ಕೈ ತುತ್ತು ಮಾಡಿ ಊಟ ತಿನಿಸಿದ್ದು ನೆನಪು ಬರುತ್ತಿದೆ.

 ಅವತ್ತು ಶಿವರಾತ್ರಿ ಹಬ್ಬ. ಸಮಯ ಬೆಳಿಗ್ಗೆ  6 ಘಂಟೆ. ಮಂಚದಿಂದ ಎದ್ದೇಳುತ್ತಿದ್ದಂತೆ ಕಣ್ಣಂಚಿನಿಂದ ನೀರು ಜಾರತೋಡಗಿದವು. ಮನಸ್ಸು ಇಕ್ಕಟ್ಟಿಗೆ ಸಿಲುಕಿತ್ತು. ಮಾತಾನಾಡಲು ಆಗುತ್ತಿರಲಿಲ್ಲ. ನಮ್ಮಿಂದ ಕಾಣದ ಲೋಕಕ್ಕೆ ಪಯಣಿಸಿದ ಚಿಕ್ಕಮ್ಮನ ನೆನಪು ಆ ದಿನ ಬೆಳಿಗ್ಗೆ ನನ್ನನ್ನು ಚಿಂತಕ್ರಂತರನ್ನಾಗಿ ಮಾಡಿತ್ತು.
 ನಮ್ಮದು ರಾಯಚೂರಿನ ಡಿ.ರಾಂಪೂರು ಎಂಬ ಪುಟ್ಟ ಹಳ್ಳಿ. ನಮ್ಮದು ಅವಿಭಕ್ತ ಕುಟುಂಬ. ಅಮ್ಮನ ತಂಗಿ (ಚಿಕ್ಕಮ್ಮ) ಅವಳನ್ನು ತನ್ನ ಗಂಡ ಗಲಾಟೆ ಮಾಡಿಕೊಂಡು ಅವಳನ್ನು ಮನೆಯಿಂದ ಹೊರಹಾಕಿದ್ದ. ವಿಧಿಯಿಲ್ಲದೆ ಅವಳು ನಮ್ಮ ಮನೆಯಲ್ಲಿಯೇ ಇದ್ದಳು. ಚಿಕ್ಕಮ್ಮ ನಮಗೆ ಕೇವಲ ಚಿಕ್ಕಮ್ಮ ಮಾತ್ರ ಆಗಿರಲಿಲ್ಲ  ನಮ್ಮನ್ನು ಸಾಕಿ, ಬೆಳೆಸಿದ ಮಹಾನ್ ತಾಯಿ. ಅವರನ್ನು ನಾವು ಅಮ್ಮ ಅಂತಾನೇ ಕರೆಯುತ್ತಿದ್ವಿ. ಅಮ್ಮನ ಪ್ರೀತಿಯಂತೆಯೇ ಅವಳ ಪ್ರೀತಿ, ಮಮತೆ, ಪ್ರೋತ್ಸಾಹ ಸಿಗುತ್ತಿತ್ತು. ಆಗಷ್ಟೇ ನಾನು ಡಿಗ್ರಿ ಮುಗಿಸಿ ಪಿಜಿಗೆ (ಸ್ನಾತ್ತಕೋತ್ತರ ಪದವಿ) ಮೂಡಬಿದರೆಯ ಆಳ್ವಾಸ್ ಕಾಲೇಜಿಗೆ ಅಡ್ಮೀಶನ್ ಮಾಡಿಸಿದ್ದೆ.  ಅಡ್ಮಿಶನ್ ಮಾಡಿಸಿದ ಒಂದು ವಾರದಿಂದ ಚಿಕ್ಕಮ್ಮಂತೂ ಅಷ್ಟು ದೂರದ ಊರಿಗೆ ಹೋಗುವುದು ಬೇಡ. ಇಲ್ಲಿಯೇ ಯಾವುದಾದರೊಂದು ಜಾಬ್ ಮಾಡ್ತಾ ಇಲ್ಲೇ ಇರು ಎಂದು ಅಳುತ್ತಿದ್ದಳು. ಅವತ್ತು ಸಂಜೆ ಎಲ್ಲರು ಮನೆಯಲ್ಲಿ ಚಹಾ ಕುಡಿಯುತ್ತ ಕುಂತಿದ್ವಿ. ಆಗ ಆಳ್ವಾಸ್ ಕಾಲೇಜಿನಿಂದ ಪೋನ್ ಬಂತು. ಕ್ಲಾಸ್ಸಸ್ಸ್ ಶುರುವಾಗಿವೆ ಬೇಗ ಬನ್ನಿ ಎಂದು ಮಾತನಾಡಿದ್ರು. ಈ ವಿಷಯ ಮನೆಯಲ್ಲಿ ಹೇಳಿ ನನ್ನ ಲಗೇಜ್ ಎಲ್ಲ ರೆಡಿ ಮಾಡಿಕೊಂಡೆ. ಚಿಕ್ಕಮ್ಮ ಮಾತ್ರ ನನಗೆ ಊಟ ಬಡಿಸುವಾಗ  ಬಿಕೋ ಅಂತ ಕಣ್ಣಿರಿಟ್ಟಳು. ಅಮ್ಮ ,ಅಣ್ಣ ಅವರನ್ನು ಸಮಾಧಾನ ಪಡಿಸಿದರು.  ಆ ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗಿದ್ವಿ. ಮರುದಿನ ಬೆಳಗಿನ ಜಾವ ಸಮಯ 5 ಘಂಟೆಯಾಗಿರಬೇಕು. ಚಿಕ್ಕಮ್ಮಳಿಗೆ ಇದ್ದಕ್ಕಿದ್ದಂತೆ ಹೃದಯದಲ್ಲಿ ನೋವು ಕಾಣಿಸಿಕೊಂಡು ಕುಸಿದು ಬಿಟ್ಟಳು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಹೋಗುವ ದಾರಿ ಮದ್ಯದಲ್ಲಿಯೇ ಉಸಿರು ಬಿಟ್ಟಳು.
ಆ ಬೆಳಿಗ್ಗೆ ಮೂಡಬಿದರೆಗೆ ಹೊರಡಬೇಕಿದ್ದ ನಾನು, ಎಂದು ಬಾರದ ಲೋಕಕ್ಕೆ ಚಿಕ್ಕಮ್ಮನನ್ನೇ ಕಳಿಸಿ ಬಿಟ್ಟೆ ಎಂಬ ನೋವು ನನ್ನ ಹೃದಯವನ್ನು ತಳಮಳಗೊಳಿಸಿತು. ಹೀಗಾಗಿ ನನ್ನ ಪಿಜಿ ವಿದ್ಯಾಭ್ಯಾಸವೇ ಬೇಡ ಎಂದು ತಿರ್ಮಾನಿಸಿದ್ದೆ. ಆದರೆ ಅಮ್ಮ, ಅಣ್ಣ ನನಗೆ ಆತ್ಮಸ್ಥೈರ್ಯ ತುಂಬಿ ಕಳುಹಿಸಿದರು. ಚಿಕ್ಕಮ್ಮ ನಮ್ಮನ್ನು ಅಗಲಿ ಒಂದು ವರ್ಷವಾಯಿತು. ಹಿಂದಿನ ವರ್ಷದ ಶಿವರಾತ್ರಿ ಹಬ್ಬವನ್ನು ಚಿಕ್ಕಮ್ಮ ಸೇರಿದಂತೆ ಎಲ್ಲರೂ ಮಸ್ತ್ ಎಂಜಾಯ್ ಮಾಡಿದ್ವಿ. ಆದರೆ ಈ ವರ್ಷದ ಶಿವರಾತ್ರಿಗೆ ನಾನು ಮೂಡಬಿದರೆಯಲ್ಲಿದ್ದೆ. ಆ ದಿನ ಬೆಳಗ್ಗೆಯಿಂದಲೇ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಹೇಳಿಕೊಳ್ಳಲಾರದಷ್ಟು ನೋವು ಆವರಿಸಿತ್ತು. ಹೃದಯ, ಸಿಡಿಲು ಬಡಿದಂತಾಗಿತ್ತು.  ಮನೆಯಿಂದ ಅಮ್ಮ, ಅಣ್ಣ ಶಿವರಾತ್ರಿ ಹಬ್ಬಕ್ಕೆ ಬರಲು ಸೂಚಿಸಿದ್ರು. ಆದರೆ ಚಿಕ್ಕಮ್ಮ ಇಲ್ಲದ ಮನೆಗೆ ಹೋಗಲು ಮನಸ್ಸು ಹಿಂಜರಿಯಿತು. ನನ್ನ ಒಳತಿಗಾಗಿ ನನ್ನ ಹೆಸರಿನ ಮೇಲೆ ಪೂಜೆ ಮಾಡಿಸಿದ್ದು, ನನಗೆ ಕೈ ತುತ್ತು ಮಾಡಿ ಊಟ ತಿನಿಸಿದ್ದು ಎಲ್ಲಾ ನೆನಪು ಬರುತ್ತಿದೆ. ಮರುದಿನ ಬೆಳಿಗ್ಗೆ ಕಾಲೇಜಿನತ್ತ ಪ್ರಯಾಣ ಬೆಳೆಸಬೆಕೇಂಬ ಸುದ್ದಿಯನ್ನು ಕೇಳಿ ಅರಗಿಸಿಕೊಳ್ಳಲಾಗದೇ ಪ್ರಾಣ ಬಿಟ್ಟಳಾ? ಎಂಬ ಕೊರಗು ನನ್ನನ್ನು ಇನ್ನೂ ಕಾಡುತ್ತಿದೆ. ಇನ್ನೊಂದು ವಿಷಯವೆಂದರೆ ಚಿಕ್ಕಮ್ಮಳನ್ನಾ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆದಲ್ಲಿ ನನ್ನ ಕೈಗಳ ಮೇಲೆಯೇ ಉಸಿರು ಬಿಟ್ಟಿದ್ದಳು. ಆ ವಿಧಿಯ ಆಟವೇ ಹಾಗೆ. ನೆಮ್ಮದಿ, ಸಂತೋಷವನ್ನು ಕಸಿದುಕೊಂಡು ಅಂಧಕಾರದ ನೆನಪಿನ ಬುತ್ತಿಯನ್ನು ಕೊಟ್ಟ. ಈಗಲೂ ಜೀವನದಲ್ಲಿ ಅಮೂಲ್ಯವಾದದ್ದನ್ನು ಕಳೆದುಕೊಂಡೆ ಎಂಬ ಕರಿ ನೆರಳ ಛಾಯೆ ನನ್ನನ್ನು ಇಂದಿಗೂ ಎಡಬಿಡದೆ ಕಾಡುತ್ತಿದೆ.  ಕಳೆದ ಎರಡು ತಿಂಗಳ ಹಿಂದೆ ಊರಿಗೆ ಹೋದಾಗ ಮನೆಯ ಮುಖ್ಯದ್ವಾರದ ಮುಂಭಾಗದಲ್ಲಿರುವ ಚಿಕ್ಕಮ್ಮನ ಶ್ರದ್ದಾಂಜಲಿ ಪೋಟೊವನ್ನು ನೋಡಿ ಕಣ್ಣಿರಿಟ್ಟೆ.  ಅಂತೂ ನನ್ನ ಜೀವನದಲ್ಲಿ ನಡೆಯಬಾರದಂತಹ ಕಹಿ ಘಟನೆಯೊಂದು ನಡೆದು ಹೋಯಿತು.
                                      ಪ್ರಕಾಶ್.ಡಿ.ರಾಂಪೂರು (ರಾಯಚೂರು)
                                        ಆಳ್ವಾಸ್ ಕಾಲೇಜು ಮೂಡಬಿದರೆ
                                      ಪತ್ರಿಕೋದ್ಯಮ ವಿಭಾಗ (ಪ್ರಥಮ ವರ್ಷ
                                      ಮೋ.ನಂ- 7411550110