ಬೆಂಗಳೂರಿನ ಕೆರೆಗಳು

ಬೆಂಗಳೂರಿನ ನಿರ್ಮಾಪಕ, ಕೆಂಪೇಗೌಡರು, ನಗರದ ಜನರ ನೀರಿನ ಸೌಕರ್ಯಕ್ಕಾಗಿ, ಬೆಂಗಳೂರಿನ ಸುತ್ತಮುತ್ತ ಅನೇಕ ಕೆರೆ-ಕಟ್ಟೆಗಳನ್ನು ಕಟ್ಟಿಸಿದರು.

ಹಲಸೂರು ಕೆರೆ

ಹೆಸರಿಸಬಹುದಾದ ಅಂದಿನ ಕೆರೆಗಳು

ಬದಲಾಯಿಸಿ

ಧರ್ಮಾಂಬುಧಿ ಟ್ಯಾಂಕ್,’ (ಪ್ರಸಕ್ತ ಬೆಂಗಳೂರಿನ ಬಸ್ ಸ್ಟ್ಯಾಂಡ್), 'ಸಂಪಂಗೀ ಟ್ಯಾಂಕ್,' (ಪ್ರಸಕ್ತ ಕಂಠೀರವ ಸ್ಟೇಡಿಯಮ್), ’ಕೆಂಪಾಂಬುಧಿ ಟ್ಯಾಂಕ್’, ’ಅಲ್ ಸೂರ್ ಟ್ಯಾಂಕ್’,ಕಾರಂಜಿ ಟ್ಯಾಂಕ್,' ಮತ್ತು 'ಚೆನ್ನಮ್ಮ ಟ್ಯಾಂಕ್,' ಕೆಂಪೇಗೌಡರ ಕಾಲದಲ್ಲೇ ನಿರ್ಮಾಣವಾಗಿದ್ದವು. ಈ ನೀರಿನ ತಾಣಗಳು, ೨೦ ನೆಯ ಶತಮಾನದ ಪ್ರಾರಭದವರೆಗೂ ಬೆಂಗಳೂರಿನ ನಾಗರಿಕರ-ನೀರಿನ ಪೂರೈಕೆಯ ತಾಣಗಳಾಗಿದ್ದವು. ಆದರೆ ಹಿಂದು-ಮುಂದು ನೋಡದೆ, ಮಾಡುತ್ತಿರುವ ನಗರೀಕರಣದ ವ್ಯವಸ್ಥೆಗಳು ಹಾಗೂ ದಕ್ಷ ಆಡಳಿತಗಳ ಅಭಾವದಿಂದ, ಈ ಸುಂದರ ಕೆರೆಗಳು ಅವನತಿಹೊಂದಿ, ಈಗ ಕಣ್ಮರೆಯಾಗಿವೆ. ಅವುಗಳಲ್ಲಿ ಇನ್ನೂ ಕಣ್ಣಿಗೆ ಸ್ವಲ್ಪಮಟ್ಟಿಗೆ ಗೋಚರಿಸುತ್ತಿರುವುದು 'ಅಲಸೂರು ಕೆರೆ,' ಮಾತ್ರ.

'ಕೆಂಪಾಂಬುಧಿ ಟ್ಯಾಂಕ್'

ಬದಲಾಯಿಸಿ

ಕೆಲವೇ ಕೆರೆಗಳಲ್ಲಿ ದೊಡ್ಡದಾಗಿದ್ದ 'ಕೆಂಪಾಂಬುಧಿ-ಟ್ಯಾಂಕ್', ಈಗ ಅವನತಿಯ ಅಂಚಿಗೆ ಸರಿಯುತ್ತಿರುವ ಕೆರೆಗಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಅಂದಿನ ದಿನಗಳಲ್ಲಿ ಅವು ಕೇವಲ ನೀರು ಒದಗಿಸುವ ನೀರಿನ-ಆಗರಗಳಾಗದೆ, ಸಾಂಸ್ಕೃತಿಕ, ಧಾರ್ಮಿಕ ಶ್ರದ್ಧೆಗಳ ಹಾಗೂ ಕ್ರೀಡೆಗಳ ಕೇಂದ್ರಸ್ಥಾನವಾಗಿತ್ತು. ೧೯೨೧, ರಲ್ಲಿ 'ಸ್ವಿಮ್ಮಿಂಗ್ ಅಸೊಸಿಯೇಶನ್' ನವರ ಆಶ್ರಯದಲ್ಲಿ, ’ಡಾಲ್ಫಿನ್ ಸ್ವಿಮಿಂಗ್ ಕ್ಲಬ್,’ ಶುರುವಾಯಿತು. ಇದನ್ನು ನಡೆಸಿಕೊಟ್ಟಿದ್ದು, ’ಸ್ಕೌಟ್ ಪ್ರಮುಖ ಕಚೇರಿ’.

'ಈಜುವ ಕ್ರೀಡೆಯಲ್ಲಿ ತರಬೇತಿ-ಕ್ಲಾಸ್,' ಗಳು ನಡೆಸಲ್ಪಟ್ಟವು

ಬದಲಾಯಿಸಿ

ಈಜುವ ಕ್ರೀಡೆಯಲ್ಲಿ ತರಬೇತಿ-ಕ್ಲಾಸ್ ಗಳು ನಡೆಸಲ್ಪಟ್ಟವು. ೧೯೩೦ ರಲ್ಲಿ ಈ 'ಕ್ಲಬ್', ಜನಪ್ರಿಯವಾಗಿ, ಸುಮಾರು ೨,೦೦೦ ಪುರುಷರು ಹಾಗೂ ೧೮೦ ಮಹಿಳೆಯರು ತರಪೇತಿಪಡೆದರು. ಆಗಿನಕಾಲದ ಹಲವಾರು ಪ್ರಮುಖ ವ್ಯಕ್ತಿಗಳು ಆ ಕ್ಲಬ್ ನ, ಸದಸ್ಯರಾಗಿದ್ದರು. ೧೯೩೪, ೯ ವರ್ಷದ ಹುಡುಗಿ, 'ಬೈರಮ್ಮ,' ಒಟ್ಟಿಗೆ ನಿಲ್ಲಿಸದೆ, ಸತತವಾಗಿ ೧೮ ಗಂಟೆಗಳಕಾಲ ಈ ಕೆರೆಯಲ್ಲಿ ಈಜಿದ್ದನ್ನು. ಆಗಿನಕಾಲದ ಮೈಸೂರಿನ ದಿವಾನ್, ’ಸರ್ ಮಿರ್ಝಾ ಇಸ್ಮಾಯಿಲ್,’ ವೀಕ್ಷಿಸಿದ್ದರು.

ಅತಿ ಹೆಚ್ಚಾದ ನೀರನ್ನು ಹೊರದೂಡುವ ತೂಬುಗಳು

ಬದಲಾಯಿಸಿ

ಇನ್ನೊಂದು ಪ್ರಮುಖ ಹಾಗೂ ಈಗಲೂ ಸಕ್ರಿಯವಾಗಿರುವ ೨ ನೀರನ್ನು ಹೊರದೂಡುವ ತೂಬುಗಳು. ದಾಖಲಿಸಲು ಯೋಗ್ಯವಾದ ಸಂಗತಿಗಳಾಗಿವೆ. ಈ 'ಔಟ್ ಲೆಟ್,' ಗಳು ಕಲ್ಲಿನಿಂದ ಮಾಡಿದ್ದು, ನೀರಿನ ಪ್ರವಹಿಸುವ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿಯಂತ್ರಿಸುತ್ತಿವೆ. ಸುಂದರ ಮುದನೀಡುವ ತರಹ ಕೆತ್ತನೆ ಕೆಲಸಮಾಡಿರುತ್ತಾರೆ. ಎರಡು ಭೂಮಿಯಿಂದ ಎತ್ತರದ ಮಟ್ಟಗಳಲ್ಲಿ,ನಿರ್ಮಿಸಿದ ಪಾತಳಿಗಳಿವೆ. ೪ ಕಂಬಗಳಿವೆ. ಮತ್ತು ಸೂರಿದೆ. ಎಲ್ಲಾ ಕಂಬಗಳು, ಸೂರು, ಮತ್ತು ಸುತ್ತಮುತ್ತಲ ಜಾಗವನ್ನು ಸುಂದರವಾಗಿ ಸಜಾಯಿಸಲಾಗಿದೆ.

ನೀರಿನ ತೂಬುಗಳ ನಿರ್ಮಾಣದ ನೈಪುಣ್ಯತೆಗಳು

ಬದಲಾಯಿಸಿ

ಒಳ ಸುರಂಗತೋಡಿ ಮಾಡಿದ ಟನಲ್ ಗಳು ಪಕ್ಕ-ಇಟ್ಟಿ, ಮತ್ತು ಗಟ್ಟಿ-ಗಾರೆಗಳಿಂದ ಮಾಡಲ್ಪಟ್ಟಿದೆ. ಒಂದು ಕಬ್ಬಿಣದ ಸಲಾಕೆ, ವಾಲ್ವ್ ಗೆ ಸೇರಿಕೊಂಡಿದೆ. ಹೆಚ್ಚಿನ ನೀರನ್ನು ಹೊರಗೆಹೋಗದಂತೆ ತಡೆಗಟ್ಟುತ್ತದೆ. ಈ ನೀರುಗಂಟಿಯ ಕಾರ್ಯ-ಶೈಲಿಗಳು ಒಳ್ಳೆಯ ಉದಾಹರಣೆಗಳಾಗಿವೆ. ಕೆಂಪೇಗೌಡರ ಸಮಯದಲ್ಲಿ ಅಂದಿದ ನೀರಿನ ತೂಬುಗಳು ಉತ್ಕೃಷ್ಟ ಶ್ರೇಣಿಯ ಕೌಶಲ್ಯಗಳ ಉದಾಹರಣೆಗಳಾಗಿವೆ. ನೀರಾವರಿ ಕಾರ್ಯದಲ್ಲಿ ನಿರತರಾಗಿರುವವರಿಗೆ, ಇವು ಪ್ರಮುಖ ಸ್ಮಾರಕಗಳಲ್ಲದೆ, ಚಾರಿತ್ರ್ಯಿಕ ಪ್ರಾಮುಖ್ಯತೆಯನ್ನೂ ಸಾರುತ್ತವೆ. ಅವನ್ನು ಉಳಿಸಿಕೊಂಡು ಬೆಳೆಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರಮೇಲಿದೆ.

ಕಾಲಾನುಕ್ರಮದಲ್ಲಿ ಕಣ್ಮರೆಯಾದ, ಬೆಂಗಳೂರಿನ ಕೆರೆ/ಜಲಾಶಯಗಳು

ಬದಲಾಯಿಸಿ
  • Shoolay (ಶೂಲೆ ಕೆರೆ) lake changed to Football stadium
  • Akkithimmanhalli lake (ಅಕ್ಕಿ ತಿಮ್ಮನ ಹಳ್ಳಿ ಕೆರೆ) changed to Corporation Hockey stadium
  • Sampangi(ಸಂಪಂಗಿ ಕೆರೆ) lake changed to Kanteerava Sports Complex
  • Dharmanbudhi (ಧರ್ಮಾಂಬುಧಿ ಕೆರೆ) lake changed to Kempegowda Bus Stand
  • Challaghatta (ಚಲ್ಲಘಟ್ಟ ಕೆರೆ) lake changed to Karnataka Golf Association
  • Koramangala (ಕೋರಮಂಗಲದ ಕೆರೆ) lake changed to National Games Complex in Ejipura
  • Siddikatte (ಸಿದ್ಧಿಕಟ್ಟೆ ಕೆರೆ) Lake has now become KR Market
  • Karanji (ಕಾರಂಜಿ ಕೆರೆ) tank is the Gandhi Bazar area
  • Kempambudhi (ಕೆಂಪಾಬುಧಿ ಕೆರೆ) is now a sewerage collection tank
  • Nagashettihalli (ನಾಗಶೆಟ್ಟಿಹಳ್ಳಿ ಕೆರೆ)lake changed to Space department
  • Kadugondanahalli ಕಾಡುಗೊಂಡನ ಹಳ್ಳಿ ಕೆರೆ) lake changed to Ambedkar Medical College
  • Domlur (ಡೊಮ್ಲೂರು ಕೆರೆ) lake changed to BDA layout
  • Millers (ಮಿಲ್ಲರ್ಸ್ ಕೆರೆ)lake changed to Guru Nanak Bhavan, Badminton Stadium
  • Subhashnagar (ಸುಭಾಷ್ ನಗರ ಕೆರೆ) lake changed to Residential layout
  • Kurubarahalli (ಕುರುಬರ ಹಳ್ಳಿ ಕೆರೆ) lake changed to Residential layout
  • Kodihalli (ಕೋಡಿ ಹಳ್ಳಿ ಕೆರೆ) lake changed to Residential layout
  • Sinivaigalu (ಸಿನಿವೈಗಳು ಕೆರೆ) lake changed to Residential layout
  • Marenahalli (ಮಾರೇನ ಹಳ್ಳಿ ಕೆರೆ) lake changed to Residential layout
  • Shivanahalli (ಶಿವನ ಹಳ್ಳಿ ಕೆರೆ) lake changed to Playground, Bus stand
  • Chenamma (ಚೆನ್ನಮ್ಮನ ಕೆರೆ) tank changed to a burial ground, Banashankari 2nd Stage
  • Puttennahalli (ಪುಟ್ಟೇನ ಹಳ್ಳಿ ಕೆರೆ) tank changed to J.P. Nagar 6th Phase
  • Jakkarayanakere (ಜಕ್ಕರಾಯನ ಕೆರೆ) is converted into a sports ground