ಸದಸ್ಯ:Sandhya aladka/ಮಹಾರಾಜಪುರಂ ವಿಶ್ವನಾಥ ಅಯ್ಯರ್.

 

ಮಹಾರಾಜಪುರಂ ವಿಶ್ವ ಅವರು ಭಾರತದ ಶ್ರೇಷ್ಠ ಕರ್ನಾಟಕ ಗಾಯಕರಲ್ಲಿ ಒಬ್ಬರು. [] ಅವರು ಸಂಗೀತ ಕಲಾನಿಧಿ ಮತ್ತು ಸಂಗೀತ ಭೂಪತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಆರಂಭಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ

ವಿಶ್ವನಾಥ ಅಯ್ಯರ್ ಅವರು ಮಹಾರಾಜಪುರದ ರಾಮ ಅಯ್ಯರ್ ಎಂಬ ಗಾಯಕನಿಗೆ ಜನಿಸಿದರು.

ಅವರು ಮಹಾ ವೈದ್ಯನಾಥ ಅಯ್ಯರ್ ಅವರ ನೇರ ಶಿಷ್ಯರಾದ ಉಮಾಯಲ್ಪುರಂ ಸ್ವಾಮಿನಾಥ ಅಯ್ಯರ್ ಅವರಿಂದ ಆರಂಭದಲ್ಲಿ ತರಬೇತಿ ಪಡೆದರು. ಮಹಾ ವೈದ್ಯನಾಥ ಅಯ್ಯರ್ ಅವರು ತ್ಯಾಗರಾಜರ ನೇರ ಶಿಷ್ಯರಿಂದ ಕಲಿತರು ಮತ್ತು ವಿಶ್ವನಾಥ ಅಯ್ಯರ್ ಅವರು ತ್ಯಾಗರಾಜ ಶಾಲೆಯ ಐದನೇ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ.

ಪಾಲ್ಘಾಟ್ ರಾಮ ಭಾಗವತರು ಉಮಯಾಲಪುರಂ ಸ್ವಾಮಿನಾಥ ಅಯ್ಯರ್ ಅವರ ಬಳಿ ಸಹ ವಿದ್ಯಾರ್ಥಿಯಾಗಿದ್ದರು. []

 
ನಂದನಾರ್ ನಲ್ಲಿ ಕೆ.ಬಿ.ಸುಂದರಾಂಬಾಳ್ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್

ಗಾಯನ ವೃತ್ತಿ.

ಬದಲಾಯಿಸಿ

ಅವರ ಸಂಗೀತದ ಒಂದು ವಿಶಿಷ್ಟ ಲಕ್ಷಣವೆಂದರೆ ರಾಗದ ವಿಸ್ತಾರದಲ್ಲಿ ಅವರ ಉತ್ತಮ ಯಶಸ್ಸ, ಮೋಹನಂ ರಾಗದ ಆಲಾಪನ ಅವರ ವಿಶೇಷತೆಗಳಲ್ಲಿ ಒಂದಾಗಿತ್ತು. 'ಕಲ್ಪನಾ ಸಂಗೀತ'ದ ಯಶಸ್ಸನ್ನು ಶ್ಲಾಘಿಸಲಾಗಿದೆ ಮತ್ತು ರಾಗದ ವಿಸ್ತೃತ , ಸ್ವರ ಗಾಯನದಲ್ಲಿ ಕಲ್ಪನಾ ಶಕ್ತಿಯುಳ್ಳ ಸಂಗೀತ, ಅವರ ವಿಶೇಷತೆ.

ಅವರ ಪ್ರಮುಖ ಶಿಷ್ಯರಲ್ಲಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಮನ್ನಾರ್ಗುಡಿ ಸಾಂಬಶಿವ ಭಾಗವತರ್ ಮತ್ತು ಅವರ ಸ್ವಂತ ಮಗ ಮಹಾರಾಜಪುರಂ ಸಂತಾನಂ ಸೇರಿದ್ದಾರೆ. []

ಚಲನಚಿತ್ರ ವೃತ್ತಿಜೀವನ.

ಬದಲಾಯಿಸಿ

ಅವರು ೧ ಜನವರಿ ೧೯೩೫ ರಂದು ಬಿಡುಗಡೆಯಾದ ತಮಿಳು ಚಲನಚಿತ್ರ "ಭಕ್ತ ನಂದನಾರ್" ನಲ್ಲಿ ಭೂಮಾಲೀಕ ವೆಧಿಯಾರ್ ಪಾತ್ರದಲ್ಲಿ ನಟಿಸಿದರು.  ಕೆಬಿ ಸುಂದರಾಂಬಳ್ ಈ ಚಿತ್ರದಲ್ಲಿ ನಂದನಾರ್ ಆಗಿ ನಟಿಸಿದ್ದಾರೆ.

ಉಲ್ಲೇಖಗಳು.

ಬದಲಾಯಿಸಿ

 

  1. Subrahmaniam, V. Music Season / Music : Of Style and Stalwarts. The Hindu, 1 December 2007.
  2. "Palghat Rama Bhagavathar". Archived from the original on 20 May 2021. Retrieved 20 May 2021.
  3. Like the Singing Wind from the Ghat. The Hindu - Kerala News, 13 November 2005.


[[ವರ್ಗ:೧೮೯೬ ಜನನ]]