Nithya V P
ಜನನ
ಬದಲಾಯಿಸಿನಿತ್ಯ.ವಿ.ಪಿ ಎಂಬುದು ನನ್ನ ಹೆಸರು, ಹುಟ್ಟಿದು ೧೨ನೇ ಫೆಬ್ರವರಿ ೨೦೦೦ದಲ್ಲಿ. ಬೆಂಗಳೂರಿನ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಜನನ.
ಕುಟುಂಬ ಮತ್ತು ಜೀವನ
ಬದಲಾಯಿಸಿತಂದೆ ಪ್ರಭಾಕರ್.ವಿ.ಕೆ ಮತ್ತು ತಾಯಿ ಶೀನಾ.ಪಿ.ಆರ್. ತಂದೆ ಖಾಸಗಿ ಉದ್ಯಮದ್ದಲ್ಲಿ ಮತ್ತು ತಾಯಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದಾರೆ. ನನಗೆ ಒಬ್ಬಳು ಸಹೋದರಿ ಆಕೆಯ ಹೆಸರು ಕೃತಿ, ಆಕೆ ಎಂ.ಕಾಮ್ ಪದವಿದರೆ. ಅವರು ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದಾರೆ. ನಾವು ಮೂಲತಃ ಕೊಡಗು ಜಿಲ್ಲೆಯವರು. ದಕ್ಷಿಣ ಭಾರತದ ಕಾಶ್ಮೀರವೆಂದೇ ಹೆಸರುಗಳಿಸಿದ ಕೊಡಗಿನ ವಿರಾಜಪೇಟೆ
ನಮ್ಮ ಊರು. ರಜಾ ದಿನಗಳಲ್ಲಿ ನಾವು ಕುಟುಂಬಸಮೇತ ಊರಿಗೆ ಹೊಗುತ್ತಿದೆವು. ನನಗೆ ಅಬ್ಬಿ ಜಲಪಾತ ಬಹಳ ಇಷ್ಟವಾವದ ಸ್ಥಳ.
ಬದುಕಿಗೆ ಮುಖ್ಯವಾಗಿ ಬೇಕಾಗಿರುವುದು ಸಹನೆ ಮತ್ತು ಇತರರನ್ನು ಅರ್ಥಮಾಡಿಕೊಳ್ಳುವ ಮನಸ್ಸು ಎಂದು ದೃಢವಾಗಿ ನಂಬಿದ್ದೇನೆ. ಈ ಎರಡು ಗುಣವನ್ನು ನನ್ನ ತಾಯಿಯಿಂದ ಕಲಿತೆನು. ಕೆಲಸದಿಂದ ಎಷ್ಟೇ ದಣಿದು ಬಂದರು ಸಂತೋಷದಿಂದ ಎಲ್ಲಾ ಕೆಲಸವನ್ನು ಮಾಡಿಕೊಡುತ್ತಾಳೆ.ಈ ಗುಣವನ್ನು ಇಂದಿನ ಪೀಳಿಗೆಯವರು ತಮ್ಮ ತಮ್ಮ ತಾಯಂದಿರಿಂದ ಕಲಿಯಬೇಕಾಗಿದೆ. ನಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರು ಬದುಕಿನ ಮೇಲಿರುವ ಭರವಸೆಯನ್ನು ಬಿಡಬಾರದು ಈ ಮುಖ್ಯವಾದ ಗುಣವನ್ನು ನಾನು ನನ್ನ ತಂದೆಯಿಂದ ಕಲಿತೆನು. ಜೀವನದ ಯಾವುದೇ ಮುಖ್ಯ ತೀರ್ಮಾನಗಳನ್ನು ಗಡಿಬಿಡಿಯಿಂದ ತೆಗೆದುಕೊಳ್ಳಬಾರದೆಂದು ನನ್ನ ತಂದೆ ತಾಯಿ ಉಪದೇಶಿಸುತ್ತಾರೆ.ಇದೇ ರೀತಿ ನಮ್ಮ ತಂದೆ ತಾಯಿಯರು ಹೇಳುವುದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಜೀವನವು ಸದಾ ಸುಂದರವಾಗಿರುತ್ತದೆ.
ವಿದ್ಯಾಭ್ಯಾಸ
ಬದಲಾಯಿಸಿನನ್ನ ವಿದ್ಯಬ್ಯಾಸ ಎಲ್.ಕೆ.ಜಿ ಯಿಂದ ಪಿ.ಯು.ಸಿಯ ವರೆಗು ಜಾಲಹಳ್ಳಿಯ ಸಂತ ಕ್ಲಾರೆಟ್ ಶಾಲೆ[೧]ಯಲ್ಲಿ ಮುಗಿಸಿ ನಂತರ ಕ್ರೆಸ್ಟ್ ಸಂಸ್ಥೆ ಯಲ್ಲಿ ಬಿ.ಎಸ್.ಸ್ಸಿ ವ್ಯಾಸಂಗ ಮಾಡುತ್ತಿದೇನೆ. ಮೊದಲಿನಿಂದಲೂ ನನಗೆ ಕ್ರೆಸ್ಟ್ ಸಂಸ್ಥೆ ಯಲ್ಲಿ ವಿದ್ಯಾಬ್ಯಾಸ ಮಾಡಬೇಕೆಂಬುದು ನನ್ನ ಕನಸಾಗಿತ್ತು. ನನಗೆ ಮುಂದೆ ಐಐಪಿಎಂ ಸಂಸ್ಥೆ ಯಲ್ಲಿ ಉನ್ನತ ಶಿಕ್ಷಣ ವನ್ನು ಮುಂದುವರೆಸಬೇಕೆಂಬುದು ನನ್ನ ಕನಸಾಗಿದೆ.
ಹವ್ಯಾಸ
ಬದಲಾಯಿಸಿಚಿತ್ರ ರಚನೆ ನನ್ನ ಹವ್ಯಾಸ. ನನಗೆ ಸಿಗುವ ವಿರಾಮದ ಸಮಯದಲ್ಲಿ ನಾನು ಇದರಲ್ಲಿಯೆ ತೊಡಗಿರುತ್ತೇನೆ. ನನಗೆ ಬಹಳ ಇಷ್ಟ ವಾದ ಕ್ರೀಡೆ ಬ್ಯಾಡ್ಮಿಂಟನ್. ಪಿ.ವಿ. ಸಿಂದು[೨] ನನಗೆ ಇಷ್ಟ ವಾದ ಆಟಗಾರತಿ. ಆಕೆ ಆಟವಾಡುವ ಶೈಲಿ ನನಗೆ ತುಂಬಾ ಇಷ್ಟ.
ಆದರ್ಶ ವ್ಯಕ್ತಿ
ಬದಲಾಯಿಸಿನನ್ನ ಬದುಕನ್ನು ಸೆಳೆದ ಮತ್ತೊಬ್ಬ ವ್ಯಕ್ತಿ ಎಂದರೆ ಎ.ಪಿ.ಜೆ.ಅಬ್ದುಲ್ ಕಲಾಂ
ರವರು. ಅವರ ಸರಳ ಜೀವನ ನನ್ನನ್ನು ತುಂಬಾ ಆಕರ್ಷಿಸಿತು. ಬಡ ಕುಟುಂಬದಲ್ಲಿ ಹುಟ್ಟಿ ಯಾವುದೇ ಸೌಲಭ್ಯಗಳಿಲ್ಲದೆ ಬೆಳೆದು ಬಂದ ಖ್ಯಾತರಾದ ಮಹಾನ್ ವ್ಯಕ್ತಿ. ಅವರು ಸರಳತೆಯಿಂದ ವಿಶ್ವ ಪ್ರಖ್ಯಾತರಾದ ಮಹಾನ್ ವ್ಯಕ್ತಿ. ಅವರ ಸಹನಶೀಲ ರಾದ ಗುಣ ನನಗೆ ಬಹಳ ಇಷ್ಟವಾದದ್ದು. ಎಷ್ಟೇ ಎತ್ತರಕ್ಕೆ ಬೆಳೆದರೂ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಂಡಿದ್ದರು. ಕಷ್ಟ ಪಟ್ಟರೆ ಫಲವುಂಟು ಎಂಬುವ ವಾಕ್ಯಕ್ಕೆ ಇವರೇ ದೊಡ್ಡ ಉದಾಹರಣೆ. ವಿಂಗ್ಸ್ ಆಫ್ ಫೈರ್[೩] ಎಂಬ ಇವರ ಪುಸ್ತಕ ಎಲ್ಲರೂ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಓದಲೇಬೇಕು. ಆತ್ಮವಿಶ್ವಾಸ, ಗುರಿ ಸಾಧಿಸಬೇಕೆಂಬ ಛಲ ಇದ್ದರೆ ನಾವು ದೊಡ್ಡ ಎತ್ತರಕ್ಕೆ ಬೆಳೆಯಬಹುದು ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ . ಈ ಮೇಲಿನಂತೆ ನಮ್ಮ ಜೀವನದಲ್ಲಿ ಈ ಗುಣಗಳನ್ನು ಅಳವಡಿಸಿಕೊಂಡರೆ ಉಜ್ವಲ ಭವಿಷ್ಯ ನಮ್ಮದಾಗಿರುತ್ತದೆ.ನಮ್ಮ ಬದುಕಿನಲ್ಲಿ ಏನೇ ಸಾಧನೆ ಮಾಡಬೇಕೆಂದಿದ್ದರೆ ಮೊದಲು ನಮ್ಮಭಯವನ್ನು ಹೋಗಲಾಡಿಸಿ ಧೈರ್ಯದಿಂದ ಮುನ್ನಡೆಯಬೇಕು ಈ ಮುಖ್ಯ ಗುಣವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಬಯಸುತ್ತೇನೆ ಈ ಮೇಲ್ಕಂಡ ಗುಣಗಳನ್ನು ನನ್ನ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದೇನೆ
ಉಲ್ಲೇಖನ
ಬದಲಾಯಿಸಿ{{ರೆಫ಼್ಲಿಸ್ಟ್}}