ಒಂದು ರಾಷ್ಟಕ್ಕೆ ಅತಿ ಅಗತ್ಯವಾಗಿ ಬೇಕಾಗಿರುವ ವಸ್ತುವು ಅಲ್ಲಿ ದೊರೆಯುದೆ ಬೇರೆ ರಾಷ್ಟ್ರದಲ್ಲಿ ದೊರೆಯುವಂತಿರಬಹುದು. ಅಗ ಆ ವಸ್ತುವಿಗಾಗಿ ಆ ರಾಷ್ಟ್ರವನ್ನು ಅವಲಂಬಿಸಲೇಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ನೈಸರ್ಗಿಕ ಸಂವತ್ತು ಎಲ್ಲಾ ರಾಷ್ಟ್ರಗಳಲ್ಲೊ ಒಂದೇ ಸಮನಾಗಿ ಹಂಚಲ್ಪಟ್ಟಲ್ಲ ಎನ್ನುವುದು. ಒಂದು ರಾಷ್ಟ್ರದಲ್ಲಿ ಕಾಣಬರುವ ನೈಸರ್ಗಿಕ ಸಂಪತ್ತು ಮತ್ತೊಂದು ರಾಷ್ಟ್ರದಲ್ಲಿ ಕಾನದಿರಬಹುದು. ಅಂದರೆ ಅಲ್ಲಿ ಬೇರೆ ಬಗೆಯ ನೈಸರ್ಗಿಕ ಸಂಪತ್ತಿರಬಹುದು. ಉದಾಹರಣೆಗೆ, ಇಂಗ್ಲೆಂಡಿನಲ್ಲಿ ಕಬ್ಬಿಣ, ಕಲ್ಲಿದ್ದಲು ಹೆಚ್ಚಾಗಿ ದೊರೆಯುತ್ತದೆ. ಭಾರತದಲ್ಲಿ ಟೀ, ಸೆಣಬು, ಎಣ್ಣೆ ಕಾಳುಗಳು, ಮ್ಯಾಂಗನೀಸ್ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಈ ಕಾರಣದಿಂದಾಗಿ ಪ್ರತಿಯೊಂದು ರಾಷ್ಟ್ರವೂ ಆಹಾರ ಪದಾರ್ಥಗಳಿಗಾಗಲಿ, ಕಚ್ಚಾ ಪದಾರ್ಥಗಳಿಗಾಗಲಿ, ಸಿದ್ಧ ವಸ್ತುಗಳಿಗಾಗಲಿ ಬೇರೆ ರಾಷ್ಟ್ರ ಅಥವಾ ರಾಷ್ಟ್ರಗಳ ಮೊರೆ ಹೋಗಬೇಕಾಗುತ್ತದೆ. ಪ್ರತಿಯೊಂದು ರಾಷ್ಟ್ರವೂ ತನ್ನಲ್ಲಿ ಹೆಚ್ಚಾಗಿ ದೊರೆಯುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ಮಾರಿ, ಅಲ್ಲಿಂದ ತನಗೆ ಬೇಕಾಗಿರುವ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತದೆ. ಈ ರೀತಿ ಅಂತರರಾಷ್ಟ್ರೀಯ ವ್ಯಾಪಾರವೂ ರಾಷ್ಟ್ರಗಳ ನಡುವೆ ಅನಿವಾರ್ಯವಾಗಿದೆ.

ಅಂತರರಾಷ್ಟ್ರೀಯ ವ್ಯಾಪಾರವು ಮತ್ತೊಂದು ರೀತಿಯಿಂದಲೂ ಅಗತ್ಯವಾಗಿದೆ. ಭೂ ಹಾಗೂ ನಾಯು ಗುಣಗಳ ವ್ಯತ್ಯಾಸದಿಂದ ಬೇರೆ ಬೇರೆ ರಾಷ್ಟ್ರಗಳ ಜನರ ಬುದ್ಧಿಶಕ್ತಿಯಲ್ಲಿ ತಾರತಮ್ಯವಿರುತ್ತದೆ. ಒಂದು ರಾಷ್ಟ್ರದ ಜನರು ವಿಜ್ಞಾನದಲ್ಲಿ ನಿಪುಣರಾಗಿದ್ದರೆ, ಮತ್ತೊಂದು ರಾಷ್ಟ್ರದ ಜನರು ವ್ಯಾಪಾರ ವ್ಯವಹಾರಗಳಲ್ಲಿ ಕುಶಲತೆಯನ್ನು ಪಡೆದಿರಬಹುದು. ಈ ಸಂದರ್ಭಗಳಲ್ಲಿ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಜನರ ಸೇವೆಯ ಉಪಯೋಗವನ್ನು ಪಡೆಯಬಹುದು. ಅಂತರರಾಷ್ಟ್ರೀಯ ವ್ಯಾಪಾರದಿಂದಾಗಿ ವಸ್ತುಗಳ ಉತ್ಪಾದನಾ ವೆಚ್ಚವು ತಗ್ಗುವುದಲ್ಲವೆ ಉತ್ತಮ ವಸ್ತುಗಳು ಕದಿಮೆ ಬೆಲೆಗೆ ದೊರೆಯುತ್ತವೆ. ಈ ಬಗೆಯ ವ್ಯಾಪಾರದಿಂದ ಜನರ ಜೀವನ ಮಟ್ಟವೂ ಸುಧಾರಿಸುತ್ತದೆ.

ಅಂತರರಾಷ್ಟ್ರೀಯ ವ್ಯಾಪಾರವು ವಿಶ್ವದಲ್ಲಿ ಶ್ರಮದ ಹಂಚಿಕೆ ಸಿದ್ಧಾಂತದ ಅನುಸರಣೆಯ ಮುನ್ನಡೆಯನ್ನು ಸೂಚಿಸುತ್ತದೆ. ಪ್ರತಿಯೊಂದು ರಾಷ್ಟ್ರವೂ ತನ್ನಲ್ಲಿ ಲಭ್ಯವಿರುವ ನೈಸರ್ಗಿಕ ಸಾಧನಗಳ ಶಕ್ತಿಯನ್ನು ಬಳಸಿಕೊಳ್ಳುವುದರ ಮೂಲಕ ಆರ್ಥಿಕ ಉತ್ಪನ್ನವನ್ನು ರೂಢಿಸಿಕೊಂಡು ಸರಕುಗಳ ಆಂತರಿಕ ಬೇಡಿಕೆಗಳನ್ನು ಪೂರೈಸಿಕೊಳ್ಳುವುದರೊಂದಿಗೆ ಬೇರೆ ರಾಷ್ಟ್ರಗಳ ಬೇಡಿಕೆಗಳನ್ನೂ ಈಡೇರಿಸುವಂತಾದಾಗ ಮಾತ್ರ ವಿವಿಧ ರಾಷ್ಟ್ರಗಳ ನಡುವೆ ವಿಶ್ವಾಸ, ಪರಸ್ಪರ ಅವಲಂಬನೆ,ಸೌಹಾರ್ದತೆಗಳು ಹೆಚ್ಚಲು ಸಾಧ್ಯ. ಅಲ್ಲದೆ ಇದರಿಂದ ಶ್ರಮ ಹಂಚಿಕೆಯ ಫಲವೂ ಇಡೀ ವಿಶ್ವಕ್ಕೆ ಲಭಿಸುವಂತಾಗುತ್ತದೆ. ಈ ಕಾರಣದಿಂದಾಗಿಯೇ ಅಂತರರಾಷ್ಟ್ರೀಯ ವ್ಯಾಪಾರವು ಇಂದು ಹೆಚ್ಚಿನ ಮಾನ್ಯತೆಯನ್ನು ಪಡೆದಿದೆ ಎನ್ನಬಹುದು. ಇದರಿಂದಾಗಿಯೇ ದಿನೇ ದಿನೇ ಅಂತರರಾಷ್ಟ್ರೀಯ ವ್ಯಾಪಾರದ ಅವಶ್ಯಕತೆ ಹೆಚ್ಚುತ್ತಿದೆ ಎನ್ನಬಹುದು.

ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಮೂಲ ಕಾರಣ ಪ್ರಾದೇಶಿಕ ಶ್ರಮ ವಿಭಜನೆ. ಹೇಗೆಂದರೆ ಪ್ರತಿಯೊಂದು ರಾಷ್ಟ್ರವೂ ತನ್ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೆಲವು ವಸ್ತುಗಳನ್ನು ಉತ್ಪಾದಿಸುತ್ತದೆ. ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಮಾರಾಟ ಮಾಡಿ ತನಗೆ ಬೇಕಾದ ವಸ್ತುಗಳನ್ನು ಪಡೆಯಲು ಇತರ ರಾಷ್ಟ್ರಗಳೊಂದಿಗೆ ವ್ಯಾಪಾರದ ಸಂಪರ್ಕವನ್ನು ಹೊಂದಿರಬೇಕು. ವ್ಯಾಪಾರದ ಸಂಪರ್ಕ ಹೊಂದಿದ್ದರೆ ತನ್ನಲ್ಲಿ ಲಭ್ಯವಿರುವ ವಸ್ತುಗಳನ್ನು ಇತರ ರಾಷ್ಟ್ರಗಳಿಗೆ ಮಾರಿ ತನಗೆ ಬೇಕಾದ ವಸ್ತುಗಳನ್ನು ಪಡೆಯಬಹುದು. ಉದಾಹರಣೆಗೆ- ನಮ್ಮ ದೇಶದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯಲು ನೈಸರ್ಗಿಕ ಸಂಪತ್ತು ಅನುಕೂಲವಾಗಿರುವುದರಿಂದ ಅದನ್ನು ಇತರ ರಾಷ್ಟ್ರಗಳಿಗೆ ಮಾರಿ ಆ ರಾಷ್ಟ್ರಗಳಿಂದ ನಮಗೆ ಬೇಕಾದ ಆಹಾರ ಧಾನ್ಯಗಳನ್ನು, ಯಂತ್ರಗಳನ್ನು ಪಡೆಯುತ್ತೇವೆ. ಹಾಗೆಯೇ ಸ್ವಿಡ್ಜರ್ ಲೆಂಡಿನಲ್ಲಿ ಒಳ್ಳೆಯ ಗಡಿಯಾರಗಳು ತಯಾರಾಗಿ ಇತರ ರಾಷ್ಟ್ರಗಳಲ್ಲಿ ಮಾರಾಟ ಮಾಡಲ್ಪಡುತ್ತವೆ. ಹಾಗೆಯೇ ಆಂತರಿಕ ವ್ಯಾಪಾರದಲ್ಲೂ ಕೆಲವು ಪ್ರದೇಶಗಳು ಕೆಲವು ವಸ್ತುಗಳನ್ನು ಉತ್ಪಾದಿಸುವಲ್ಲಿ ಪರಿಣತಿ ಪಡೆದಿರುತ್ತವೆ. ಭಾರತವನ್ನೇ ಉದಾಹರಣೆಗೆ ತೆಗೆದುಕೊಂಡರೆ ಆಸಾಂನಲ್ಲಿ ಟೀಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಂಗಾಳದಲ್ಲಿ ಸೆಣಬನ್ನು, ವಿಶೇಷವಾಗೆ ಬೆಳೆಯುತ್ತಾರೆ. ಆದ್ದರಿಂದ ಆಂತರಿಕ ವ್ಯಾಪಾರವೂ ಅಂತರರಾಷ್ಟ್ರೀಯ ವ್ಯಾಪಾರದಂತೆಯೇ ಶ್ರಮ ವಿಭಜನೆಯ ತಳಹದಿಯ ಮೇಲೆ ರೂಪಿತವಾಗಿರುತ್ತದೆ. ಈ ರೀತಿ ಮೇಲ್ಮುಖವಾಗಿ ಗಮನಿಸಿ ನೋಡಿದಲ್ಲಿ ಆಂತರಿಕ ಮತ್ತು ಅಂತರರಾಷ್ಟ್ರೀಯ ವ್ಯಾಪಾರಗಳ ನಡುವೆ ಯಾವ ವ್ಯತ್ಯಾಸವು ಕಾಣುವುದಿಲ್ಲ. ಆದಾಗ್ಯೂ ಆಂತರಿಕ ಹಾಗೂ ರಾಷ್ಟ್ರೀಯ ವ್ಯಾಪಾರಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ.

 
Defense-offset-gen-example

೧. ರಾಷ್ಟ್ರದ ಒಳಗೆ ಶ್ರಮ ಮತ್ತು ಬಂಡವಾಳವಳು ೨. ನೈಸರ್ಗಿಕ ಸಾಧನ ಸಂಪನ್ಮೂಲಗಳಲ್ಲಿನ ವ್ಯತ್ಯಾಸ ೩. ಆರ್ಥಿಕ ನೀತಿಯಲ್ಲಿನ ವ್ಯತ್ಯಾಸಗಳು ೪. ರಾಷ್ಟೀಯ ನಾಣ್ಯಗಳ ವಿನಿಮಯ

ಟೀಕೆಗಳು

ಬದಲಾಯಿಸಿ

೧. ಈ ಸಿದ್ಧಾಂತವು ಶ್ರಮದ ಮೌಲ್ಯದ ಮೇಲೆ ಅವಲಂಬಿತವಾಗಿದೆ. ಆದರೆ ಈ ಟೀಕೆಯನ್ನು ಉದಾಸೀನ ಮಾಡಬಹುದು. ಏಕೆಂದರೆ ಸಾಪೇಕ್ಷಿತ ಉತ್ಪಾದನಾ ವೆಚ್ಚವನ್ನು ಹಣದಲ್ಲೂ ವ್ಯಕ್ತಪಡಿಸಬಹುದು. ೨.ಉತ್ಸದನಾ ವೆಚ್ಚ ಸಮನಾಗುರಯತ್ತದೆಂದು ಈ ಸಿದ್ಧಾಂತವು ಕಲ್ಪಸಿಕೊಂಡಿದೆ. ಈ ವಾದವನ್ನೂ ಸಹ ಉದಾಸೀನ ಮಾಡಬಹುದು. ಏಕೆಂದರೆ ಪ್ರಾಚೀನ ಅರ್ಥಶಾಸ್ತ್ರಜ್ಞರು ತಮ್ಮ ಸಿದ್ಧಾಂತವನ್ನು ಸರಳವಾಗಿ ರೂಪಿಸಲು ಸಮನಾದ ಉತ್ಪಾದನಾ ವೆಚ್ಚವನ್ನು ಗಣನೆಗೆ ತಗೆದಕೊಡಿದ್ದರು.ಆದರೆ ಆಧುನಿಕ ಅರ್ಥಶಾಸ್ತ್ರಜ್ಞರು ಈ ಸಿದ್ಧಾಂವು ಏರಿಕೆಯ ಪ್ರತಿಫಲದಲ್ಲಿ ವಸ್ತುಗಳನ್ನು ಉತ್ಪಾದಿಸಿದಾಗ ಈ ನಿಯಮ ಅನ್ವಯಿಸುವುದೆಂದು ಪ್ರತಿಸಾದಿಸಿದ್ದಾರೆ. ೩.ಈ ಸಿದ್ಧಾಂವು ವ್ಯಾಪಾರದಲ್ಲಿ ನಿರತವಾಗುವ ಪ್ರತಿಯೊಂದು ರಾಷ್ಟ್ರರವೂ ನಿರ್ದಿಷ್ಟವಾದ ಪ್ರಮಾಣದಲ್ಲಿ ಸಂಸನ್ಮೂ ಲಗಳನ್ನು ಹೊಂದಿರುವುದೆಂದು ಭಾವಿಸಿತ್ತು. ಆದರೆ ಈ ಸಿದ್ಧಾಂತ ರಾಷ್ಟ್ರದ ಆರ್ಥಿಕಾಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ೪.ಈ ಸಿದ್ಧಾಂತ ಸಾರಿಗೆಯ ವೆಚ್ಚವನ್ನು ಗಣನೆಗೆ ತೆಗೆದುಕೊಂಡಿಲ್ಲ.ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ವಸ್ತುವನ್ನು ಕಳಿಸುವಾಗ ಸಾರಿಗೆಯ ವೆಚ್ಚವು ಉತ್ಪಾದನೆಯ ವೆಚ್ಚದ ಒಂದು ಭಾಗವಾಗಿರುತ್ತದೆ. ಕೆಲವು ಸಾರಿ ವಸ್ತುವಿನ ಉತ್ಪಾದನೆಯ ವೆಚ್ಚಕ್ಕಿಂತ ಸಾರಿಗೆಯ ವೆಚ್ಚವೇ ಹೆಚ್ಚಾಗಿರುತ್ತದೆ. ಉತ್ಪಾದನೆಯ ವೆಚ್ಚ ಕಡಮೆ ಇದ್ದು, ಸಾರಿಗೆಯ ವೆಚ್ಚ ಹೆಚ್ಚಿದಲ್ಲಿ ವಸ್ತುಗಳನ್ನು ಆವುದು ಮಾಡಿಕೊಳ್ಳುವಲ್ಲಿ ಯಾವ ಲಾಭವು ಇರುವುದಿಲ್ಲ. ೫.ಒಂದು ರಾಷ್ಟ್ರದ ಒಳಗೆ ಶ್ರಮ ಮತ್ತು ಬಂಡಗಳು ಸುಲಭವಾಗಿ ಚಲಿಸುತ್ತವೆ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ವಿಶಾಲವಾದ ಒಂದು ರಾಷ್ಟ್ರದಲ್ಲಿ ಒಂದು ಪ್ರದೇಶದ ಭಾಷೆ,ಹನುಗುಣ ಪದ್ಧತಿಗಳಲ್ಲಿ ಎಷ್ಟೋ ವ್ಯತ್ಯಾಸಗಳಿರುತ್ತವೆ. ಆದ್ದರಿಂದ ರಾಷ್ಟ್ರದ ಒಳಗೂ ಶ್ರಮದ ಚಲನೆ ಹೆಚ್ಚಾಗಿಲ್ಲದಿರಬಹುದು.

(ಉಲ್ಲೇಖಗಳು /)

ಬದಲಾಯಿಸಿ

[] [] []

  1. http://indianexpress.com/article/lifestyle/international-trade-fair-2015-a-grand-spectacle/
  2. https://books.google.co.in/books?id=PDvGO8k2JrsC&printsec=frontcover&dq=international+trade&hl=en&sa=X&ved=0ahUKEwjj4a_ow57JAhUOA44KHb83BCIQ6AEIIDAB#v=onepage&q=international%20trade&f=false
  3. https://www.wto.org/english/res_e/statis_e/statis_e.htm