ಕುಟುಂಬ

ನನ್ನ ಹೆಸರು ಪ್ರೇರನ್.ಎಸ್ ನಾನು ಬೆಂಗಳೂರಿನಲ್ಲಿಯೆ ಹುಟ್ಟಿ ಬೆಳೆದಿದ್ದು ನನ್ನ ಮನೆ ಬನ್ನೇರುಘಟ್ಟದ ರಸ್ತೆಯಲ್ಲಿದೆ. ನನ್ನ ತಂದೆಯ ಹೆಸರು ಸುರೇಶ್ ಹಾಗೂ ನನ್ನ ತಾಯಿಯ ಹೆಸರು ಸುವರ್ಣ ಲಕ್ಷ್ಮಿ.ನಮ್ಮ ದೊಂದು ಮಧ್ಯಮ ವರಗದ ಕುಟುಂಬ. ತಂದೆ ಬಿಲ್ಡಿಂಗ್ ಕಾಂಟ್ರಾಕಟರ್,ತಾಯಿ ಸರ್ಕಾರಿ ಉದ್ಯೋಗದಲ್ಲಿದಾರೆ ಹಾಗೂ ನನ್ನ ಅಣ್ಣ ಎಂಬಿಎ ಅಲಯನ್ಸ್ ಯೂನಿವರ್ಸಿಟಿ ಮಾಡುತ್ತಿದ್ದಾರೆ.

ಶಿಕ್ಷಣ

ಕ್ರೈಸ್ಟ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) [೪]ಎಂಬ ಮಾನ್ಯತೆ ದೊರಕಿದೆ.
ಕ್ರೈಸ್ಟ್ ಯೂನಿವರ್ಸಿಟಿ

ನಾನು ಒಂದನೆಯ ತರಗತಿಯಿಂದ ಹತ್ತನೆ ತರಗತಿಯವರೆಗೆ ಹೋಲಿ ಸ್ಪಿರಿಟ್ ಶಾಲೆಯಲ್ಲಿ ವ್ಯಾಸಂಗಮಾಡಿದೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು ನಾನು ನ್ಯಷನಳ್ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದೆ.ಪ್ರಸ್ತುತ ಪದವಿ ಶಿಕ್ಷಣವನ್ನು ನಾನು ಕ್ರೈಸ್ತ ಯೂನಿವರ್ಸಿಟಿಯಲ್ಲಿ ಮಾಡುತ್ತಿದೇನೆ.ನನ್ನ ಶಾಲಾ ದಿನಗಳಲ್ಲಿ ನಡೆದ ಕೆಲವು ಸವಿ ನೆನಪುಗಳನ್ನು ಮೆಲುಕು ಹಾಕಲು ಬಯಸುತ್ತೇನೆ. ನಾನು ಗುರುಗಳು ತರಗತಿಯಲ್ಲಿ ಹೇಳಿಕೊಟ್ಟ ಅಂದಿನ ಪಾಠಗಳನ್ನು ಅಂದೇ ಓದಿ ಪೂರ್ಣಗೊಳಿಸುತ್ತೀದ್ದೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನ ಗುರುಗಳು ಸದಾ ಪ್ರೋತ್ಸಾಹಿಸುತ್ತಿದ್ದರು.

ಸಾಧನೆ

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಮಶ್ಚಿಮವಾಗಿ ಹಬ್ಬಿ ನಿಂತಿರುವ ಬೆಟ್ಟ. ಸಮುದ್ರಮಟ್ಟದಿಂದ ೧೦೬೩ ಮೀ. ಎತ್ತರವಾಗಿದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ.
ಚಾಮುಂಡಿ ಬೆಟ್ಟ
ನನ್ನ ಕುಟುಂಬದ ಎಲ್ಲಾ ಸದಸ್ಯರೂ ನೀನು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಬೇಕು ಎಂದು ಪ್ರೋತ್ಸಾಹಿಸುತ್ತಿದ್ದರು. ನನ್ನ ಸಹೋದರ ಗಣಿತದ ವಿಷಯದ ಬಗ್ಗೆ ಬಹಳ ಮನೆ ಮುಟ್ಟುವ ತನಕ ಬಿಡುತ್ತಿರಲಿಲ್ಲ  ಒಂದಲ್ಲಾ ಎರಡಲ್ಲ ಹತ್ತಾರು ಬಾರಿ ಹೇಳಿ ಕೊಡುತ್ತಿದ್ದನು. ಇವರ ಪ್ರೋತ್ಸಾಹ ನನ್ನ ಮನಸ್ಸಿನಲ್ಲಿ ಆಗಾಧ ಪ್ರಮಾಣದಲ್ಲಿ ಪರಿಣಾಮ ಬೀರಿತು.ಅಂತೆಯೇ ನಾನು ಚೆನ್ನಾಗಿ ಓದಿ  ಉತ್ತೀರ್ಣನಾದೆ.ಈ ಮಹಾನ್ ಸಾಧನೆಗೆ ನನ್ನ ತಂದೆ,ತಾಯಿ,ಗುರುಗಳ ಹಾಗೂ ದೇವರ ಆಶೀರ್ವಾದ. ನಾನು ಚಾಮುಂಡೇಶ್ವರಿ ಹಾಗೂ ಶಿರಡಿ ಸಾಯಿಬಾಬಾನ ಭಕ್ತ.
ನಾನು ಮೈಸೂರು ಚಾಮುಂಡೇಶ್ವರಿ ಆಶಿರವಾದ ಪಡೆಯಬೇಕು ಎಂದು ಮನಸ್ಸಿಗೆ ಬಂದೊಡನೆ ಹೋಗಿ ಬರುತ್ತೇನೆ.ಕಳೆದ ಹತ್ತು ವರ್ಷಗಳಿಂದ ಪ್ರತಿ ವರ್ಷ ಕುಟುಂಬ ಸದಸ್ಯರು ಶಿರಡಿ ಸಾಯಿಬಾಬಾನ ದರ್ಶನ ಪಡೆದು ಬರುತ್ತೇವೆ.
    ನಾನು ಪ್ರತಿ ಭಾನುವಾರದಲ್ಲಿ ಕ್ರಿಕೇಟ್ ಆಡಲು ಹೋಗುತ್ತಿದ್ದೆ.
   ಪಿಯುಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದಾಗ ನನ್ನ ತಂದೆ ತಾಯಿ ನನಗೆ ಒಂದು ಲಕ್ಷದ ತ್ತೊಂಬತ್ತು  ಸಾವಿರದ ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು.ಇದ್ದಕ್ಕೆ ನನ್ನ ತಂದೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ಬಹಳ ದೂರ ವಾಹನ ಚಾಲನೆ ಮಾಡಬೇಕು ಎಂದು ಬಹಳಷ್ಟು ಆಸೆ ಇದೆ.ಈಗ ನಾನು ಉನ್ನತ ಪದವಿ ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮುಂದುವರೆಸುತ್ತಿದ್ದೇನೆ. ಇದರ ನಂತರ ಸ್ವಂತ ಉದ್ಯೋಗ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ.
   ನನಗೆ ಮುಂದೆ ಒಂದು ದಿನ ನನ್ನ ತಂದೆ ತಾಯಿಗೆ ಸುಂದರ ಪರಿಸರದಲ್ಲಿ ಒಂದು ಮನೆ ಕಟ್ಟಿ ಕೊಡಬೇಕು ಎಂಬ ಆಸೆ.

ಹವ್ಯಾಸಗಳು

ಬನ್ನೇರುಘಟ್ಟ. ರಾಷ್ಟ್ರೀಯ ಉದ್ಯಾನವನ ಭಾರತ ದ ಕರ್ನಾಟಕದಲ್ಲಿರುವ ಬೆಂಗಳೂರಿನ ದಕ್ಷಿಣಭಾಗದಲ್ಲಿ ಸುಮಾರು 22 km ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. 25,000 acre (104.27 km²)ಗಳ ಝೂವಲಾಜಿಕಲ್ ಪಾರ್ಕ್ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ನನ್ನ ಹವಸ್ಯಗಳೆದಂದರೆ  ಕ್ರಿಕೆಟ್ , ವಾಲಿಬಾಲ್ ಆಡುವುದು, ಚಾರಣಕ್ಕೆ ಹೋಗುವುದು, ಹಾಡು ಕೇಳುವುದು,. ನನಗೆ  ದೂರದ ಊರಿಗೆ ಪ್ರಯಾಣಿಸುವುದು  ಬಹಳ ಇಷ್ಟ.  ನನಗೆ ಬೈಕಿನಲ್ಲಿ ದೂರದ ಪ್ರಯಾಣ ಮಾಡುವುದೆಂದರೆ ಬಹಳ ಒಲವು. ನಾನು ನನ್ನ ರಜೆ  ಸಮಯದಲ್ಲಿ   ನನ್ನ ಸ್ನೇಹಿತರು ಹಾಗೂ ಕುಟುಂಬದೊಡನೆ ಕಳೆಯಲು  ಬಯಸುತ್ತೇನೆ.  ನನಗೆ  ರಾಜಕೀಯದಲ್ಲಿ ಬಹಳ ಆಸಕ್ತಿ ಇದೆ.  ನನಗೆ ಸಾಕು ಪ್ರಾಣಿಗಳೆಂದರೆ ಇಷ್ಟ.ನಾನು ರಜೆ ಇದ್ದಾಗ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಹೋಗತೇನೆ.