ಸದಸ್ಯ:Omshivaprakash/ಟೆಂಪ್ಲೇಟು/ಸಮ್ಮಿಲನದ ಆಹ್ವಾನ

ವಿಕಿಪೀಡಿಯ ಸಮ್ಮಿಲನ ೧೭ @ ಅಂತರಜಾಲ ಐ.‌ಆರ್.ಸಿ #wikipedia-kn "Wikidata"
ಕನ್ನಡ ವಿಕಿಪೀಡಿಯದ ಸದಸ್ಯರು ಸಮುದಾಯದ ವಿಷಯಗಳ ಚರ್ಚೆ ನೆಡೆಸಲು ಸಾಧ್ಯವಾಗುವಂತೆ ಇದೇ ಶನಿವಾರ, ಏಪ್ರಿಲ್ ೧೮, ೨೦೧೫ರಂದು ರಾತ್ರಿ ೯:೩೦ಕ್ಕೆ ಅಂತರಜಾಲದ ಕನ್ನಡ ವಿಕಿಯ ಐ.‌ಆರ್.ಸಿ ಚಾನೆಲ್ - #wikipedia-kn ನಲ್ಲಿ ಸಮ್ಮಿಲನ ೧೭ ನ್ನು ನೆಡೆಸಲು ಆಲೋಚಿಸಿರುತ್ತೇವೆ. ಸಮುದಾಯದ ಎಲ್ಲರೂ ಈ ಸಮ್ಮಿಲನದಲ್ಲಿ ಭಾಗವಹಿಸಿ, ಇದನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ಕನ್ನಡ ವಿಕಿಪೀಡಿಯದ ೨೦೧೫ನೇ ಸಾಲಿನ ಸವಾಲುಗಳನ್ನು, ನಮ್ಮ ಮುಂದಿನ ಯೋಜನೆಗಳನ್ನು ಸ್ಪಷ್ಟಗೊಳಿಸಲು ಈ ಸಮ್ಮಿಲನ ವೇದಿಕೆಯಾಗಲಿದೆ.


ವಿಕಿಪೀಡಿಯ ದಶಮಾನೋತ್ಸವ @ ಬೆಂಗಳೂರು "Wikidata"
ಕನ್ನಡ ವಿಕಿಪೀಡಿಯ ೧೦ ವಸಂತಗಳನ್ನು ಪೂರೈಸಿರುವ ಸಂತಸವನ್ನು ಹಂಚಿಕೊಳ್ಳಲು ಈ ಮೂಲಕ ಎಲ್ಲ ವಿಕಿಪೀಡಿಯನ್ನರನ್ನು ಆಹ್ವಾನಿಸುತ್ತಿದ್ದೇವೆ. ಇದೇ ಭಾನುವಾರ, ನವೆಂಬರ್ ೧೭, ೨೦೧೩ರಂದು ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ - ಇಲ್ಲಿ ನೆಡೆಯಲಿರುವ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ವಿಕಿಪೀಡಿಯದ ಸುತ್ತ ಕೆಲಸ ಮಾಡುತ್ತಿರುವ ಅನೇಕರನ್ನು ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ.


ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಿಯ ಪಿಂಟ್ಶರ್ (Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)


ಕನ್ನಡ ವಿಕಿಪೀಡಿಯ ಸಮ್ಮಿಲನ ೮ @ ಕ.ರಾ.ವಿ.ಪ, ಬೆಂಗಳೂರು "Wikidata"
ನಿಮ್ಮನ್ನು ಮಾರ್ಚ್ ೧೭, ೨೦೧೩ ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ ನೆಡೆಯಲಿರುವ ಕನ್ನಡ ವಿಕಿಪೀಡಿಯ ಸಮ್ಮಿಲನ ೮ ಕ್ಕೆ
ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಬೆಳಗ್ಗೆ ೧೦ ರಿಂದ ಸಂಜೆ ೫ರ ವರೆಗೆ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು ಈ ಸಮ್ಮಿಲನದ ಮುಖ್ಯ ಉದ್ದೇಶ.
ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಕನ್ನಡ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)


WikilovesMonuments 2013 site notice 
ವಿಕಿಪೀಡಿಯದ ವಿಕಿ ಲವ್ಸ್ ಮಾನ್ಯುಮೆಂಟ್ಸ್ ೨೦೧೩ ರಲ್ಲಿ ಭಾಗವಹಿಸಿ: "Tomb of Safdarjung"
ವಿಶ್ವಕೋಶಕ್ಕೆ ನಿಮ್ಮ ಸುತ್ತಮುತ್ತಲಿನ ಸ್ಮಾರಕಗಳ ಛಾಯಾಚಿತ್ರವನ್ನು ತೆಗೆದು ಸೇರಿಸಿ ನಿಮ್ಮ ಕೊಡುಗೆ ನೀಡಿ, ಜೊತೆಗೆ ವಿಶ್ವದ ಅತಿ ದೊಡ್ಡ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ. ಇದಾಗಲೇ ಈ ಸ್ವರ್ಧೆ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್‌ಗೂ ಸೇರಿ ಇತಿಹಾಸ ನಿರ್ಮಿಸಿದೆ. ಇದನ್ನು ಮರುಕಳಿಸುವಂತೆ ಮಾಡಿ. ಸೆಪ್ಟೆಂಬರ್ ತಿಂಗಳಿನ ಪೂರ ಈ ಸ್ವರ್ಧೆ ನೆಡೆಯುತ್ತದೆ. ನಿಮ್ಮ ಪ್ರವೇಶಗಳನ್ನು ಇಲ್ಲಿ ಸೇರಿಸಿ