Rkanishka
Joined ೨೩ ಜೂನ್ ೨೦೧೭
ಕೃತಕ ಬುದ್ಧಿಮತ್ತೆಯು (AI )
ಕೃತಕ ಬುದ್ಧಿಮತ್ತೆಯು (AI ) ಯಂತ್ರಗಳ ಬುದ್ಧಿಮತ್ತೆಯಾಗಿದ್ದು, ಇದರ ಸೃಷ್ಟಿಗೆಂದೇ ಇರುವ ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು "ಬುದ್ಧಿಮತ್ತೆಯುಳ್ಳ ನಿಯೋಗಿಗಳ ವಿನ್ಯಾಸ ಮತ್ತು ಅಧ್ಯಯನ" ಎಂದು ಹೇಳಿವೆ. ಅಲ್ಲಿ ಬುದ್ಧಿಮತ್ತೆ ನಿಯೋಗಿ ಒಂದು ವ್ಯವಸ್ಥೆಯಾಗಿದ್ದು, ಅದು ತನ್ನ ಪರಿಸರವನ್ನು ಗ್ರಹಿಸಿ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತದೆ. 1956ರಲ್ಲಿ ಈ ಪಾರಿಭಾಷಿಕ ಶಬ್ದವನ್ನು ರೂಪಿಸಿದ ಜಾನ್ ಮೆಕಾರ್ಥಿಯ ಪ್ರಕಾರ, ಕೃತಕ ಬುದ್ಧಿಮತ್ತೆಯು "ಬುದ್ಧಿಮತ್ತೆಯುಳ್ಳ ಯಂತ್ರಗಳನ್ನು ತಯಾರಿಸುವ ವಿಜ್ಞಾನ ಮತ್ತು ತಂತ್ರಜ್ಞಾನ".AI ಸಂಶೋಧನೆಯು ಎಷ್ಟರ ಮಟ್ಟಿಗೆ ಉನ್ನತ ತಾಂತ್ರಿಕತೆ ಮತ್ತು ವೈಶಿಷ್ಟತೆಯುಳ್ಳದ್ದಾಗಿದೆ ಎಂದರೆ, ಕೆಲವು ವಿಮರ್ಶಕರು ಈ ಕ್ಷೇತ್ರದ "ವಿಘಟನೆ"ಯನ್ನು ವಿರೋಧಿಸುತ್ತಾರೆ.ನಿರ್ದಿಷ್ಟ ಸಮಸ್ಯೆಗಳು, ಆಯಾ ಸಲಕರಣೆಗಳ ಅನ್ವಯಿಕೆ ಮತ್ತು ದೀರ್ಘಕಾಲದಿಂದ ಉಳಿದುಕೊಂಡಿರುವ ತಾತ್ವಿಕ ಭಿನ್ನಾಭಿಪ್ರಾಯಗಳ ಸುತ್ತ AIನ ಉಪ ಕ್ಷೇತ್ರಗಳು ಸಂಘಟಿತವಾಗಿವೆ. AIನ ಕೇಂದ್ರೀಯ ಸಮಸ್ಯೆಗಳು ತರ್ಕ, ಜ್ಞಾನ, ಯೋಜನೆ, ಕಲಿಕೆ, ಸಂವಹನ, ಗ್ರಹಿಕೆ ಮತ್ತು ವಸ್ತುಗಳನ್ನು ಚಲಾಯಿಸುವುದು ಹಾಗೂ ಕುಶಲತೆಯಿಂದ ಬಳಸುವ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದೆ.ಸಾಮಾನ್ಯ ಬುದ್ಧಿಮತ್ತೆ (ಅಥವಾ "ಶಕ್ತಿಶಾಲಿ AI") ಈಗಲೂ (ಕೆಲವು) ಸಂಶೋಧನೆಗಳ ದೀರ್ಘ ಕಾಲದ ಗುರಿಯಾಗಿದೆ, ಆದರೆ ಹಲವು ಸಂಶೋಧಕರು ಇದು ಸಾಧ್ಯವಾಗಬಹುದೆಂಬುದನ್ನು ನಂಬುತ್ತಿಲ.[೧] 1.AIನ ಸಮಸ್ಯೆಗಳು
ಬುದ್ಧಿಮತ್ತೆಯನ್ನು ಪ್ರತ್ಯನುಕರಿಸುವ (ಅಥವಾ ಸೃಷ್ಟಿಸುವ) ಸಮಸ್ಯೆಯನ್ನು ಹಲವಾರು ನಿರ್ದಿಷ್ಟ ಉಪ ಸಮಸ್ಯೆಗಳನ್ನಾಗಿ ವಿಭಜಿಸಲಾಗಿದೆ. ಸಂಶೋಧಕರು ಬುದ್ಧಿಮತ್ತೆಯುಳ್ಳ ವ್ಯವಸ್ಥೆಯಿಂದ ನಿರೀಕ್ಷಿಸುವ ನಿರ್ದಿಷ್ಟ ಲಕ್ಷಣಗಳು ಮತ್ತು ಕ್ಷಮತೆಗಳನ್ನು ಇವು ಹೊಂದಿವೆ. ಕೆಳಗೆ ವಿವರಿಸಲಾದ ಲಕ್ಷಣಗಳು ಹೆಚ್ಚು ಗಮನವನ್ನು ತಮ್ಮತ್ತ ಸೆಳೆದುಕೊಂಡಿವೆ.[೨]
2.ನಿಗಮಾತ್ಮಕತೆ, ತರ್ಕ, ಸಮಸ್ಯೆಗೆ ಪರಿಹಾರ
ಆರಂಭದ AI ಸಂಶೋಧಕರು, ಮಾನವನು ಫಲಕದ ಆಟಗಳನ್ನಾಡುವಾಗ. ತಾರ್ಕಿಕ ನಿಗಮನಗಳನ್ನು ಮಾಡುವಾಗ ಹಾಗೂ ಜಟಿಲ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸಂದರ್ಭದಲ್ಲಿ ಬಳಸುವ ಹಂತ-ಹಂತದ ತಾರ್ಕಿಕ ಕ್ಷಮತೆಯನ್ನು ಅನುಕರಿಸುವ ಕ್ರಮಾವಳಿಗಳನ್ನು ಅಭಿವೃದ್ಧಿಪಡಿಸಿದರು. 80ರ ಮತ್ತು 90ರ ದಶಕಗಳ ಅಂತ್ಯದ ವೇಳೆಗೆ AI ಸಂಶೋಧನೆಯು ಸಂಭಾವ್ಯತೆ ಮತ್ತು ಅರ್ಥಶಾಸ್ತ್ರದ ತತ್ವಗಳನ್ನು ಬಳಸಿ, ಅನಿಶ್ಚಿತ ಅಥವಾ ಅಪೂರ್ಣ ಮಾಹಿತಿಯ ಸಮಸ್ಯೆಯನ್ನು ಬಗೆಹರಿಸಲು ಉನ್ನತ ವಿಧಾನಗಳನ್ನು ಅಭಿವೃದ್ಧಿಪಡಿಸಿತು.[೩]
3.AIಗೆ ಪ್ರಸ್ತಾಪಗಳು
AI ಸಂಶೋಧನೆಗೆ ಮಾರ್ಗದರ್ಶನವನ್ನು ನೀಡುವಂತಹ ಯಾವುದೇ ಒಗ್ಗೂಡಿಸುವ ಸಿದ್ಧಾಂತವಾಗಲಿ ನಿದರ್ಶನಗಳಾಗಲಿ ಇಲ್ಲ. ಸಂಶೋಧಕರು ಹಲವು ವಿಷಯಗಳನ್ನು ಒಪ್ಪಿಕೊಂಡಿಲ್ಲ.ಬಹಳ ದೀರ್ಘಕಾಲದಿಂದಲೂ ಉಳಿದುಕೊಂಡಿರುವ ಪ್ರಶ್ನೆಗಳ ಪೈಕಿ ಕೆಲವಕ್ಕೆ ಉತ್ತರವಿನ್ನೂ ದೊರೆತಿಲ್ಲ. ಅವು: ಮನೋವಿಜ್ಞಾನ ಅಥವಾ ನರವಿಜ್ಞಾನವನ್ನು ಅಧ್ಯಯನ ಮಾಡುವುದರ ಮೂಲಕ ಕೃತಕ ಬುದ್ಧಿಮತ್ತೆಯು ಸ್ವಾಭಾವಿಕ ಬುದ್ಧಿಮತ್ತೆಯನ್ನು ಪ್ರತ್ಯನುಕರಿಸಬೇಕೆ? ಅಥವಾ, ವೈಮಾನಿಕ ತಂತ್ರಜ್ಞಾನಕ್ಕೆ ಹಕ್ಕಿ ಜೀವಶಾಸ್ತ್ರ ಅಪ್ರಸಕ್ತವಾದಂತೆ ಮಾನವ ಜೀವಶಾಸ್ತ್ರ AI ಸಂಶೋಧನೆಗೆ ಅಪ್ರಸಕ್ತವೇ (ತರ್ಕ ಅಥವಾ ಉತ್ತಮಗೊಳಿಸುವಿಕೆ)ಯಂತಹ ಸರಳ, ಸುಸಂಸ್ಕೃತ ತತ್ವಗಳ ಮೂಲಕ ಬುದ್ಧಿಮತ್ತೆಯ ನಡವಳಿಕೆಯನ್ನು ವಿವರಿಸಲು ಸಾಧ್ಯವೆ? ಅಥವಾ ಹೆಚ್ಚು ಪ್ರಮಾಣದಲ್ಲಿರುವ ಒಂದಕ್ಕೊಂದು ಸಂಬಂಧವಿಲ್ಲದ ಸಮಸ್ಯೆಗಳನ್ನು ಇದು ಪರಿಹರಿಸುವ ಅಗತ್ಯವಿದೆಯೇ?ಪದಗಳು-ಎಣಿಕೆಗಳಂತೆಯೇ ಉನ್ನತ-ಮಟ್ಟದ ಚಿಹ್ನೆಗಳನ್ನು ಬಳಸಿ ಬುದ್ಧಿಮತ್ತೆಯನ್ನು ಪುನರುತ್ಪಾದಿಸಬಹುದೆ? ಅಥವಾ ಇದಕ್ಕೆ "ಉಪ-ಸಾಂಕೇತಿಕ" ಸಂಸ್ಕರಣೆಯ ಅಗತ್ಯವಿದೆಯೆ? [೪]
- ↑ ಇದು ಸಾಧ್ಯವಾಗಬಹುದೆಂಬುದನ್ನು ನಂಬುತ್ತಿಲ.
- ↑ ಬುದ್ಧಿಮತ್ತೆಯನ್ನು ಪ್ರತ್ಯನುಕರಿಸುವ (ಅಥವಾ ಸೃಷ್ಟಿಸುವ) ಸಮಸ್ಯೆಯನ್ನು ಹಲವಾರು ನಿರ್ದಿಷ್ಟ ಉಪ ಸಮಸ್ಯೆಗಳನ್ನಾಗಿ ವಿಭಜಿಸಲಾಗಿದೆ. ಸಂಶೋಧಕರು ಬುದ್ಧಿಮತ್ತೆಯುಳ್ಳ ವ್ಯವಸ್ಥೆಯಿಂದ ನಿರೀಕ್ಷಿಸುವ ನಿರ್ದಿಷ್ಟ ಲಕ್ಷಣಗಳು ಮತ್ತು ಕ್ಷಮತೆಗಳನ್ನು ಇವು ಹೊಂದಿವೆ. ಕೆಳಗೆ ವಿವರಿಸಲಾದ ಲಕ್ಷಣಗಳು ಹೆಚ್ಚು ಗಮನವನ್ನು ತಮ್ಮತ್ತ ಸೆಳೆದುಕೊಂಡಿವೆ.
- ↑ ಬಗೆಹರಿಸಲು ಉನ್ನತ ವಿಧಾನಗಳನ್ನು ಅಭಿವೃದ್ಧಿಪಡಿಸಿತು.
- ↑ ವಿವರಿಸಲು ಸಾಧ್ಯವೆ? ಅಥವಾ ಹೆಚ್ಚು ಪ್ರಮಾಣದಲ್ಲಿರುವ ಒಂದಕ್ಕೊಂದು ಸಂಬಂಧವಿಲ್ಲದ ಸಮಸ್ಯೆಗಳನ್ನು ಇದು ಪರಿಹರಿಸುವ ಅಗತ್ಯವಿದೆಯೇ?ಪದಗಳು-ಎಣಿಕೆಗಳಂತೆಯೇ ಉನ್ನತ-ಮಟ್ಟದ ಚಿಹ್ನೆಗಳನ್ನು ಬಳಸಿ ಬುದ್ಧಿಮತ್ತೆಯನ್ನು ಪುನರುತ್ಪಾದಿಸಬಹುದೆ? ಅಥವಾ ಇದಕ್ಕೆ "ಉಪ-ಸಾಂಕೇತಿಕ" ಸಂಸ್ಕರಣೆಯ ಅಗತ್ಯವಿದೆಯೆ?