ಸದಸ್ಯ:Prashanth Bhavani Shankar/ನನ್ನ ಪ್ರಯೋಗಪುಟ 7

ಮೇಜರ್

ಸೋಮನಾಥ ಶರ್ಮಾ

ಮೇಜರ್ ಸೋಮನಾಥ ಶರ್ಮಾ
ಜನನ೩೧ ಜನವರಿ ೧೯೨೩
ದಾದ್, ಕಂಗ್ರಾ ಜಿಲ್ಲೆ, ಪಂಬಾಬ್ ಈಗಿನ ಹಿಮಾಚಲ ಪ್ರದೇಶ
ಮರಣ೦೩ ನವೆಂಬರ್ ೧೯೭, ೨೪ ವರ್ಷ
ಬಡ್ಗಾಮ್, ಭಾರತ
ವ್ಯಾಪ್ತಿಪ್ರದೇಶ British Raj
 ಭಾರತ
ಶಾಖೆ British Indian Army
 Indian Army
ಸೇವಾವಧಿ೧೯೪೨–೧೯೪೭
ಶ್ರೇಣಿ(ದರ್ಜೆ) ಮೇಜರ್
ಸೇವಾ ಸಂಖ್ಯೆIC-521
ಘಟಕ೪ನೇ ಬಟಾಲಿಯನ್ ಕುಮಾವೋ ರೆಜಿಮೆಂಟ್
ಭಾಗವಹಿಸಿದ ಯುದ್ಧ(ಗಳು)ಎರಡನೇ ಮಹಾಯುದ್ಧ
  • ಅರಾಕಾನ್ ಕದನ

ಭಾರತ-ಪಾಕಿಸ್ಥಾನ ಯುದ್ಧ

  • ಬಡ್ಗಾಮ್ ಕದನ
ಪ್ರಶಸ್ತಿ(ಗಳು)
ಸಂಬಂಧಿ ಸದಸ್ಯ(ರು)ಜೆನರಲ್ ವಿಶ್ವನಾಥ್ ಶರ್ಮಾ

ಮೇಜರ್ ಸೋಮನಾಥ ಶರ್ಮಾ, ಪಿವಿಸಿ (೩೧ನೇ ಜನವರಿ ೧೯೨೩ - ೦೩ ನವೆಂಬರ್ ೧೯೪೭), ಬಾರತದ ಅತ್ಯುಚ್ಚ ಶೌರ್ಯ ಪುರಸ್ಕಾರವಾದ ಪರಮ ವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಭಾರತೀಯ ಸೇನೆಯ ಒಬ್ಬ ಯುವ ಅಧಿಕಾರಿ.

ಮೇಜರ್ ಸೋಮನಾಥ ಶರ್ಮಾ ೧೯೪೨ರಲ್ಲಿ ೮ನೇ ಬೆಟಾಲಿಯನ್, ೧೯ನೇ ಹೈದರಾಬಾದ್ ರೆಗಿಮೆಂಟ್‍ಗೆ ನೇಮಿಸಲ್ಪಟ್ಟರು. ಎರಡನೇ ಮಹಾಯುದ್ಧದಲ್ಲಿ ಬರ್ಮಾದ ಅರಾಕಾನ್ ಪ್ರದೇಶದಲ್ಲಿ ಅವರ ಹೋರಾಟದ ಉಲ್ಲೇಖಗಳು ಮಿಲಿಟರಿ ಡಿಸ್ಪಾಚಿನಲ್ಲಿ ಬಂದಿದ್ದವು. ಭಾರತ-ಪಾಕಿಸ್ತಾನದ ಯುದ್ಧ (೧೯೪೭-೧೯೪೮)ದಲ್ಲಿ, ನವೆಂಬರ್ ೩, ೧೯೪೭ರಂದು ಕಬಾಲಿಗಳ ಜೊತೆಗೆ ಅವರ ವೇಷದಲ್ಲಿ ಬಂದಿದ್ದ ಪಾಕಿಸ್ಥಾನಿ ಸೈನ್ಯದ ಒಳನುಸುಳುಕೋರರೊಂದಿಗೆ ಶ್ರೀನಗರ ವಿಮಾನ ನಿಲ್ದಾಣದ ನಿಕಟ ಬಡ್ಗಾಮ್‍ನಲ್ಲಿ ನಡೆದ ಕದನದಲ್ಲಿ ಹೊರಾಡುತ್ತಾ ಅವರು ವೀರ ಮರಣ ಹೊಂದಿದರು. ೨೫ನೇ ವಸಂತವನ್ನು ಕಾಣದ ಈ ಯುವ ಮೇಜರ್ ಹೋರಾಡಿದ ಪರಿಗೆ ಶ್ರೀನಗರ ವಿಮಾನ ನಿಲ್ದಾಣದ ಉಳಿಯಿತು. ಭಾರತದ ಸೇನೆ ಅಲ್ಲಿ ತಲುಪಿ ಕಾಶ್ಮೀರವನ್ನು ಉಳಿಸಿತು. ಅವರ ಈ ಅಪ್ರತಿಮ ಹೋರಾಟಕ್ಕೆ ಮೊದಲ ಪರಮವೀರ ಚಕ್ರವನ್ನು ಮರಣೋಪರಾಂತ ನೀಡುವ ಮೂಲಕ ದೇಶ ತನ್ನ ಕೃತಾರ್ಥತೆಯನ್ನು ತೋರ್ಪಡಿಸಿತು[೧]

ಪ್ರಾರಂಭದ ದಿನಗಳು ಬದಲಾಯಿಸಿ

ಸೊಮನಾಥ ಶರ್ಮಾ, ೩೧ನೇ ಜನವರಿ ೧೯೨೩ ರಂದು, ದಾದ್, ಕಂಗ್ರಾ ಜಿಲ್ಲೆ, ಪಂಬಾಬ್ ಈಗಿನ ಹಿಮಾಚಲ ಪ್ರದೇಶದಲ್ಲಿ ಜನಿಸಿದರು. ಅವರ ತಂದೆ ಸೈನ್ಯದ ಅಧಿಕಾರಿ. ವೀಶೇಷವೆಂದರೆ, ಅವರ ಇಬ್ಬರು ತಮ್ಮಂದಿರು ಮುಂದೆ ಸೈನ್ಯ ಸೇರಿದರು ಮತ್ತು ಸಹೋದರಿಯರು ಕೂಡ ಸೈನ್ಯದ ವಿವಿಧ ಅಂಗಗಳಲ್ಲಿ ಕಾರ್ಯನಿರ್ವಹಿಸಿದರು. ಕೊನೆಯ ತಮ್ಮ ಜೆನರಲ್ ವಿಶ್ವನಾಥ್ ಶರ್ಮಾ ಭಾರತದ ಮುಖ್ಯ ಸೈನ್ಯಾಧಿಕಾರಿಯಾಗಿ ೧೯೮೮-೧೯೯೦ರವರೆಗೆ ಕಾರ್ಯನಿರ್ವಹಿಸಿದರು.

ಅವರು ನೈನಿತಾಲಿನ ಶೇರವುಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ದೆಹ್ರಾದೂನಿನ ಪ್ರಿನ್ಸ ಆಫ ವೇಲ್ಸ ರಾಯಲ್ ಮಿಲಿಟರಿ ಕಾಲೇಜ್ ಮತ್ತು ನಂತರ ರಾಯಲ್ ಮಿಲಿಟರಿ ಕಾಲೇಜ್ ಸಾಂಡ್‍ಹರ್ಸ್ಟ ನಲ್ಲಿ ಓದಿದರು. ತಮ್ಮ ಅಜ್ಜನ ಬಳಿ ಅವರು ಭಗವದ್ಗೀತೆ ಬಗ್ಗೆ, ಕೃಷ್ಣ, ಅರ್ಜುನರ ಕಥೆ ಕೇಳಿ ಪ್ರಭಾವಿತರಾಗಿದ್ದರು

ಸೈನ್ಯ ಜೀವನ ಬದಲಾಯಿಸಿ

೧೯೪೨ರಲ್ಲಿ ತಮ್ಮ ೧೯ನೇ ವಯಸ್ಸಿಗೆ ಸೊಮನಾಥ ಶರ್ಮಾರವರು ೮ನೇ ಬೆಟಾಲಿಯನ್, ೧೯ನೇ ಹೈದರಾಬಾದ್ ರೆಜಿಮೆಂಟಿಗೆ ನೇಮಿಸಲ್ಪಟ್ಟರು. ಅದು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಮಯ. ಬ್ರಿಟೀಷರು ಆಗ ಅಗ್ನೇಯ ಏಷ್ಯಾದಲ್ಲಿ ಒಂದಾದರ ನಂತರ ಒಂದು ದೇಶವನ್ನು ಕಳೆದುಕೊಳ್ಳುತ್ತಿದ್ದರು. ಜಪಾನಿ ಸೇನೆ ಬರ್ಮಾದ ಕಡೆಗೆ ನುಗ್ಗುತ್ತಿತ್ತು. ಈ ಸಮಯದಲ್ಲಿ ಮುಂದೆ ಭಾರತೀಯ ಸೇನೆಯ ಮಹಾದಂಡನಾಯಕರಾದ (೧೯೫೭-೧೯೬೧) ಕೊಡಗಿನ ಕರ್ನಲ್ ಕೆ.ಎಸ್.ತಿಮ್ಮಯ್ಯರವರ ಅಡಿಯಲ್ಲಿ ಕಾರ್ಯಚರಣೆ ಮಾಡುವ ಸದಾವಕಾಶ ದೊರೆಯಿತು. ಅರಾಕಾನ್ಸ ಕದನದಲ್ಲಿ ಇವರು ಹೋರಾಡಿದ ಪರಿಯಿಂದಾಗಿ ಬ್ರಿಟೀಶರ ಯುದ್ಧ ಡಿಸ್ಪಾಚ್‍ಗಳಲ್ಲಿ ಇವರ ಹೆಸರಿನ ಉಲ್ಲೇಖಗಳಾದವು. ಒಂದು ಪ್ರಮುಖವಾದ ಘಟನೆಯಲ್ಲಿ ಅವರು ತಮ್ಮ ಆರ್ಡರ್ಲಿಯನ್ನು ಅವನಿಗೆ ಗುಂಡು ತಗುಲಿದಾಗ ತಮ್ಮ ಹೆಗಲ ಮೇಲೆ ಎತ್ತಿಕೊಂಡು ಜಪಾನಿ ಗುಂಡುಗಳ ನಡುವೆ ಅವನನ್ನು ಬಡುಕಿಸಿದರು. ತಮ್ಮ ಕಂಪನಿಯ ಬಗ್ಗೆ ಅವರ ಈ ನಿಷ್ಠೆಯು ಅವರಿಗೆ ಒಳ್ಳೆಯ ಹೆಸರು ಗಳಿಸಿತು.

ಅವರ ಸೋದರ ಮಾವ ಕಾಪ್ಟನ್ ವಿ.ಡಿ.ವಾಸುದೇವರವರ ಗಾಢ ಪ್ರಭಾವ ಅವರ ಇಡೀ ಸೈನಿಕ ಜೀವನದ ಮೇಲಿತ್ತು. ವಾಸುದೇವರವರು ಮಲಯಾದಲ್ಲಿ ಜಪಾನಿಯರೊಂದಿಗೆ ನಡೆದ ಕದನದಲ್ಲಿ, ಸ್ಲಿಮ್ ನದಿಗೆ ಕಟ್ಟಲಾದ ಸೇತುವೆಯನ್ನು ಉಳಿಸಿ ತಮ್ಮ ಬೆಟಾಲಿಯನಿನ ನೂರಾರು ಸೈನಿಕರು ಅದನ್ನು ದಾಟಲು ಅನವು ಮಾಡಿ ಅವರ ಪ್ರಾಣ ಉಳಿಸಿದ್ದರು. ಈ ಹೋರಾಟದಲ್ಲಿ ಅವರು ವೀರಗತಿ ಹೊಂದಿದ್ದರು.

ಬಡ್ಗಾಮ್ ಕದನ ಬದಲಾಯಿಸಿ

ಪರಮ ವೀರ ಚಕ್ರ ಬದಲಾಯಿಸಿ

ನೆನಪು ಬದಲಾಯಿಸಿ

ಆಧಾರ ಬದಲಾಯಿಸಿ

  1. "ಇವರು ನಮ್ಮ ಯುದ್ಧ ಕಲಿಗಳು". vijaykarnataka.com. 27 February 2019. Archived from the original on 12 July 2020. Retrieved 12 July 2020.

ಹೊರಗಿನ ಕೊಂಡಿಗಳು ಬದಲಾಯಿಸಿ

https://www.jagran.com/news/national-story-of-martyred-major-somnath-sharma-india-first-param-vir-chakra-jagran-special-19983850.html