ಸದಸ್ಯ:Sachin l acharya/ನನ್ನ ಪ್ರಯೋಗಪುಟ3
ಉಪ್ಪಿನಂಗಡಿ ಕುಮಾರಾಧಾರ- ನೇತ್ರಾವತಿ ನದಿ
ಇತಿಹಾಸ ಮತ್ತು ಮಹತ್ವ
ಬದಲಾಯಿಸಿಹಿಂದೂ ಧರ್ಮ ಹಿಂದೂ ದೇಶದ ನಾಗರೀಕತೆಗಳು ನದೀ ತಟದಲ್ಲಿ ಬೆಳೆದು ಬಂದವುಗಳು. ನದೀ ತಟದಲ್ಲೇ ನಮ್ಮ ಧಾರ್ಮಿಕ ವೈಜ್ಞಾನಿಕ ವೈಚಾರಿಕ ತಿಳುವಳಿಕೆಗಳು ಕಣ್ತೆರೆದು ಪರಿ ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕøತಿ ಅದು ಎಂದೂ ನಿಂತಲ್ಲಿ ನಿಂತು ಕೊಳಕ್ಕಾಗಲಿಲ್ಲ. ಪ್ರತೀ ಕ್ಷಣಕ್ಕೂ ಹರಿಯುತ್ತಾ ಹೊಸ- ಹೊಸತನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷಶಾಲಿಯಾಯಿತು.ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯ ಕ್ಷೇತ್ರಗಳು ನದೀ ತಟದಲ್ಲಿ ನಿರ್ಮಾಣಗೊಂಡವು. ಹಿಮಾಲಯದ ಪಾವನ ಪ್ರವಾಹಗಳ ತಡಿಯಲ್ಲಿ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ,ಉಳಿದ ಈ ದೇಶದಲ್ಲಿ ಮೊದಲ ಸಾಲಿನಲ್ಲಿ ಬರಲಲ್ಲ ಕಾಶಿ ಗಂಗೆಯ ತಡಿಯಲ್ಲಿ, ಪ್ರಯಾಗ ಗಂಗೆ ಯಮುನೆಯರ ಸಂಗಮದಲ್ಲಿ, ಕಲ್ಕತ್ತೆಯ ಕಾಳಮಂದಿಗಳ ಹೂಗ್ಲೀ ನದೀ ತೀರದಲ್ಲಿ ಅಯೋಧ್ಯೆ ಸರಯೂ ನದೀ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ -ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮ್ಮ ಜಿಲ್ಲೆಯಲ್ಲೇ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸನಿಹದಲ್ಲಿ, ಕಟೀಲು ನಂದಿನೀ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾದಾರೆಯ ತಟದಲ್ಲಿ, ಬಪ್ಪನಾಡು ಶಾಂಭವೀ ತೀರದಲ್ಲಿ, ಪೊಳಲಿ ರಾಜರಾಜೇಶ್ವರಿ ಫಲ್ಗುಣಿ (ಗುರುಪುರ ಹೊಳೆ) ನದಿ ತೀರದಲ್ಲಿ ಗಾಗೆಯೇ ಶ್ರೀ ಸಹಸ್ರಲಿಂಗೇಶ್ವರನ ಈ ದಿವ್ಯ ಸನ್ನಿಧಿ ನೇತ್ರಾವತಿ ಕುಮಾರಾಧಾರ ನದಿಳ ಸಂಗಮ ಕ್ಷೇತ್ರದಲ್ಲಿ ಆಹಾ! ಎಂತಹ ಸೌಂದರ್ಯಬರಿತ ಈ ನಾಡು ನೇತ್ರಾವತಿ ನದಿಯ ಉದ್ಭವಲಿಂಗದ ಸುತ್ತಮುತ್ತ ನದಿಯಲ್ಲಿ ಸಂಜೆ ಹೊತ್ತು ವಿಹರಿಸಿ ಶದರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವರ ದರ್ಶನವನ್ನು ಪ್ರತಿನಿತ್ಯ ಮಾಡಿ ಜನ ಪಾವನರಾಗಿದ್ದಾರೆ, ಆಗುತ್ತಿದ್ದಾರೆ.
ಉಪ್ಪು- ಬಾರು(ಭತ್ತ)ಗಳ ವಿನಿಮಯ ಕೇಂದ್ರವಾಗಿ ಉಬಾರ್(ತುಳು) ಉಪ್ಪಿನಂಗಡಿ ಸ್ಥಳ ನಾಮದಿಂದ ಪ್ರಸಿದ್ದಿವಾಗಿದೆ.ಹಿಂದಿನ ಕಾಲದಲ್ಲಿ ನದಿಗಳಿಗೆ ಸೇತುವೆಗಳಿಲ್ಲದ ಕಾರಣ ಮಂಗಳೂರಿನಿಂದ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ಉಪ್ಪನ್ನು ಸಾಗಿಸಲಾಗುತ್ತಿತ್ತು. ಉಪ್ಪನ್ನು ಇಳಿಸಿ(ಬಾರ್) ಭತ್ತವನ್ನು ದೋಣಿಗೆ ತುಂಬಿಸಿ ಇಲ್ಲಿಂದ ಕೊಂಡೊಯ್ಯಲಾಗುತ್ತಿತ್ತು. ಆದುದರಿಂದ ಉಪ್ಪು-ಬಾರ್=ಉಬಾರ್ ಎಂದು ಈ ಸ್ಥಳವನ್ನು ಕರೆಯಲಾಯಿತು. ಉಪ್ಪಿನ ಅಂಗಡಿಗಳಿದ್ದುದರಿಂದ ಉಪ್ಪಿನಂಗಡಿ ಎಂದು ಪ್ರಸಿದ್ದಿ ಪಡೆಯಿತು. ತಾಲೂಕು ಕೇಂದ್ದವಾಗಿದ್ದ ಈ ಪಟ್ಟಣವು
1923 ನೆರೆಹಾವಳಿಗೆ ಒಳಗಾಯಿತು. ತಾಲೂಕು ಕೇಂದ್ದವು ಪುತ್ತೂರಿಗೆ ವರ್ಗಾವಾಣೆಗೊಂಡಿತು.ಬಳಿಕ ಉಪ್ಪಿನಂಗಡಿ, ಹೋಬಳಿ ಕೇಂದ್ರವಾಗಿ ಪರಿವರ್ತನೆಗೊಂಡಿತು.
ನೇತ್ರಾವತಿ ನದಿ
ಬದಲಾಯಿಸಿಕುಮಾರಧಾರ ನದಿ
ಬದಲಾಯಿಸಿಇತಿಹಾಸ
ಬದಲಾಯಿಸಿನೇತ್ರಾವತಿ ನದಿಯ ವರ್ಣನೆ
ಬದಲಾಯಿಸಿವರಾಹಯನಾನಂದಧಾರ ನೇತ್ರಾವತಿ ಸರಿತ್
ಶುಷ್ಕಾಂ ತದ್ಬಕ್ತಿಲತಿಕಾಂ ಪುಷಶೀಲಷ್ಣಾತಿ ಕಥಮನ್ಯಥಾ ಕೋಲಲೋಲಕೃಪಶೀಲ ಲೋಚನಾಂಭುಜ ಚುಂಬನಿ ಮಜ್ಜನ್ ನೇತ್ರಾವತಿ ತೋಯೇ ತದ್ದಯೇಕ್ಷಾಸ್ವದಂ ನಕಃ
ನೇತ್ರಾವತಿ ನದಿಯು ವರಾಹ ಪರ್ವತದ (ಕುದುರೆಮುಖ) ಕಣ್ಣಿನಂತಿರುವ ಬಾಗದಲ್ಲಿ ಹುಟ್ಟುವುದರಿಂದ ನೇತ್ರಾವತಿ ಎನಿಸಿದೆ. ಇದನ್ನು ಕಲಿಯುಗದಲ್ಲಿ ತಮ್ಮ ಸ್ನಾನ-ಪಾನ-ರೂಪ ಸೇವನೆಯಿಂದ ಶ್ರೀ ಹರಿ ಭಕ್ತಿಯನ್ನು ಹೆಚ್ಚಿಸುವ ನದಿಗಳಲ್ಲಿ ಒಂದು ಎಂಬುದಾಗಿ ಭಾಗವತ ಪುರಾಣದಲ್ಲಿ ಕೊಂಡಾಡಿದೆ. ವರಾಹ ದೇವರ ಕಣ್ಣಿನಿಂದ ಹುಟ್ಟಿ ಬಂದ ನದಿ ಎಂದ ಮೇಲೆ ನೇತ್ರಾವತಿಯು ಅವನ ಕಣ್ಣೀರಿನ ಪ್ರವಾಹವೆಂದಾಯಿತು. ಅದು ವರಾಹ ದೇವರ ಆನಂದಶ್ರುವೋ, ದುಃಖಶ್ರುವೋ ಎಂಬ ಪ್ರಶ್ಕೆಗೆ ವರಾಹ ದೇವರು ಆನಂದ ಪೂರ್ಣವಾದ ಶ್ರೀಹರಿಯಾದುದರಿಂದ ಆತನಿಗೆ ದುಃಖದ ಪ್ರಸ್ತಕ್ತಿಯೇ ಇಲ್ಲ. ಆದುದರಿಂದ ಇದು ಆನಾಂದಾಶ್ರುವೇ ಸರಿ ಹೊರತು ದುಃಖಾಶ್ರು ಅಲ್ಲ ಎಂಬುದನ್ನು ಅಪೂರ್ವಯುಕ್ತಿಯಿಂದಲೂ ಇಲ್ಲಿ ಸಮರ್ಥಿಸಿದರು. ನೇತ್ರಾವತಿ ನದಿಯ ನೀರಿನ ಸೇವನೆಯಿಂದ ಭಕ್ತಿ ಹೆಚ್ಚುವುದು ಎಂದು ಭಾಗವತ ಪುರಾಣಗಳಿಂದ ಸಿದ್ದವಾಗಿರುವುದರಿಂದ, ನೇತ್ರಾವತಿಯು ಭಗವಂತನ ಆನಂದಾಶ್ರುವೆಂದೇ ಖಚಿತವಾಗುತ್ತದೆ. ಆನಾಂದಾಶ್ರು ತಂಪಾಗಿಯೂ ದುಃಖಾಶ್ರುವು ಬೆಚ್ಚಾಗಾಗಿಯೂ ಇರುತ್ತದೆ ಎಂಬುದು ಲೋಕಸಿದ್ದವಾದ ವಿಚಾರ. ಲತೆಯು ಬಿಸಿಲಿಗೆ ಬಾಡುತ್ತದೆ. ತಣ್ಣೀರಿಗೆ ಬೆಳೆಯುತ್ತದೆ.ಇದರಲ್ಲಿ ಮಿಂದವರ ಭಕ್ತಿಲತೆಯು ಬೆಳೆಯುವುದು, ಶಾಸ್ತ್ರಸಿದ್ದ ಪ್ರಮೇಯವಾದುದರಿಂದ ಇದು ತಂಪಾದ ಆನಾಂದಾಸ್ರುವೇ ಸರಿ ಎಂದು ನಿರ್ಣಯವಾಗುತ್ತದೆ. ಎಂದೂ ಭತ್ತದೇ ಹರಿಯುವ ಈ ನದಿಯು ಪರಮಾತ್ಮನ ಸದಾನಂದತ್ವಕ್ಕೂ ದ್ಯೋತ್ಯಕ ಎಂಬ ಧ್ವನಿಯು ಇಲ್ಲಿದೆ. ಸುಮಾರು 96 ಕಿ.ಮೀ ಉದ್ದವಿರುವ ನೇತ್ರಾವತಿಯು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ನದಿ. ಮಂಗಳೂರಿನಿಂದ 10 ಕಿ.ಮೀ ದೂರವಿರುವ ಕೊಡಿಯಾಲದ ಬಳಿ ಅರಬ್ಬೀ ಸಮುದ್ದವನ್ನು ಸೇರುತ್ತದೆ.
ಕುಮಾರಾಧಾರ ನದಿಯ ವರ್ಣನೆ
ಬದಲಾಯಿಸಿಕುಮಾರಾಧಾರೇ ಸಜನೇದ್ಧಾರೇ ವಿಜ್ಞಾನಾಧಾರೆಯಾ/ ಪುನೀಹಿ ಮಾಮಘಸ್ತೋಮಂ ಲುನೀಹಿ ಸದನೀಹಿತಮ್//
ಕುಮಾರಾಧಾರೇ ತತೀರೇ ಮುಕ್ತಿದ್ವಾರೇ ಗುಣಾಕರೇ/ ತಪಸ್ತಂತಃ ಸನ್ಮಂತ್ರಂ ಜಪಂತ ಸ್ಯಾಮ ಸಂತತಮ್//
ಪಾರ್ವತಿ ಪರಮೇಶ್ವರರ ಪುತ್ರನಾದ ಸುಬ್ರಮಣ್ಯನಿಗೆ ತಾರಕಾಸುರನ ಮೇಲೆ ಯುದ್ದ ಮಾಡಲು ಹೊರಡುವ ಮುನ್ನ ದೇವೇಂದ್ರನು ಮಾಡಿದ ಸೇನಾಪತಿ ಪಟ್ಟಾಭಿಷೇಕದ ಹಾಲು ಹರಿದು ಕುಮಾರಾದಾರ ನದಿಯಾಯಿತೆಂದು ಬಲ್ಲವರು ತಿಳಿಸುತ್ತಾರೆ. “ ಸಜ್ಜನರನ್ನು ಉದ್ದಾರ ಮಾಡುವ ಕುಮಾರಾಧಾರಯೇ ನನಗೇ ಪರಮಾತ್ಮ ಸಂಬಂಧಿಯಾದ ವಿಶೇಷ ಜ್ಞಾನವನ್ನು ಕೊಟ್ಟು ನನ್ನನ್ನು ಪವಿತ್ರೀಕರಿಸು, ಅನಿಷ್ಠವಾಗಿರುವ ಪಾಪ ಸಮೂಹವನ್ನು ಕತ್ತರಿಸಿ ನಾಶ ಮಾಡು” ಎಂದು ಪ್ರಾರ್ಥಿಸಿದ್ದಾರೆ. ಇಲ್ಲಿ ಕುಮಾರಾಧಾರ ನದಿಯು ಹಾಲಿನ ಧಾರೆಯಾದುದರಿಂದ ಆ ಧಾರೆಯು ಅಂದರೆ ಪ್ರವಾಹವು ಪವಿತ್ರೀಕರಿಸುವ ಶಕ್ತಿಯುಳ್ಳದ್ದದೆಂದು ಕುಮಾರನ-ಧಾರೆ-ಕತ್ತಿಯ ಅಲಗು ಎಂಬ ಅರ್ಧವನ್ನು ಇಟ್ಟುಕೊಂಡು ಆ ಅಸಿ- ಧಾರೆಯಂತಹ ಕುಮಾರಾಧಾರೆಯು ಪೊದೆಯಂತೆ ಬೆಳೆದಿರುವ ಪಾಪರಾಶಿಯನ್ನು ಕತ್ತರಿಸಲೆಂದು ಕೇಳಿಕೊಂಡಿದ್ದಾರೆಂದು ಗೂಢಾಭಿಪ್ರಾಯಗಳು ಭಾಸವಾಗುತ್ತದೆ. ಪವಿತ್ರವಾದ ಕುಮಾರಧಾರೆ ದಡದಲ್ಲಿ ನಿರಂತರ ತಪಸ್ಸು ಮಾಡುತ್ತಾ, ಉತ್ತಮ ಮಂತ್ರಗಳನ್ನು ಜಪಿಸುತ್ತಾ ನಾವು ಮೋಕ್ಷ ಮಾರ್ಗವನ್ನು ಕ್ರಮಿಸುವಂತೆ ಆಗಲೆಂದು ಶ್ರೀವಾದಿರಾಜರು ಇಲ್ಲಿ ಪ್ರಾರ್ಥಿಸಿದ್ದಾರೆ.
ಇತಿಹಾಸ
ಬದಲಾಯಿಸಿಪ್ರಾಚೀನ ತೀರ್ಥ ಕ್ಷೇತ್ರಗಳಲ್ಲೊಂದಾದ ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ತೀರದಲ್ಲಿ ನೆಲೆಗೊಂಡಿರುವ ಪರಶಿವನ ಪವಿತ್ರ ತಾಣ, ಶ್ರೀ ಸಹಸ್ರಲಿಂಗಶ್ವರನ ಪರಮ ಸನ್ನಿಧಿ. ಉತ್ತರದಲ್ಲಿ ಕಾಶಿ ವಿಶ್ವನಾಥ ಮಹಾಕಾಳಿ ,ಕಾಲಭೈರವರಿದ್ದು, ದಕ್ಷಿಣ ಕಾಶಿಯೆಂದು ಪ್ರಖ್ಯಾತವಾಗಿದೆ. ಗಂಗೆ-ಯಮುನೆಯರ ಸಂಗಮವಾಗಿ ಪ್ರಯಾಗವೆಂದು ಪ್ರಸಿದ್ದವಾದ ಉತ್ರ ಕಾಶಿಯಷ್ಟೇ, ನೇತ್ರಾವತಿ ಕುಮಾರಾಧಾರ ತಾಣವಾಗಿ ಉಪ್ಪಿನಂಗಡಿಯ ಸಹಲಿಂಗೇಶ್ವರ ಸನ್ನಿಧಿ ಪ್ರಸಿದ್ದಿಯನ್ನು ಪಡೆದಿದೆ. ಉತ್ತರದ ಪ್ಯಾಯಾಗ ದಕ್ಷಿಣದ ಗಯಾಪದ, ಭಕ್ತಿಮುಕ್ತಿಗಳೆರಡನ್ನು ಕರುಣಿಸುವ ಸಹಸ್ರಲಿಂಗಶ್ವರ ಸನಿಧಿ, ಸದ್ಗತಿದಾಯಕ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ.
ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ವರ್ಣನೆ
ಬದಲಾಯಿಸಿನೇತ್ರಾವತಿಯು ಕುದುರೆ ಮುಖದಲ್ಲಿ ಜನಿಸಿ ಧರ್ಮಸ್ಥಳವನ್ನು ಪಾವನಗೊಳೊಸಿ ಮುಂದೆ ಉಪ್ಪಿನಂಗಡಿ ಗಯಾಪದ ಕ್ಷೇತ್ರಕ್ಕೆ ಹರಿದುಬಂದು,ಶ್ರೀ ಸಹಸ್ರಲಿಂಗೇಶ್ವರ ದೇವಳದ ಉತ್ತರ ದಿಕ್ಕಿನಲ್ಲಿ ಸೇರುತ್ತದೆ. ಹಾಗೆಯೇ ಕುಮಾರಾಧಾರ ನದಿಯು ಕುಮಾರ ಪರ್ವತದಲ್ಲಿ ಹುಟ್ಟಿ ಸುಬ್ರಮಣ್ಯ ಕ್ಷೇತ್ರವನ್ನು ಪಾವನಗೊಳಿಸಿ ದಕ್ಷಿಣಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಪಶ್ಚಿಮ ಬದಿಯಿಂದ ಹರಿಯುತ್ತದೆ.ಈ ಎರಡು ನದಿಗಳು ದೇವಳದ ವಾಯುವ್ಯ ಬದಿಯಲ್ಲಿ ಸಂಗಮಾಗುತ್ತದೆ. ಮಳೆಗಾಲದಲಿ ಎರಡೂ ನದಿಗಳು ಉಲ್ಲಿ ಹರಿದು,ಬೋರ್ಗರೆಯುತ್ತದೆ. ಕೆಲವೊಮ್ಮೆ ನದಿಗಳಲ್ಲಿ ಪ್ರವಾಹವು ಹೆಚ್ಚಿ ದಡ ಮೀರಿ ಹರಿಯುತ್ತದೆ.ಈ ಸಂದರ್ಭದಲ್ಲಿ ಪರಸ್ವರ ಸಂಗಮಾಗುವ ಜಾಗದಲ್ಲಿ ಒಂದನ್ನೊಂದು ಸಂಧಿಸುತ್ತದೆ.
ಈ ಸಂದರ್ಭದಲ್ಲಿ ದಡ ಮೀರಿ ಹರಿದ ನೇತ್ರಾವತಿ ನೀರು ದೇವಳದ ಮುಂಭಾಗಕ್ಕೆ ಪ್ರವೇಶಿಸುತ್ತದೆ. ಅದ ರೀತಿ ಕುಮಾರಧಾರಾ ನದಿಯ ನೀರು ನೈಖುತ್ಯ ಭಾಗದಿಂದ ಉಕ್ಕಿ ಹರಿದು ದೇವಳದ ಮುಂಭಾಗಕ್ಕೆ ಬರುತ್ತದೆ.ಈ ಎರಡೂ ನದಿಗಳ ಪ್ರವಾಹವು ದೇವಳದ ಮುಂಭಾಗದಲ್ಲಿ ಸಂಗಮಗೊಳ್ಳುತ್ತದೆ. ಈ ರೀತಿ ದೇವಾಲಯವನ್ನು ಎರಡೂ ನದಿಗಳು ಪ್ರವಾಹದಿಂದ ಸುತ್ತುವರಿಯುವುದನ್ನು ಸಂಗಮವೆಂದು ಕರೆಯುತ್ತಾರೆ. ಒಂದೊಮ್ಮೆ ನೇತ್ರಾವತಿ ಯಾ ಕುಮಾರಾಧಾರಾ ನದಿಗಳಲ್ಲಿ ಯಾವುದಾದರೂ ಒಂದು ನದಿ ಉಕ್ಕಿ ಹರಿದು ದೇವಾಲಯದ ಮುಂಭಾಗಕ್ಕೆ ಪ್ರವಾಹ ಬಂದರೆ ಅದನ್ನು ಸಂಗಮವೆಂದು ಕರೆಯಲಾಗದು.ಕೆಲವು ಸಂದರ್ಭಗಳಲ್ಲಿ ಒಂದು ನದಿ ಮಾತ್ರ ಉಕ್ಕಿ ಹರಿದ ನಿದರ್ಶನಗಳೂ ಇವೆ. 1923 ಆಗಸ್ಟ್ 7 ರಂದು ಪ್ರವಾಹ ಉಕ್ಕಿ ಹರಿದು, ದೇವಾಲಯದ ಗರ್ಭ ಗುಡಿಯು ಜಲಾವೈತವಾಗಿ ಬ್ರಹ್ಮರಥ ಪ್ರವಾಹದಲ್ಲಿ ಕೊಚ್ಚಿ ಹೋಗಿ ನಾಶವಾಗಿದೆ ಎಂದು ತಿಳಿದು ಬರುತ್ತದೆ ಈ ಪ್ರವಾಹವು ಇಡೀ ಉಪ್ಪಿನಂಗಡಿಯನ್ನು ತಲ್ಲಣಗೂಳಿಸಿ, ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯನ್ನು ಹೋಬಳಿ ಕೇಂದ್ರವಾಗಿ ಪರಿವರ್ತಿಸಲ್ಟಟ್ಟಿತ್ತು. 1974 ಜುಲೈ 26 ರಂದು ಇನ್ನೊಂದು ನೆರೆಯು ಅನಾಹುತವನ್ನು ಮಾಡಿರುತ್ತದೆ. ಅ ಬಳಿಕ 2008 ಆಗಸ್ಟ್ 13 ರಂದು 2013 ಜುಲೈ 4 ರಂದು ಸಂಗಮವಾಗಿರುತ್ತದೆ. ಪ್ರವಾಹವು ದೇವಳದ ಮುಂಭಾಗಕ್ಕೆ ಬಂದು ಸಂಗಮಗೊಂಡಾಗ ಪುರೋಹಿತರು ವಿಧಿವತ್ತಾಗಿ ಗಂಗಾಪೂಜೆಯನ್ನು ನಡೆಸಿ, ಭಕ್ತಾದಿಗಳು ಸಂಗಮ ಸ್ನಾನ ಮಾಡುತ್ತಾರೆ.
ಉದ್ಭವಲಿಂಗ- ಮಖೆಜಾತ್ರೆ
ಬದಲಾಯಿಸಿಜನವರಿ ತಿಂಗಳಲ್ಲಿ ನದಿಯಲ್ಲಿರುವ ಉದ್ಭವಲಿಂಗದ ಮೇಲಿರುವ ಮರಳನ್ನು ತೆರವುಗೊಳಿಸಿ ಶಿವ ಲಿಂಗವನ್ನು ಭಕ್ತಾಧಿಗಳ ದರ್ಶನಕ್ಕಾಗಿ ಅಣಿಗೊಳಿಸಲಾಗುತ್ತದೆ. ಮೊದಲನೇ ಮಖೆ ಜಾತ್ರೆ, ಎರಡನೇ ಮಖೆ ಜಾತ್ರೆ, ಮೂರನೇ ಮಖೆ ಜಾತ್ರೆಯೆಂದು ಮೂರು ಮಖೆಜಾತ್ರೆಗಳು ನಡೆಯುತ್ತವೆ.ಇದರಲ್ಲಿ ಒಂದು ಮಖೆಯು ಶಿವರಾತ್ರಿಯಂದು ಜರಗುತ್ತದೆ.ಈ ಮೂರು ಮಖೆಜಾತೆಗಳಲ್ಲಿಯೂ ಭಕ್ತಾದಿಗಳಿಗೆ ಉಧ್ಭವ ಲಿಂಗಕ್ಕೆ ಸಂಜೆತನಕ ಸ್ವಯಂಅಭಿಷೇಕ ಮಾಡುವ ಅವಕಾಶವನ್ನು ಕಲ್ಲಿಸಲಾಗಿದೆ ಆದರೆ ಶಿವರಾತ್ರಿ ಮಖೆಯು ಅತ್ಯಂತ ಪ್ರಾಮುಖ್ಯವಾದುದು ಈ ಸಂದರ್ಭದಲ್ಲಿ ರಾತ್ರಿ ರುದ್ರಪಾರಾಯಣ ಸೇವೆಯನ್ನು ಇತ್ತೀಚಿನ ದಿನಗಳಲ್ಲಿ ನಡೆಸಲಾಗುತ್ತದೆ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಸಿ ಶಿವರಾತ್ರಿಯ ಮಹತ್ವದ ಅರಿವು ಭಕ್ತರಿಗೆ ಮೂಡಿಸುವ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಸುಕಿನ ತನಕ ನಡೆಸು ಬೆಳಗ್ಗಿನ ಜಾವ ಭಕ್ತಾದಿಗಳು ಸಂಗಮದಲ್ಲಿ ಮಖೆ ಸ್ನಾನವನ್ನು ಪೂರೈಸಿ ಶುಚಿರ್ಭೂತರಾಗಿ ದೇವರ ದರ್ಶನವನ್ನು ಪಡೆಯುತ್ತಾರೆ.ಆ ಬಳಿಕ ಎಲ್ಲರಿಗೂ ಉಪಾಹಾರ ವ್ಯವಸ್ಥೆಯನ್ನು ದೇವಳದ ವತಿಯಿಂದ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೂರು ಮಖೆಗಳಲ್ಲಿಯೂ ಭಕ್ತಾದಿಗಳ ಸಹಕಾರದಿಂದ ಫಲಾಹಾರ ಅನ್ನಸಂತರ್ಪಣೆಗಳು ನಡೆಯುತ್ತಿರುವುದು ಅವಿಸ್ಮರಣೀಯ. ಎರಡನೇ ಮಝೆಜಾತ್ರೆಯಂದು ಮಧ್ಯಾಹ್ನ ದೇವರ ಬಳಿ ಉತ್ಸವ ಆದ ಬಳಿಕ ಮಹಾಕಾಳಿಗೆ ನೇಮ ಕಟ್ಟುವ ನರ್ತನ ಸೇವೆ ಗೈಯುವ ಮೂರು ಜನರಿಗೆ ದೇವಳದ ಮುಂಭಾಗದಲ್ಲಿ ಪಡಿ ಅಕ್ಕಿ ಕೊಡುವ ವಿಶಿಷ್ಟ ಪದ್ಧತಿಯು ಅನಾದಿ ಕಾಲದಿಂದ ನಡೆದು ಬರುತ್ತಿದೆ. ಈ ಪಡಿ ಅಕ್ಕಿ ಸ್ವೀಕರಿಸಿದ ಬಳಿಕ ಮೂರು ಜನರ ಕುಟುಂಬಗಳು ದೇವಳದ ಮುಂಭಾಗದ ರಥಬೀದಿಯ ಬಲಬದಿಯಲ್ಲಿರುವ ಕಟ್ಟೆಯಲ್ಲಿ ನೇಮ ಜರಗುವ ದಿನವರೆಗೆ ಚಪ್ಪರ ಹಾಕಿ ವಾಸ್ತವ್ಯ ಹೂಡುತ್ತಾರೆ.ಮೂರನೇ ಮಖೆ ಹಾಗೂ ನೇಮದ ದಿನವೂ ಇದೇ ರೀತಿ ಪಡಿ ಅಕ್ಕಿ ಕೊಡುವ ಪದ್ದತಿಯಿದೆ. ನೇಮವಾದ ಬಳಿಕ ಈ ಕುಟುಂಬಗಳು ಕಡ್ಡಾಯವಾಗಿ ತಮ್ಮ ಇಲ್ಲಿಯ ವಾಸ್ತವ್ಯವನ್ನು ಬಿಟ್ಟು ನದಿಯಾಚೆ ವಾಸ್ತವ್ಯವನ್ನು ಬದಲಾಯಿಸುವ ಪದ್ದತಿಯಿದೆ.