ಸದಸ್ಯ:Sachidananda Hullahalli/ನನ್ನ ಪ್ರಯೋಗಪುಟ-ವಿನೋದ್ ಭಾಟಿಯಾ

ವಿನೋದ್ ಭಾಟಿಯಾ

ಬದಲಾಯಿಸಿ

ಏರ್ ಮಾರ್ಷಲ್ ವಿನೋದ್ ಭಾಟಿಯಾ, ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವೀರ ಚಕ್ರ ಮತ್ತು ಮೆಡಲ್ ಬಾರ್ ಪ್ರಶಸ್ತಿ ವಿಜೇತರು. ಇವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ. ಅವರನ್ನು 'ಜಿಮ್ಮಿ'[] ಎಂದೂ ಸಹ ಕರೆಯುತ್ತಾರೆ. ಇವರು ೧೯೬೫ಮತ್ತು ೧೯೭೧ ರ ಯುದ್ಧಗಳಲ್ಲಿ ವೀರ ಚಕ್ರವನ್ನು ಪಡೆದರು

ಪ್ರಶಸ್ತಿಗಳು ಮತ್ತು ಅಲಂಕಾರಗಳು

ಬದಲಾಯಿಸಿ

ವೀರ ಚಕ್ರ

ಬದಲಾಯಿಸಿ

ಪ್ರಶಸ್ತಿ ದಿನಾಂಕ ೦೮ ಸೆಪ್ಟೆಂಬರ್ ೧೯೬೫, ಘೋಷಿಸದ ದಿನಾಂಕ ೦೧ ಜನವರಿ ೧೯೬೬

ವಿವರಗಳು:

ಬದಲಾಯಿಸಿ

ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ, ಫ್ಲೈಟ್ ಲೆಫ್ಟಿನೆಂಟ್ ವಿನೋದ್ ಕುಮಾರ್ ಭಾಟಿಯಾ ಲಾಹೋರ್ ಸೆಕ್ಟರ್‌ನಲ್ಲಿ ಸ್ಕ್ವಾಡ್ರನ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಆ ವಲಯದಲ್ಲಿ ೧೮ ಬಾರಿ ಕಾರ್ಯಾಚರಣೆಯನ್ನು ಮಾಡಿದರು. ೮ ನೇ ಸೆಪ್ಟೆಂಬರ್ ೧೯೬೫ ರಂದು, ಫ್ಲೈಟ್ ಲೆಫ್ಟಿನೆಂಟ್ ಭಾಟಿಯಾ ಅವರನ್ನು ಒಂದು ಭೂ ದಾಳಿಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇದೊಂದು ಅತ್ಯಂತ ಕ್ಲಿಷ್ಟಕರ ವ್ಯೂಹ ರಚನೆಯಾಗಿತ್ತು. ಈ ರಚನೆಯಲ್ಲಿದ್ದ ಎರಡನೇ ಯುದ್ಧ ವಿಮಾನವನ್ನು ಮುನ್ನಡೆಸುವ ಜವಾಬ್ಧಾರಿ ಇವರದಾಗಿತ್ತು. ಶತ್ರು ಯುದ್ಧ ಟ್ಯಾಂಕರ್ ಮತ್ತು ತೋಪುಗಳು ನಿರಂತರವಾಗಿ ಗುಂಡಿನ ಮಳೆಗರಿಯುತ್ತಿದ್ದವು. ಇದಕ್ಕೆ ಬೆದರದ ವಿನೋದ್ ಕುಮಾರ್ ಭಾಟಿಯಾ ಎರಡು ಯುದ್ಧ ಟ್ಯಾಂಕ್ ಗಳನ್ನ ಧ್ವಂಸ ಮಾಡಿದರು.

ಫ್ಲೈಟ್ ಲೆಫ್ಟಿನೆಂಟ್ ವಿನೋದ್ ಕುಮಾರ್ ಭಾಟಿಯಾ ಅವರು ಪ್ರದರ್ಶಿಸಿದ ಈ ಧೈರ್ಯ ಮತ್ತು ದೃಢತೆ ಭಾರತೀಯ ವಾಯುಪಡೆಯ ಅತ್ಯುತ್ತಮ ಮಾಲಿಗಲ್ಲುಆಗಿದೆ[]

ವೀರ ಚಕ್ರಕ್ಕೆ ಬಾರ್

ಬದಲಾಯಿಸಿ

೨೬ ಜನವರಿ ೧೯೭೨ ರಂದು ಘೋಷಿಸಲಾಯಿತು
ವಿವರಗಳು: ಡಿಸೆಂಬರ್ ೧೯೭೧ ರಲ್ಲಿ ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ, ಸ್ಕ್ವಾಡ್ರನ್ ಲೀಡರ್ ವಿನೋದ್ ಕುಮಾರ್ ಭಾಟಿಯಾ ಅವರು ಫೈಟರ್ ಬಾಂಬರ್ ಸ್ಕ್ವಾಡ್ರನ್‌ನ ಫ್ಲೈಟ್ ಕಮಾಂಡರ್ ಆಗಿದ್ದರು. ಅವರು ಶತ್ರು ಪ್ರದೇಶದೊಳಗೆ ಹೆಚ್ಚಿನ ಸಂಖ್ಯೆಯ ಕಾರ್ಯಾಚರಣೆಗಳನ್ನು ಮಾಡಿ ಉಪಯುಕ್ತ ಮಾಹಿತಿಯನ್ನು ತಂದರು. ಶತ್ರು ವಾಯುನೆಲೆಗಳ ವಿರುದ್ಧ ಅವರು ಮೂರು ಬರಿ ತೀವ್ರತರವಾದ ಆಕ್ರಮಣಗಳನ್ನು ಮಾಡಿದರು. ಇವರ ಅಕ್ರಮಣವನ್ನ ಹಿಮ್ಮಟ್ಟಿಸಲಾಯಿತು. ದೃತಿಗೆಡದೆ ವಿನೋದ್ ಕುಮಾರ್ ಭಾಟಿಯಾ ತೀವ್ರ ತರವಾದ ಆಕ್ರಮಣವನ್ನು ಎದುರಿಸಿ, ಗಸ್ತು ತಿರುಗುತ್ತಿದ್ದ ವಿಮಾನವನ್ನು ಲೆಕ್ಕಿಸದೆ ಧಾಳಿ ಮಾಡಿದರು. ಒಟ್ಟು ಮೂರೂ ಶತ್ರು ವಿಮಾನಗಳು ಮತ್ತು ಸೇನಾ ಶಿಬಿರವನ್ನು ನಾಶಮಾಡಿದರು. ಇವರು ನಡೆಸಿದ ಧಾಳಿಗೆ ಶತ್ರು ಸೈನ್ಯಯ ಸಂಪರ್ಕ ಸಾಧನಗಳು ನಾಶವಾದವು. ಭಾರತೀಯ ಭೂ ಸೈನ್ಯಕ್ಕೆ ಬೆಂಬಲವಾಗಿ ಹೋರಾಡಿದರು

ಕಾರ್ಯಾಚರಣೆಯ ಉದ್ದಕ್ಕೂ, ಸ್ಕ್ವಾಡ್ರನ್ ಲೀಡರ್ ವಿನೋದ್ ಕುಮಾರ್ ಭಾಟಿಯಾ ಶೌರ್ಯ, ದೃಢತೆ ಮತ್ತು ಉನ್ನತ ಶ್ರೇಣಿಯ ವೃತ್ತಿಪರ ಕೌಶಲ್ಯವನ್ನು ಪ್ರದರ್ಶಿಸಿದರು.

ಉಲ್ಲೇಖಗಳು

ಬದಲಾಯಿಸಿ
  1. http://www.bharat-rakshak.com/IAF/Database/6497
  2. https://www.bharat-rakshak.com/IAF/Database/6497