ಸದಸ್ಯ:SHIVANANDA D E/sandbox
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು SHIVANANDA D E (ಚರ್ಚೆ | ಕೊಡುಗೆಗಳು) 281405751 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಪಂಪಭಾರತ
ಬದಲಾಯಿಸಿಕನ್ನಡದ ಆದಿಕವಿ ಪಂಪ.[೧] ಇವನು ಹತ್ತನೆಯ ಶತಮಾನಕ್ಕೆ ಸೇರಿದವನು. ಇವನಿಂದ ವಿರಚಿತವಾದ ಪಂಪಭಾರತಕ್ಕೆ ವಿಕ್ರಮಾರ್ಜುನ ವಿಜಯ ಎಂಬ ಹೆಸರು ಕೂಡ ಇದೆ. ಇದೊಂದು ಲೌಕಿಕ ಗ್ರಂಥವಲ್ಲದೆ,ಪಂಪಭಾರತ ಕಾವ್ಯವು ಗದ್ಯ ಪದ್ಯ ಮಿಶ್ರಣದ ಒಂದು ಚಂಪೂ ಕಾವ್ಯ. ಪಂಪ ಕವಿ ತನ್ನ ಕಥಾಭಿತ್ತಿಯಾಗಿ ಆರಿಸಿಕೊಂಡಿದ್ದು ಸಂಸ್ಕೃತ ವ್ಯಾಸಭಾರತ ಕಥೆ.[೨] ಪಂಪನ ಕಾವ್ಯದ ನಾಯಕ ಅರ್ಜುನ .ಅರ್ಜುನನೊಂದಿಗೆ ತನ್ನ ಆಶ್ರಯದಾತ ದೊರೆ ಅರಿಕೇಸರಿಯನ್ನು ಹೋಲಿಸಿ ಕಥೆಯನ್ನು ನಿರೂಪಿಸುವ ವಿಚಾರವು ಪಂಪಭಾರತದಲ್ಲಿ ಅಡಕವಾಗಿದೆ.ಪಂಪಕವಿಯ ರಚನೆಗಳಲ್ಲಿ ಕಾಲಾನುಕ್ರಮವಾಗಿ ಎರಡನೆಯ ಕೃತಿ ಇದಾಗಿದೆ. ಕನ್ನಡ ಭಾಷೆಯ ಆದಿಕಾವ್ಯವಾಗಿರುವುದು ಇದರ ವೈಶಿಷ್ಟ್ಯ.ಹಿಂದಿನ ಪ್ರಸಿದ್ಧ ಮಹಾಕಾವ್ಯಗಳಂತಲ್ಲದೆ ನಗರ,ಸಮುದ್ರ, ಪರ್ವತ, ಋತು ಮುಂತಾಗಿ ಪ್ರಸಿದ್ಧವಾಗಿರುವ 18 ವರ್ಣನೆಗಳಿಗೆ ಯಥೋಚಿತ್ತವಾಗಿ ಪ್ರಾಮುಖ್ಯಕೊಟ್ಟು ನಾಯಕನೊಬ್ಬನ ಚರಿತ್ರೆಯ್ನು ಅವನ ಜನನದಿಂದ ಮೊದಲ್ಗೊಂಡು ಅವನು ಅತಿಶಯವಾದ ಅಭ್ಯುದಯವನ್ನು ಪಡೆಯುವವರೆಗೆ ವರ್ಣಿಸಿರುವುದು ಈ ಕಾವ್ಯದ ಸಾಮಾನ್ಯ ಲಕ್ಷಣವಾಗಿದೆ. ಇದರಲ್ಲಿ 14 ಆಶ್ವಾಸಗಳಿವೆ. ಇಲ್ಲಿಯೂ ನಡುನಡುವೆ ಸಣ್ಣ ದೊಡ್ಡ ಗದ್ಯಖಂಡಗಳು ದಟ್ಟವಾಗಿ ಹೆಣೆದುಕೊಂಡು ವಿವಿಧ ಪದ್ಯಜಾತಿಗಳ 1609 ಪದ್ಯಗಳಿವೆ. ಈ ಪದ್ಯಜಾತಿಗಳಲ್ಲಿ ಕಂದಪದ್ಯಗಳೂ ಆ ಬಳಿಕ ಖ್ಯಾತ ಕರ್ಣಾಟಕಗಳು ಸಂಖ್ಯಾಬಾಹುಳ್ಯ ಪಡೆದಿವೆ. ರಗಳೆ, ಪಿರಿಯಕ್ಕರಗಳು ಇಲ್ಲಿ ಕಂಡುಬರುತ್ತವೆ. ಪಂಪಕವಿಯೇ ಹೇಳುವಂತೆ ಇದು ಆರು ತಿಂಗಳಲ್ಲಿ ಬರೆದು ಮುಗಿಸಿದನಂತೆ ಇದರ ರಚನೆಯ ಭಾಷೆ ಶೈಲಿಗಳ ಹದ ಇಲ್ಲಿ ಹೆಚ್ಚಾಗಿ ಕನ್ನಡತನವನ್ನು ತೋರುತ್ತದೆ ಹೀಗೆ ವ್ಯಾಸಭಾರತದಂತಹ ಒಂದು ದೊಡ್ಡಗ್ರಂಥದ ಕಥಾವಸ್ತುವನ್ನು ಸಮಗ್ರವಾಗಿ,ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ