ಸದಸ್ಯ:Sahana Yadav/ನನ್ನ ಪ್ರಯೋಗಪುಟ/1
ಹೆಲನ್ ಡನ್ಮೋರ್
ಬದಲಾಯಿಸಿಪರಿಚಯ
ಬದಲಾಯಿಸಿಹೆಲನ್ ಆಂಗ್ಲ ಭಾಷೆಯ ಲೇಖಕಿ ಹಾಗು ಕಾದಂಬರಿಕಾರರಾಗಿದ್ದರು.ಮಕ್ಕಳ ಮನಸ್ಸಿನಲ್ಲಿ ಇವರು ಧೈರ್ಯ, ಆತ್ಮವಿಶ್ವಾಸ ,ಸಹನೆ, ಪ್ರೀತಿ ಪ್ರೇಮ ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ಮಹಾನ್ ವ್ಯಕ್ತಿ ಹೆಲನ್ ಡನ್ಮೋರ್. ೬೪ನೆಯ ವಯಸ್ಸಿನಲ್ಲಿ ಕ್ಯಾನ್ಸರ್ ಯೆಂಬ ಕಾಯಿಲೆಯಿಂದ ತೀರಿಕೊಂಡರು.ಆರೆಂಜ್ ಪ್ರಶಸ್ತಿ ಪಡೆದು ಎಲ್ಲರ ಗೌರವ, ಪ್ರೆಮಾಭಿಮಾನದಕ್ಕಿಸಿಕೊಂಡ ವಿಜೇತೆಗಾರರು ನಮ್ಮ ಹೆಲನ್ ಡನ್ಮೋರ್.ಲೇಖಕ ಫಿಲ್ಲಿಪ್ ಪುಲ್ಮನ್ ಇವರನ್ನು "ಒಳ್ಳೆಯ ಹಾಗು ಉದಾರ ಮನಸುಯಿರುವ ವ್ಯಕ್ತಿ"ಯೆಂದು ಟೀಕಿಸಿದ್ದಾರೆ, ಹಾಗೆಯೇ ಟ್ರೇಸಿ ಷೇವಿಯರ್ರವರು ಇವರನ್ನು "ಆಕರ್ಷಕವಾದ,ಸೊಗಸಾದ ಬರಹಗಾರ್ತಿ"ಯಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಜೀವನ
ಬದಲಾಯಿಸಿಹೆಲನ್ ೧೯೫೨ನೆಯ ಇಸವಿ ಡಿಸೆಂಬರ್ ೧೨ ರಂದು ಬೆವರ್ಲಿ,ಯಾರ್ಕ್ಶೈರ್, ಇಂಗ್ಲೆಂಡಲ್ಲಿ ಜನಿಸಿದರು.ಬೆಟ್ಟಿ(ನೀ ಸ್ಮಿಥ್) ಹಾಗು ಮೌರಿಸ್ ಡನ್ಮೋರ್ರವರ ನಾಲ್ಕು ಮಕ್ಕಳಲ್ಲಿ ಎರಡನೆಯವರು ನಮ್ಮ ಹೆಲನ್ ಡನ್ಮೋರ್.ಹೆಲನ್ ಮನೆತನದ ಮೂಲ ಹೆಸರು ಡನ್ಮೋರ್.ಅವರು ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಅಧ್ಯಯನ ಮಾಡಿದರು.ಎರಡು ವರ್ಷ(೧೯೭೩-೭೫)ಗಳ ಕಾಲ ಫಿನ್ಲ್ಯಾಂಡ್ನಲ್ಲಿ ಶಿಕ್ಷಕಿಯಾಗಿ ಕೆಲಸಮಾಡಿದರು.ಆದನಂತರ ಬ್ರಿಸ್ಟಲ್ನಲ್ಲಿ ವಾಸಮಾಡಿದರು.ಡನ್ಮೋರ್ ಅವರು ಸಾಹಿತ್ಯದ ರಾಯಲ್ ಸೊಸೈಟಿಯ ಸಹವರ್ತಿಯಾಗಿದ್ದರು.ಡನ್ಮೋರ್ರವರ ಕೆಲವು ಪುಸ್ತಕಗಳನ್ನು ಶಾಲೆಗಳಲ್ಲಿ ಓದುವುದಕ್ಕಾಗಿ ಯೋಜನೆಗಳನ್ನು ಮಾಡಲಾಗಿದೆ.
ವೈವಾಹಿಕ ಜೀವನ
ಬದಲಾಯಿಸಿ೧೯೮೦ ವರ್ಷದಲ್ಲಿ ಹೆಲನ್ ಡನ್ಮೋರವರು ವಕೀಲರಾದ ಫ್ರಾಂಕ್ ಚಾರ್ನ್ಲಿರವರನ್ನು ವಿವಾಹವಾದರು. ಅವರಿಗೆ ಒಬ್ಬ ಪುತ್ರ,ಒಬ್ಬ ಪುತ್ರಿ, ಒರ್ವ ದತುತ್ ಪುತರ್ ಮತ್ತು ಮೂರು ಮೊಮ್ಮಕ್ಕಳುಯಿದರು.
ಸಾಹಿತ್ಯ
ಬದಲಾಯಿಸಿಕಾದಂಬರಿಗಳು
ಬದಲಾಯಿಸಿ*ಝೆನ್ನೋರ್ ಇನ್ ಡಾರ್ಕ್ನೆಸ್ (೧೯೯೩). *ಬರ್ನಿಂಗ್ ಬ್ರೈಟ್ (೧೯೯೪). *ಆ ಸ್ಪೆಲ್ ಆ ವಿಂಟರ್ (೧೯೯೬). *ಟಾಕಿಂಗ್ ಟು ದಿ ಡೆಡ್ (೧೯೯೬). *ಯುವರ್ ಬ್ಲೂ ಐಡ್ ಬಾಯ್ (೧೯೯೮). *ವಿಥ್ ಯುವರ್ ಸಿರೂಕೆಡ್ ಹಾರ್ಟ್ (೧೯೯೯). *ದಿ ಸೀಜ್ (೨೦೦೨). *ಮೌರ್ನಿಂಗ್ ರೂಬಿ (೨೦೦೩). *ಹೌಸ್ ಆಫ಼್ ಒರ್ಫ್ನಸ್ (೨೦೦೬). *ಕೌಂಟಿಂಗ್ ದಿ ಸ್ಟಾರ್ಸ್ (೨೦೦೮). *ದಿ ಬೆಟ್ರಯಲ್ (೨೦೧೦). *ದಿ ಲೈ (೨೦೧೪). *ದಿ ಬಿರ್ಡ್ಕ್ಯಾಗೆ ವಾಕ್ (೨೦೧೭).
ಸಣ್ಣ ಕಥೆಗಳ ಸಂಗ್ರಹಣೆ
ಬದಲಾಯಿಸಿ*ಲವ್ ಆಫ಼್ ಫ್ಯಾಟ್ ಮೆನ್ (೧೯೯೭). *ಐಸ್ಕ್ರೀಂ (೨೦೦೧). *ರೋಜ್,೧೯೯೪ (೨೦೦೫).
ಮಕ್ಕಳ ಪುಸ್ತಕಗಳು
ಬದಲಾಯಿಸಿ*ಗೋಯಿಗ್ ಟು ಇಜಿಪ್ಟ್. *ಇನ್ ದಿ ಮಂಕಿ. *ಗೋ ಫ಼ಾಕ್ಸ್. *ಫ಼ಾಟ್ಲ್ ಎರರ್. *ಅಮೀನಾಸ್ ಬ್ಲಾಂಕೆಟ್. *ಬ್ರೆದರ್ ಬ್ರೆದರ್ ಸಿಸ್ಟರ್ ಸಿಸ್ಟರ್. *ತಾರಾಸ್ ಟ್ರೀ ಹೌಸ್ ಮುಂತಾದವು.
ಕವನ ಸಂಕಲನ
ಬದಲಾಯಿಸಿ*ದೀ ಆಪ್ಪೆಲ್ ಫ಼ಾಲ್. * ದೀ ಸೀ ಸ್ಕೆಟೆರ್. * ದೀ ರಾಹ್ ಗಾರ್ಡೆನ್ *ಷೊರ್ಟ್ ದೇಸ್. *ಲಾಂಗ್ ನೈಟ್ಸ್. * ಸೀಕ್ರೆಟ್ಸ್. *ಗ್ಲಾಡ್ ಆಫ಼್ ದೀಸ್ ಟಯ್ಮ್ಸ್.
ಪ್ರಶಸ್ತಿ,ಪುರಸ್ಕಾರ ಮತ್ತು ಬಿರುದುಗಳು
ಬದಲಾಯಿಸಿ*೧೯೯೪ರಲ್ಲಿ ' ಝೆನ್ನೋರ್ ಇನ್ ಡಾರ್ಕ್ನೆಸ್ 'ಗೆ " ಮಕ್ಕಿತ್ತೇರಿಕ್ "ಪ್ರಶಸ್ತಿ. *೧೯೯೬ರಲ್ಲಿ ' ಆ ಸ್ಪೆಲ್ ಆಫ಼್ ವಿಂಟರ್ 'ಗೆ " ಆರೆಂಜ್ ಪ್ರಶಸ್ತಿ ". *೧೯೯೦ರಲ್ಲಿ " ಕಾರ್ಡಿಫ್ ಇಂಟರ್ನ್ಯಾಷನಲ್ ಪೊಯೆಟ್ರಿ " ಬಹುಮಾನ. *೨೦೧೦ರಲ್ಲಿ ' ದಿ ಮಲರ್ಕೆಯ್ 'ಗೆ "ನ್ಯಾಷನಲ್ ಪೊಯೆಟ್ರಿ" ಪ್ರಶಸ್ತಿ,ಹಾಗೂ *೨೦೧೫ರಲ್ಲಿ 'ದಿ ಲಯ್'ವೆಂಬ ಕೆಲಸಕ್ಕೆ ವಾಲ್ಟರ್ ಸ್ಕೊಟ್ ಪ್ರಶಸ್ತಿ ನೀಡಲಾಗಿತ್ತು.
ಹೀಗೆ ಅವರು ತಮ್ಮ ಸಾವಿರಾರು ಸುಂದರವಾದ ಕೃತಿಗಳಿಗೆ ಬಹಳಷ್ಟು ಹೆಚ್ಚು ಪುರಸ್ಕಾರಗಳು ಪಡೆದಿದ್ದಾರೆ.
ಮರಣ
ಬದಲಾಯಿಸಿಹೆಲನ್ರವರು ಇತ್ತೀಚೆಗೆ ಕ್ಯಾನ್ಸರ್ ರೋಗನಿರ್ಣಯವಾಗಿದ್ದರು ಎಂದು ತಿಳಿದುಬಂದಿತ್ತು.ದುರದೃಷ್ಟವಶಾತ್ ಹೆಲನ್ ಡನ್ಮೋರ್ ಜೂನ್ ೫,೨೦೧೭ರಂದು ನಿಧನರಾದರು.
ರೆಫ಼ರೆನ್ಸ್
ಬದಲಾಯಿಸಿ[೧] [೨] [೩]