ಸದಸ್ಯ:Sabinanaik/ನನ್ನ ಪ್ರಯೋಗಪುಟ2

ಈಶ್ವರ್ ದೈತೋಟ

ಬದಲಾಯಿಸಿ

ಪ್ರಾರಂಭಿಕ ಜೀವನ

ಬದಲಾಯಿಸಿ

ಪ್ರಜಾವಾಣಿಯಲ್ಲಿ ಟಿ,ಎಸ್. ರಾಮಚಂದ್ರರಾವ್(ಟೀಯೆಸ್ಸಾರ್) ಅವರ ಛೂಬಾಣವನ್ನು ಓದ ತೂಡಗಿದ ಇವರು ಮೊದಲಿನಿಂದಲೂ ಅಂಕಣ ಸಾಹಿತ್ಯ ಪ್ರೇಮಿ. ಖುಶ್ವಂತ್ ಸಿಂಗ್, ಆರ್ಕ್ ಬುಕ್ವಾಲ್ಡ್ ಅಂಕಣಗಳನ್ನು ಒದುವ ಪರಿಪಾಠವನ್ನು ಬೆಳಸಿಕೊಂಡಿದ್ದರು. ಇವರಲ್ಲಿ ಅಂಕಣ ಬರೆಯುವ ಹಂಬಲ ಹುಟ್ಟಿಸಿದವರು ವೈ.ಎನ್. ಕೃಷ್ಣಮೂರ್ತಿ ಅವರು. ವೈ.ಎನ್.ಕೆ ಕನ್ನಡಪ್ರಭ ಸಂಪಾದಕರಾದಾಗ, ಈಶ್ವರ್ ದೈತೋಟ ಅವರ ಹಂಬಲ ಅರಿತಿದ್ದ ಉದಯವಾಣಿ ಆಡಳಿತ ನಿರ್ದೇಶಕ ಟಿ. ಮೋಹನ್‍ದಾಸ್ ಪೈಯವರು ಬುಧವಾರದ ಹೊಸ ಅಂಕಣ ಬರೆಯಲು ಸೂಚಿಸಿದ್ದರು. ಆಗ ಇವರು ಬೆಂಗಳೂರು ವಿಭಾಗ ಮುಖ್ಯಸ್ಥರಾಗಿದ್ದರು. ಮೊದಲ ಅಂಕಣ ದೃಷ್ಟಿ ಶುರುವಾಗಿದ್ದೆ ಹಾಗೆ. ಮುಂದೆ ಅದೇ ಹೆಸರಿನಲ್ಲಿ ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ ಆಫ್ ಇಂಡಿಯಾ ಮತ್ತು ವಿಜಯವಾಣಿ ಪತ್ರಿಕೆಗಳಲ್ಲಿ ಮುಂದುವರೆಯಿತ್ತು. ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡಿಸಿದ ಹಿರಿಮೆಯನ್ನೂ ಹೊಂದಿರುವ ಈಶ್ವರ್ ದೈತೋಟ 1991 ರಿಂದ 2011 ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಮುಖ್ಯ ಸಂಪಾದಕನಾಗಿ, ಮಣಿಪಾಲದ ಉದಯವಾಣಿ ನಿಲಯ ಸಂಪಾದಕ, ಟೈಮ್ಸ ಆಫ್ ಇಂಡಿಯಾ ಎಡಿಟರ್, ಕನ್ನಡದ ಹಿರಿಯ ಪತ್ರಿಕೋದ್ಯಮಿ ಹಾಗೂ ಸಂಯುಕ್ತ ಕರ್ನಾಟಕದ ಮುಖ್ಯ ಸಂಪಾದಕ ಆಗಿ ಹೊಣೆ ಹೊತ್ತರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಶನ್‍ನಲ್ಲಿ ಮೂರೂವರೆ ದಶಕಗಳಿಗೂ ಅತಿ ಹೆಚ್ಚು ಅನುಭವ ಹೊಂದಿದ ಪತ್ರಿಕೋದ್ಯಮ ಶಿಕ್ಷಣಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ, ಮತ್ತು ಮೀಡಿಯಾದಲ್ಲಿ ಅಪಾರ ಸಾಧನೆಗಳನ್ನು ದಾಖಲಿಸಿರುವ ವಿಶಿಷ್ಟ ಪತ್ರಕರ್ತ ಈಶ್ವರ್ ದೈತೋಟ. ಯು,ಜಿ,ಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆಳ ಕನ್ಸಲ್ಟೆಂಟ್ ಎಂದು ಅವರು ಮನ್ನಣೆ ಪಡೆದಿದ್ದಾರೆ.

ಪ್ರಶಸ್ತಿ

ಬದಲಾಯಿಸಿ

ಅವರಿಗೆ 2016 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2015 ರಲ್ಲಿ ಪ್ರತಿಷ್ಠಿತ ಟಿ,ಎಸ್,ಆರ್ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 1 ಲಕ್ಷ ರೂ, ನಗದು ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿದೆ. ಅಲ್ಲದೇ, 2015 ರಲ್ಲಿ ಮೂಡಬಿದ್ರೆಯ ಪ್ರತಿಷ್ಠಿತ ನುಡಿಸಿರಿ ಪ್ರಶಸ್ತಿಯೂ ಅವರ ಪಾಲಿಗೆ ಬಂದಿದೆ. 2012 ಮುಂಬಯಿನ ಕರ್ಕಿ ವೆಂಕಟರಮಣ ಶಾಸ್ತ್ರಿ, ಸೂರಿ ಪತ್ರಿಕೋದ್ಯಮ- ಸಾಹಿತ್ಯ ಪ್ರಶಸ್ತಿ, 2008 ರಲ್ಲಿ ಅಭ್ಯುದಯ ಪತಿಕೋದ್ಯಮ ರಾಜ್ಯ ಪ್ರಶಸ್ತಿಯೂ ಅವರಿಗೆ ಲಭ್ಯವಾಗಿತ್ತು.[] ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006) ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕನ್ನಡ ಗೆಳೆಯರ ಬಳಗ ಪ್ರಕಾಶಿಸಿದ ಕನ್ನಡ ಗೆಳಯರ ಬಳಗ ಪ್ರಕಾಶಿಸಿದ ಕನ್ನಡ ಕಷಾಯ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟದಿಂದ ಅತ್ಯುತ್ತಮ ಅಭ್ಯುದಯ ವರದಿ ಪ್ರಶಸ್ತಿ ಇತ್ಯಾದಿ ವೃತ್ತಿಪರ ಗೌರವಗಳಿಗೆ ಭಾಜನರಾಗಿದ್ದಾರೆ. 2008 ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನಲ್ ಅವರನ್ನು ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ವ್ಯಕ್ತಿ ( ವೀಕ್ಷಕರ ಆಯ್ಕೆ ) ಎಂಬ ಎರಡು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ.[]

ಕೃತಿಗಳು

ಬದಲಾಯಿಸಿ

ಅಂತರದೃಷ್ಟಿ, ಅನುಭವ ಮತ್ತು ಚಿಣ್ಣ ಚಿಣ್ಣ ಪಾಠ ಮತ್ತು ಮಾಧ್ಯಮ ಭ್ರಮರಿ. ಕಷಾಯ, ಕೂಕಿಲು,(ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ , ಟೈಮ್ಸ ಆಫ್ ಇಂಡಿಯಾ-ಕನ್ನಡ, ಹೊಸದಿಗಂತ, ಸುದ್ದಿಮೂಲ, ವಿಜಯವಾಣಿ ಹಾಗೂ ಕರ್ಮವೀರ, ಕನೆಸಕ್ಟ್, ಕನ್ನಡ) ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಣೆ ಆಗಿವೆ,ಆಗುತ್ತಿವೆ.ಅವರು ಪತ್ರಿಕೋದ್ಯಮದ ಮತ್ತಿತರ ವಿಷಯಗಳ ಬಗ್ಗೆ ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75 ಕ್ಕೂ ಹೆಚ್ಚು. ದಿ ಎಯ್ಟೀಂತ್ ಎಲಿಫೆಂಟ್, (ಇಂಗ್ಲೀಷ್), ಮಾದ್ಯಮ ಬ್ರಹ್ಮಾಂಡ, ವಿಧಾನ ಮಂಡಲ ವರದಿಗಾರಿಕೆ, ಅಭ್ಯುದಯ ಪತ್ರಕೋದ್ಯಮ, ಸೂಜಿಮಲ್ಲಿಗೆ, ಕನ್ನಡ ಕಷಾಯ, ನಾಡು ನುಡಿ, ಸಂಸ್ಕಂತಿ ಮತ್ತು ಫ್ಯಾಶನ್, ಪ್ರೆಸ್ ಅಂಡ್ ಪೂಲೀಸ್ , ಅಭಿವೃದ್ಧಿ ಪತ್ರಿಕೋದ್ಯಮ ಸೌತ್ ಕೆನರಾ (ಇಂಗ್ಲೀಷ್- ಮೈಸೂರು ವಿವಿ) ಅಂತರದೃಷ್ಟಿ, ಚಿಣ್ಣ ಚಿಣ್ಣ ಪಾಠ, ಮಾಧ್ಯಮ ಭ್ರಮರಿ ಪ್ರಮುಖವಾದವು. ಭಾರತದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ( ಎ ಮ್ಯಾನಿಫೆಸ್ಟೋ ಫಾರ್ ಚೇಂಜ್ ) ಝುಕೀರ್ ಹುಸೈನ್ ಅವರ ಪುಸ್ತಕಗಳನಲ್ಲದೆ ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ ಎಂದು ಹಲವಾರು ಪುಸ್ತಕಗಳನ್ನು ಅನುವಾದಿಸಿದ್ದಾರೆ. 20 ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳ ಸಹ - ಲೇಖಕರಾಗಿಯೂ ದುಡಿದಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

8 ವರ್ಷ ದೂರದರ್ಶನದಲ್ಲಿ ಕನ್ನಡ ಸುದ್ದಿ ನಿರೂಪಕ ಆಗಿದುದ್ದಲ್ಲದೆ, ಆಕಾಶವಾಣಿ, ಉದಯ, ದೂರದರ್ಶನ, ಮತ್ತಿತರ ಟಿವಿ, ರೇಡಿಯೋಗಳಲ್ಲಿ ಪ್ರಚಲಿತ ವಿಷಯಗಳ ಬಗ್ಗೆ 2,000 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿ (ಮಂಥನ, ಪಂಚಾಯ್ತಿ ಕಟ್ಟೆ, ಸಂವೇದನೆ, ಮತಭೇರಿ) ಮನೆಮಾತಾಗಿದ್ದಾರೆ. ಸಮಯ ಟಿವಿಯಲ್ಲಿ ಪ್ರೈಮ್ ಟೈಮ್ ಬುಲೆಟಿನ್ ಅಥಿತಿ ನಿರೂಪಕರಾಗಿ, ಪ್ರಜಾ ಟಿವಿಯಲ್ಲಿ ಚದುರಂಗ ಎಂಬ ವಾರದ ಸಂದರ್ಶನ ನಿರೂಪಕರಾಗಿ ಕಾರ್ಯಕ್ರಮಗಳನ್ನು ನಡೆಸುತಿದ್ದರು. ಈಶ್ವರ್ ದೈತೋಟ ಅವರ ಮಂಥನ ಸೀರಿಯಲ್ (5 ವರ್ಷ ದೂರದರ್ಶನ ) ಪಂಚಾಯ್ತಿಕಟ್ಟೆ – ಟೆವಲಪ್‍ಮೆಂಟ್ ಟಿಬೇಟ್ (ಯದಯ ನ್ಯೂಸ್ ಚಾನಲ್ 5 ವರ್ಷ ) ಹಾಗೂ ಸಂವೇದನೆ _ ಶೇರಿಂಗ್ ವಿದ್ ಕನ್ಸರ್ನ್ ಇಂಟರ್ ವ್ಯೂ ( ಉದಯ ಚಾನಲ್ ವಾರಕೆ ಐದು ದಿನ 3 ವರ್ಷ )ಪ್ರಜಾ ಟಿವಿಯಲ್ಲಿ ಚದುರಂಗ ಜನಪ್ರಿಯತೆ ಹೊಂದಿತ್ತು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ ಹಲವು ಅಂತರಾಷ್ಟ್ರೀಯ ಸಂಚಿಕೆಗಳಿಗೂ ಲೇಖನಬರೆದಿದ್ದಾರೆ. ಜಗತ್ತಿನ ಐದು ಭೂಖಂಡಗಳಿಗೆ ಭೇಟಿ ನೀಡಿರುವ ದೈತೋಟ, ಪ್ರಧಾನಿಗಳಾದ ರಾಜೀವ್ ಗಾಂಧಿ, ವಿ,ಪಿ ಸಿಂಗ್ ಮತ್ತು ವಿ,ಪಿ ನರಸಿಂಹರಾವ್ ಜೊತೆಗೆ ಸ್ವೀಡನ್, ರಶಿಯಾ ಮತ್ತು ದಕ್ಷಿಣ ಅಮೆರಿಕಾ ಪ್ರವಾಸಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗೆ, ಫ್ರಾನ್ಸ್‍ನ ಮಿತ್ತೆರಾಂ, ಜರ್ಮನಿಯ ಹೆಲ್ಮೆಟೆ ಕೋಲ್, ರಶಿಯಾದ ಕೊಸಿಗಿನಗ, ಸ್ವೀಡನಿನ ಒಲೋಫ್ ಪಾಮೆ ಮುಂತಾಗಿ ಅಂತರಾಷ್ಟ್ರೀಯ ಪ್ರಮುಖರನ್ನೂ ಭೇಟಿಯಾಗಿರುವುದಲ್ಲದೆ, ರಿಯೋ ಭೂಶೃಂಗದಲ್ಲಿ ಅಮೇರಿಕದ ಜಾರ್ಜ್ ಬುಶ್ ಮತ್ತು ಕ್ಯೂಬಾದ ಫೀಡೆಲ್ ಕಾಸ್ಟ್ರೋ ಅವರ ಜೋಡಿ ಭಾಷಣಗಳನ್ನು ಪ್ರತ್ಯಕ್ಷ ವರದಿ ಮಾಡಿದ ಅನುಭವವೂ ಹೊಂದಿದ್ದಾರೆ. ಪ್ರತಿದಿನ ಪತ್ರಿಕೋದ್ಯಮದಲ್ಲಿ ‘ದಿನಕ್ಕೊಂದು ವಿಶೇಷ ಪುರವಣಿ’ ಎಂದು ವಾರಕ್ಕೆ ಏಳು ಪುರವಣಿಗಳನ್ನು (1999-ವಿಜಯ ಕರ್ನಾಟಕದಲ್ಲಿ ಪುಟಾಣಿ ವಿಜಯ ಮತ್ತು ಮಹಿಳಾ ವಿಜಯ ಸಾಪ್ತಾಹಿಕ ಪುರವಣಿ ಹಾಗೆಯೇ ಕೃಷಿ, ಯುವಜನೆತೆಗಾಗಿ) ವಿಶೇಷ ಪುರವಣಿಗಳೆಂಬ ವೈಶಿಷ್ಟ್ಯವನ್ನು ಮೊದಲಬಾರಿಗೆ ಅಳವಡಿಸಿದವರು. ಅಲ್ಲದೆ ಭಾರತೀಯ ಪತ್ರಿಕೋದ್ಯಮದಲ್ಲಿ ಕುಗ್ರಾಮ ಗುರುತಿಸಿ ಎಂಬ ಅಭಿವೃದ್ಧಿ ಲೇಖನಗಳನ್ನು ಪ್ರಕಟಿಸುವ ಪತ್ರಿಕೋದ್ಯಮಿಯಾಗಿ ನೇತೃತ್ವ (1981-87) ವಹಿಸುವುದರೊಂದಿಗೆ ಮದ್ರಣ ಮಾಧ್ಯಮದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.[] ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೊದ್ಯಮದಲ್ಲಿ ಎಂ,ಎ (19973) ಫಿಲಿಪ್ಪೀನ್ಸ್ನ ಪ್ರೆಸ್ ಫೌಂಡೇಶನ್ ಆಫ್ ಏಶಿಯಾದಲ್ಲಿ ಸ್ನಾತಕೋತ್ತರ, ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಶಿಕ್ಷಣ (1979-80) ಪಡೆದರು. ಆಸ್ಟ್ರೇಲಿಯಾದ ವಿಕ್ಟೋರಿಯ ಮತ್ತು ಸುದ್ದಿ ಪತ್ರಿಕೆಗಳಲ್ಲಿ ತರಬೇತಿ ಪಡೆದಿದ್ದಾರೆ. ಅಮೇರಿಕಾದ ವಿವಿಧ ಅಧ್ಯಯನ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಆಶ್ರಯದಲ್ಲಿ ಅಭ್ಯುದಯ ಸಂಬಧಿತ ಭಾಷಣ, ಸಮಾಲೋಚನೆಗಳಲ್ಲಿ ಬಾಗಿಯಾಗಿದ್ದಾರೆ. 1992 ರ ರೀಯೋ ಭೂ ಶೃಂಗವನ್ನು ವರದಿ ಮಾಡಲು ಸಿ.ಎಸ್.ಇ ಮತ್ತು ಯು.ಎನ್.ಡಿ.ಪಿ ದತ್ತನಿಧಿ ಅವರಿಗೆ ದೊರೆತಿತ್ತು. ಅಭ್ಯುದಯ ಪತ್ರಿಕೋದ್ಯಮ ಇವರ ವಿಶೇಷ ಆಸಕ್ತಿ. ಅಭ್ಯುದಯ ಸಂಬಂಧಿತ ಅನೇಕ ಸಾಕ್ಷಚಿತ್ರಗಳನ್ನು ಮತ್ತು ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ ಅವರಿಗಿದೆ. ಎಶಿಯನ್ ಮೀಡಿಯಾ ಮಾಪಕ ಎಂಬ ಜರ್ಮನಿಯ ಎಫ್, ಇ, ಎಸ್ ಸಂಸ್ಥೆ ಪ್ರಕಾಶಿತ 2009 ಮತ್ತು 14 ರ ಸಂಶೋಧನಾ ಪ್ರಕಟಣೆಗಳ (ಇಂಗ್ಲೀಷ್) ಸಂಪಾದಕೀಯ ಹೊಣೆಯಲ್ಲಿ ಅವರು ಭಾಗವಹಿಸಿದ್ದರು. ಯೂನಿವರ್ಸಿಟಿ ಗ್ರಾಂಟ್ ಕಮೀಶನ್ನ ಡೆವಲಪ್ಮೆಂಟ್ ಕಮ್ಯುನಿಕೇಶನ್ ಕನ್ಸಲ್ಟೆಂಟ್ ಆಗಿ ಯ.ಸಿ.ಇ ಮತ್ತು ಯೂನಿಸೆಫೆ ಜರ್ನಲಿಸಂ ಟ್ರೈನಿಂಗ್‍ಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಕೊಡುಗೆ ಕೊಡುತ್ತಿದ್ದಾರೆ. ಪಾರ್ಟಿಸಿಪಿಟರಿ ಗವರ್ನೆನ್ಸ್ ಸಂಬಂಧಿತ ಹಲವು ಇಂಗ್ಲೀಷ್ ಮತ್ತು ಕನ್ನಡ ಪುಸ್ತಕಗಳ ಪ್ರಕಟಣೆಗಳ ಸಂಪಾದಕೀಯ ತಂಡದಲ್ಲಿ ಕೆಲಸ ಮಾಡಿದ್ದಾರೆ. ಹೆಸರಾಂತ ಪರಿತಜ್ಞ ಡಾ,ಅನಿಲ್ ಅಗರ್‍ವಾಲ್ ಅವರ ಹೊಸದಿಲ್ಲಿಯ ಸೆಂಟರ್ ಫಾರ್ ಸಯನ್ಸ್ ಅಂಡ್ ಎನ್‍ವಯರ್ನ್‍ಮೆಂಟ್‍ನ್ ಡೌನ್ ಟು ಅರ್ಥ್ ಮ್ಯಾಗಝೀನ್ ವಿಸ್ಡಮ್ ಇತ್ಯಾದಿ ಪ್ರಕಟಣೆಗಳಿಗೆ ಕೂಡುಗೆ ನೀಡಿದ್ದಾರೆ. ಗ್ರೇಟ್ ಈಸ್ಟರ್ನ್ ಮ್ಯಾನೇಜ್‍ಮೆಂಟ್ ಸ್ಕೂಲ್,ಬ್ರಿಟನ್ ಡಬ್ಲು ಮೀಡಿಯಾ ಸ್ಕೂಲ್, ಜಿಸಿಸಿ ಯೂನಿವರ್ಸಿಟಿ, ಸುರಾನಾ ಇನ್ಸಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಬೆಂಗಳೂರು ಯೂನಿವರ್ಸಿಟಿ, ಮೀಡಿಯಾ ಇನ್ಫಾರ್ಮೇಶನ್ ಅಂಡ್ ಕಮ್ಯುನಿಕೇಶನ್ ಸೆಂಟರ್ ಆಫ್ ಇಂಡಿಯಾ ಮುಂತಾಗಿ ಹತ್ತಾರು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಮೀಡಿಯಾ ಮ್ಯಾನೇಜ್‍ಮೆಂಟ್, ಡೆವಲಪ್‍ಮೆಂಟ್ ಕಮ್ಯುನಿಕೇಶನ್, ರಿಪೋರ್ಟಿಂಗ್, ಮೀಡಿಯಾ ಬಿಸಿನೆಸ್, ಎಥಿಕ್ಸ್ ಅಂಡ್ ಮೀಡಿಯಾ ಲಾ ಇತ್ಯಾದಿ ವಿಷಯಗಳ ವಿಸಿಟಿಂಗ್ ಪಾಕಲ್ಟಿ ಅಲ್ಲದೆ, ಅಭಿವೃದ್ಧಿ ಪತ್ರಿಕೋದ್ಯಮಿ ಇತ್ಯಾದಿ ವಿಷಯಗಳ ವಿಸಿಟಿಂಗ್ ಫಾಕಲ್ಟಿ ಆಗಿದ್ದಾರೆ. ಮಣಿಪಾಲದ ಮಾಹೆ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನದ ಬೋರ್ಡ್ನನ ಅಧ್ಯಯನ ಸದಸ್ಯರಾಗಿಯೂ, ಪಠ್ಯ ಕ್ರಮ ರಚನೆಗೂ ಕೊಡುಗೆ ಕೊಟ್ಟಿದ್ದಾರೆ

ಉಲ್ಲೇಖಗಳು

ಬದಲಾಯಿಸಿ
  1. http://www.varthabharati.in/article/bengaluru/178896
  2. ಮಾಧ್ಯಮ ಭ್ರಮರಿ
  3. .http://thenewindiantimes.com/ishwar-daitota-senior-journalist-news-anchor/