ಸದಸ್ಯ:Sangeetha-2015/ನನ್ನ ಪ್ರಯೋಗಪುಟ

ಡ್ರೋಸೊಫಿಲಾ ಮೆಲಾನೊಗ್ಯಾಸ್ಟರ್

ಬದಲಾಯಿಸಿ
 

ಡ್ರೋಸೊಫಿಲಾ ಮೆಲಾನೊಗ್ಯಾಸ್ಟರ್ ಎಂಬುದು 'ಡ್ರೋಸೊಫಿಲಿಡೇ'ಎಂಬ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಕೀಟ.ಇದನ್ನು ಸಾಮಾನ್ಯವಾಗಿ "ಕಾಮನ್ ಫ್ರೂಟ್ ಫ್ಲೈ" ಅಥವಾ "ವಿನೀಗರ್ ಫ್ಲೈ" ಎಂದೂ ಸಹ ಕರೆಯಲ್ಪಟ್ಟಿದೆ.ಈ ಒಂದು ಜಾತಿಯ ಕೀಟವನ್ನು,ಮಾದರಿ ಜೀವಿಯನ್ನಾಗಿಟ್ಟುಕ್ಕೊಳ್ಳಬಹುದು ಎಂಬ ಚಾರ್ಲೆಸ್ ವೂಡ್‍ವರ್ತ್ಸ್ ರವರ ಪ್ರಸ್ತಾವನೆಯನ್ನು,ಇಂದಿನವರೆಗೂ ತಳಿವಿಜ್ಞಾನ, ಶರೀರಶಾಸ್ತ್ರ,ಸೂಕ್ಷ್ಮ ಜೀವಿಯ ರೋಗೋತ್ಪತ್ತಿ,ಮತ್ತು ಜೀವ ವಿಕಾಸದ ಇತಿಹಾಸ ಎಂಬಂತ ಜೈವಿಕ ಸಂಶೋಧನೆಯ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿದೆ.ಇದು ಒಂದು ವಿವಿಧ ರೀತಿಯ ಪ್ರಾಣಿ ಜಾತಿ ಏಕೆಂದರೆ,ಇದನ್ನು ಸುಲಭವಾಗಿ ರಕ್ಷಿಸಬಹುದು,ಮತ್ತು ಇದಕ್ಕೆ ನಾಲ್ಕು ಜೋಡಿಯ ವರ್ಣತಂತುಗಳಿವೆ,ತ್ವರಿತವಾಗಿ ತಳಿಯುವ ಶಕ್ತಿ ಮತ್ತು ಅನೇಕ ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ,ಸಾಮಾನ್ಯವಾಗಿ ಈ ಕೀಟವನ್ನು ನಾನಾ ರೀತಿಯ ಸಂಶೋಧನೆಗಳಿಗೆ ಬಳಸಲಾಗಿದೆ.ಡ್ರೋಸೊಫಿಲಾ ಸಾಮಾನ್ಯವಾಗಿ ಆಹಾರವಿರುವ ಸ್ಥಾನದಲ್ಲಿ ಆಕ್ರಮಿತವಾಗಿರುತ್ತದೆ,ಮತ್ತು ಮನೆಯಲ್ಲಿ,ಉಪಹಾರ ಗೃಹಗಳಲ್ಲಿ ಸಾಮಾನ್ಯ ಕೀಟವಾಗಿದೆ.

 

ದೈಹಿಕ ನೋಟ

ಬದಲಾಯಿಸಿ
 

ಸಹಜ ಪ್ರಕಾರವಾಗಿ ಈ ರೀತಯ ಕೀಟಗಳು,ಹಳದಿ-ಕಂದು ಬಣ್ಣದಿಂದ ಆವರಿತವಾಗಿದೆ.ಕೆಂಪು ಬಣ್ಣದ ಕಣ್ಣುಗಳಿವೆ,ಮತ್ತು ಅದರ ಹೊಟ್ಟೆಯ ಅಡ್ಡಲಾಗಿ ವ್ಯತ್ಯಸ್ತ ಕಪ್ಪು ಸಾಲುಗಳಿವೆ.ಇವು ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತದೆ.ಸ್ತ್ರೀ ಕುಟುಂಬಕ್ಕೆ ಸೇರಿದವು,೨.೫ ಮಿಲಿ ಮೀಟರ್( ೦.೦೯೮ ಇಂಚು) ಉದ್ದವಿದೆ.ಪುರುಷ ಜಾತಿಗೆ ಸೇರಿದವು,ಗಾಢವಾದ ಮೈ ಬಣ್ಣದೊಂದಿಗೆ ಸ್ವಲ್ಪ ಸಣ್ಣದಾಗಿರುತ್ತದೆ.ಹಾಗೆಯೆ ಅವುಗಳ ಹೊಟ್ಟೆಯ ಭಾಗದಲ್ಲಿ,ವಿಶಿಷ್ಟವಾದ ಕಪ್ಪು ಬಣ್ಣದ ಪ್ಯಾಚ್ ಇರುವುದರಿಂದ,ಪುರುಷ ಜಾತಿಯನ್ನು ಸ್ತ್ರೀ ಜಾತಿಯೊಂದಿಗೆ ಹೋಲಿಸಿದರೆ,ಸುಲಭವಾಗಿ ಅವುಗಳನ್ನು ಈ ಒಂದು ಬಣ್ಣ ವ್ಯತ್ಯಾಸದಿಂದ ವಿಂಗಡಿಸಬಹುದು.ಮತ್ತು "ಸೆಕ್ಸಕೋಂಬ್" ಅಂದರೆ,ಪ್ರಥಮ ಆಸರೆಯ ಟಾರಸಿನ ಮೇಲೆ ಸಾಲು ಸಾಲಾದ ಗಾಢವಾದ ಬಿರುಗೂದಲುಗಳು ಇವೆ.ಅದಲ್ಲದೆ,ಮಿಲನದ ಸಮಯದಲ್ಲಿ,ಒಂದು ಸ್ತ್ರೀ ಜಾತಿಯನ್ನು ಮತ್ತೊಂದು ಪುರುಷ ಜಾತಿಯು ಲಗತ್ತಿಸಬೇಕಾದಲ್ಲಿ,ಸಂತಾನೋತ್ಪತ್ತಿಯ ಭಾಗದ ಸುತ್ತಲು,ಕೂದಲಿನ ಹಾಗೆ ರಚನೆಗೊಂಡಿರುವ ಒಂದು ಬಗೆಯ ಅಂಗವು ಒಂದು ಗೊಂಚಲಿನ ಹಾಗೆ ಹರಡಿರುತ್ತವೆ.

ಜೀವನ ಮತ್ತು ಸಂತಾನೋತ್ಪತ್ತಿ

ಬದಲಾಯಿಸಿ
 
ಢ್ರೋಸೊಫಿಲಾ ಮೆಲಾನೊಗ್ಯಾಸ್ಟರ್ ೨೯ ಡಿಗ್ರೀಯಲ್ಲಿ ೩೦ ದಿನಗಳ ಕಾಲ ಬದುಕಬಲ್ಲದು.ಅನೇಕ ಜಾತಿಯ ಕೀಟಗಳ ಹಾಗೆಯೇ,ಇದರ ಅಭಿವೃದ್ದಿಯ ಅವಧಿಯು ತಾಪಮಾನದ ಮೇಲೆ ಅವಲಂಭಿಸಿರುತ್ತದೆ.ಕಡಿಮೆಯೆಂದರು ಇದರ ಅಭಿವೃದ್ದಿಯ ಅವದಿಯೆಂದರೆ,೭ ದಿನಗಳು ಮತ್ತು ೨೮ ಡಿಗ್ರೀ ತಾಪಮಾನದಲ್ಲಿ ನಡೆಯುತ್ತದೆ.ಕೆಲವೊಮ್ಮೆ ಶಾಖದ ಒತ್ತಡದಿಂದ,ಅಭಿವೃದ್ದಿಯ ಕಾಲವು ಹೆಚ್ಚಾಗುವ ಸಾಧ್ಯತೆಗಳೂ ಸಹ ಇದೆ(೧೧ ದಿನಗಳು ಮತ್ತು ೩೦ ಡಿಗ್ರೀ).ಆದರ್ಶ ಸ್ಥಿತಿಯಲ್ಲಿ,ಅಂದರೆ ೨೫ ಡಿಗ್ರೀಯಲ್ಲಿ ಅಭಿವೃದ್ದಿಯ ಕಾಲವು ೮.೫ ದಿನಗಳು.೧೧-೧೯ ದಿನಗಳು  ಮತ್ತು ೧೨ ಡಿಗ್ರೀಯಲ್ಲಿ ೫೦ ದಿನಗಳಾಗುವ ಸಾಧ್ಯತೆಗಳಿವೆ.ಕ್ಕಿಕಿರಿದ ಪರಿಸ್ಥಿತಿಯಲ್ಲಿ,ಅಭಿವೃದ್ದಿಯ ಸಮಯವು ಹೆಚ್ಚಾಗುತ್ತದೆ,ಹಾಗೆಯೆ ಉದಯೋನ್ಮುಖ ಸಂದರ್ಭಗಳಲ್ಲಿ ಚಿಕ್ಕದಾಗಿರುತ್ತದೆ.ಸ್ತ್ರಿ ಜಾತಿಯು ಒಂದು ಬಾರಿಗೆ ೪೦೦ ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅವುಗಳನ್ನು ಕೊಳೆಯುತ್ತಿರುವ ಹಣ್ಣುಗಳ ಮೇಲೆ ಅಥವಾ ಅಣಬೆಗಳ ಮೇಲೆ ಮತ್ತು ಸಸ್ಯದ ಜೀವರಸದ ಹರಿವುಗಳಲ್ಲಿ,ಹೀಗೆ ಸೂಕ್ತ ಸಾಮಾಗ್ರಿಗಳ ಮೇಲೆ ತನ್ನ ಮೊಟ್ಟೆಗಳನ್ನು ಇಡುತ್ತದೆ.ಈ ಮೊಟ್ಟಗಳು ೦.೫ ಮಿಲಿ ಮೀಟರ್ ಉದ್ದವಿದ್ದು,೧೨-೧೫ ಗಂಟೆಗಳ ನಂತರ ಮರಿಯಾಗುತ್ತದೆ(೨೫ ಡಿಗ್ರೀ).೨೪ ಗಂಟೆ ಮತ್ತು ೪೮ ಗಂಟೆಗಳ ಕಾಲದ ಅವಧಿಯಲ್ಲಿ ಎರಡು ಬಾರಿ ಕವಚ ಕಳಚುವದರ ಮೂಲಕ,ಪರಿಣಾಮವಾಗಿ ಹೊರಬಂದ ಮರಿಗಳು,ನಾಲ್ಕು ದಿನಗಳ ಕಾಲ ಬೆಳೆಯುತ್ತದೆ(೨೫ ಡಿಗ್ರೀ).ಈ ಒಂದು ಸಮಯದಲ್ಲಿ,ಅವುಗಳು ಹಣ್ಣುಗಳನ್ನು ವಿಘಟಿಸುವ ಸೂಕ್ಮ ಜೀವಿಗಳ ಮೇಲೆ ಪೋಷಿಸುತ್ತದೆ ಹಾಗೂ ಅದೇ ಹಣ್ಣುಗಳ ಸಿಹಿರುಚಿಯನ್ನೂ ಸಹ ಪೋಷಿಸತ್ತದೆ.ಹೀಗೆಯೇ ಸ್ವಲ್ಪ ಕಾಲಗಳನ್ನು ಕಳೆದನಂತರ,ನಾಲ್ಕು ದಿನಗಳ ದೀರ್ಘ ಕಾಲದ ರೂಪ ಪರಿವರ್ತನೆಯ ಪ್ರಕ್ರಿಯೆಗೆ ಒಳಗಾಗುತ್ತದೆ.ನಂತರ ಪೂರ್ಣಾಕಾರದ ಕೀಟವಾಗಿ ಗೋಚರಿಸುತ್ತದೆ.ತದನಂತರ,೮-೧೨ ಗಂಟೆಯ ಕಾಲಾವದಿಯಲ್ಲಿ ಸ್ತ್ರೀ ಕೀಟವು ಪುರುಷ ಕೀಟದ ಗ್ರಹಿಸುವಿಕೆಗೆ ಆಕರ್ಷಿತವಾಗುತ್ತದೆ.ಸ್ತ್ರೀ ಜಾತಿಯಲ್ಲಿ ಅದರ ವೀರ್ಯದ ವರ್ತನೆಯನ್ನು ಮತ್ತು ಸಂಗಾತಿಯ ಆಯ್ಕೆಯನ್ನು ಅದರ ನಿರ್ದಿಷ್ಟವಾದ ನರಕೋಶದ ಗುಂಪಿನ ಪ್ರಕ್ರಿಯೆಯಿಂದ ಪರಿಣಾಮ ಬೀರುತ್ತದೆ.ಹೀಗೆ ಹೊಟ್ಟೆ ಭಾಗದ ಒಂದು ಗುಂಪಿನ ನರ ಬಳ್ಳಿಯು ಆಕೆಯು ಸಂಭೋಗಿಸುವ ಸಂದರ್ಭದಲ್ಲಿ ದೇಹದ ಚಲನೆಯನ್ನು ತಡೆಯಲು ಅವಕಾಶ ಮಾಡಿಕೊಡುತ್ತದೆ.ಹೀಗೆ ಈ ನರಕೋಶದ ಸಕ್ರಿಯಗೊಳಿಸುವಿಕೆಯಿಂದ ಆ ಸ್ತ್ರೀ ಕೀಟವು ತನ್ನ ದೇಹದ ಚಲನೆಯನ್ನು ನಿಲ್ಲಿಸಲು ಉಂಟುಮಾಡುತ್ತದೆ ಹಾಗೆಯೆ ಪರುಷ ಕೀಟದ ಆರೋಹಿಸುವಿಕೆಗೆ ತನ್ನನ್ನು ಮೂಡಿಸಿಕೊಳ್ಳುತ್ತದೆ.ಒಂದು ವೇಳೆ ಆ ನರಕೋಶದ ಗುಂಪು ನಿಷ್ಕ್ರಿಯಗೊಂಡಲ್ಲಿ,ಸ್ತ್ರೀ ಕೀಟವು ತನ್ನ ಚಲನೆಯನ್ನು ಮುಂದುವರೆಸಿ,ಸಂಭೋಗಿಸುವ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ.ಸಾಮಾನ್ಯವಾಗಿ ಅನೇಕ ರಾಸಾಯನಿಕ ಸಂಕೇತಗಳಿಂದಾಗಿ,ಈ ನರಕೋಶಗಳನ್ನು ಮತ್ತೆ ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. 

ಅನುವಂಶಿಕ ವಿಶ್ಲೇಷಣೆಯಲ್ಲಿ ಇದರ ಬಳಕೆ ಮತ್ತು ಅದರ ಇತಿಹಾಸ

ಬದಲಾಯಿಸಿ
ಅನುವಂಶಿಕ ಕ್ರಮಾವಳಿ ವಿಶ್ಲೇಷಣೆಗೆ ಡ್ರೋಸೊಫಿಲಾ ಮೆಲಾನೋಗ್ಯಾಸ್ಟರ್ ಎಂಬ ಈ ಒಂದು ಕೀಟವನ್ನು ಬಳಸಲಾಗಿದೆ ಮತ್ತು ಇಂದು ಎಲ್ಲಾ ಯೂಕ್ಯಾರಿಯೋಟಿಕ್ ಜೀವಿಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗಿದೆ ಹಾಗೆಯೇ ಇದು ತಳೀಯವಾಗಿಯೂ ಸಹ ಸಪರಿಚಿತವಾಗಿದೆ.ಎಲ್ಲಾ ಜೀವಿಗಳಲ್ಲಿ ಅನುವಂಶಿಕ ವ್ಯವಸ್ಥೆಯು ಒಂದೇ ಆಗಿರುವದರಿಂದ,ಈ ಬಗೆಯ ಕೀಟಗಳಲ್ಲಿ ನಡೆಯುವ ಟ್ರಾನ್ಸಲೇಶನ್ ಮತ್ತು ಟ್ರಾನ್ಸಕ್ರಿಪ್ಷನ್,ಎಂಬ ಕ್ರಿಯೆಗಳನ್ನು ಅರಿತುಕೊಂಡು,ಮಾನವನನ್ನು ಒಳಗೊಂಡು ಬೇರೆ ಬೇರೆ ಜೀವಿಗಳಲ್ಲಿಯೂ ಸಹ ಈ ರೀತಿಯ ಕ್ರಿಯೆಗಳನ್ನು ತಿಳಿದುಕೊಳ್ಳಲು ಸಹಾಯಕರವಾಗಿದೆ.ಥಾಮಸ್ ಹಂಟ್ ಮಾರ್ಗನ್ ರವರು ೧೯೧೦,ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಕೀಟಗಳನ್ನು ಬಳಸಿ ಆನುವಂಶಿಕತೆಯ ಪ್ರಯೋಗ ಅಧ್ಯಯನಕ್ಕೆ ಇವುಗಳನ್ನು ಬಳಸಲು ಆರಂಭಿಸಿದರು.ನಂತರ ಮಾರ್ಗನ್ ಮತ್ತು ಅವರ ವಿದ್ಯಾರ್ಥಿಗಳು,ಲಿಂಗಯೋಜಿತ ಪಿತ್ರಾರ್ಜಿತ,ಎಪಿಸ್ಟಾಸಿಸ್,ಮಲ್ಟಿಪಲ್ ಅಲೀಲ್ಸ್,ವಂಶವಾಹಿ ಮ್ಯಾಪಿಂಗ್ ಹೀಗೆ ಹಲವಾರು ಅನುವಂಶಿಕತೆ ತತ್ವಗಳನ್ನು ಸೃಷ್ಟೀಕರಿಸಲಾಯಿತು.ಡ್ರೋಸೊಫಿಲಾಅನ್ನು ಜೈವಿಕ ಸಂಶೋಧನೆಯಲ್ಲಿ ಅತ್ಯಂತವಾಗಿ ಅಧ್ಯಯನ ಮಾಡಲಾಗಿದೆ.ಅದರಲ್ಲೂ ತಳಿವಿಜ್ಞಾನ ಮತ್ತು ಬೆಳವಣಿಗೆಯ ಜೀವಶಾಸ್ತ್ರದಲ್ಲಂತೂ ವಿಶೇಷ ಗಮನ ಹರಿಸಲಾಗಿದೆ.ಇದಕ್ಕೆ ಹಲವಾರು ಕಾರಣಗಳೆಂದರೆ,೧)ಇದರ ರಕ್ಷಣೆಗೆ ಸಣ್ಣ ಸಾಧನಗಳು ಮತ್ತು ದೊಡ್ಡ ಗುಂಪಾಗಿದ್ದರೂ,ಇದನ್ನು ಪೋಷಿಸಲು ಬೇಕಾಗುವ ಕಡಿಮೆ ಸ್ಥಳ ಮತ್ತೆ ಒಟ್ಟಾರೆಯಾಗಿ,ಇದೆಲ್ಲದಕ್ಕೂ ಬೇಕಾಗುವ ಕಡಿಮೆ ವೆಚ್ಚತೆ.೨)ಇದು ಚಿಕ್ಕದಾಗಿದ್ದು,ಪ್ರಯೋಗಾಲಯದಲ್ಲಿ ಬೆಳೆಸಲು ಸುಲಭವಾಗಿರುತ್ತದೆ ಮತ್ತು ಇದರ ಮರುವಳಿಕೆಯಿಂದ ರೂಪವಿಜ್ಞಾನವನ್ನು ತಾದಾತ್ಮ್ಯಗೊಳಿಸಲು ಸುಲಭ.೩)ಅದರ ಬೆಳವಣಿಗೆಯ ಸಮಯ ಕಡಿಮೆ ಅವಧಿಯಾದ್ದರಿಂದ(೧೦ ದಿನಗಳು) ಕೆಲವೇ ವಾರಗಳಲ್ಲಿ ಇದರ ಹಲವಾರು ಪೀಳಿಗೆಯ ಬಗ್ಗೆ ಅಧ್ಯಯನ ಮಾಡಬಹುದು.೪)ಹೆಚ್ಚಿನ ಸಂತಾನಶಕ್ತಿ(ಸ್ತ್ರೀ ಕೀಟವು ಒಂದು ದಿನಕ್ಕೆ ೧೦೦ ಮೊಟ್ಟೆಗಳನ್ನು ಇಡುವ ಸಾಧ್ಯತೆಗಳಿವೆ,ಬಹುಶಃ ಜೀವಮಾನದಲ್ಲಿ ೨೦೦೦ ಮೊಟ್ಟೆಗಳನ್ನು ಇಡಬಹುದು.೫)ಸ್ತ್ರೀ ಮತ್ತು ಪುರುಷ ಕೀಟಗಳ ನಡುವೆ ಇರುವ ವಿಷೇಶ ವ್ಯತ್ಯಾಸಗಳನ್ನು ಗುರುತಿಸಬಹುದು.೬)೪ ಜೊತೆ ವರ್ಣತಂತುಗಳಿವೆ:೩ ಜೊತೆ ಅಲಿಂಗಗಳು ಮತ್ತು ೧ ಜೊತೆ ಲೈಂಗಿಕ ವರ್ಣತಂತುಗಳು.೭)ಇದರ ಸಂಪೂರ್ಣ ಜೀನೋಂಅನ್ನು ಅನುಕ್ರಮಗೊಳಿಸಲಾಗಿದೆ ಮತ್ತು ಇದನ್ನು ೨೦೦೦ ಇಸವಿಯಲ್ಲಿ ಮೊದಲು ಪ್ರಕಟಿಸಲಾಯಿತು.

ಮಾನವ ಮತ್ತು ಡ್ರೋಸೊಫಿಲಾ ನಡುವಿನ ಹೋಲಿಕೆ

ಬದಲಾಯಿಸಿ
'ನ್ಯಾಷ್ನಲ್ ಹ್ಯುಮನ್ ಜೀನೋಂ ರಿಸರ್ಚ್ ಇನ್ಟ್ಸಿಟ್ಯೂಟ್',ಮಾರ್ಚ್ ೨೦೦೦ ಇಸವಿಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ,ಮಾನವನಿಗೂ ಮತ್ತು ಈ ಕೀಟಕ್ಕೂ ನಡುವೆ ಶೇಕಡ ೬೦ರಷ್ಟು ಜೀನ್ಗಳು ಸಂರಕ್ಷಿತವಾಗಿದೆ ಎಂದು ಅಂದಾಜು ಮಾಡಲಾಗಿದೆ.ಶೇಕಡ ೭೫ರಷ್ಟು ಮಾನವನ ರೋಗಕ್ಕೆ ಕಾರಣವಾಗಿರುವ ಜೀನ್ಗಳು,ಈ ಕೀಟದ ಜೀನ್ಗಳಿಗೆ ಒಪ್ಪುತ್ತವೆ ಮತ್ತು ಶೇಕಡ ೫೦ರಷ್ಟು ಈ ಕೀಟದ ಪ್ರೋಟೀನ್ ಅನುಕ್ರಮವೂ ಸಸ್ತನಿಗಳ ಅನುಕ್ರಮಕ್ಕೆ ಹೋಲುತ್ತದೆ.ನರಕೋಶ ಕ್ಷೀಣಗೊಳ್ಳುವ ಅಸ್ವಸ್ಥಿತಗಳಾದ,ಪಾರ್ಕಿನ್ಸನ್ಸ್,ಹನ್ಟಿಂಗ್ಸನ್ಸ್ ,ಆಲ್ಜೈಮರ್ಸ ಹೀಗೆ ಹಲವಾರು ರೋಗಗಳಿಗೆ ಆನುವಂಶಿಕ ಮಾದರಿಯನ್ನಾಗಿ ಬಳಸಲಾಗಿದೆ.ಇದಲ್ಲದೆ ಆಕ್ಸಿಡೇಟಿವ್ ಒತ್ತಡ,ವಿನಾಯಿತಿ,ಡಯಾಬಿಟೀಸ್,ಕ್ಯಾನ್ಸರ್,ವಯಸ್ಸಾಗುವಿಕೆ ಹಾಗೂ ಮಾದಕ ವ್ಯಸನಕ್ಕೆ ಒಳಗೊಂಡ ಯಾಂತ್ರಿಕತೆಯನ್ನೂ ಸಹ ಅಧ್ಯಯನ ಮಾಡುವುದಕ್ಕೆ ಡ್ರೋಸೊಫಿಲಾಅನ್ನು ಬಳಸಲಾಗಿದೆ.ಹೀಗೆ ಹಲವಾರು ಕಾರಣಗಳಿಂದಾಗಿ,ಅಕಾರದಲ್ಲಿ ನೋಡಲು ಚಿಕ್ಕದಿದ್ದರೂ ಹೀಗೆ ಹಲವಾರು ವಿಚಾರ ಮತ್ತು ರೀತಿ ನೀತಿಗಳಲ್ಲಿ ನಾನಾ ಬಗೆಯ ಉಪಯೋಗಳನ್ನು ಈ "ಡ್ರೋಸೊಫಿಲಾ ಮೆಲಾನೊಗ್ಯಾಸ್ಟರ್" ಎಂಬ ಕೀಟ ವಿಜ್ಞಾನದಲ್ಲಿ ಮೆಚ್ಚುಗೆಯನ್ನು ಪಡೆದಿದೆ.

==ಉಲ್ಲೇಖನಗಳು==[] []

  1. http://nptel.ac.in/courses/102106035/Module%202/Lecture%206/Lecture%206.pdf
  2. http://labs.biology.ucsd.edu/markow/documents/ReproductiveBehaviorofDrosophilainlab.pdf