--ಶಿಶಿರ್

ಕಾಂತತ್ವ

ಬದಲಾಯಿಸಿ

ನಮಗೆ ಇ‌‌‍‍‌‌‍‍ಷ್ಟವಾದದ್ದನ್ನು, ಪ್ರಿಯವಾದದ್ದನ್ನು, 'ಕಾಂತ' ಎಂದು ಕರೆಯುತ್ತೆವೆ. ಆದರೆ ಇಲ್ಲಿ ಕಾಂತ ಅಯಸ್ಕಾಂತ ಎಂದು ಕರೆಯುತ್ತೆವೆ. ಕಾಂತಕ್ಷೇತ್ರವೆಂದರೆ ಅಯಸ್ಕಾಂತ ಶಕ್ತಿಯ ಕ್ಶೇತ್ರ. 'ಕಾಂತಕ್ಶೇತ್ರ' ಎಂದರೆ ಕಾಂತವು ತನ್ನ ಸಮೀಪದಲ್ಲಿರುವ ಮತ್ತೊಂದು ಕಾಂತದ ದ್ರುವಗಳ ಮೇಲೆ ಬಲಪ್ರಯೋಗ ಮಾಡುವುದು. ಇದನ್ನು ಇಂಗ್ಲೀಶಿನಲ್ಲಿ ‍‍‍‍‍‌ಇಂಗ್ಲೀಶಿನಲ್ಲಿ 'ಮಾಗ್ನಟಿಕ್ ಫೀಲ್ಡ್' ಎಂದು ಕರೆಯುತಾರೆ. ಕಾಂತತ್ವ ನೇರವಾಗಿ ನಮ್ಮ ಇಂದ್ರಿಯ ಗಳಿಗೆ ಗೋಚರವಾಗುವುದಿಲ್ಲ. ಉತ್ತರಮುಖಿ ಅಥವಾ ದಿಕ್ಸೂಚಿಯನ್ನು 'ಕಾಂತ ಧ್ರುವಸೂಚಿ' ಎಂದೂ ಕರೆಯುತ್ತಾರೆ. ಕಾಂತಬಲಗಳನ್ನು ಅಳೆಯುವ ಸಲಕರಣೆಯನ್ನು 'ಕಾಂತಬಲಮಾಪಕ' ಎಂದೂ ಕರೆಯುತ್ತಾರೆ. ಹೀಗೆ ಕಾಂತತೆ ನಮ್ಮ ದಿನನಿತ್ಯದ ಬದುಕಿನಲ್ಲಿ ಪ್ರಭಾವ ಬೀರುತ್ತಿದ್ದು ನಮಗೆಲ್ಲ ಚಿರಪರಿಚಿತವಾಗಿರುವ ವಂದು ಶಕ್ತಿಯಾಗಿದೆ. ವಿಜ಼ಾನಿಗಳ ಪ್ರಕಾರ 'ಸ್ವಾಭಾವಿಕವಾಗಿ ಬೇರೊಂದು ಕಾಂತದ ಸಂಪರ್ಕದಿಂದ ಪ್ರೇರಿತವಾಗಿ ಇಲ್ಲವೇ ವಿದ್ಯುತ್ ಪ್ರವಾಹದ ಪಲವಾಗಿ ಕಬ್ಬಿಣವನ್ನು ಆಕರ್ಶಿಸುವ ಗುಣವನ್ನು ಹಾಗೂ ದಕ್ಶೀನೋತ್ತರವಾಗಿ ನಿಲ್ಲುವ ಪ್ರವೃತ್ತಿಯನ್ನೂ ತೋರುವ ವಸ್ತುವೇ ಕಾಂತ'.


ಕಾಂತದ ಪರಿಚಯ

ಬದಲಾಯಿಸಿ
 
ಯೂರಿಪಿಡೀಸ್

ಏಷ್ಯ ಮೈನರಿಗೆ ಸೀರಿದ 'ಮ್ಯಾಗ್ನೀಶಿಯ' ಎಂಬ ಪ್ರದೇಶದಲ್ಲಿ ಸಿಕ್ಕಿದ ಕೆಲವು ಕಪ್ಪು ಶಿಲೆಗಳಲ್ಲಿ ಅಂದರೆ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅದಿರಿಹಗೆ ಕಬ್ಬಿಣವನ್ನು ಆಕರ್ಶಿಸುವ ಗುಣ ಇದ್ದಿತ್ತೆಂದೂ ಬಹಳಕಾಲದಿಂದ ಮನುಶ್ಯ ಅರಿತಿದ್ದ. ಕೆಲವು ತೆರನ ಉಕ್ಕಿನ ತುಂಡುಗಳ ಸಮೀಪಕ್ಕೆ ಕಬ್ಬಿಣದ ಚೂರುಗಳನ್ನಿಟ್ಟರೆ ಆ ಚೂರುಗಳನ್ನು ಉಕ್ಕಿನ ತುಂಡುಗಳು ತಮ್ಮ ಹತ್ತಿರಕ್ಕೆ ಸೆಳೆಯುವುದನ್ನು ನಾವು ಗಮನಿಸಿರುತ್ತೆವೆ. ಇಂಥ ಗುಣವುಳ್ಳ ನೆಟ್ಟನೆಯ ಉಕ್ಕಿನ ಪಟ್ಟಿಗಳಿರಬಹುದು, ಲಾಳದ ಆಕ್ರುತಿಯ ಉಕ್ಕಿನ ಪಟ್ಟಿಗಳಾಗಿರಬಹುದು. ಈ ಬಗೆಯಲ್ಲಿ ಕಬ್ಬಿಣವನ್ನು ಆಕರ್ಷಿಸುವ ಗುಣವನ್ನು 'ಆಯಸ್ಕಾಂತತೆ' ಎನ್ನುತ್ತಾರೆ. ಆಯಸ್ಕಾಂತತೆ ಗುಣವುಳ್ಳ ಕಾಂತಗಳು ಕೇವಲ ಕಬ್ಬಿಣವನ್ನು ಮಾತ್ರ ಆಕರ್ಷಿಸೂವುದಲ್ಲದೇ ಕೆಲವು ಧಾತುಗಳನ್ನು ಕೂಡ ಆಕರ್ಷಿಸುತ್ತದೆ ಆದುದರಿಂದ ಇದನ್ನು ಕಾಂತತೆ, ಕಾಂತಶಕ್ತಿ ಅಥವಾ ಕಾಂತತ್ವ ಎಂದು ಕರೆಯುತ್ತಾರೆ ಈ ಗುಣಹೊಂದಿರೊವಸ್ತು ಗಳನ್ನು ಮಾಗ್ನೆಟಎಂದು ಕರೆಯುತ್ತಾರೆ. ಭೂಮಿಯಲ್ಲಿ ಸಿಗುವ ಕಬ್ಬಿಣದ ಅದುರುಗಳಲ್ಲಿ ಮ್ಯಾಗ್ನಟೈಟ್ ಹಾಗು ಲೋಡಸ್ಟೋನ್ ಎಂಬ ಅದಿರಿನ ಜಾತಿ ಇದೆ. ಕ್ರಿಸ್ತಪೂರ್ವದಲ್ಲಿ 'ಯುರಿಪಿಡೀಸ್' ಎಂಬ ಗ್ರೀಕ್ ವಿಜ಼ಾನಿ ಕಬ್ಬಿಣವನ್ನು ಆಕರ್ಷಿಸುವ ಕಲ್ಲುಗಳ ವಿಚಾರವನ್ನು ಪ್ರಸ್ತಾಪಿಸಿದ ಎಂದು ವಿದ್ವಂಸರು ತಿಳಿದಿದ್ದಾರೆ. ಉಕ್ಕಿನಪಟ್ಟಿಗಳ ಮೇಲೆ ಒಂದೇ ದಿಕ್ಕಿಗೆ ಇಂತಹ ಸೂಜಿಕಲ್ಲನ್ನು ಹಲವಾರು ಬಾರಿ ಉಜ್ಝಿದರೆ ಆ ಉಕ್ಕಿಗೂ ಅದೇ ಬಗೆಯ ಕಾಂತ ಗುಣ ಶಾಶ್ವತವಾಗಿ ಬರುತ್ತದೆ ಎಂಬ ಅಂಶವನ್ನು ಚೀನಿಯರು ಅರಿತಿದ್ದರು. ಕಬ್ಬಿಣವನ್ನು ಆಕರ್ಷಿಸುವ ಮ್ಯಾಗ್ನೆಟೈಟ್ ಅದಿರು ಭಾರತ ಅಲ್ಲದೇ ಪ್ರಪಂಚದ ಹಲವಾರು ದೇಶಗಳಲ್ಲಿಯೂ ದೊರೆಯುತ್ತದೆ. ಎಷ್ಯಾ ಮೈನರ್ ಪ್ರದೇಶದ ಮ್ಯಾಗ್ನೆಸ್ ಎಂಬೊಬ್ಬ ಕುರುಬರ ಹುಡುಗ ಇದನ್ನು ಕಂಡುಹಿಡಿದನೆಂದೂ ಅದರಿಂದ ಇದಕ್ಕೆ ಮ್ಯಾಗ್ನೆಟ್ ಎಂಬ ಹೆಸರು ಬಂತೆಂದು ಒಂದು ದಂತಕಥೆಯಲ್ಲಿ ಹೇಳಲಾಗಿದೆ. ಕೆಲವರು ತಿಳಿಸುವಂತೆ ಪ್ರಾಚೀನ ಗ್ರೀಸ್ ಬಳಿ 'ಮ್ಯಾಗ್ನೇಸಿಯ' ಎಂಬ ಊರು ಇತ್ತೆಂದೂ ಅಲ್ಲಿ ಒಂದು ಬಗೆಯ ಕಪ್ಪು ಶಿಲೆಯನ್ನು ಪ್ರಾಚೀನ ಗ್ರೀಕರು ಕಂಡುಹಿಡಿದರೆಂದೂ ಆ ಶಿಲೆಗಳು ಕಬ್ಬಿಣದ ಚೂರುಗಳನ್ನು ಆಕರ್ಷಿಸುತ್ತಿತ್ತೆಂದು ಈ ಕಾರಣಕ್ಕಾಗಿ ಇದಕ್ಕೆ ಮ್ಯಾಗ್ನೆಟ್ ಎಂಬ ಹೆಸರು ಬಂತು. ಆಯಸ್ಕಾಂತಗಳನ್ನು ಚೀನಿಯರು 'ಚುಷಿಯು' ಎಂದರೆ ಒಲವಿನ ಶಿಲೆ, ಫ಼್ರಾನ್ಸ್ ದೇಶದ ಜನರು 'ಐಮಂತೆ', ಗ್ರೀಕರು 'ಹರ್ಕ್ಯುಲಿಸ್' ಎಂದು ಕರೆಯುತ್ತಿದ್ದರು. ಆದರೆ ಇಂದು ಆಯಸ್ಕಾಂತಗಳು ಅಂದರೆ ಕೃತಕ ಆಯಸ್ಕಾಂತಗಳು ಅಪೂರ್ವ ಎನಿಸುವ ಶಕ್ತಿಯನ್ನು ಪ್ರದರ್ಶಿಸುತ್ತದೆ.

ಕಾಂತೀಯ ಅನುವಾದ

ಬದಲಾಯಿಸಿ

ಒಂದು ಆಯಸ್ಕಾಂತವನ್ನು ತೆಗೆದುಕೊಂಡು ಅದನ್ನು ವಿಭಜಿಸಿ ಅನೇಕ ಚೂರುಗಳಾಗಿ ಮಾಡಿದಾಗ ಪ್ರತಿಯೊಂದು ಸಣ್ಣ ಚೂರು ಚಿಕ್ಕ ಕಾಂತದಂತೆ ವರ್ತಿಸುವುದು ಅಂದರೆ ಕಾಂತ ವಸ್ತುವಿನ ಪ್ರತಿಯೊಂದು ಅಣುವು ಕಾಂತದಂತೆ ವರ್ತಿಸುವುದು ಎಂದು ಬಾವಿಸಲಾಗಿದೆ. ಒಂದು ಸಾಧಾರಣ ಕಬ್ಬಿಣದ ತುಂಡಿನಲ್ಲಿ ಅಣುಗಳು ವಿವಿಧ ದಿಕ್ಕುಗಳಲ್ಲಿರುತ್ತವೆ. ಅಂದರೆ ಒಂದು ಅಣು ಉತ್ತರಕ್ಕೆ ಅಭಿಮುಖವಾಗಿದ್ದರೆ ಇನ್ನೊಂದು ದಕ್ಷಿಣಕ್ಕೆ ಅಭಿಮುಖವಾಗಿರಬಹುದು. ಕಬ್ಬಿಣದ ದಂಡದ ಕೊನೆಗಳಲ್ಲಿ ಬರಿಯ ಉತ್ತರ ಧ್ರುವವಾಗಲಿ ಇಲ್ಲವೆ ದಕ್ಷಿಣ ಧ್ರುವವಾಗಲಿ ಇರುವುದಿಲ್ಲ. ಇದರಿಂದಾಗಿ ಸಾಧಾರಣ ಕಬ್ಬಿಣದ ತುಂಡು ಆಯಸ್ಕಾಂತದಂತೆ ವರ್ತಿಸುವುದಿಲ್ಲ. ಆಯಸ್ಕಾಂತದಲ್ಲಿ ಅಣುಗಳು ವಿವಿದ ಸಾಲುಗಳಲ್ಲಿ ಒಂದರ ಹಿಂದೆ ಒಂದರಂತೆ ನಿಲ್ಲುತ್ತವೆ ಆಗ ಆಯಸ್ಕಾಂತದ ಒಂದು ತುದಿಯಲ್ಲಿ ಬರಿಯ ಉತ್ತರ ಧ್ರುವಗಳು ಇನ್ನೊಂದು ತುದಿಯಲ್ಲಿ ದಕ್ಷಿಣದ ಧ್ರುವಗಳು ಇದ್ದು ಕಾಂತತೆಯು ಪ್ರದರ್ಶಿಸಲ್ಪಡುವುದು. ಇದನ್ನು ಕಾಂತತೆಯ ಅಣುವಾದ ಎಂದು ಕರೆಯುತ್ತಾರೆ. ಅಣುಗಳು ಕಾಂತತೆ ಯನ್ನು ಪಡೆಯುವುದಕ್ಕೆ ಕಾರಣ ಪರಮಾಣುವಿನ ವಿವಿಧ ಕವಚಗಳಲ್ಲಿ ಭ್ರಮಿಸುವ ಎಲೆಕ್ಟ್ರಾನ್ಗಳು. ಕಬ್ಬಿಣವು ಕಾಂತಗುಣ ಹೊಂದಿದ್ದರೆ ಅದಕ್ಕೆ ಕಾರಣ ಅದರಲ್ಲಿ ಬಹಳಷ್ಟು ಎಲೆಕ್ಟ್ರಾನ್ಗಳು ಒಂದೇ ದಿಕ್ಕಿನಲ್ಲಿ ಭ್ರಮಿಸುವುದು. ಕಬ್ಬಿಣದ ಪರಮಾಣುಗಳು ಗುಂಪುಗುಂಪಾಗಿರುತ್ತವೆ. ಪ್ರತೀ ಗುಂಪಿನ ಪರಮಾಣುಗಳು ಅಚ್ಚುಕಟ್ಟಾಗಿ ಒಂದೇ ರೇಕೆಯಲ್ಲಿ ನಿಂತು ಕಾಂತತೆಗೆ ಕಾರಣವಾಗುತ್ತದೆ. ಪ್ರತಿಯೊಂದು ಪರಮಾಣುವಿನಲ್ಲು ನ್ಯೂಕ್ಲಿಯಸ್ಸನ್ನು ಪರಿಭ್ರಮಿಸುವ ಎಲೆಕ್ಟ್ರಾನ್ಗಳಿವೆ. ಈ ಎಲೆಕ್ಟ್ರಾನ್ಗಳ ಪರಿಭ್ರಮಣೆ ಮತ್ತು ಭ್ರಮಣತೆ ಇಂದಾಗಿ ಕಾಂತ ಗುಣಗಳು ತೋರಿ ಭರುತ್ತವೆ. ವಿವಿದ ಎಲೆಕ್ಟ್ರಾನ್ಗಳ ಕಾಂತ ಪರಿಣಾಮಗಳು ಒಟ್ಟಾಗಿ ಮಾಯವಾಗುತ್ತವೆಯೇ ಇಲ್ಲವೆ ಅವು ಉಳಿದುಕೊಳುತ್ತವೆಯೆ ಎಂಬುದರ ಆಧಾರದ ಮೇಲೆ ಪರಮಾಣುವಿನ ಹಾಗು ಪದಾರ್ಥದ ಕಾಂತಗುಣಗಳು ನಿರ್ಧಾರವಾಗುತ್ತವೆ.

ಕಾಂತೀಯ ವಸ್ತುಗಳು

ಬದಲಾಯಿಸಿ

ಪದಾರ್ತಗಳನ್ನು ಕಾಂತ ಕ್ಷೇತ್ರದಲ್ಲಿ ಇಟ್ಟಾಗ ಅವುಗಳ ಮೂಲಕ ಹಾದುಹೋಗುವ ಭಲರೇಖೆಗಳ ದಟ್ಟಣೆ ಮತ್ತು ಪ್ರೇರಿತವಾಗುವ ಕಾಂತತೆಯನ್ನು ಅವಲಂಬಿಸಿ ಕಾಂತೀಯ ವಸ್ತುಗಳ ವರ್ಗೀಕರಣ ಮಾಡುತ್ತಾರೆ. ನೀರು, ಉಪ್ಪು, ತಾಮ್ರ ಮೊದಲಾದ ವಸ್ತುಗಳನ್ನು ಬಾಹ್ಯ ಕಾಂತ ಕ್ಷೇತ್ರದಲ್ಲಿಟ್ಟಾಗ ಅವು ಪ್ರಬಲ ಕಾಂತಕ್ಷೇತ್ರದಿಂದ ವಿಮುಖವಾಗುತ್ತವೆ. ಅಂದರೆ ಬಾಹ್ಯಕ್ಷೇತ್ರಕ್ಕೆ ಅಡ್ಡವಾಗಿ ನಿಲ್ಲುತ್ತವೆ. ಇವು ಅಡ್ಡ ಕಾಂತೀಯ ಪದಾರ್ಥಗಳು. ಅಲ್ಯೂಮಿನಿಯಂ, ಮೈಲುತುತ್ತ ಮುಂತಾದ ಕೆಲವು ವಸ್ತುಗಳು ಬಾಹ್ಯ ಕಾಂತಕ್ಷೇತ್ರದಲ್ಲಿ ಪ್ರಬಲ ಕಾಂತಕ್ಷೇತ್ರದ ಕಡೆಗೆ ಆಕರ್ಷಿತವಾಗುತ್ತದೆ. ಅವು ಕಾಂತೀಯ ಪದಾರ್ಥಗಳು. ಕೋಬಾಲ್ಟ್, ನಿಕಲ್ ಮತ್ತು ಕಬ್ಬಿಣ ಮೊದಲಾದ ವಸ್ತುಗಳಿಗೆ ಬಾಹ್ಯ ಕಾಂತಕ್ಷೇತ್ರದ ದಿಕ್ಕಿನಲ್ಲಿ ನಿಲ್ಲುವ ಗುಣವಿದೆ. ಇವು ಅತಿ ಕಾಂತೀಯ ಪದಾರ್ತಗಳು. ಎಲ್ಲಕ್ಕಿಂತ ಹೆಚ್ಚಾಗಿ ಕಬ್ಬಿಣವನ್ನು ಅದರಲ್ಲು ಮೆದುಕಬ್ಬಿಣವನ್ನು ಕಾಂತೀಕರಿಸುವುದು ಸುಲಭ. ಕೆಲವಸ್ತುಗಳನ್ನು ಕಾಂತಕ್ಷೇತ್ರದಲ್ಲಿಟ್ಟಾಗ ಕ್ಷೇತ್ರದ ಬಲರೇಖೆಗಳನ್ನು ತನ್ಮೂಲಕ ಹಾದುಹೋಗಲು ಅನುಕೂಲ ಮಾಡಿಕೊಡುತ್ತವೆ. ಆದರೆ ಮೇಲೆ ವಿವರಿಸಲಾಗಿರುವ ಅಡ್ಡ ಕಾಂತೀಯ ವಸ್ತುಗಳು ಈ ಗುಣವನ್ನು ಅಲ್ಪ ಪ್ರಮಾಣದಲ್ಲಿ ಪಡೆದಿವೆ. ಅನುಕಾಂತೀಯ ವಸ್ತುಗಳಲ್ಲಿ ಈ ಗುಣ ಸ್ವಲ್ಪ ಮಟ್ಟಿಗೆ ಹೆಚ್ಚಿಗೆ ಇದ್ದರೂ ಅತಿಕಾಂತೀಯ ವಸ್ತುಗಳಲ್ಲಿ ಈ ಗುಣ ಅತ್ಯಧಿಕವಾಗಿ ಕಂಡುಬರುತ್ತದೆ.

ಅಡ್ಡ ಕಾಂತೀಯ ಪದಾರ್ತಗಳಲ್ಲಿ ಭಲರೇಖೆಗಳು ನಿರ್ವಾತದಲ್ಲಿ ಹಾಯುವಷ್ಟು ಸುಲಬವಾಗಿ ವಸ್ತುಗಳನ್ನು ಹಾಯಲಾರವು. ಇವುಗಳನ್ನು ಕಾಂತಕ್ಷೇತ್ರದಲ್ಲಿ ಅಡ್ಡಲಾಗಿ ತೂಗಾಡಿಸಿದರೆ ಕಾಂತಕ್ಷೇತ್ರದ ದಿಕ್ಕಿಗೆ ಅಡ್ಡವಾಗಿ ನಿಲ್ಲುತ್ತದೆ. ಆದರೆ ಅವು ಕಾಂತೀಯ ಪದಾರ್ತಗಳಲ್ಲಿ ಕಾಂತ ಬಲರೇಖೆಗಳು ಗಾಳಿ ಮತ್ತು ನಿರ್ವಾತದಲ್ಲಿ ಹಾದುಹೋಗುವುದಕ್ಕಿಂತ ಸುಲಭವಾಗಿ ಸಾಗುತ್ತವೆ. ಇವುಗಳನ್ನು ಕಾಂತಕ್ಷೇತ್ರದಲ್ಲಿ ತೂಗಾಡಿಸಿದರೆ ಕಾಂತಕ್ಷೇತ್ರದ ದಿಕ್ಕಿನಲ್ಲೇ ನಿಲ್ಲುತವೆ. ಅತಿಕಾಂತೀಯ ಪದಾರ್ತಗಳು ಕಾಂತಕ್ಷೇತ್ರದ ಬಲರೇಖೆಗಳು ತಮ್ಮಳೀ ಸಾಂದ್ರೀಕ್ರುತವಾಗುವಂತೆ ಮಾಡುತ್ತವೆ.

ಕಾಂತದ ಗುಣಗಳು

ಬದಲಾಯಿಸಿ

ಒಂದು ಅಯಸ್ಕಾಂತವನ್ನು ಕಬ್ಬಿಣದ ಧೂಳಿನಲ್ಲಿ ಹೊರಳಿಸಿದರೆ ಅದರ ತುದಿಗಳಲ್ಲಿ ಮಾತ್ರ ಧೂಳು ಹೆಚ್ಚಾಗಿ ಆಕರ್ಷಿಸಲ್ಪಡುತ್ತದೆ. ಆದರೆ ಕಾಂತದ ಮಧ್ಯಭಾಗದಲ್ಲಿ ಆಕರ್ಷಣೆಯೇ ಇರುವುದಿಲ್ಲ. ವಿದ್ಯುತ್ತು ಇಲ್ಲವೇ ಕಬ್ಬಿಣಗಳಿಲ್ಲದ ಜಾಗದಲ್ಲಿ ಆಯಸ್ಕಾಂತವನ್ನು ಮಧ್ಯದಲ್ಲಿ ತೂಗ ಹಾಕಿದರೆ ಅದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿಲ್ಲುತ್ತದೆ. ಇದಕ್ಕೆ ಕಾರಣವೆಂದರೆ ಭೂಮಿಯೂ ಕೂಡ ಒಂದು ಆಯಸ್ಕಾಂತದಂತೆ ವರ್ತಿಸುತ್ತದೆ. ಉತ್ತರ ದಿಕ್ಕಿಗೆ ಮುಖ ಮಾಡಿರುವ ತುದಿಯನ್ನು ಉತ್ತರ ಧ್ರುವವೆಂದೂ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ದಿಕ್ಕನ್ನು ದಕ್ಷಿಣ ಧ್ರುವವೆಂದು ಕರೆಯುತ್ತಾರೆ. ವಿಜಾತೀಯ ಧ್ರುವಗಳು ಅಂದರೆ ಉತ್ತರ ಹಾಗೂ ದಕ್ಷಿಣ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ. ಆದರೆ ಸಜಾತೀಯ ಧ್ರುವಗಳು ಅಂದರೆ ಎರಡು ಉತ್ತರ ಧ್ರುವಗಳು ಅಥವಾ ಎರಡು ದಕ್ಷಿಣ ಧ್ರುವಗಳು ವಿಕರ್ಷಿಸುತ್ತವೆ.

ವಿವಿದ ಪ್ರಕಾರದ ಕಾಂತಗಳು

ಬದಲಾಯಿಸಿ

ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರೆಯುವ ಕಾಂತಗಳನ್ನು 'ನೈಸರ್ಗಿಕ ಕಾಂತಗಳು' ಅಥವಾ 'ಸಹಜ ಕಾಂತಗಳು' ಎಂದು ಕರೆಯುತ್ತಾರೆ. ಆದರೆ ಈ ಕಾಂತಗಳ ಆಕಾರ ಮತ್ತು ಗಾತ್ರ ಸೂಕ್ತ ಮಾದರಿಗಳಲ್ಲಿ ಇರುವುದಿಲ್ಲ. ಅವನ್ನು ಪ್ರಯೋಗಾಲಯಗಳಲ್ಲಿ ಮತ್ತು ಇತರ ಕಡೆಗಳಲ್ಲಿ, ಬೇರೆ ಬೇರೆ ಉಪಕರಣಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ನೈಸರ್ಗಿಕ ಕಾಂತಗಳ ಸಹಾಯ ಪಡೆದು ತಮಗೆ ಅಗತ್ಯ ವಾಗಿರುವಂತಹ ಕಾಂತಗಳನ್ನು ತಯಾರಿಸಿಕೊಳ್ಳಬಹುದು. ಇವನ್ನು 'ಕೃತಕ ಕಾಂತಗಳು' ಎಂದು ಕರೆಯುತ್ತಾರೆ. ಆಕಾರಕ್ಕೆ ಅನುಗುಣವಾಗಿ ಇವಕ್ಕೆ ಕುದುರೆಲಾಳಕಾರದ ಕಾಂತ, ಸೂಜಿ ಕಾಂತ, ಬಿಲ್ಲೆ ಕಾಂತ, ಉಂಗುರ ಕಾಂತ, ಸಲಾಕೆ ಕಾಂತ, ದಂಡ ಕಾಂತ ಎಂದು ಅನೇಕ ಹೆಸರುಗಳನ್ನು ಇಡಲಾಗಿದೆ. ಜಕತ್ತಿನ ಎಷ್ಟೋ ಪ್ರದೇಶಗಳಲ್ಲಿ ಕಾಂತೀಯ ಅದಿರು ದೊರೆಯುತ್ತದೆ. ಹಾಗೆ ದೊರೆಯದಿದ್ದರೂ ರಾಸಾಯನಿಕ ವಸ್ತುಗಳನ್ನು ಮಾರುವ ಅಂಗಡಿಗಳಲ್ಲಿ ಈ ಅದಿರು ಸಿಗಬಹುದು. ಅದರಲ್ಲಿ ಕಾಂತ ಶಕ್ತಿ ಇದೆಯೇ ಎಂಬುದನ್ನು ಪರೀಕ್ಷಿಸಲು ಕಬ್ಬಿಣದ ಸಣ್ಣ ಚೂರುಗಳನ್ನು, ಪುಡಿಯನ್ನು ಇಲ್ಲವೆ ಉಕ್ಕಿನ ಬಹಳ ನವಿರಾದ ಪುಡಿಯನ್ನು ಬಿಳಿಯ ಕಾಗದದ ಮೇಲೆ ಉದುರಿಸಿಕೊಂಡು ತಂದಿರುವ ಅದಿರು ಅವನ್ನು ಆಕರ್ಷಿಸುವುದೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. ಕಾಗದ ಕ್ಲಿಪ್ಪುಗಳು, ಜಮಖಾನದ ಟಾಕುಗಳು ಮುಂತಾದ ಸ್ವಲ್ಪ ಭಾರವಿರುವ ವಸ್ತುಗಳನ್ನು ಆ ಅದಿರಿನಿಂದ ಎತ್ತಲು ಪ್ರಯತ್ನಿಸಿ ಅದರ ಕಾಂತ ಶಕ್ತಿಯನ್ನು ಖಚಿತ ಪಡಿಸಿಕೊಳ್ಳಬಹುದು. ಕಾಂತ ಸೂಜಿಯೊಂದನ್ನು ಅದಿರಿನ ಹತ್ತಿರ ತಂದು ಅದಿರಿನ ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ಕಾಂತ ಸೂಜಿಯನ್ನು ಆಕರ್ಷಿಸುವುದೇ ಎಂಬುದನ್ನೂ ಕಂಡುಕೊಳ್ಳಬಹುದು. ಹಳೆಯ ರೇಡಿಯೋ, ಧ್ವನಿವರ್ಧಕಗಳು, ಹಳೆಯ ಟೆಲಿಫ಼ೋನ್ ಗ್ರಾಹಕರು, ಹಳೆಯ ಮೋಟಾರಿನ ಸ್ಪೀಡೋಮೀಟರುಗಳು ಮುಂತಾದ ಕೆಲವು ಉಪಕರಣಗಳಿಂದ ಪ್ರಯೋಗಕ್ಕೆ ಮತ್ತು ಚಿಕ್ಕಪುಟ್ಟ ಕಾರ್ಯಗಳಿಗೆ ಅಗತ್ಯವಾಗಿರುವ ಕ್ರುತಕ ಕಾಂತಗಳನ್ನು ಪಡೆದುಕೊಳ್ಳಬಹುದು. ಇವು ಸಾಮಾನ್ಯವಾಗಿ ಲಾಳದ ಅಥವಾ ದಂಡದ ಅಥವಾ ಪಟ್ಟಿ ಆಕ್ರುತಿಗಳಲ್ಲಿ ಇರಬಹುದು. ಇಂಗ್ಲೀಷಿನ 'ಯು' ಆಕಾರದ ಮತ್ತು ಸೂಜಿ ಕಾಂತಗಳು ಕೂಡಾ ದೊರೆಯುತ್ತವೆ.

 
magnetic_ring
 
ಕುದುರೆಲಾಳಕಾರದ ಕಾಂತ
 
ಸೂಜಿ ಕಾಂತ
 
ಬಿಲ್ಲೆ ಕಾಂತ
 
ದಂಡ ಕಾಂತ

ಪ್ರೇರಿತ ಕಾಂತತ್ವ

ಬದಲಾಯಿಸಿ

ಒಂದು ಕಾಂತವು ತನ್ನ ಬಳಿಯಿರುವ ಇನನ್ನೊಂದು ಕಾಂತ ವಸ್ತುವಿನಲ್ಲಿ ಕಾಂತತೆಯನ್ನು ಉಂಟು ಮಾಡುವುದೇ ಪ್ರೇರಿತ ಕಾಂತತ್ವ ಅಥವಾ ಪ್ರೇರಿತ ಕಾಂತತೆ. ಕಾಂತ ವೊಂದರ ಬಳಿ ಕಬ್ಬಿಣದ ಮೊಳೆಯೊಂದನ್ನು ಹಿಡಿದರೆ ಅದು ಆಕರ್ಷಿಸಲ್ಪಡುವುದು. ಜತೆಯಲ್ಲಿ ಈ ಮೊಳೆ ಇನ್ನೊಂದನ್ನು ಆ ಇನ್ನೊಂದು ಮೊಳೆ ಮತ್ತೊಂದನ್ನು ಕೂಡ ಆಕರ್ಷಿಸಬಲ್ಲದು. ಆದರೆ ಮೊದಲನೆ ಮೊಳೆಯನ್ನು ತೆಗೆದರೆ ಸರಪಳಿ ಧ್ವಂಸವಾಗುತ್ತದೆ. ಇಲ್ಲಿ ಮೊಳೆಯು ಪ್ರೇರಿತ ಕಾಂತದಂತೆ ವರ್ತಿಸಿತು. ಪ್ರೇರಿತ ಕಾಂತತೆಯಲ್ಲಿ ಎರಡು ಬಗೆಗಳಿವೆ. ಅವು ತಾತ್ಕಾಲಿಕ ಮತ್ತು ಶಾಶ್ವತ ಕಾಂತಗಳು. ತಾತ್ಕಾಲಿಕ ಕಾಂತಗಳಲ್ಲಿ ಕಬ್ಬಿಣವು ಕಾಂತ ಕ್ಷೇತ್ರದಲ್ಲಿ ಇರುವವರೆಗೆ ಮಾತ್ರ ಕಾಂತ ಗುಣವನ್ನು ಪ್ರದರ್ಶಿಸುತ್ತದೆ. ಆದರೆ ಉಕ್ಕಿನಂತಹ ಅತಿ ಕಠಿಣ ಪದಾರ್ಥಗಳನ್ನು ಒಮ್ಮೆ ಕಾಂತತೆಗೆ ಒಡ್ಡಿದರೆ ಅವು ಶಾಶ್ವತವಾಗಿ ಕಾಂತಗಳಾಗಿರುತ್ತವೆ. ಕಬ್ಬಿಣ, ನಿಕ್ಕಲ್, ತಾಮ್ರ ಮುಂತಾದ ಲೋಹಗಳನ್ನು ಒಂದುಗೂಡಿಸಿ ತಯಾರಾಗುವ ಮಿಶ್ರಲೋಹಗಳಿಂದ ಕೂಡ ಶಾಶ್ವತ ಕಾಂತಗಳನ್ನು ತಯಾರಿಸಬಹುದು. ಒಂದು ಮೆದು ಕಬ್ಬಿಣ ತುಂಡಿಗೆ ಹತ್ತಿ ಸುತ್ತಿದ ತಾಮ್ರದ ತಂತಿಯನ್ನು ಸುತ್ತಿ ತರುವಾಯ ತಂತಿಯಲ್ಲಿ ವಿದ್ಯುತ್ತನ್ನು ಹರಿಸಿದಾಗ ಮೆದು ಕಬ್ಬಿಣವು ಕಾಂತತ್ವ ವನ್ನು ಪಡೆಯುವುದು. ಇದು ಕೂಡ ಪ್ರೇರಿತ ಕಾಂತತ್ವವೇ ಆಗಿದೆ. ಈ ಪ್ರೇರಿತ ಕಾಂತತ್ವದ ತತ್ವವನ್ನು ಅನುಸರಿಸಿ ವಿದ್ಯುದ್ಗಂಟೆಯನ್ನು ತಯಾರಿಸಲಾಗಿದೆ.

 
ಪ್ರೇರಿತ ಕಾಂತತ್ವ

[]

ಉಲ್ಲೇಕ

ಬದಲಾಯಿಸಿ
  1. https://en.wikipedia.org/wiki/Magnetism

ಹಾಗೆ ಜಿ.ಎಂ.ಕೆ. ಯವರ ಸಪ್ನ ಪಬ್ಲಿಕೇಷನನ ಕಾಂತತೆ ಎಂಬ ಪುಸ್ತಕದಿಂದಲೂ ವಿಶಯವನ್ನು ತೆಗೆದುಕೊಳ್ಳಲಾಗಿದೆ