Smitha shetty
ನನ್ನ ಹೆಸರು ನಿಶ್ಮಿತಾ ಶೆಟ್ಟಿ .ನಾನು ಈಗ ದ್ವಿತೀಯ ಬಿ.ಕಾಂ ನ್ನು ಸಂತ ಅಲೋಶಿಯಸ್ ಕಾಲೇಜ್‍ನಲ್ಲಿ ಕಲಿಯುತ್ತಿದ್ದೇನೆ. ನಾನು ಹುಟ್ಟಿದ್ದು ಹಾಗು ಬೆಳೆದಿದ್ದು ಮಂಗಳೂರಿನಲ್ಲಿರುವ ಕೋಟೆಕಾರ್ ಎಂಬ ಊರಿನಲ್ಲಿ.ನನ್ನ ತಂದೆಯ ಹೆಸರು ನಾಗೇಶ್ ಶೆಟ್ಟಿ ಅವರು ಬಜಪೆ ವಿಮಾನ ನಿಲ್ದಾಣದಲ್ಲಿ ಲೋಡರ್ ಕೆಲಸ ಮಾಡುತ್ತಾರೆ, ತಾಯಿ ಸ್ಮೀತಾ ಶೆಟ್ಟಿ, ನನ್ನ ತಂಗಿಯ ಹೆಸರು ಅರ್ಪಿತಾ ಶೆಟ್ಟಿ, ಅವಳು ದ್ವಿತೀಯ ಪಿ.ಯು.ಸಿ. ಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಅಜ್ಜಿಯ ಹೆಸರು ಮುತ್ತಕ್ಕ,ಅವರು ನನಗೆ ತುಂಬಾ ಇಷ್ಟ. ನನ್ನ ಪ್ರಾಥಮಿಕ ಶಿಕ್ಷಣವನ್ನು ಅನುದಾನಿತ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಹಾಗೂ ನನ್ನ ಪ್ರೌಢ ಶಿಕ್ಷಣವನ್ನು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಾಗೂ ನನ್ನ ಪಿ.ಯು.ಸಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಮಾಡಿದ್ದೇನೆ. ನನ್ನ ಹವ್ಯಾಸಗಳು ಹಾಡು ಕೇಳುವುದು, ಕಥೆ ಪುಸ್ತಕ ಓದುವುದು,ಕಾದಂಬರಿ ಓದುವುದು,ಪುರಾತನ ವಿಷಯಗಳನ್ನು ತಿಳಿಯುವುದು, ಚಿತ್ರ ಬಿಡಿಸುವುದು. ನಾನು ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯೆಯಾಗಿರುತ್ತೇನೆ. ನನ್ನ ಮುಂದಿನ ಗುರಿ ಒಳ್ಳೆಯ ಹುದ್ದೆಯಲ್ಲಿ ಕೆಲಸ ಮಾಡುವುದು.